Horoscope: ಇಂದು ವಿದ್ಯಾರ್ಥಿಗಳು ಪ್ರೇಮಪಾಶದಿಂದ ಕಟ್ಟಲ್ಪಡಬಹುದು
3 ಫೆಬ್ರವರಿ 2025: ಸೋಮವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಸಹಾಯಕ್ಕೆ ಯಾರೂ ಬರದಿರುವುದು ಬೇಸರವಾಗುವುದು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಹಾಗಾದರೆ ಫೆಬ್ರವರಿ 3ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಿದ್ಧ, ಕರಣ : ಬಾಲವ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:28 – 09:54, ಯಮಘಂಡ ಕಾಲ 11:20 – 12:47, ಗುಳಿಕ ಕಾಲ14:13 – 15:39.
ತುಲಾ ರಾಶಿ: ಇಂದು ವಿದ್ಯಾರ್ಥಿಗಳು ಪ್ರೇಮಪಾಶದಿಂದ ಕಟ್ಟಲ್ಪಡಬಹುದು. ಇದು ಅವರ ಬಹಳಷ್ಟು ಸಮಯವನ್ನು ವ್ಯರ್ಥ ಮಾಡಬಹುದು. ಸಂಗಾತಿಯ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಏನೇ ಮಾಡಿದರೂ ಸಂಗಾತಿಯ ಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ಉಳಿದೆಲ್ಲವೂ ನಿಮ್ಮ ಪರವಾಗಿ ಇರುತ್ತದೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುವಿರಿ. ಇಂದು ನಿಮ್ಮ ಪ್ರೀತಿಯನ್ನು ಇತರರಿಗೆ ವ್ಯಕ್ತಪಡಿಸಲು ಸುಲಭವಾದ ಮಾರ್ಗ ಸಿಗಲಿದೆ. ನಿಮಗೆ ಕಛೇರಿಯಲ್ಲಿ ಪ್ರಶಂಸೆಯು ಸಿಗಬಹುದು. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ದಿನದ ಆರಂಭದಲ್ಲಿ ನಿಮಗೆ ಹಣಕಾಸಿನ ತೊಂದರೆಗಳು ಎದುರಾಗಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ. ನಿಮಗೆ ಇನ್ನೊಬ್ಬರ ಬಗ್ಗೆಯೇ ಅಧಿಕ ಆಲೋಚನೆ ಇರುವುದು.
ವೃಶ್ಚಿಕ ರಾಶಿ: ಇಂದು ಬಗೆಹರಿಯದ ಗೊಂದಲಗಳ ಬಗ್ಗೆ ನಿಮ್ಮ ಕುಟುಂಬದ ಜೊತೆಗೆ ಮಾತನಾಡಲು ನೀವು ಬಯಸಬಹುದು. ನೀವು ಚೆನ್ನಾಗಿ ಯೋಚಿಸಿದ ಯಾವುದಾದರೂ ವಿಧಾನವನ್ನು ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ. ಇಂದು ನೀವು ಬಂಧುಗಳ ಜೊತೆ ಸಮಯ ಕಳೆಯಬಹುದು. ಕುಟುಂಬಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸುದ್ದಿಗಳನ್ನು ಪಡೆಯುತ್ತೀರಿ. ಇಂದಿನ ಕೆಲಸಗಳನ್ನು ಮುಂದೂಡುವು ಮನಸ್ಸಿನಿಂದ ಮಾಡುವುದು ಬೇಡ. ಯಾರನ್ನೂ ಅಂಧಾಭಿಮಾನದಿಂದ ನಂಬಬೇಡಿ. ಇಂದು ನೀವು ಸಾಲ ಪಡೆದಿರುವ ಹಣವನ್ನು ಮರುಪಾವತಿ ಮಾಡುತ್ತೀರಿ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು. ಆಹಾರ ಅಭಾವವಾಗಬಹುದು. ವಿದ್ಯಾಭ್ಯಾಸಕ್ಕೆ ಉಂಟಾದ ತೊಂದರೆಯನ್ನು ಮನೆಯಲ್ಲಿ ಮಾತನಾಡಿ ಬಗೆಹರಿಸಿಕೊಳ್ಳುವಿರಿ.
ಧನು ರಾಶಿ: ಅಧಿಕ ಕ್ಷಮತೆಯನ್ನು ನೀವು ಇಟ್ಟುಕೊಂಡಷ್ಟು ಒಳ್ಳೆಯದು. ಆದರೆ ಇದೇ ನಿಮಗೆ ಮುಳುವಾಗಬಹುದು. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಖರ್ಚಿನ ವಿಚಾರದಲ್ಲಿ ಔದಾರ್ಯ ಬೇಡ. ವಾಸಸ್ಥಳ ಬದಲಾವಣೆಯಿಂದ ಹೆಚ್ಚು ಸಂತೋಷ ಇರುವುದು. ಸಂಗಾತಿಯ ಪ್ರೀತಿಯನ್ನು ಪಡೆಯುವಿರಿ. ನೀವು ಪ್ರವಾಸಕ್ಕೆ ಹೋಗುವ ದಿನ ಇಂದು. ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ತಲುಪಲು ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಷ್ಟೇ ಸರಿಯಾಗಿದ್ದರೂ ತಪ್ಪೇ ಎದ್ದು ತೋರಬಹುದು. ಕೆಲವರು ಇಂದು ನಿಮ್ಮ ತಲೆಗೆ ಭಾರವಾಗಬಹುದು. ಚಂಚಲ ಮನಃಸ್ಥಿತಿಯು ನಿಮ್ಮ ಕಛೇರಿಯ ಕಾರ್ಯವನ್ನು ಮಾಡಲು ಬಿಡದು. ಹಣವನ್ನು ಮರಳಿ ಪಡೆಯುವಲ್ಲಿ ನೀವು ತೊಂದರೆಗಳನ್ನು ಎದುರಿಸಬಹುದು. ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ಮಕ್ಕಳ ಬಯಕೆಯನ್ನು ಸಂಗಾತಿಯಲ್ಲಿ ಹೇಳುವಿರಿ.
ಮಕರ ರಾಶಿ: ಇಂದು ನಿಮ್ಮ ಬಲವನ್ನು ಪ್ರದರ್ಶಿಸುವಿರಿ. ಯಾರಿಂದಲಾದರೂ ಹಣವನ್ನು ಎರವಲು ಪಡೆದ ಜನರಿಗೆ ಯಾವುದೇ ಪರಿಸ್ಥಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಬಹುದು. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಉತ್ಸಾಹವನ್ನು ನೀವು ನಿಯಂತ್ರಿಸಬೇಕು. ಇಂದು ನಿಮ್ಮ ಪ್ರೀತಿಪಾತ್ರರು ನಿಮ್ಮ ಮಾತನ್ನು ಕೇಳಲು ಬಯಸುವುದಿಲ್ಲ. ಉದ್ಯೋಗದಲ್ಲಿ ಇರುವವರು ಸವಾಲಿನ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಮನಃಸ್ಥಿತಿಯನ್ನು ಇಟ್ಟುಕೊಂಡು ಮುನ್ನಡೆಯಿರಿ. ಆರೋಗ್ಯ ಸ್ಥಿತಿ ಅಷ್ಟು ಬೇಗ ಹದ ತಪ್ಪದು. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು. ವೈದ್ಯರಿಗೆ ಉತ್ತಮ ಅವಕಾಶವು ಸಿಗಬಹುದು. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ.
ಕುಂಭ ರಾಶಿ: ನಿಮ್ಮ ಮಾತುಗಳಿಂದ ಜೊತೆಗಿರುವವರು ಸ್ಫೂರ್ತಿ ಸಿಗಲಿದೆ. ನೀವು ಯಾರೊಂದಿಗೆ ಅರ್ಥಪೂರ್ಣ ಸಂಬಂಧವನ್ನು ಹೊಂದಲು ಬಯಸುತ್ತೀರಿ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ನಿಮ್ಮ ಕುಟುಂಬದವರ ಆರೋಗ್ಯವನ್ನು ನೋಡಿಕೊಳ್ಳಬೇಕು. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ತಾಯಿಯ ಕಡೆಯಿಂದ ಧನದ ನಿರೀಕ್ಷೆಯಲ್ಲಿ ಇರುವಿರಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ನಿಮ್ಮ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಮಾಡುವರು. ನಿಮಗೆ ಆಪ್ತರಿಂದ ಬೆಂಬಲ ಸಿಗಲಿದೆ. ಪ್ರಯಾಣದಲ್ಲಿ ಬರುವ ತೊಂದರೆಯನ್ನು ದೂರಮಾಡಿಕೊಳ್ಳುವಿರಿ.
ಮೀನ ರಾಶಿ: ಇಂದು ವೃತ್ತಿಪರರಾಗಿರಿ ನಿಮ್ಮ ವಹಿವಾಟು ಸರಿಯಾದ ದಿಕ್ಕಿನಲ್ಲಿ ಇದೆಯೇ ಪರೀಕ್ಷಿಸಿ. ನೀವು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯದಿರಿ. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಓದು ಮತ್ತು ಬರವಣಿಗೆಯಲ್ಲಿ ಸಮಯ ಕಳೆಯಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ವ್ಯವಹಾರದ ಪರಿಸ್ಥಿತಿ ಬಲವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ ಕಾಲವನ್ನು ಕಳೆಯುವಿರಿ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ನಿಮ್ಮ ಸಹಾಯಕ್ಕೆ ಯಾರೂ ಬರದಿರುವುದು ಬೇಸರವಾಗುವುದು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಷೇರು ಮಾರುಕಟ್ಟೆಯ ನಾಡಿಯನ್ನು ಅರಿತು ಹೂಡಿಕೆ ಮಾಡುವಿರಿ.