Horoscope: ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್ 13: ಅನಿರೀಕ್ಷಿತ ಪ್ರಯಾಣ ಹೋಗುವ ಸಾಧ್ಯತೆ ಇದೆ. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಹಾಗಾದರೆ ಡಿಸೆಂಬರ್ 13ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಭರಣೀ/ಕೃತ್ತಿಕಾ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 12:27ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:16 ರಿಂದ 04:40 ರವರೆಗೆ, ಗುಳಿಕ ಕಾಲ ರಾತ್ರಿ 08:14 ರಿಂದ 09:39 ರವರೆಗೆ.
ತುಲಾ ರಾಶಿ: ಕಳೆದುಕೊಂಡಲ್ಲಿಯೇ ಹುಡುಕಿದರೆ ಸಿಗಬಹುದು. ನಿಮ್ಮನ್ನು ಗೌರವಿಸಿಲ್ಲ ಎಂಬ ಅಳುಕು ಕಾಣಿಸುಬಹುದು. ಅನಿರೀಕ್ಷಿತ ಪ್ರಯಾಣ ಹೋಗುವ ಸಾಧ್ಯತೆ ಇದೆ. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು. ಕುಟುಂಬದ ಜೊತೆ ಧಾರ್ಮಿಕ ಸ್ಥಳಗಳಿಗೆ ಹೋಗುವಿರಿ. ಮನಸ್ಸಿನಿಂದ ನೀವು ಕೆಲವು ವಿಚಾರವನ್ನು ತೆಗೆದುಹಾಕುವುದು ಉತ್ತಮ. ಅಪನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ವಸತಿ ಸ್ಥಾನವನ್ನು ಬದಲಿಸಬೇಕಾದೀತು. ಯಾರನ್ನೋ ನೋಡಿ ಹೊಟ್ಟಿ ಉರಿ ಮಾಡಿಕೊಳ್ಳುವುದು ಬೇಡ. ಸಮಯೋಚಿತ ಕಾರ್ಯದಿಂದ ಲಾಭ ಸಿಗಲಿದೆ. ಅರ್ಥಿಕತೆಗೆ ಸಂಬಂಧಿಸಿದಂತೆ ಯಾರಾದರೂ ಆಡಿಕೊಂಡಾರು. ವಿರುದ್ಧ ವಂಚನೆಯ ಆರೋಪವು ಬರಬಹುದು. ನಿಮಗೆ ಬರುವ ಯಾವುದನ್ನೂ ನಿಯಂತ್ರಣ ಮಾಡಲಾಗದು.
ವೃಶ್ಚಿಕ ರಾಶಿ: ಹಣಕಾಸಿನ ವಿಚಾರದಲ್ಲಿ ಅಪನಂಬಿಕೆ ಕಾಣಿಸುವುದು. ಒಳ್ಳೆಯ ಆಚಾರದಿಂದ ನಿಮಗೇ ಸಂತೃಪ್ತಿ ಸಿಗುವುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಬಹಳ ದಿನಗಳ ಅನಂತರ ನ್ಯಾಯಾಲಯದಿಂದ ಸಿಕ್ಕ ಜಯವು ಸಂತಸವನ್ನು ಉಂಟುಮಾಡುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಇಂದು ತುರ್ತಾಗಿ ಬೇಕಾಗಿರುವ ಹಣವನ್ನು ಹೊಂದಿಸಲು ನಿಮಗೆ ಕಷ್ಟವಾಗುವುದು. ಕೃಷಿಗೆ ಸಂಬಂಧಿಸಿದಂತೆ ಹೊಸ ಕಲ್ಪನೆಯನ್ನು ಇಟ್ಟುಕೊಳ್ಳುವಿರಿ. ಕಛೇರಿಯ ಕಾರ್ಯದಿಂದ ಆಯಾಸವಾಗಬಹುದು. ಬಹಳ ವರ್ಷಗಳಿಂದ ಒಂದೇ ಉದ್ಯೋಗದಲ್ಲಿ ಇದ್ದವರಿಗೆ ಸಂತೋಷದ ಸುದ್ದಿ ಸಿಗಲಿದೆ. ನಿಮ್ಮಿಂದ ಕಾರ್ಯವಾಗಲು ಯಾರಾದರೂ ನಿಮ್ಮನ್ನು ಹೊಗಳಬಹುದು. ಅಪರಿಚಿತರು ನಿಮ್ಮ ಎಲ್ಲ ವಿಚಾರಗಳನ್ನು ಚರ್ಚಿಸುವರು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ. ಕೇವಲ ನಗುವಿನಿಂದ ಇನ್ಮೊಬ್ಬರನ್ನು ನೀವು ಸೋಲಿಸಬಹುದು.
ಧನು ರಾಶಿ: ಪರಧನದ ಅಲಭ್ಯತೆ ಕಾಣಿಸುವುದು. ಖುಷಿಯಾಗಿರಲು ಹಲವು ಸಂಗತಿಗಳಿದ್ದರೂ ಅದನ್ನು ನಿರ್ಲಕ್ಷಿಸುವಿರಿ. ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ಹಗುರಾದ ಭಾವ ಬರಬಹುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನಿಸುವುದು. ವಿದ್ಯಾಭ್ಯಾಸಕ್ಕೆಂದು ಹೊರಗೆ ಇರುವವರಿಗೆ ಮನೆಯ ಬಗ್ಗೆಯೇ ನೆನಪಾಗುವುದು. ಹಿರಿಯರ ವಿಚಾರದಲ್ಲಿ ಅನಾದರ ಬೇಡ. ಇಷ್ಟವಿಲ್ಲದ ವಿಚಾರದ ಬಗ್ಗೆ ಮೌನ ವಹಿಸುವಿರಿ. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು.
ಮಕರ ರಾಶಿ: ನೀವು ಇಂದು ಸೇವಾಮನೋಭಾವದಿಂದ ಕಾರ್ಯದಲ್ಲಿ ತತ್ಪರರಾಗುವಿರಿ. ನಿಮಗೆ ಅನ್ಯತರ ಮಾತು ಬಹಳ ಹಿತವೆನಿಸವುದು. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ವ್ಯವಹಾರದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬ ಭಾವವು ಆಗಾಗ ಬರುವುದು. ಸಂಗಾತಿಯ ಜೊತೆ ವಾಯುವಿಹಾರಕ್ಕೆ ಹೋಗಿ ಖುಷಿಪಡುವಿರಿ. ಒಬ್ಬರೇ ವಾಹನದಲ್ಲಿ ಓಡಾಡುವುದು ಬೇಡ. ಮಕ್ಕಳಿಗೆ ನಿಮ್ಮ ಮೇಲೆ ಇದ್ದಕ್ಕಿದ್ದಂತೆ ಪ್ರೀತಿಯು ಅಧಿಕವಾಗಬಹುದು. ಸ್ನೇಹಿತರ ವಿಚಾರದಲ್ಲಿ ದೃಷ್ಟಿಕೋನ ಬದಲಾದೀತು. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು.
ಕುಂಭ ರಾಶಿ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಕಾಣಿಸುವುದು. ಮನಸ್ಸಿನಲ್ಲಿಯೇ ಎಲ್ಲ ಸಂಕಟವನ್ನೂ ನೀವು ಅನುಭವಿಸುವಿರಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಿ. ಶತ್ರುಗಳ ಕುತಂತ್ರವು ನಿಮಗೆ ಲಾಭವೇ ಆಗುವುದು. ಯಾರ ವಿರೋಧವನ್ನೂ ಕಿವಿಗೆ ಹಾಕಿಕೊಳ್ಳದೇ ನಿಮ್ಮದೇ ಮನಸ್ಸಿನಂತೆ ನಡೆಯುವಿರಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ.
ಮೀನ ರಾಶಿ: ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವ ಉತ್ಸಾಹದಲ್ಲಿ ಇರುವಿರಿ. ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹ ಜೀವನವು ಅತ್ಯಂತ ಸುಖದಂತೆ ತೋರುವುದು. ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು. ನಿಮ್ಮ ದಿನಚರಿಯನ್ನು ಬದಲಿಸಿಕೊಂಡು ಬದುಕಿಗೆ ಹೊಸ ಆಯಾಮವನ್ನು ಕೊಡಬೇಕು ಎನಿಸುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಸಕಾರಾತ್ಮಕ ಯೋಚನೆಗಳೂ ನಿಮಗೆ ಬಾಧೆಯನ್ನು ತರುವುದುಂಟು.