Horoscope: ನಿಮ್ಮ ಮಾತಿನಿಂದ ಶತ್ರುಗಳು ಹುಟ್ಟಿಕೊಳ್ಳಬಹುದು ಎಚ್ಚರ!
4 ಫೆಬ್ರವರಿ 2025: ಮಂಗಳವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಭಾವನಾತ್ಮಕ ವಿಚಾರಕ್ಕೆ ನೀವು ಸ್ಪಂದಿಸಲಾರಿರಿ. ಆಪ್ತತೆಯು ಕಡಿಮೆಯಾಗಲಿದೆ. ಮಕ್ಕಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡುವ ಹೊರೆಯನ್ನು ಹೊತ್ತು ಓಡಾಟಮಾಡುವಿರಿ. ಹಾಗಾದರೆ ಫೆಬ್ರವರಿ 4ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಭರಣೀ, ಯೋಗ : ಸಾಧ್ಯ, ಕರಣ : ತೈತಿಲ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:06, ಯಮಘಂಡ ಕಾಲ 09:54 – 11:20, ಗುಳಿಕ ಕಾಲ12:47 – 14:13.
ತುಲಾ ರಾಶಿ: ಏನೋ ಮಾಡುತ್ತೇನೆಂದು ಹೋಗಿ, ಏನನ್ನೂ ಮಾಡಲಾಗದೆ ಹಿಂದಿರುಗಲು ಮುಜುಗರವಾಗುವುದು. ಆಕಸ್ಮಿಕವಾಗಿ ತಿರುವುಗಳು ಬರಬಹುದು. ಹೆದರದೇ ಮುನ್ನಡೆಯಿರಿ. ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತದೆ ಎಂಬ ದಾರ್ಢ್ಯತೆಯು ನಿಮ್ಮ ಎಲ್ಲ ಕೆಲಸಕ್ಕೂ ಬಲವನ್ನು ಕೊಡುವುದು. ಉನ್ನತ ಮಟ್ಟದ ಕಾರ್ಯಕ್ಕೆ ಪರಿಚಿತರ ಬೆಂಬಲವನ್ನು ಪಡೆಯುವಿರಿ. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಬೇರೆಯವರ ಕೆಳಗೆ ಕೆಲಸಮಾಡಲು ಇಷ್ಟವಾಗದು. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಕೃಷಿಯ ಉತ್ಪನ್ನಗಳನ್ನು ಸೂಕ್ತ ಸ್ಥಳದಲ್ಲಿ ಸಮಯದಲ್ಲಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಬಗ್ಗಿ ನಡೆಯಬೇಕಾದಲ್ಲಿ ಬಗ್ಗಿಯೇ ನಡೆಯಬೇಕು. ಇಲ್ಲವಾದರೆ ತಲೆಗೆ ಪೆಟ್ಟು. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ.
ವೃಶ್ಚಿಕ ರಾಶಿ: ಮಹಿಳೆಯರಿಗೆ ಇಂದಿನ ಮಾತುಗಳು ಸಿಟ್ಟುತರಿಸಬಹುದು. ಪ್ರೇಮದ ಕಾರಣ ಇಂದಿನ ಉದ್ಯೋಗಕ್ಕೆ ರಜ ಹಾಕುವಿರಿ. ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಜೀವನ ಶೈಲಿ ವಿಶೇಷ ರೀತಿಯಲ್ಲಿ ಕಾಣಿಸಬಹುದು. ಮೇಲಿಂದ ಮೇಲೆ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಕಛೇರಿಯಲ್ಲಿ ಎಲ್ಲರ ಜೊತೆ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಬೇಡವಾದುದನ್ನು ಕಳೆದುಕೊಳ್ಳಲು ಪ್ರಯತ್ನಿಸಿ. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು.
ಧನು ರಾಶಿ: ಗುರಿಯ ಕಡೆ ಸರಿಯಾದ ದೃಷ್ಟಿ ಇದ್ದಾಗ, ಮತ್ತಾವುದೂ ನಿಮಗೆ ಕಾಣಿಸದು. ಹೂಡಿಕೆಯನ್ನು ನೀವು ಒತ್ತಾಯದಿಂದ ಮಾಡಿದರೂ ಅದರ ಫಲದಿಂದ ಸಂತೋಷವಂತೂ ಸಿಗಲಿದೆ. ಭೂಮಿಯ ವ್ಯವಹಾರವು ಪೂರ್ಣವಾಗಿ ಗೊತ್ತಾಗಲು ಸಮಯವನ್ನು ತೆಗೆದುಕೊಳ್ಳುವಿರಿ. ರಾಜಕೀಯದವರು ತಮ್ಮ ಹೇಳಿಕೆಗಳಿಗೆ ಸ್ಪಷ್ಟತೆಯನ್ನು ನೀಡುವರು. ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ ಸಮಯವು ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ಒಪ್ಪಿಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಆಗದು. ಸಂಗಾತಿಯ ಬೆಂಬಲವು ನಿಮ್ಮ ಕಾರ್ಯಗಳಿಗೆ ಸಿಗಲಿದೆ. ನಿಮ್ಮ ಜೀವನ ಪ್ರೀತಿ ಇತರರಿಗೆ ಖುಷಿಕೊಡುವುದು. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ.
ಮಕರ ರಾಶಿ: ನಿಮ್ಮಲ್ಲಿ ಉಂಟಾದ ಅಧಿಕಾರದ ಮೋಹ ಯಾರನ್ನೂ ಬಿಡಲಾರದು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಅನ್ಯರ ಆಗಮನವು, ಸಲಹೆಯನ್ನು ಕೊಡುವುದು ಇಷ್ಟವಾಗದು. ಅಚ್ಚುಕಟ್ಟಾದ ಕಾರ್ಯಕ್ಕೆ ಪ್ರಸಿದ್ಧಿ ಸಿಗುವುದು. ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ಇಂದು ನಿಮ್ಮ ಎಲ್ಲ ಸಂಪತ್ತನ್ನು ಕ್ರೋಢೀಕರಿಸಿ ಒಂದು ಮೊತ್ತವನ್ನು ನಿರ್ಧರಿಸುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಸುವುದು ಬೇಡ. ಸರಿಯಾದ ಮಾರ್ಗವನ್ನು ತೋರಿಸಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಮಾಡಬೇಕಾದ ಒಳ್ಳೆಯ ಕೆಲಸದ ಬಗ್ಗೆ ಗಮನವಿರಲಿ. ಬೇರೆಯವರಿಂದ ನಿಮ್ಮವರ ಬಗ್ಗೆ ದೂರನ್ನೂ ಕೇಳಬೇಕಾದೀತು. ವಿಚಲಿತವಾಗದೇ ತಾಳ್ಮೆಯಿಂದ ವ್ಯವಹರಿಸಿ.
ಕುಂಭ ರಾಶಿ: ಭಾವನಾತ್ಮಕ ವಿಚಾರಕ್ಕೆ ನೀವು ಸ್ಪಂದಿಸಲಾರಿರಿ. ಆಪ್ತತೆಯು ಕಡಿಮೆಯಾಗಲಿದೆ. ಮಕ್ಕಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡುವ ಹೊರೆಯನ್ನು ಹೊತ್ತು ಓಡಾಟಮಾಡುವಿರಿ. ಬಾಯಿಯ ಚಪಲಕ್ಕೆ ವಿರುದ್ಧ ಆಹಾರವನ್ನು ತಿಂದು ಹೊಟ್ಟೆಯನ್ನು ಹಾಳುಮಾಡಿಕೊಳ್ಳಬೇಕಾಗುವುದು. ಸಹೋದ್ಯೋಗಿಗಳ ಜೊತೆ ವಿವಾಹ ನಿಶ್ಚಯ ಮಾಡಿಕೊಳ್ಳುವಿರಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ. ನಿಮ್ಮ ಮೇಲಿನ ಪ್ರೀತಿ ಕಡಿಮೆ ಆಗುವುದು. ಯಾವುದೂ ಬೇಡವೆನ್ನುವ ಭಾವವು ಇರುವುದು.
ಮೀನ ರಾಶಿ: ನಿಮ್ಮ ವ್ಯಾಪಾರವು ಅತ್ಯಂತ ಶಿಸ್ತುಬದ್ಧವಾಗಿದ್ದು, ಹಣದ ಹರಿವೂ ನೀವು ಎಣಿಸಿದಂತೆ ಸಿಗುವುದು. ವೃತ್ತಿ ಜೀವನದಲ್ಲಿ ಗಣನೀಯ ಬೆಳವಣಿಗೆಯಾದುದು ನಿಮಗೆ ಗೊತ್ತಾಗಲಿದೆ. ಪ್ರೀತಿಯ ವಿಷಯಗಳಲ್ಲಿ ಭಾವನೆಗಳಿಗೆ ಗಮನ ಕೊಡಿ. ಹಣದ ವಿಷಯಗಳಲ್ಲಿ ಯೋಜನೆಗೆ ಆದ್ಯತೆ ನೀಡಬೇಕು. ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ಇಂದು ನಿಮ್ಮನ್ನು ಮನೆಯವರು ಅನಾದರ ಮಾಡಿದಂತೆ ಅನ್ನಿಸೀತು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ವೇತನವು ಹೆಚ್ಚಾಗಬಹುದು. ವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ಮನೆಯಿಂದ ದೂರ ಹೋಗಬೇಕಾಗಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮ್ಮಾನ ಸಿಗುವುದು. ಅವಿವಾಹಿತರು ಕಂಕಣಬಲವನ್ನು ನಿರೀಕ್ಷಿಸಬಹುದು.