
ಗೃಹಾಲಂಕಾರ ವಸ್ತುಗಳ ಖರೀದಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಇದರಿಂದ ನಿಮಗೆ ಸಮಾಧಾನ- ತೃಪ್ತಿ ಸಿಗಲಿದೆ. ದೀರ್ಘ ಕಾಲದಿಂದ ನಿಮ್ಮ ಜತೆಗಿದ್ದು ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ದೂರದ ಪ್ರದೇಶಗಳಿಗೆ ತೆರಳುವ ವಿಚಾರ ತಿಳಿದುಬರಲಿದೆ. ಇದರಿಂದ ಭಾವನಾತ್ಮಕವಾಗಿ ಸ್ವಲ್ಪ ಕುಗ್ಗಿದಂತೆ ಭಾವನೆ ಮೂಡಲಿದೆ. ಆಸ್ತಮಾ ಸಮಸ್ಯೆ ಇರುವಂಥವರು ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಔಷಧ- ಮಾತ್ರೆಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದೀರಿ ಅಂತಾದರೆ ಅದರಿಂದ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ.
ಸಂಗಾತಿ ಜೊತೆಗೆ ಲಾಂಗ್ ಡ್ರೈವ್ ಗೆ ತೆರಳುವಂಥ ಯೋಗ ಇದೆ. ಇಷ್ಟು ಸಮಯ ನಿಮ್ಮ ಮನಸ್ಸಲ್ಲಿ ಇಟ್ಟುಕೊಂಡು, ಹೇಳದೇ ಇದ್ದಂಥ ಕೆಲವು ವಿಷಯಗಳನ್ನು ಹಂಚಿಕೊಳ್ಳಲಿದ್ದೀರಿ. ಹೊಸ ಕೋರ್ಸ್ ಸೇರಿಕೊಳ್ಳುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ವೃತ್ತಿಪರರು ನೀವಾಗಿದ್ದರೆ ನಿಮಗೆ ಗೊತ್ತಿರುವ ಮಾಹಿತಿಯೇ ಇದ್ದರೂ ಅದರ ಬಗ್ಗೆ ಇತರರಿಗೆ ಮಾಹಿತಿ ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳೆಯದು. ಕುಟುಂಬದ ಸದಸ್ಯರು ಹೇಳುವ ಕೆಲವು ವಿಚಾರಗಳಿಗೆ ಖರ್ಚು- ವೆಚ್ಚದ ಕಾರಣ ನೀಡಿ, ಅದು ಸಾಧ್ಯವಿಲ್ಲ ಎಂದು ಹೇಳಲಿದ್ದೀರಿ.
ಎತ್ತರದ ಸ್ಥಳಕ್ಕೆ ಹತ್ತುವಾಗ- ಇಳಿಯುವಾಗ ಎಚ್ಚರಿಕೆ ವಹಿಸಬೇಕು. ನಿಮ್ಮ ಉದ್ಯೋಗವೇ ಈ ರೀತಿಯಾದದ್ದು ಎಂದಾದಲ್ಲಿ ಸಾಮಾನ್ಯ ದಿನಗಳಲ್ಲಿ ನೀವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಎಚ್ಚರಿಕೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಆಪತ್ಕಾಲಕ್ಕೆ ಎಂದುಕೊಂಡು ನೀವು ಕೂಡಿಟ್ಟಿದ್ದ ಹಣವನ್ನು ತೆಗೆದುಕೊಳ್ಳಬೇಕು ಎಂಬ ಸ್ಥಿತಿ ಉದ್ಭವಿಸಲಿದೆ. ಸಂಗಾತಿಯಿಂದ, ನೀವು ಬಹಳ ಪ್ರೀತಿ- ಗೌರವದಿಂದ ಕಾಣುವ ವ್ಯಕ್ತಿಗಳಿಂದ ನಿಂದನೆ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ.
ಲೇಖನ- ಸ್ವಾತಿ ಎನ್.ಕೆ.