ಈ ಯೋಗದವರಿಗೆ ಹಣದ ಹೊಳೆ, ಈಗ ಯೋಗ ಸಂಭವಿಸದರೂ ಧನವೋ ಧನ
ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಯೋಗ-ಭ್ಯಾಗ ನಿರ್ಧಾರವನ್ನು ತಿಳಿಸಿರುತ್ತಾರೆ . ಯಾವ ಕಾಲಕ್ಕೆ, ಯಾವ ರಾಶಿ, ಯಾವ ಯೋಗ- ಭ್ಯಾಗವನ್ನು ಅವರ ಜಾತಕ ಯೋಗ್ಯತೆಗೆ ಅನುಸರವಾಗಿ ನೀಡಬೇಕು ಎಂಬುದು. ದೇವರ ಅನುಗ್ರಹದ ಮೇಲೆ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ಇದನ್ನು ನೀಡಲಾಗಿದೆ. ಈ ರಾಶಿಯ ವ್ಯಕ್ತಿಗಳಿಗೆ ಈ ವರ್ಷ ಈ ಯೋಗ ಬರಲಿದೆ. ನಿಮ್ಮ ಕೈಯಲ್ಲಿ ಲಕ್ಷ್ಮೀ ದೇವಿ ಕುಣಿಯಲಿದ್ದಾಳೆ.

ಧನ ಯಾರಿಗೆ ಬೇಡ (Astrology wealth) ಪ್ರಪಂಚದಲ್ಲಿ. ಎಲ್ಲರೂ ಧನವಂತನಾಗಬೇಕು ಎಂದೇ ಹಗಲಿರುಳು ಶ್ರಮಿಸುತ್ತಾರೆ. ಆದರೆ ಶ್ರಮಕ್ಕೆ ತನ್ನ ಫಲ ಎಲ್ಲರಿಗೂ ಸಿಗದು. ಏಕೆಂದರೆ ಪಡೆದುಕೊಂಡು ಬಂದಿದ್ದು ಎನ್ನುವುದೂ ಒಂದು ಇರುತ್ತದೆ. ಅದನ್ನೇ ದೈವ, ವಿಧಿ, ಹಣೆಬರಹ (Wealth yoga astrology) ಎಂಬ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇದು ಸರಿ ಇಲ್ಲದೇ ಎಷ್ಟೇ ಶ್ರಮ ಹಾಕಿದರೂ ಫಲ ಮಾತ್ರ ಅಲ್ಪ ಎನ್ನುವ ಕೊರಗು ಎಲ್ಲರಲ್ಲಿಯೂ ಸಹಜವೇ. ಆದರೆ ಅದಕ್ಕೆ ಜ್ಯೋತಿಷ್ಯ ಶಾಸ್ತ್ರ ಸಮಾಧಾನವನ್ನು ಹೇಳುತ್ತದೆ. ನೀನು ಪಡೆದುಕೊಂಡು ಬಂದಿರುವುದು ಇಷ್ಟು ಹಾಗಾಗಿ ಹೀಗೆ. ಅಥವಾ ಶ್ರಮವನ್ನು ಹಾಕಬೇಕಾದಲ್ಲಿ ಹಾಕದೇ ಮತ್ತಲ್ಲೋ ಹಾಕಿದರೂ ಸಂಪಾದನೆ ಶೂನ್ಯ ಅಥವಾ ಅಲ್ಪ.
ಹಾಗಾಗಿ ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಕಣ್ಣು ಇದ್ದಂತೆ. ಎಲ್ಲಿಗೆ ಹೋಗಬೇಕು, ಹೇಗೇ ಹೋಗಬೇಕು ಎನ್ನುವುದನ್ನು ತಿಳಿಸುತ್ತದೆ.
ಇನ್ನೂ ಹೇರಳವಾಗಿ ಸಂಪತ್ತು ಪಡೆಯುವರ ಜಾತಕದಲ್ಲಿ ಇಂತಹ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿಯೇ ಅವರು ಧನವಂತರಾಗುವರು. ಅನೇಕ ಪ್ರಕಾರಗಳಲ್ಲಿ ಧನಾಗಮನದ ಯೋಗವನ್ನು ಗುರುತಿಸಿ, ಹೇಳಿದ್ದಾರೆ. ಒಂದೊಂದಾಗಿ ನೋಡೋಣ.
ಧನ ಯೋಗಕ್ಕೆ ಎರಡು ಪಂಚಮಸ್ಥಾನ ಹಾಗೂ ಏಕಾದಶಸ್ಥಾನ ಈ ಎರಡೂ ಬಹಳ ಮುಖ್ಯವಾಗಿರುವುದು. ಅವುಗಳ ಸಂಯೋಜನೆಯಿಂದ ಹೇರಳ ಸಂಪತ್ತು ಅವರದಾಗುತ್ತದೆ. ಸ್ವಲ್ಪ ವ್ಯತ್ಯಾಸವಿದ್ದರೆ ಅಲ್ಪ ಸಂಪತ್ತು ಇರುವವರಾಗುತ್ತಾರೆ.
ಜನಿಸುವಾಗ ಲಗ್ನದಿಂದ ಐದನೇ ರಾಶಿಯಲ್ಲಿ ಶುಕ್ರನಿರಬೇಕು, ಆ ರಾಶಿ ಶುಕ್ರನದ್ದೇ ಆಗಿರಬೇಕು ಹಾಗೂ ಹನ್ನೊಂದನೇ ರಾಶಿಯಲ್ಲಿ ಕುಜನಿದ್ದರೆ ಬಹುಸಂಪತ್ತಿಗೆ ಒಡೆಯನಾಗುತ್ತಾನೆ.
ಲಗ್ನದಿಂದ ಐದನೇ ರಾಶಿ ಬುಧನದ್ದಾಗಿದ್ದು, ಅಲ್ಲಿಯೇ ಬುಧನೂ ಇದ್ದರೆ, ಚಂದ್ರ, ಕುಜ, ಗುರುವಿದ್ದರೆ ಅತಿಯಾದ ಸಂಪತ್ತು ಅವರದ್ದಾಗಿರುತ್ತದೆ.
ಲಗ್ನದಿಂದ ಪಂಚಮ ಸ್ಥಾನದಲ್ಲಿ ರವಿ ಇದ್ದು, ಅದು ಅವನ ಸ್ಥಾನವೇ ಆಗಿದ್ದರೆ ಹಾಗೂ ಹನ್ಮೊಂದನೇ ರಾಶಿಯಲ್ಲಿ ಶನಿ, ಚಂದ್ರ, ಗುರುವಿದ್ದರೆ ಪ್ರಭೂತವಾದ ಸಂಪತ್ತು ಸಿಗಲಿದೆ.
ಲಗ್ನದಿಂದ ಐದನೇ ರಾಶಿಯು ಶನಿಯದ್ದಾಗಿ, ಅಲ್ಲಿಯೇ ಶನಿಯೂ ಇದ್ದು, ಏಕಾದಶದಲ್ಲಿ ಸೂರ್ಯ ಹಾಗೂ ಚಂದ್ರರಿದ್ದರೆ ಸಂಪದ್ಭರಿತರಾಗಿ ಇರುವರು.
ಇದನ್ನೂ ಓದಿ: ಪೂರ್ವಾಭಾದ್ರಾ, ಉತ್ತರಾಭಾದ್ರಾ ರೇವತೀ ನಕ್ಷತ್ರಗಳಲ್ಲಿ ನೀವು ಜನಿಸಿದರೆ ಹೀಗಿರುವಿರಿ…
ಪಂಚಮವು ಗುರುಕ್ಷೇತ್ರವಾಗಿ, ಅಲ್ಲಿಯೇ ಗುರುವಿದ್ದು, ಏಕಾದಶದಲ್ಲಿ ಬುಧನಿದ್ದರೆ, ಐದನೇಯದು ಕುಜಕ್ಷೇತ್ರವಾಗಿ, ಕುಜನೇ ಅಲ್ಲಿದ್ದರೆ, ಏಕಾದಶದಲ್ಲಿ ಶುಕ್ರನಿದ್ದರೆ, ಚಂದ್ರನ ರಾಶಿಯಲ್ಲಿ ಚಂದ್ರನೇ ಲಗ್ನದಿಂದ ಐದನೇ ರಾಶಿಯಲ್ಲಿ ಹಾಗೂ ಏಕಾದಶದಲ್ಲಿ ಶನಿ ಇದ್ದರೆ ಅತಿಯಾದ ಸಂಪತ್ತು ನಿಮ್ಮ ಬಳಿ ಇರಲಿದೆ ಅಥವಾ ನಿಮ್ಮನ್ನು ಬಂದುಸೇರಬಹುದು.
ಈ ಯೋಗದಲ್ಲಿ ಜನಿಸಿದವರಿಗೆ ಮಾತ್ರವಲ್ಲ, ಇಂತಹ ಯೋಗ ಆಗಾಗ ಸಂಭವಿಸಬಹುದು. ಆಗಲೂ ಅಂತಹ ರಾಶಿಯವರಿಗೆ ಹಣದ ಹೊಳೆ ಹರಿಯುವುದು.
– ಲೋಹಿತ ಹೆಬ್ಬಾರ್ – 8762924271
ಜೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




