Horoscope Today 04 February 2025 : ನಿಮ್ಮ ಆತ್ಮಬಲವು ಒತ್ತಡದಲ್ಲಿ ಇರುವಾಗ ಕೆಲಸಕ್ಕೆ ಬಾರದು..

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಸಪ್ತಮೀ ತಿಥಿ, ಮಂಗಳವಾರ ಉದ್ವೇಗದಿಂದ ತೊಂದರೆ, ಕ್ರಮಬದ್ಧವಾದ ಯೋಜನೆಯಿಂದ ಯಶಸ್ಸು, ವೃತ್ತಿಯ ಬದಲಾವಣೆಗಳನ್ನು ತಿಳಿಯುವುದು ಇಂದಿನ ಭವಿಷ್ಯ ತಿಳಿಯಿರಿ.‌ ಸಕಲರಿಗೂ ಸುಖವೇ ಸಿಕ್ಕಲಿ. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಅಸಮಯದ ಆಹಾರವು ನಿಮಗೆ ಅಭ್ಯಾಸವಾಗಲಿದ್ದು, ಇದನ್ನು ಬದಲಿಸಿಕೊಳ್ಳಬೇಕಾಗಬಹುದು.

Horoscope Today 04 February 2025 : ನಿಮ್ಮ ಆತ್ಮಬಲವು ಒತ್ತಡದಲ್ಲಿ ಇರುವಾಗ ಕೆಲಸಕ್ಕೆ ಬಾರದು..
ನಿಮ್ಮ ಆತ್ಮಬಲವು ಒತ್ತಡದಲ್ಲಿ ಇರುವಾಗ ಕೆಲಸಕ್ಕೆ ಬಾರದು
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 04, 2025 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಭರಣೀ, ಯೋಗ : ಸಾಧ್ಯ, ಕರಣ : ತೈತಿಲ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:06, ಯಮಘಂಡ ಕಾಲ 09:54 – 11:20, ಗುಳಿಕ ಕಾಲ12:47 – 14:13.

ಮೇಷ ರಾಶಿ: ಇಂದಿನ ದಿನಚರಿಯಲ್ಲಿ ಯಾವುದೂ ಸಮಂಜಸವೆನಿಸದೇ ಇರುವುದು. ಆಗಿಹೋದ ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ ಬರಬಹುದು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಅಸಮಯದ ಆಹಾರವು ನಿಮಗೆ ಅಭ್ಯಾಸವಾಗಲಿದ್ದು, ಇದನ್ನು ಬದಲಿಸಿಕೊಳ್ಳಬೇಕಾಗಬಹುದು. ಮಕ್ಕಳ ಆರೋಗ್ಯಕ್ಕೆ ಖರ್ಚು ಮಾಡಬೇಕಾದೀತು. ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ನಿಮಗಾದ ನೋವಿಗೆ ಯಾರ ಸಾಂತ್ವನವೂ ಉಪಯೋಗಕ್ಕೆ ಬಾರದು. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ನಕಾರಾತ್ಮಕತೆಯನ್ನು ಬುದ್ಧಿಪೂರ್ವಕವಾಗಿ ಹಿಮ್ಮೆಟ್ಟಿಸಿ. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಇನ್ನೊಬ್ಬರ ಅನುಭವವನ್ನು ನೀವು ಪಾಠವಾಗಿಸಿಕೊಳ್ಳಿ. ನಿಮ್ಮ‌ ತಾಳ್ಮೆಯನ್ನು ಪರೀಕ್ಷಿಸಲು ಸಂದರ್ಭವು ಬರಬಹುದು.

ವೃಷಭ ರಾಶಿ: ಅದೃಷ್ಟವನ್ನು ನಂಬಿ ಕಾರ್ಯೋನ್ಮುಖರಾದರೆ ಹಲವಾರು ಪ್ರಯೋಜನವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಕೆಡುವ ಸಂಭವವಿದೆ. ನಿರುದ್ಯೋಗಿಗಳು ಮಾನಸಿಕ ಖಿನ್ನತೆಯನ್ನು ಅನುಭವಿಸಬೇಕಾಗಬಹುದು. ಜೀವನೋತ್ಸಾಹಕ್ಕೆ ನಿಮ್ಮದಾದ ಚಿಂತನೆಗಳು ಇರಲಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ಹೊಸ‌ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯ ಸಾಲದು. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಅತಿಥಿಗಳ ಜೊತೆ ಸಲ್ಪ ಸಮಯ ಕಳೆಯಬೇಕಾಗುವುದು. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನೀವು ಜಯಶಾಲಿಯಾಗುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ. ಯಾರದೋ ಮಾತಿನಿಂದ ಹೂಡಿಕೆ ಮಾಡುವಿರಿ. ಹೃದ್ಯವಾದ ವಿಚಾರಗಳ ಕಡೆ ಗಮನವಿರಲಿ.

ಮಿಥುನ ರಾಶಿ: ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಮಕ್ಕಳಿಂದ ನಿಮಗೆ ಆಗಬೇಕಾದ ಸಹಾಯವು ಆಗಬಹುದು. ನೌಕರರ ವಿಚಾರದಲ್ಲಿ ಗಟ್ಟಿಯಾದ ನಿಲುವು ಅಗತ್ಯ. ಸಂಗಾತಿಯನ್ನು ನೀವು ವಿಧವಿಧವಾಗಿ ಪರೀಕ್ಷಿಸುವಿರಿ. ಸುಮ್ಮನೇ ದೇಹಾಯಾಸವನ್ನು ಮಾಡಿಕೊಳ್ಳದೇ ಯುಕ್ತಿಯಿಂದ ಕೆಲಸ ಮಾಡಿ. ನೆರೆಯವರ ಜೊತೆ ಕಲಹವು ಬೇಡ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ಹೇಗಾದರೂ ಮಾಡಿ ಬೆಳೆಯಬೇಕು ಎನ್ನುವ ಬಯಕೆ ಅತಿಯಾಗಿರುವುದು. ಅಸಹಾಯಕತೆಯು ಸಿಟ್ಟಾಗಿ ಪರಿಣಮಿಸಬಹುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ಸಂತೃಪ್ತಿ ಸಿಗುವುದು.

ಕರ್ಕಾಟಕ ರಾಶಿ: ನೀವು ಎಂತಹ ಉತ್ತಮರಾದರೂ ಸಮಾಜ ನಿಮ್ಮನ್ನು ಒಪ್ಪಿಕೊಳ್ಳದೇ ಇರಬಹುದು. ಇಂದು ನಿಮ್ಮ ಸಮಯವನ್ನಷ್ಟೇ ಅಲ್ಲದೇ ಇತರರ ಸಮಯವನ್ನೂ ಹಾಳುಮಾಡುವಿರಿ. ನಿಶ್ಚಿತ ಕೆಲಸದಲ್ಲಿ ಆಲಸ್ಯದಿಂದ ಇದ್ದು ಎಲ್ಲರಿಂದ ಹೇಳಿಸಿಕೊಳ್ಳಬೇಕಾಗುವುದು. ಸಲ್ಲದ ಆಸೆಗಳಿಂದ ನಿಮಗೆ ಬಂಧನವನ್ನು ಹಾಕಿಕೊಳ್ಳುವಿರಿ. ಎಂದೋ ಬಯಸಿದ ವಸ್ತುವುದು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಅಧಿಕಾರವನ್ನು ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ. ವೃತ್ತಿಯು ಬೇಸರ ತರಿಸಬಹುದು. ಇಂದು ಸರ್ಕಾರಿ ನೌಕರರು ಅಧಿಕ‌ ಕಾರ್ಯಗಳ‌ ಕಡೆ ಗಮನ ಹರಿಸಬೇಕಾದೀತು. ಎಂದೋ ಆದ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಮನಸ್ತಾಪವನ್ನು ತಂದುಕೊಳ್ಳುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ.

ಸಿಂಹ ರಾಶಿ: ಇಂದು ಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನೀವು ಮಾತ್ರ ಅಪೇಕ್ಷಿಸುವಿರಿ. ಆಕಸ್ಮಿಕ ಧನಲಾಭಕ್ಕೆ ಹಿಂದೇಟು ಹಾಕುವಿರಿ. ಮೋಜಿನಲ್ಲಿ ನಿಮ್ಮ ಸಮಯವು ಕಳೆಯುವುದು. ನಿಮ್ಮ ಒತ್ತಡವನ್ನು ಸಹೋದ್ಯೋಗಿಗಳ ಮೇಲೆ‌ಹಾಕಿ ಸ್ವಲ್ಪ ಹಗುರಾಗಬಹುದು. ದೌರ್ಭಾಗ್ಯಗಳು ನಿಮ್ಮನ್ನು ಯಾವುದಾದರೂ ಒಂದು ರೀತಿಯಲ್ಲಿ ನಿಮ್ಮನ್ನು ಸೇರಬಹುದು.‌ ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ‌ ನೀವು ಇಂದು ಕಾಣಲಿದ್ದೀರಿ. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ಜೀವನದ ಎಲ್ಲ ಸಂಗತಿಗಳನ್ನೂ ನಿಮ್ಮದಾಗಿಸಿಕೊಳ್ಳಲು ಬಯಸುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ದೌರ್ಬಲ್ಯವು ಶತ್ರುಗಳು ಬಳಸಿಕೊಳ್ಳುವರು.

ಕನ್ಯಾ ರಾಶಿ: ಈ ದಿನವನ್ನು ನೀವು ಒತ್ತಡದಿಂದಲೇ ಮುಕ್ತಾಯ ಮಾಡಬೇಕಾದೀತು. ಅಪರಿಚಿತರ ಸಹವಾಸವನ್ನು ಅನಿವಾರ್ಯ ಕಾರಣದಿಂದ ಮಾಡಬೇಕಾಗಬಹುದು. ಸುಳ್ಳನ್ನು ಸತ್ಯವೆಂದು ನಂಬಿಸುವ ಸಾಹಸಕ್ಕೆ ಹೋಗುವುದು ಬೇಡ. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು. ನಿಮ್ಮ ಸಹಕಾರವನ್ನು ಬಂಧುಗಳು ಮರೆಯಬಹುದು. ಪ್ರಯಾಣದಲ್ಲಿ ಸುರಕ್ಷತೆಯ ಬಗ್ಗೆ ಗಮನವಿರಲಿ. ಹಣದ ಕೊರೆತೆ ಇಲ್ಲದಿದ್ದರೂ ಹಳೆಯ ಮನೆಯನ್ನೇ ಅವಶ್ಯಕತೆಗೆ ಸರಿಯಾಗಿ ಗಟ್ಟಿ ಮಾಡಿಕೊಳ್ಳಿ. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ಸತ್ಯವನ್ನು ಮರೆಮಾಚಲು ತಂತ್ರವನ್ನು ಹೂಡಬೇಕಾಗುವುದು. ಮಕ್ಕಳು ನಿಮ್ಮ ಪ್ರತಿ ಬದಲಾವಣೆಯನ್ನೂ ಗಮನಿಸುವರು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ಸಂಪನ್ಮೂಲ ವ್ಯಕ್ತಿಗಳಾಗಿ ದೂರದ ಊರಿಗೆ ಹೋಗುವಿರಿ. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಬಂಧುಗಳ ಜೊತೆ ನಿಮ್ಮ ಬಾಂಧವ್ಯವು ಗಟ್ಟಿಯಾಗಿ ಇರುವುದು.

ತುಲಾ ರಾಶಿ: ಏನೋ ಮಾಡುತ್ತೇನೆಂದು ಹೋಗಿ, ಏನನ್ನೂ ಮಾಡಲಾಗದೆ ಹಿಂದಿರುಗಲು ಮುಜುಗರವಾಗುವುದು. ಆಕಸ್ಮಿಕವಾಗಿ ತಿರುವುಗಳು ಬರಬಹುದು. ಹೆದರದೇ ಮುನ್ನಡೆಯಿರಿ. ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತದೆ ಎಂಬ ದಾರ್ಢ್ಯತೆಯು ನಿಮ್ಮ ಎಲ್ಲ ಕೆಲಸಕ್ಕೂ ಬಲವನ್ನು ಕೊಡುವುದು. ಉನ್ನತ ಮಟ್ಟದ ಕಾರ್ಯಕ್ಕೆ ಪರಿಚಿತರ ಬೆಂಬಲವನ್ನು ಪಡೆಯುವಿರಿ. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಬೇರೆಯವರ ಕೆಳಗೆ ಕೆಲಸಮಾಡಲು ಇಷ್ಟವಾಗದು. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಕೃಷಿಯ ಉತ್ಪನ್ನಗಳನ್ನು ಸೂಕ್ತ ಸ್ಥಳದಲ್ಲಿ ಸಮಯದಲ್ಲಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಬಗ್ಗಿ ನಡೆಯಬೇಕಾದಲ್ಲಿ ಬಗ್ಗಿಯೇ ನಡೆಯಬೇಕು.‌ ಇಲ್ಲವಾದರೆ ತಲೆಗೆ ಪೆಟ್ಟು. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ.

ವೃಶ್ಚಿಕ ರಾಶಿ: ಮಹಿಳೆಯರಿಗೆ ಇಂದಿನ ಮಾತುಗಳು ಸಿಟ್ಟುತರಿಸಬಹುದು. ಪ್ರೇಮದ ಕಾರಣ ಇಂದಿನ ಉದ್ಯೋಗಕ್ಕೆ ರಜ ಹಾಕುವಿರಿ. ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ‌ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಜೀವನ ಶೈಲಿ ವಿಶೇಷ ರೀತಿಯಲ್ಲಿ ಕಾಣಿಸಬಹುದು. ಮೇಲಿಂದ‌ ಮೇಲೆ‌ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಕಛೇರಿಯಲ್ಲಿ ಎಲ್ಲರ ಜೊತೆ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಬೇಡವಾದುದನ್ನು ಕಳೆದುಕೊಳ್ಳಲು ಪ್ರಯತ್ನಿಸಿ. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು.

ಧನು ರಾಶಿ: ಗುರಿಯ ಕಡೆ ಸರಿಯಾದ ದೃಷ್ಟಿ ಇದ್ದಾಗ, ಮತ್ತಾವುದೂ ನಿಮಗೆ ಕಾಣಿಸದು. ಹೂಡಿಕೆಯನ್ನು ನೀವು ಒತ್ತಾಯದಿಂದ ಮಾಡಿದರೂ ಅದರ ಫಲದಿಂದ ಸಂತೋಷವಂತೂ ಸಿಗಲಿದೆ. ಭೂಮಿಯ ವ್ಯವಹಾರವು ಪೂರ್ಣವಾಗಿ ಗೊತ್ತಾಗಲು ಸಮಯವನ್ನು ತೆಗೆದುಕೊಳ್ಳುವಿರಿ. ರಾಜಕೀಯದವರು ತಮ್ಮ ಹೇಳಿಕೆಗಳಿಗೆ ಸ್ಪಷ್ಟತೆಯನ್ನು ನೀಡುವರು. ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ‌ ಸಮಯವು ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ಒಪ್ಪಿಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಆಗದು.‌ ಸಂಗಾತಿಯ ಬೆಂಬಲವು ನಿಮ್ಮ‌‌ ಕಾರ್ಯಗಳಿಗೆ ಸಿಗಲಿದೆ. ನಿಮ್ಮ ಜೀವನ ಪ್ರೀತಿ ಇತರರಿಗೆ ಖುಷಿಕೊಡುವುದು. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ.

ಮಕರ ರಾಶಿ: ನಿಮ್ಮಲ್ಲಿ ಉಂಟಾದ ಅಧಿಕಾರದ ಮೋಹ ಯಾರನ್ನೂ ಬಿಡಲಾರದು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಅನ್ಯರ ಆಗಮನವು, ಸಲಹೆಯನ್ನು ಕೊಡುವುದು ಇಷ್ಟವಾಗದು. ಅಚ್ಚುಕಟ್ಟಾದ ಕಾರ್ಯಕ್ಕೆ ಪ್ರಸಿದ್ಧಿ ಸಿಗುವುದು. ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ಇಂದು ನಿಮ್ಮ ಎಲ್ಲ ಸಂಪತ್ತನ್ನು ಕ್ರೋಢೀಕರಿಸಿ ಒಂದು ಮೊತ್ತವನ್ನು ನಿರ್ಧರಿಸುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಸುವುದು ಬೇಡ. ಸರಿಯಾದ ಮಾರ್ಗವನ್ನು ತೋರಿಸಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಮಾಡಬೇಕಾದ ಒಳ್ಳೆಯ ಕೆಲಸದ ಬಗ್ಗೆ ಗಮನವಿರಲಿ. ಬೇರೆಯವರಿಂದ ನಿಮ್ಮವರ ಬಗ್ಗೆ ದೂರನ್ನೂ ಕೇಳಬೇಕಾದೀತು. ವಿಚಲಿತವಾಗದೇ ತಾಳ್ಮೆಯಿಂದ ವ್ಯವಹರಿಸಿ.

ಕುಂಭ ರಾಶಿ: ಭಾವನಾತ್ಮಕ ವಿಚಾರಕ್ಕೆ ನೀವು ಸ್ಪಂದಿಸಲಾರಿರಿ. ಆಪ್ತತೆಯು ಕಡಿಮೆಯಾಗಲಿದೆ. ಮಕ್ಕಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡುವ ಹೊರೆಯನ್ನು ಹೊತ್ತು ಓಡಾಟಮಾಡುವಿರಿ. ಬಾಯಿಯ ಚಪಲಕ್ಕೆ ವಿರುದ್ಧ ಆಹಾರವನ್ನು ತಿಂದು ಹೊಟ್ಟೆಯನ್ನು ಹಾಳುಮಾಡಿಕೊಳ್ಳಬೇಕಾಗುವುದು. ಸಹೋದ್ಯೋಗಿಗಳ ಜೊತೆ ವಿವಾಹ ನಿಶ್ಚಯ ಮಾಡಿಕೊಳ್ಳುವಿರಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ. ನಿಮ್ಮ ಮೇಲಿನ‌ ಪ್ರೀತಿ ಕಡಿಮೆ‌ ಆಗುವುದು.‌ ಯಾವುದೂ ಬೇಡವೆನ್ನುವ ಭಾವವು ಇರುವುದು.

ಮೀನ ರಾಶಿ: ನಿಮ್ಮ ವ್ಯಾಪಾರವು ಅತ್ಯಂತ ಶಿಸ್ತುಬದ್ಧವಾಗಿದ್ದು, ಹಣದ ಹರಿವೂ ನೀವು ಎಣಿಸಿದಂತೆ ಸಿಗುವುದು. ವೃತ್ತಿ ಜೀವನದಲ್ಲಿ ಗಣನೀಯ ಬೆಳವಣಿಗೆಯಾದುದು ನಿಮಗೆ ಗೊತ್ತಾಗಲಿದೆ. ಪ್ರೀತಿಯ ವಿಷಯಗಳಲ್ಲಿ ಭಾವನೆಗಳಿಗೆ ಗಮನ ಕೊಡಿ. ಹಣದ ವಿಷಯಗಳಲ್ಲಿ ಯೋಜನೆಗೆ ಆದ್ಯತೆ ನೀಡಬೇಕು. ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ಇಂದು ನಿಮ್ಮನ್ನು ಮನೆಯವರು ಅನಾದರ ಮಾಡಿದಂತೆ ಅನ್ನಿಸೀತು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ವೇತನವು ಹೆಚ್ಚಾಗಬಹುದು. ವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ಮನೆಯಿಂದ ದೂರ ಹೋಗಬೇಕಾಗಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮ್ಮಾನ ಸಿಗುವುದು. ಅವಿವಾಹಿತರು ಕಂಕಣಬಲವನ್ನು ನಿರೀಕ್ಷಿಸಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

ರಾಜಕೀಯ ಪಂಡಿತ ರಾಹುಲ್​ ಗಾಂಧಿ EVM​ ಬಗ್ಗೆ ಮಾತನಾಡುತ್ತಾರೆ: ಜೋಶಿ ವ್ಯಂಗ್ಯ
ರಾಜಕೀಯ ಪಂಡಿತ ರಾಹುಲ್​ ಗಾಂಧಿ EVM​ ಬಗ್ಗೆ ಮಾತನಾಡುತ್ತಾರೆ: ಜೋಶಿ ವ್ಯಂಗ್ಯ
ನಾವು ಜನರೊಂದಿಗೆ ಪುನಃ ಸಂಪರ್ಕ ಸಾಧಿಸಬೇಕಿದೆ, ಸವಾಲು ದೊಡ್ಡದು: ಪ್ರಿಯಾಂಕಾ
ನಾವು ಜನರೊಂದಿಗೆ ಪುನಃ ಸಂಪರ್ಕ ಸಾಧಿಸಬೇಕಿದೆ, ಸವಾಲು ದೊಡ್ಡದು: ಪ್ರಿಯಾಂಕಾ
ಸಂಭ್ರಮಾಚರಣೆಯಲ್ಲಿ ದಣಿಯದೆ ಕುಣಿದು ಕುಪ್ಪಳಿಸಿದ ಹಿರಿಯ ಕಾರ್ಯಕರ್ತ
ಸಂಭ್ರಮಾಚರಣೆಯಲ್ಲಿ ದಣಿಯದೆ ಕುಣಿದು ಕುಪ್ಪಳಿಸಿದ ಹಿರಿಯ ಕಾರ್ಯಕರ್ತ
ಹಣ, ಅಧಿಕಾರ ಕೇಜ್ರಿವಾಲ್​ರನ್ನು ಬದಲಿಸಿತೇ? ಅಣ್ಣಾ ಹಜಾರೆ ಹೇಳಿದ್ದೇನು ನೋಡಿ
ಹಣ, ಅಧಿಕಾರ ಕೇಜ್ರಿವಾಲ್​ರನ್ನು ಬದಲಿಸಿತೇ? ಅಣ್ಣಾ ಹಜಾರೆ ಹೇಳಿದ್ದೇನು ನೋಡಿ
ಯಾದಗಿರಿಯಲ್ಲಿ ಸಾರಿಗೆ ಬಸ್​ ಪಲ್ಟಿ: 15 ಮಂದಿಗೆ ಗಾಯ
ಯಾದಗಿರಿಯಲ್ಲಿ ಸಾರಿಗೆ ಬಸ್​ ಪಲ್ಟಿ: 15 ಮಂದಿಗೆ ಗಾಯ
ದೆಹಲಿ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲ್ಲ; ಸಚಿವ
ದೆಹಲಿ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲ್ಲ; ಸಚಿವ
ಧಾರವಾಡ: ಶ್ರಮಿಕರ, ಕಾರ್ಮಿಕರ ಬಡಾವಣೆಗಳಲ್ಲಿ ಪೇಜಾವರ ಶ್ರೀಗಳ ಪಾದಯಾತ್ರೆ
ಧಾರವಾಡ: ಶ್ರಮಿಕರ, ಕಾರ್ಮಿಕರ ಬಡಾವಣೆಗಳಲ್ಲಿ ಪೇಜಾವರ ಶ್ರೀಗಳ ಪಾದಯಾತ್ರೆ
ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಅತಿಶಿ ಆಶಾಭಾವನೆ!
ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಅತಿಶಿ ಆಶಾಭಾವನೆ!
ಬಿಜೆಪಿಗೆ ಮುನ್ನಡೆ, ದೆಹಲಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣ
ಬಿಜೆಪಿಗೆ ಮುನ್ನಡೆ, ದೆಹಲಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣ
ಯಾವ ಕಾರಣಕ್ಕೂ ಪ್ರತಿಮೆಯನ್ನು ತೆರವುಗೊಳಿಸಲ್ಲ ಎಂದ ಸ್ಥಳೀಯರು
ಯಾವ ಕಾರಣಕ್ಕೂ ಪ್ರತಿಮೆಯನ್ನು ತೆರವುಗೊಳಿಸಲ್ಲ ಎಂದ ಸ್ಥಳೀಯರು