
ಅಣಬೆ ಬೆಳೆಯುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಬಹಳ ಸಮಯದಿಂದ ನಿಂತು ಹೋಗಿರುವ ಸರ್ಕಾರಿ ಮಟ್ಟದಲ್ಲಿನ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಮಕ್ಕಳ ಶಿಕ್ಷಣ- ಉದ್ಯೋಗದಲ್ಲಿ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಉದ್ದೇಶ ಈಡೇರುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮನೆಯ ಮಟ್ಟಿಗೆ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವಂಥ ನಿರ್ಧಾರ ಮಾಡಲಿದ್ದೀರಿ.
ಹಣದ ವಿಚಾರದಲ್ಲಿ ಕೆಲವು ವ್ಯಕ್ತಿಗಳ ಜೊತೆಗೆ ಅಭಿಪ್ರಾಯ ಭೇದ- ಮನಸ್ತಾಪ ಕಾಣಿಸಿಕೊಳ್ಳಬಹುದು. ನೀವು ಹೇಳುವುದೊಂದು ಅದು ಅರ್ಥವಾಗುವ ರೀತಿ ಮತ್ತೊಂದು ಎಂಬ ಸನ್ನಿವೇಶ ಸೃಷ್ಟಿ ಆಗುತ್ತದೆ. ಮುಖ್ಯ ವಿಚಾರಗಳು ಇದ್ದಲ್ಲಿ ಫೋನ್ ನಲ್ಲಿ ಮಾತನಾಡುವ ಬದಲಿಗೆ ನೇರಾನೇರ ಭೇಟಿ ಆಗಿಬಿಡುವುದು ಉತ್ತಮ. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ಯಾರೇ ಪ್ರಸ್ತಾವ ಮುಂದಿಟ್ಟರೂ ನೇರವಾಗಿ ‘ಬೇಡ” ಎಂದುಬಿಡುವುದು ಒಳ್ಳೆಯ ನಿರ್ಧಾರ ಎಂದೆನಿಸಿಕೊಳ್ಳುತ್ತದೆ.
ದಾನ- ಧರ್ಮಕ್ಕಾಗಿ ಹಣದ ವಿನಿಯೋಗ ಆಗಲಿದೆ. ಸ್ವಾದಿಷ್ಟವಾದ ಊಟ- ತಿಂಡಿಗಳನ್ನು ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಇಷ್ಟು ಸಮಯ ನಿಮ್ಮ ಬಗ್ಗೆ ತಿರಸ್ಕಾರದಿಂದ ನೋಡುತ್ತಿದ್ದವರು, ದ್ವೇಷ ಸಾಧನೆ ಮಾಡುತ್ತಿದ್ದವರು ತಾವಾಗಿಯೇ ನಿಮ್ಮ ಬಳಿ ಬಂದು, ಸಹಾಯ ಕೇಳಲಿದ್ದಾರೆ. ದೂರ ಪ್ರಯಾಣ ಅನಿವಾರ್ಯ ಎಂಬಂತೆ ಆಗಲಿದೆ. ಒಬ್ಬರೇ ವ್ಯಕ್ತಿಯ ಸಲುವಾಗಿ ನಿಮ್ಮ ಹೆಚ್ಚು ಸಮಯವನ್ನು ನೀಡಬೇಕಾದ ಪರಿಸ್ಥಿತಿ ಸೃಷ್ಟಿ ಆಗಲಿದೆ. ತೀರಾ ಅನಿವಾರ್ಯ ಎಂದಾದಲ್ಲಿ ಮಾತ್ರ ಗ್ಯಾಜೆಟ್- ಮೊಬೈಲ್ ಫೋನ್ ಇಂಥವುಗಳ ಖರೀದಿ ಮಾಡಿ.
ಲೇಖನ- ಸ್ವಾತಿ ಎನ್.ಕೆ.