Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ಯಂತ್ರೋಪಕರಣಗಳ ಬಳಕೆಯಲ್ಲಿ ಜಾಗ್ರತೆ ವಹಿಸಿ
ಜನವರಿ 8ರಂದು ಜನ್ಮಸಂಖ್ಯೆ 7, 8, 9ರವರ ದಿನಭವಿಷ್ಯವನ್ನು ಸಂಖ್ಯಾಶಾಸ್ತ್ರ ಆಧಾರದಲ್ಲಿ ಇಲ್ಲಿ ನೀಡಲಾಗಿದೆ. ಜನ್ಮಸಂಖ್ಯೆ 7ರವರು ಖರ್ಚು ಮಾಡುವ ಸಾಧ್ಯತೆ ಹೆಚ್ಚು, ಯೋಗದಿಂದ ಶಕ್ತಿ. ಜನ್ಮಸಂಖ್ಯೆ 8ರವರು ಮೌನದಿಂದ ಪ್ರಯೋಜನ, ವೃತ್ತಿಯಲ್ಲಿ ಚಿಂತನೆ. ಜನ್ಮಸಂಖ್ಯೆ 9ರವರು ಜವಾಬ್ದಾರಿ ಹಂಚಿ, ಆರೋಗ್ಯದ ಬಗ್ಗೆ ಗಮನ ನೀಡಿ. ನಿಮ್ಮ ರಾಶಿಫಲ ತಿಳಿದು, ದಿನವನ್ನು ಉತ್ತಮವಾಗಿ ಯೋಜಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಾದಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಮನಸ್ಸು ಮಾಡುವಿರಿ. ದಿನಸಿ ಪದಾರ್ಥಗಳು, ಬೇಕರಿ ಪದಾರ್ಥಗಳ ಖರೀದಿಗೆ ಹಣವನ್ನು ಖರ್ಚು ಮಾಡಲಿದ್ದೀರಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಯೋಗ ಮತ್ತು ಧ್ಯಾನದಿಂದ ದೈಹಿಕ ಶಕ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರ ಸಂಪರ್ಕ ಸಾಧ್ಯವಾಗಲಿದೆ. ಬೆಲೆಬಾಳುವ ವಸ್ತುಗಳನ್ನು, ಸಣ್ಣ- ಪುಟ್ಟ ಚಿನ್ನ- ಬೆಳ್ಳಿ ಒಡವೆಗಳನ್ನು ಜೋಪಾನವಾಗಿಡಿ. ಸರ್ಕಾರಿ ಸವಲತ್ತುಗಳು ಸಿಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಎಲ್ಲ ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡಲೇ ಬೇಕು ಎಂಬುದು ಕಡ್ಡಾಯ ಏನೂ ಅಲ್ಲ. ಆದ್ದರಿಂದ ನಿಮಗೆ ಸಂಬಂಧ ಪಡದ ವಿಷಯಗಳಲ್ಲಿ ಮೌನಕ್ಕೆ ಶರಣಾಗುವುದು ನಿಮ್ಮ ಕೆಲಸಗಳಿಗೆ ಹೆಚ್ಚು ಪೂರಕವಾಗಲಿದೆ. ಶತ್ರುಗಳ ಕಾಟ ತಗ್ಗಲಿದೆ. ವೃತ್ತಿ ಜೀವನದಲ್ಲಿ ಬದಲಾವಣೆ ಬಯಸುವವರಿಗೆ ಈ ಬಗ್ಗೆ ಮರು ಚಿಂತನೆ ನಡೆಸಲು ಸೂಕ್ತ ದಿನ. ಯಂತ್ರೋಪಕರಣಗಳ ಬಳಕೆಯಲ್ಲಿ ಜಾಗ್ತೆ ಇರಲಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹೂಡಿಕೆಯಲ್ಲಿ ತಾಳ್ಮೆಯಿರಲಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮ್ಮ ಜವಾಬ್ದಾರಿಗಳನ್ನು ಇತರರಿಗೂ ಹಂಚಿ, ಗಡುವಿನೊಳಗೆ ಕೆಲಸ ಮುಗಿಸುವ ಕಡೆಗೆ ಗಮನವನ್ನು ನೀಡುವುದು ಉತ್ತಮ. ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಎಂಬ ಧೋರಣೆ ಬೇಡ. ಹೂಡಿಕೆ- ವೃತ್ತಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳುವ ಇರಾದೆ ಇರುವವರು ಇತರರ ಸಹಾಯವನ್ನೂ ಪಡೆಯಿರಿ. ಉದ್ಯೋಗ ಬದಲಾವಣೆಗೆ ಇದು ಸಕಾಲವಲ್ಲ. ಬೆನ್ನು ನೋವು ಅಥವಾ ಮೊಣಕಾಲು ನೋವು ಕಾಡಬಹುದು. ಆರ್ಥಿಕವಾಗಿ ಸಾಧಾರಣ ಫಲಿತಾಂಶ ದೊರೆಯಲಿದೆ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಗವಿದೆ.
ಲೇಖನ- ಎನ್.ಕೆ.ಸ್ವಾತಿ
