Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 31ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 31ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 31ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 31ರ ದಿನಭವಿಷ್ಯ

Updated on: Jan 31, 2026 | 7:11 AM

ಇದೇ ಫೆಬ್ರವರಿ ಒಂದನೇ ತಾರೀಕು ಮಾಘ ಮಾಸದ ಪೌರ್ಣಮಿ. ತಿರುವಣ್ಣಾಮಲೈನಲ್ಲಿನ ಅರುಣಾಚಲೇಶ್ವರ ದೇವಸ್ಥಾನದ ಗಿರಿ ಪ್ರದಕ್ಷಿಣೆಯನ್ನು ಮಾಡಿದಲ್ಲಿ ಉದ್ಯೋಗ, ಮದುವೆ, ವ್ಯಾಪಾ- ವ್ಯವಹಾರ ಹಾಗೂ ಆರೋಗ್ಯ ವಿಚಾರದಲ್ಲಿನ ಏನೇ ಸಮಸ್ಯೆಗಳು ಇದ್ದರೂ ಅವುಗಳನ್ನು ಬಗೆಹರಿಸಿಕೊಳ್ಳಲು ಮಾರ್ಗೋಪಾಯ ಗೋಚಾರ ಆಗುತ್ತದೆ. ಅಲ್ಲಿಗೆ ತೆರಳಲು ಸಾಧ್ಯವಿಲ್ಲದವರು ಮನೆಯ ಬಳಿ ಶಿವನ ದೇವಾಲಯಕ್ಕೆ ಹೋಗಿ ಯಥಾಶಕ್ತಿ ಪ್ರದಕ್ಷಿಣೆಯನ್ನು ಮಾಡಿ. ಮನಸ್ಸಿನಲ್ಲಿ ತಿರುವಣ್ಣಾಮಲೈನ ಅರುಣಾಚಲೇಶ್ವರನನ್ನು ಸ್ಮರಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮಲ್ಲಿ ಕೆಲವರು ಹಣ ಹೂಡಿಕೆ ಮಾಡಿ, ಕೆಲವು ಸಲಕರಣೆಗಳನ್ನು ಖರೀದಿಸುವುದಕ್ಕೆ ನಿರ್ಧಾರ ಮಾಡಬಹುದು. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಹಣಕಾಸು- ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ ರೀತಿಯಾಗಿ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಅಥವಾ ನಿಮ್ಮದಲ್ಲದ ತಪ್ಪಿಗೆ ವಿಚಾರಣೆ ಎದುರಿಸುತ್ತಿದ್ದಲ್ಲಿ ಆರೋಪದಿಂದ ಮುಕ್ತರಾಗಿ ಹೊರಬರುವಂಥ ಯೋಗ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾರ ಬಳಿ ಸಹಾಯ ಕೇಳಿದರೆ ಖಂಡಿತಾ ನೆರವು ಸಿಕ್ಕೇ ಸಿಗುತ್ತದೆ ಎಂದು ಭಾವಿಸಿರುತ್ತೀರೋ ಅಂಥವರೇ ಕಷ್ಟದಲ್ಲಿ ಇದ್ದಾರೆ ಎಂಬ ಮಾಹಿತಿ ನಿಮಗೆ ದೊರೆಯಲಿದೆ ಅಥವಾ ಅವರಾಗಿಯೇ ಹೇಳಲಿದ್ದಾರೆ. ಸಂಗೀತಗಾರರು, ಧಾರ್ಮಿಕ ಪ್ರವಚನಕಾರರು, ಪುರೋಹಿತರಿಗೆ ಕೈಯಿಂದ ಹಣ ಕಳೆದುಕೊಳ್ಳುವಂಥ ಯೋಗ ಕಂಡುಬರುತ್ತದೆ. ನೀವಾಗಿಯೇ ಯಾವುದೇ ಜವಾಬ್ದಾರಿಯನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕುಟುಂಬ ಸದಸ್ಯರು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಈ ಹಿಂದೆ ನೀವು ತೆಗೆದುಕೊಂಡಂಥ ನಿರ್ಧಾರ ಹಾಗೂ ತೀರ್ಮಾನಗಳಿಂದಲೇ ಈಗಿನ ಪರಿಸ್ಥಿತಿಗೆ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಯಾರು ಇಟ್ಟಿಗೆ- ಸಿಮೆಂಟ್, ಉಕ್ಕಿನ ಮಾರಾಟದಲ್ಲಿ ತೊಡಗಿಕೊಂಡಿರುವಿರೋ ಅಂಥವರು ವ್ಯವಹಾರದ ವಿಸ್ತರಣೆ ಮಾಡಬೇಕು ಎಂದು ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.