Monthly Horoscope June 2025: ಜೂನ್ ಮಾಸ ಭವಿಷ್ಯ; ಯಾವ ರಾಶಿಗೆ ಅಶುಭ ದಶೆ ಯಾವುದಕ್ಕೆ ಶುಭದಶೆ? ಮಾಹಿತಿ ಇಲ್ಲಿದೆ

ಜೂನ್​ 2025 ಮಾಸ ಭವಿಷ್ಯ: ಹಲವು ರಾಶಿಯ ಜನರಿಗೆ ಜೂನ್​ ತಿಂಗಳು ಶುಭಕರವಾದ ಮಾಸವಾಗಿದೆ. ರಾಶಿಯ ಅಧಿಪತಿ ಸಪ್ತಮದಲ್ಲಿ ರವಿಯ ಜೊತೆ ಇದ್ದಾನೆ ನಿಮ್ಮ ಎಲ್ಲ ಕೆಲಸಗಳಿಗೆ ಬಂಧುಗಳ ಸಹಕಾರ ಸಿಗುವುದು. ಆದರೆ ಕೆಲವು ಹತ್ತಿರದವರನ್ನು ನೀವು ಕಳೆದುಕೊಳ್ಳುವ ಸ್ಥಿತಿ ಇದೆ. ಬೇಸರಕ್ಕೆ ಅವಕಾಶ ಕೊಡದೆ, ಕರ್ಮಫಲವೆಂದು ಸಮಾಧಾನ ಮಾಡಿಕೊಳ್ಳುವುದು ಅನಿವಾರ್ಯ ಆಗುವುದು. ಸ್ತ್ರೀಯರ ವಿಚಾರದಲ್ಲಿ ವಿವಾದ ಸೃಷ್ಟಿಸಿಕೊಳ್ಳಬಹುದು. ಉದ್ಯೋಗದ ಸ್ಥಳದಲ್ಲಿ ವಾಗ್ವಾದ ಆಗಾಗ ನಡೆಯುವುದು. ವಿಷ್ಣುಸಹಸ್ರನಾಮವನ್ನು ಪಠಿಸಿ.

Monthly Horoscope June 2025: ಜೂನ್ ಮಾಸ ಭವಿಷ್ಯ; ಯಾವ ರಾಶಿಗೆ ಅಶುಭ ದಶೆ ಯಾವುದಕ್ಕೆ ಶುಭದಶೆ? ಮಾಹಿತಿ ಇಲ್ಲಿದೆ
June 2025 Monthly Horoscope
Edited By:

Updated on: May 28, 2025 | 8:42 AM

2025ರ ಜೂನ್ ತಿಂಗಳಲ್ಲಿ (June 2025 Horoscope)  ರಾಹು ಕೇತುಗಳ ಹಿಮ್ಮುಖವಾಗಿ ಚಲಿಸಿ ತಮ್ಮ ಸ್ಥಾನವನ್ನೂ ಬದಲಾಯಿಸಿವೆ. ಶುಕ್ರ, ಗುರು, ಸೂರ್ಯ, ಬುಧ, ಕುಜ ಹೀಗೇ ಎಲ್ಲರೂ ರಾಶಿಯನ್ನು ಬದಲಿಸಿದ್ದು ಕೆಲವು ಸ್ವಕ್ಷೇತ್ರ, ಮಿತ್ರ ಕ್ಷೇತ್ರ, ಶತ್ರು ರಾಶಿಯಲ್ಲಿಯೂ ಇರಲಿದ್ದು ಜಾತಕರ ಮೇಲೆ ಶುಭಾಶುಭ ಪ್ರಭಾವವನ್ನು ನೀಡಲಿವೆ. ಅಶುಭ ದಶೆ ಅಶುಭವನ್ನೂ, ಶುಭದಶೆ ಶುಭವನ್ನೂ ನೀಡಲಿದೆ. ದೈವಾರಾಧನೆ ಎಲ್ಲರಿಗೂ ಕ್ಷೇಮ ಉಂಟುಮಾಡುವುದು.

ಮೇಷ ರಾಶಿ ಜೂನ್​ ತಿಂಗಳ ಭವಿಷ್ಯ:

ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಶುಭ. ರಾಶಿ ಅಧಿಪತಿ ಪಂಚಮದಲ್ಲಿ ಇದ್ದು, ತಂತ್ರಜ್ಞಾನದಲ್ಲಿ ಮುನ್ನಡೆಯಲು ಅವಕಾಶ ಕೊಡುವನು. ಸಂಗಾತಿಯಿಂದ ಧನವನ್ನು ನಿರೀಕ್ಷಿಸುವಿರಿ. ಉದ್ಯೋಗದ ಬಗ್ಗೆ ಮನಸ್ಸು ಇಲ್ಲದೇಯಿದ್ದರೂ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಮಾತನ್ನು ಮನೋಹರವಾಗಿ ಆಡುವಿರಿ. ಉದ್ಯಮದ ಶ್ರಮವು ಫಲಿಸುವುದು. ಶತ್ರುವನ್ನು ಮರೆತರು ಶತ್ರುತ್ವ ಬಿಡಲಾಗದು. ಜಗದಂಬಿಕೆಯ ಉಪಾಸನೆ ಮಾಡಿ.

ವೃಷಭ ರಾಶಿ ಜೂನ್​ ತಿಂಗಳ ಭವಿಷ್ಯ:

ಈ ತಿಂಗಳಲ್ಲಿ ನಿಮಗೆ ಶುಭ. ರಾಶಿ ಅಧಿಪತಿ ಶುಕ್ರ ನಿಮ್ಮ ರಾಶಿಯಲ್ಲಿಯೇ ಇದ್ದು ಆಸೆಗಳನ್ನು ಪೂರೈಸುವನು. ಅದು ಅತಿಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಅನಂತರ ದುಃಖಪಡಬೇಕಾದೀತು. ಗುರುವು ದ್ವಿತೀಯದಲ್ಲಿ ನಿಮ್ಮ ಆರ್ಥಿಕ ಯೋಜನೆಗೆ ಬೇಕಾದ ಸಹಕಾರವನ್ನು ಯಾರಿಂದಲಾದರೂ ಕೊಡಿಸುವನು. ವಿವಾಹಕ್ಕೆ ಪ್ರತಿಬಂಧಕ‌ಬರಬಹುದು, ಬೇಸರಿಸದೇ ಸ್ವೀಕರಿಸಿ. ಕುಟುಂಬದ ಅಭಿಪ್ರಾಯವನ್ನು ಒಪ್ಪಿಕೊಂಡು ಮುಂದುರಿಯುವಿರಿ. ಶನೈಶ್ಚರ ಕವಚವನ್ನು ಪಠಿಸಿ.

ಇದನ್ನೂ ಓದಿ
ಜುಲೈ ನಂತರ ವಕ್ರ ಶನಿ ಪ್ರಭಾವದಿಂದ ಭಾರತ- ಪಾಕ್ ಮಧ್ಯೆ ತೀವ್ರ ಬಿಕ್ಕಟ್ಟು
ಈ ಯೋಗದವರಿಗೆ ಹಣದ ಹೊಳೆ, ಈಗ ಯೋಗ ಸಂಭವಿಸದರೂ ಧನವೋ ಧನ
ದಾಂಪತ್ಯದಲ್ಲಿ ಪದೇ ಪದೇ ಜಗಳ; ಜ್ಯೋತಿಷ್ಯ ದೃಷ್ಟಿಕೋನ ಮತ್ತು ಪರಿಹಾರ
ದೃಷ್ಟಿ ದೋಷ: ಪ್ರಾಚೀನ ಜ್ಞಾನ, ಕಾರಣಗಳು ಮತ್ತು ಸುಲಭ ಪರಿಹಾರಗಳು

ಮಿಥುನ ರಾಶಿ ಜೂನ್​ ತಿಂಗಳ ಭವಿಷ್ಯ:

ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ತಿಂಗಳು ಶುಭಾಶುಭ.‌ ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ಕೌಟುಂಬಿಕ ಕಲಹವಾಗಬಹುದು. ನೀವು ಹೇಳಬೇಕಾದುದನ್ನು ಸರಿಯಾದ ಜನರಿಗೆ ಹೇಳಿ. ಉದ್ಯೋಗದಲ್ಲಿ ಆಲಸ್ಯವಿರಲಿದೆ. ವಿವಾಹಕ್ಕಾಗಿ ನಿಮ್ಮನ್ನು ಹುಡುಕಿ ಬರಬಹುದು. ಸಂತಾನದ ವಿಚಾರದಲ್ಲಿ ದುಃಖ. ಶತ್ರುಗಳ ಬಲವರ್ಧನೆಯಾಗಲಿದ್ದು ನಿಮಗೆ ಭಯವಾಗುವುದು. ಅಮೂಲ್ಯ ವಸ್ತುಗಳು ಕಣ್ಮರೆಯಾಗಬಹುದು. ಲಕ್ಷ್ಮೀನಾರಾಯಾಣರನ್ನು ಸ್ತುತಿಸಿ.

 

ಕರ್ಕಾಟಕ ರಾಶಿ ಜೂನ್​ ತಿಂಗಳ ಭವಿಷ್ಯ:

ಈ ತಿಂಗಳಲ್ಲಿ ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಅಶುಭ. ಏಕಾದಶದಲ್ಲಿ ಇರುವ ಗುರುವು ದ್ವಾದಶ ಸ್ಥಾನಕ್ಕೆ ಬಂದಿದ್ದು ಪಡೆದುದನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಯಾರಿಗೂ ಅಪಮಾನವನ್ನು ಮಾಡಲು ಹೋಗಬೇಡಿ. ಮಾತಿನಲ್ಲಿ ಕೋಪ ಹೆಚ್ಚು ಕಾಣಿಸುವುದು. ಯಾರಮೇಲೂ ನಂಬಿಕೆ ನಿಮಗೆ ಇರದು. ಉದ್ಯೋಗದಲ್ಲಿ ನಿಮ್ಮ ಸ್ಥಾನ ಉಳಿದುಕೊಳ್ಳುವುದು. ಹಿರಿಯರ ಮೇಲಿನ ಗೌರವ ಕಡಿಮೆ ಹಾಗೂ ಅವರಿಗೂ ನಿಮ್ಮ ಮೇಲೆ‌ ವಿಶ್ವಾಸವಿರದು. ಗಣಪತಿಯನ್ನು ಸಂಕಷ್ಟಗಳ ನಿವಾರಣೆ ಪ್ರಾರ್ಥಿಸಿ.

ಸಿಂಹ ರಾಶಿ ಜೂನ್​ ತಿಂಗಳ ಭವಿಷ್ಯ:

ಜೂನ್ ತಿಂಗಳಲ್ಲಿ ನಿಮಗೆ ಶುಭವಿದೆ. ರಾಶಿಯ ಅಧಿಪತಿ ಏಕಾದಶದಲ್ಲಿ ಇರುವುದು ಅಧಿಕಾರಿವರ್ಗದವರಿಗೆ ಪ್ರಶಂಸೆ. ಸ್ಥಾನಮಾನಗಳಿಂದ ಗೌರವ ಪ್ರತಿಷ್ಠೆಗಳು ಹೆಚ್ಚು. ಕಿರಿಕಿರಿಯ ವಿಚಾರಗಳು ನಿಮ್ಮ ಬಳಿ ಬರಲಿದ್ದು, ಅದನ್ನು ಕೌಶಲ್ಯದಿಂದ ನಿಭಾಯಿಸುವುದು ಅಗತ್ಯ. ನೋವು ನಿವಾರಣೆಯನ್ನು ಪಡೆಕೊಳ್ಳಲು ದಾರಿ ಸಿಗುವುದು. ಶತ್ರುತ್ವದಿಂದಲೂ ದೂರಾಗಬಹುದು. ಧಾರ್ಮಿಕವಾಗಿ ಆಸಕ್ತಿ ಇರದು. ಸುಬ್ರಹ್ಮಣ್ಯನ ಉಪಾಸನೆ ಮಾಡಬೇಕು.

ಕನ್ಯಾ ರಾಶಿ ಜೂನ್​ ತಿಂಗಳ ಭವಿಷ್ಯ:

ಜೂನ್ ತಿಂಗಳಿನಲ್ಲಿ ರಾಶಿಯ ಅಧಿಪತಿ ಬುಧನು ಏಕಾದಶಕ್ಕೆ ಬಂದಿದ್ದು, ಉದ್ಯೋಗ ಅಧಿಪತಿಯೂ ಆದಕಾರಣ ಉನ್ನತಸ್ಥಾನಕ್ಕೆ ಹೋಗುವ ಅವಕಾಶ ಬರುವುದು. ವಿವಾಹದ ಬಗ್ಗೆ ಅತಿಯಾಗಿ ಯೋಚನೆ ಬೇಡ. ವಿಳಂಬವಾಗಲಿದೆ. ಆದರೆ ಅದಕ್ಕಾಗಿ ಮಾಡಬೇಕಾದ ಕೆಲಸವನ್ನು ಮಾಡುವುದನ್ನು ನಿಲ್ಲಿಸಬೇಡಿ. ನಿಮ್ಮ ಗೌರವವನ್ನು ನೀವೇ ಉಳಿಸಿಕೊಳ್ಳಬೇಕು. ಬೇಡದ ಕೆಲಸಕ್ಕೆ ಹಣವನ್ನು ಖರ್ಚುಮಾಡುವಿರಿ. ನರಸಿಂಹ ಸ್ತೋತ್ರವನ್ನು ಪ್ರಾತಃಕಾಲದಲ್ಲಿ ಪಠಿಸಿ.

ತುಲಾ ರಾಶಿ ಜೂನ್​ ತಿಂಗಳ ಭವಿಷ್ಯ:

ರಾಶಿಯ ಅಧಿಪತಿ ಹಾಗೂ ಅಷ್ಟಮಾಧಿಪತಿ ಶುಕ್ರ ಅಷ್ಟಮದಲ್ಲಿ ಇರುವುದರಿಂದ ಶುಭ. ಪ್ರವಾಸ ಮಾಡುವ ಸಂದರ್ಭ ಹೆಚ್ಚು. ಸುಂದರ‌ವಾದ ಸ್ಥಳಗಳಲ್ಲಿ ವಾಸ ಮಾಡುವಿರಿ. ನದಿ, ಸರೋವರ, ನೀರಿನ ಪ್ರದೇಶ ಹಾಗೂ ಭವ್ಯ ಪ್ರದೇಶಗಳಿಗೆ ಹೋಗುವಿರಿ. ಬಗೆಬಗೆಯ ಖಾದ್ಯಸೇವೆಗೂ ಅವಕಾಶ ಸಿಗಲಿದ್ದು, ವಿಲಾಸಿ ಜೀವನದ ಅನುಭವವನ್ನು ಪಡೆಯುವಿರಿ. ಭೂವ್ಯವಹಾರ ಲಾಭದಾಯಕವೂ ಹೌದು. ಭೂವರಾಹವನ್ನು ಉದ್ಯೋಗದ ಸ್ಥಳದಲ್ಲಿ ಇರಿಸಿ, ಕಾರ್ಯದಲ್ಲಿ ಮುನ್ನಡೆಯಿರಿ.

ವೃಶ್ಚಿಕ ರಾಶಿ ಜೂನ್​ ತಿಂಗಳ ಭವಿಷ್ಯ:

ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭಾಶುಭ. ರಾಶಿಯ ಹಾಗೂ ಷಷ್ಠದ ಅಧಿಪತಿ ದಶಮದಲ್ಲಿ ಇದ್ದು ಹಳೆಯ ಔದ್ಯೋಗಿಕ ಸಮಸ್ಯೆ ದೂರವಾದರೂ ಮತ್ತೊಂದು ಹುಟ್ಟಿಕೊಳ್ಳುವುದು. ಗುರುಬಲವೂ ಇಲ್ಲದ‌ ಕಾರಣ ಆರೋಗ್ಯದ ಬಗ್ಗೆ, ವ್ಯವಹಾರದಲ್ಲಿ, ಸಂಬಂಧಗಳಲ್ಲಿ ಲಕ್ಷ್ಯ ಹೆಚ್ಚು ಬೇಕಾಗುವುದು. ಕುಟುಂಬದಲ್ಲಿ ಮಕ್ಕಳಿಂದ ಸಂತೋಷಕರ ವಾತಾವರಣ ಇರುವುದು. ಸಂಗಾತಿಯಲ್ಲಿ‌ ಪ್ರೇಮ‌ ವರ್ಧಿಸುವುದು. ಆಕರ್ಷಣೆಗೆ ಒತ್ತುಕೊಡುವಿರಿ. ಗುರುಚರಿತ್ರೆಯನ್ನು ಓದುವ ಅಭ್ಯಾಸ ರೂಡಿಯಾಗಲಿ.

ಧನು ರಾಶಿ ಜೂನ್​ ತಿಂಗಳ ಭವಿಷ್ಯ:

ಜೂನ್ ನಿಮಗೆ ಶುಭಕರವಾದ ತಿಂಗಳಾಗಿದೆ. ರಾಶಿಯ ಅಧಿಪತಿ ಸಪ್ತಮದಲ್ಲಿ ರವಿಯ ಜೊತೆ ಇದ್ದಾನೆ ನಿಮ್ಮ ಎಲ್ಲ ಕೆಲಸಗಳಿಗೆ ಬಂಧುಗಳ ಸಹಕಾರ ಸಿಗುವುದು. ಆದರೆ ಕೆಲವು ಹತ್ತಿರದವರನ್ನು ನೀವು ಕಳೆದುಕೊಳ್ಳುವ ಸ್ಥಿತಿ ಇದೆ. ಬೇಸರಕ್ಕೆ ಅವಕಾಶ ಕೊಡದೆ, ಕರ್ಮಫಲವೆಂದು ಸಮಾಧಾನ ಮಾಡಿಕೊಳ್ಳುವುದು ಅನಿವಾರ್ಯ ಆಗುವುದು. ಸ್ತ್ರೀಯರ ವಿಚಾರದಲ್ಲಿ ವಿವಾದ ಸೃಷ್ಟಿಸಿಕೊಳ್ಳಬಹುದು. ಉದ್ಯೋಗದ ಸ್ಥಳದಲ್ಲಿ ವಾಗ್ವಾದ ಆಗಾಗ ನಡೆಯುವುದು. ವಿಷ್ಣುಸಹಸ್ರನಾಮವನ್ನು ಪಠಿಸಿ.

ಮಕರ ರಾಶಿ ಜೂನ್​ ತಿಂಗಳ ಭವಿಷ್ಯ:

ನಿಮಗೆ ಜೂನ್ ತಿಂಗಳಲ್ಲಿ ಮಿಶ್ರಫಲ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಉನ್ನತ ಸ್ಥಾನವನ್ನು ಕೊಡಿಸುವನು. ಗುರುವು ಬಲಹೀನನಾದ ಕಾರಣ ವಿದ್ಯೆ, ಜ್ಞಾನಕ್ಕೆ ಸಂಬಂಧಿಸಿದಂತೆ ಮರೆವು, ಅಪಮಾನಗಳನ್ನು ಎದುರಿಸಬೇಕಾಗುವುದು. ದ್ವಿತೀಯದಲ್ಲಿ ರಾಹುವು ಪಿತ್ರಾರ್ಜಿತ ಆಸ್ತಿ ಸಿಗುವಂತೆ ಮಾಡುವನು. ಪ್ರೇಮದ ವಿಚಾರದಲ್ಲಿ ಜಾಗರೂಕತೆ ಇರಲಿ. ದುಡುಕಿ ಹಾಳಾಗಬಹುದು. ಪ್ರೇಮವನ್ನು ಕೆಡಿಸುವ ತಂತ್ರವನ್ನು ತಾಳ್ಮೆಯಿಂದ ಭೇದಿಸಿ. ಸ್ವಯಂಭೂ ಲಿಂಗವನ್ನು ಆರಾಧಿಸಿ.

ಕುಂಭ ರಾಶಿ ಜೂನ್​ ತಿಂಗಳ ಭವಿಷ್ಯ:

ಈ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವುದರಿಂದ ಸ್ವಂತ ಉದ್ಯೋಗ‌ ಹಾಗೂ ಕೆಲಸದವರಿಗೆ ಹಣದ ಹರಿವು ಬರುವುದು.‌ ಚಾಣಾಕ್ಷತನದಿಂದ ಉಳಿತಾಯ ಮಾಡಲೂ ಬರುವುದು. ಆದರೆ ವ್ಯಯಾಧಿಪತಿಯೂ ಅವನೇ ಆದಕಾರಣ ಬಂದಂತದ್ದು ಹಾಗೇ ಹೋಗಿಬಿಡುವುದು. ಗುರುಹಿರಿಯರ ಸಮ್ಮುಖದಲ್ಲಿ ವಿವಾಹ ನಿಶ್ಚಯ ಸಾಧ್ಯತೆ. ವಿಳಂಬದ ಬೇಸರವಿಲ್ಲದೇ ಒಪ್ಪಿಕೊಳ್ಳಿ. ಮಹಾಲಕ್ಷ್ಮಿಯನ್ನು ಉಪಾಸಿಸಿ ಸ್ಥಿರಲಕ್ಷ್ಮೀಕೃಪೆಗೆ ಪಾತ್ರರಾಗಿ.

ಮೀನ ರಾಶಿ ಜೂನ್​ ತಿಂಗಳ ಭವಿಷ್ಯ:

ಜೂನ್ ತಿಂಗಳು ಮಿಶ್ರಫಲದಿಂದ ಕೂಡಿದೆ. ರಾಶಿಯ ಅಧಿಪತಿಯ ಸ್ಥಾನ ಚತುರ್ಥದಲ್ಲಿದೆ. ದಶಮಾಧಿಪತಿಯೂ ಆಗಿದ್ದರಿಂದ ಉದ್ಯೋಗಕ್ಕೆ ಕೌಟುಂಬಿಕ ಸಹಕಾರವಿರಲಿದೆ. ಉದ್ಯಮಕ್ಕೆ ಧನಸಹಾಯವನ್ನು ಮನೆಯ ಕಡೆಯಿಂದ ಸಿಗುವುದು. ಇನ್ನು ಶನಿಯೇ ನಿಮ್ಮ ರಾಶಿಯಲ್ಲಿ ಇದ್ದುದರಿಂದ ಅವನ ಪೂರ್ಣಸ್ವಭಾವ ನಿಮ್ಮ ಮನಸ್ಸಿನ ಮೇಲೆ ಬಿದ್ದು ಮಾಡುವ ಕೆಲಸವನ್ನೂ ಮಾಡದೇ ಯಾವುದನ್ನೂ ಹೊಸದಾಗಿ ಸೇರಿಸಿಕೊಳ್ಳದೇ ಯಥಾಸ್ಥಿತಿಯಲ್ಲಿ ಇರಲು ನಿಮ್ಮ ಮನಸ್ಸು, ಬುದ್ಧಿಗಳು ಒಪ್ಪುವುವು. ಶನೈಶ್ಚರನ‌ ಪ್ರೀತಿಗೆ ದೋಷಪರಿಹಾರದ ದಾನವನ್ನು ಕೊಡಿ.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 5:43 pm, Tue, 27 May 25