AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಭವಿಷ್ಯದ ಬಗ್ಗೆ ಎಷ್ಟೇ ಚಿಂತಿಸಿದರೂ ಪರಿಹಾರ ಸಿಗದೇ ಬೇಸರವಾಗುವಿರಿ

16 ಜನವರಿ​​ 2025: ಗುರುವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಬಗೆಗಿನ ಗೌರವ ಜನರಲ್ಲಿ ಹೆಚ್ಚಿರುವುದು. ಸಾಲವಾಗಿ ಪಡೆಯುವ ಹಣದ ಬಗ್ಗೆ ಆಪ್ತರ ಜೊತೆ ವಿಚಾರ ವಿನಿಮಯ ಇರಲಿ. ಹಾಗಾದರೆ ಜನವರಿ 16ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಭವಿಷ್ಯದ ಬಗ್ಗೆ ಎಷ್ಟೇ ಚಿಂತಿಸಿದರೂ ಪರಿಹಾರ ಸಿಗದೇ ಬೇಸರವಾಗುವಿರಿ
ಭವಿಷ್ಯದ ಬಗ್ಗೆ ಎಷ್ಟೇ ಚಿಂತಿಸಿದರೂ ಪರಿಹಾರ ಸಿಗದೇ ಬೇಸರವಾಗುವಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 16, 2025 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮಾಘ, ಯೋಗ: ಆಯುಷ್ಮಾನ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:33ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:03ರಿಂದ 08:28 ರವರೆಗೆ, ಗುಳಿಕ ಬೆಳಿಗ್ಗೆ 09:53 ರಿಂದ 11: 18 ರವರೆಗೆ.

ತುಲಾ ರಾಶಿ: ಅಭಿಯಂತರ ಹುದ್ದೆಯನ್ನು ಸೇರಿಕೊಳ್ಳಬಹುದು. ಮನೆ ಹಾಗೂ ಕಛೇರಿಯ ಜವಾಬ್ದಾರಿಯು ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಬೇಕಾಗುವುದು. ಆಪತ್ತು ಎದುರಾದಾಗ ಯುಕ್ತಿಯಿಂದ‌ ಕೆಲಸವನ್ನು ಮಾಡಿ. ಮಾಡಲು ಹೊರಟ ಕೆಲಸದಲ್ಲಿ ಸಂಪೂರ್ಣ ಯಶಸ್ಸು ನಿಮ್ಮದಾಗುವುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ವ್ಯವಹಾರದಲ್ಲಿ ಇರುವಾಗ ಬೇರೆ ಯಾವುದನ್ನೂ ಪರಿಗಣಿಸಲಾರಿರಿ. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಕುಟುಂಬವನ್ನು ಸಂತೋಷವಾಗಿಡಲು ಇಷ್ಟವಾಗುವುದು. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಲಾಗದು. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ಮುಖ್ಯವಾದದನ್ನು ಬಿಟ್ಟು ಮತ್ತೆಲ್ಲೋ ಗಮನವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು.

ವೃಶ್ಚಿಕ ರಾಶಿ: ಮಕ್ಕಳ ಭವಿಷ್ಯದ ಬಗೆಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗದೇ ಬೇಸರವಾಗುವುದು. ಉನ್ನತ ಅಧಿಕಾರಿಗಳು ಸಾಮಾನ್ಯರಿಗೆ ಸ್ಪಂದಿಸುವ ಕರ್ತವ್ಯವನ್ನು ಮರೆಯಬಾರದು. ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ತೀರಿಸಲು ಮತ್ತೆಲ್ಲೋ ಸಾಲ ಮಾಡಬೇಕಾದೀತು. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನಿಮ್ಮ ದುರಭ್ಯಾಸವನ್ನು ಮಿತಿಯಲ್ಲಿ ಇರಿಸಿಕೊಳ್ಳಿ. ನಿಮ್ಮವರ ಬಗ್ಗೆ ಇರುವ ಕಲ್ಪನೆಯು ರೂಪವನ್ನು ಕಳೆದುಕೊಳ್ಳಬಹುದು.

ಧನು ರಾಶಿ: ಎಲ್ಲಿಯೂ ವಿವಾದ ಮಾಡಿಕೊಳ್ಳದೇ ಬಹಳ ಜಾಗರೂಕತೆಯಿಂದ ಎಲ್ಲವನ್ನೂ ಪರಿಹರಿಸಿಕೊಳ್ಳುವಿರಿ. ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ಮಾತನಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಕಣ್ಣು ಆಯಾಸವನ್ನು ಸ್ಪಷ್ಟವಾಗಿ ಹೇಳುವುದು. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಂಡು ಸಂತಸವಾಗಬಹುದು. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಲ್ಲ. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಮಕ್ಕಳು ನಿಮ್ಮ ಮಾತನ್ನು ವಿರೋಧಿಸಬಹುದು. ಭಕ್ತಿಯಿಂದ ಮನಸ್ಸು ನಿರ್ಮಲವಾಗಿ ತೋರುವುದು. ಸ್ಪರ್ಧೆಗೆ ನಿಂತರೆ ಯಾರನ್ನೂ ಸೋಲಿಸಬಲ್ಲಿರಿ. ಅಂತರಂಗವನ್ನು ಆದಷ್ಟು ಗೌಪ್ಯವಾಗಿ ಇಡುವುದು ಮುಖ್ಯ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ.

ಮಕರ ರಾಶಿ: ನೀವು ಇಂದು ಯಾರನ್ನಾದರೂ ನಂಬಿ ಮಾತು ಕೊಟ್ಟರೆ ಉಳಿಸಿಕೊಳ್ಳಲಾಗದು. ವಿದೇಶದಿಂದ ಸ್ನೇಹಿತರ ಆಗಮನವಾಗಲಿದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಹಿರಿಯರ ಮಧ್ಯಸ್ಥಿಕೆಯಿಂದ ಶಾಂತವಾಗುವುದು. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ನೋಡದೇ ಖರೀದಿಸಿದ ವಸ್ತುಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಎಲ್ಲವೂ ನಿಮ್ಮಿಂದ ಆದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಇಂದಿನ ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ತೆರಳುವಿರಿ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ.

ಕುಂಭ ರಾಶಿ: ನಾಯಕ ಸ್ಥಾನವನ್ನು ಪಡೆಯುವ ಸಂದರ್ಭ ಬರಬಹುದು. ನಿಮ್ಮ ಪರಿಶ್ರಮದ ಆಧಾರದ ಮೇಲೆ ಫಲಾಫಲಗಳು ನಿರ್ಣಯವಾಗುವುದು. ಕೇಳದೇ ಯಾರಿಗೂ ಉಪದೇಶ ನೀಡಲು ಹೋಗಬೇಡಿ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ನೀವು ಅಂದುಕೊಂಡ ರೀತಿಯಲ್ಲಿ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಉದ್ವಿಗ್ನತೆಯು ಉಂಟಾದಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು. ನವವಿವಾಹಿತರಿಗೆ ಸಂತಸದ ಸುದ್ದಿಯು ಇರಲಿದೆ.

ಮೀನ ರಾಶಿ: ನಿಮಗೆ ಜೊತೆಯಾಗಿ ನಿಲ್ಲುವವರಿದ್ದರೆ ಎಂತಹ ಸಾಧನೆಯನ್ನೂ ಮಾಡುವ ಉತ್ಸಾಹ ಬರಲಿದೆ. ನಿಮ್ಮ ಬಗೆಗಿನ ಗೌರವ ಜನರಲ್ಲಿ ಹೆಚ್ಚಿರುವುದು. ಸಾಲವಾಗಿ ಪಡೆಯುವ ಹಣದ ಬಗ್ಗೆ ಆಪ್ತರ ಜೊತೆ ವಿಚಾರ ವಿನಿಮಯ ಇರಲಿ. ಇಂದು ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮ್ಮ ಕೆಲಸದಲ್ಲಿ ಆತ್ಮತೃಪ್ತಿಯಾಗುವಂತೆ ಮಾಡುವಿರಿ. ವಾಹನ ಚಲಾಯಿಸುವಾಗ ಉದ್ವೇಗ ಬೇಡ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವಿರಿ.

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ