Horoscope: ಈ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಲ್ಲ
08 ಫೆಬ್ರವರಿ 2025: ಶನಿವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿ ಬಂದರೆ ಕಷ್ಟವಾಗುವುದು. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಹಾಗಾದರೆ ಫೆಬ್ರವರಿ 08ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಐಂದ್ರ, ಕರಣ : ಗರಜ, ಸೂರ್ಯೋದಯ – 07 – 00 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:54 – 11:20, ಯಮಘಂಡ ಕಾಲ 14:14 – 15:40, ಗುಳಿಕ ಕಾಲ 07:00 – 08:27.
ತುಲಾ ರಾಶಿ: ಬಹಳವಾಗಿ ನಂಬಿದವರು ನಿಮ್ಮ ಸಹಾಯಕ್ಕೆ ಬಾರದೇ ಇರಬಹುದು. ಅನ್ಯರ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡುವಿರಿ. ಆದರೆ ನಿಮಗೆ ದಿಕ್ಕೇ ಕಾಣದಂತಹ ಸ್ಥಿತಿಯಲ್ಲಿ ಇರುವಿರಿ. ವಿವಾಹದ ಚಿಂತೆ ಅಲ್ಪ ಕಾಲ ದೂರವಿರುವುದು. ಮಾಡಬೇಕಾದೀತು ಕೆಲಸಗಳನ್ನು ಮರೆತುಬಿಡುವಿರಿ. ನಿಮ್ಮ ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಅನಾರೋಗ್ಯದ ನಿಮಿತ್ತ ಧನಸಹಾಯ ಸಿಗುವುದು. ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಕಲಾವಿದರು ಹೆಚ್ಚಿನ ಆದಾಯವನ್ನು ಮಾಡಿಕೊಳ್ಳುವರು. ಸ್ಥಿಗಿತಗೊಂಡ ಕಾರ್ಯಗಳಿಗೆ ಪುನಃ ಚಾಲನೆ ಸಿಗಲಿದೆ. ಸ್ಪರ್ಧೆಯಲ್ಲಿ ನಿಮ್ಮದೇ ಮೇಲುಗೈ ಆಗಲಿದೆ. ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಭವಿಷ್ಯಕ್ಕಾಗಿ ತಮ್ಮ ಮಾರ್ಗವನ್ನು ಪರಿಶೀಲಿಸಿಕೊಳ್ಳಿ. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು.
ವೃಶ್ಚಿಕ ರಾಶಿ: ಸರ್ಕಾರದಿಂದ ಆಗುವ ಕಾರ್ಯಕ್ಕೆ ಒಬ್ಬರೇ ಹೋಗುವುದಕ್ಕಿಂತ ಗುಂಪಿನಲ್ಲಿ ಹೋಗಿ. ನಿಮಗೆ ಆಗಬೇಕಾದ ಕೆಲಸಕ್ಕೆ ಅಧಿಕಾರಿಗಳ ಜೊತೆ ಮಾತನಾಡಿ. ಆರೋಗ್ಯಕ್ಕಾಗಿ ಸೇವಿಸಿದ ಔಷಧವು ದುಷ್ಪರಿಣಾವನ್ನು ಉಂಟುಮಾಡೀತು. ನಿಮ್ಮ ಬಯಕೆಯು ಪೂರ್ಣವಾಗುವ ಸಾಧ್ಯತೆ ಹೆಚ್ಚು. ಬಹಳ ದಿನಗಳ ಪ್ರಯಾಣದ ಅನಂತರ ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಆರ್ಥಿಕ ಸಮಸ್ಯೆಗಳನ್ನು ನೀವು ಸಂಗಾತಿಯ ಹಂಚಿಕೊಳ್ಳಲು ಹಿಂಜರಿಯುವಿರಿ. ನಿಮ್ಮ ಜೀವನದ ದಿನಚರಿಯನ್ನು ವೈವಿಧ್ಯಮಯವಾಗಿ ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೆ, ಗೊತ್ತಿಲ್ಲದಂತೆ ಇರುವುದು ಉತ್ತಮ. ಅಪರಿಚಿತ ವರ್ತನೆಯು ನಿಮಗೆ ಗೊತ್ತಿಲ್ಲದೇ ಕಷ್ಟವಾದೀತು. ಇಂದು ನೀವು ಹಠಮಾರಿಯಂತೆ ತೋರುವಿರಿ. ನೀವು ಕಷ್ಟಕರ ಸಂದರ್ಭಗಳಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸಿ. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ನಿಮ್ಮ ವೈಯಕ್ತಿಕ ಕಾರಣಗಳು ಎಷ್ಟೇ ಇದ್ದರೂ ಅದನ್ನು ಪರರ ಮೇಲೆ ತೋರುಸವುದು, ಹೇರುವುದು ಬೇಡ.
ಧನು ರಾಶಿ: ಇಂಸು ಸ್ನೇಹಿತರ ಜೊತೆ ಭಾವನಾತ್ಮಕ ಸಣ್ಣ ವಿಚಾರಕ್ಕೆ ಮನಸ್ತಾಪ, ದೂರವೂ ಆಗಬಹುದು. ಯಾರನ್ನೂ ಅತಿಯಾಗಿ ಬಳಸಿಕೊಳ್ಳುವುದು ಇಷ್ಟವಾಗದು. ನಿಮ್ಮ ಬಲವರ್ಧನೆಗೆ ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಇಂದು ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಜಾಣ್ಮೆಯಿಂದ ವ್ಯವಹರಿಸಿ, ಎದುರಿನವರನ್ನು ಇಕ್ಕಟ್ಟಿಗೆ ಸಿಲುಕಿಸುವಿರಿ. ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ವೈದ್ಯ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ನಿಮ್ಮ ಸ್ವಭಾವವು ಇಂದಿನ ವಿಳಂಬದ ಕಾರ್ಯಗಳಿಗೆಲ್ಲ ಕಾರಣವಾಗಲಿದೆ. ಪ್ರಯಾಣದಲ್ಲಿ ವಸ್ತುಗಳನ್ನು ಭದ್ರವಾಗಿಸಿರಿಕೊಳ್ಳಿ. ಬದಲಾಗುವ ಸಾಧ್ಯತೆ ಇದೆ. ದಿನದಲ್ಲಿ ಆಗಬೇಕಾದ ಕಾರ್ಯಗಳನ್ನು ಮೊದಲೇ ಸಿದ್ಧಮಾಡಿಕೊಳ್ಳಿ. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಲು ಹಿಂಜರಿಯು ಅವಶ್ಯಕತೆ ಇರದು. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸದೇ ಯೋಗ್ಯ ಮರ್ಯಾದೆಯನ್ನು ಕೊಟ್ಟು ಕಾರ್ಯವನ್ನು ಮಾಡಿಸಿಕೊಳ್ಳಿ.
ಮಕರ ರಾಶಿ: ನಿಮ್ಮ ತುರ್ತಾದ ವೈಯಕ್ತಿಕ ಕಾರ್ಯಗಳನ್ನು ಮಾಡಲು ಸಮಯ ಸಿಗದು. ಕುಲದೇವರ ದರ್ಶನಕ್ಕೆ ಹೋಗುವ ಆಸೆಯನ್ನು ಪ್ರಕಟಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಕ್ಕಿ ಇನ್ನಷ್ಟು ಕೆಲಸವನ್ನು ಯೋಜಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನೊಬ್ಬರ ಅವಶ್ಯಕತೆಗಳನ್ನು ನೀವು ಪೂರೈಸುವ ಹೊಣೆ ಹೊರುವಿರಿ. ಇಂದು ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಟ್ಟು ಅಲಂಕಾರಕ್ಕಾಗಿ ಸಮಯವಿಡುವಿರಿ. ಆಸ್ತಿಯ ಸಂರಕ್ಷಣೆಗೆ ದಾರಿಯನ್ನು ಹುಡುಕುವಿರಿ. ಇಂದು, ನಿಮ್ಮ ಒಡಹುಟ್ಟಿದವರು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಸಂಪರ್ಕಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಪ್ರಯಾಣ ಹೊರಟಿರುವಿರಿ. ನೀವು ಸಮಚಿತ್ತರಾಗಲು ಕೆಲಾವಾರು ಕರ್ಮಗಳನ್ನು ದಿನವೂ ಮಾಡಬೇಕಾದೀತು. ಆಸ್ತಿಯ ವಿಚಾರದಲ್ಲಿ ದಾಯಾದಿಗಳಿಂದಲೇ ತೊಂದರೆ ಬಂದೀತು. ನೋವುಗಳನ್ನೇ ನೆನಪಿಸಿಕೊಳ್ಳುವುದರಲ್ಲಿ ಅರ್ಥವಿರದು. ನಿಮ್ಮ ಪಾಲಿನ ಸುಖದ ನೆನಪಿರಲಿ.
ಕುಂಭ ರಾಶಿ: ಇಂದು ನೀವು ಪರಮಾಪ್ತರಿಗೆ ಅಮೂಲ್ಯವಾದ ಅಚ್ಚರಿಯ ಉಡುಗೊರೆಯೊಂದನ್ನು ನೀಡುವಿರಿ. ಅಧಿಕಾರಿಗಳ ಮನಸ್ಸನ್ನು ಯಾವುದಾರೂ ರೀತಿಯಲ್ಲಿ ಗೆಲ್ಲುವ ಪ್ರಯತ್ನ ಮಾಡುವಿರಿ. ಆರ್ಥಿಕ ಅಡೆತಡೆಗಳು ಇಂದು ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗುವುದು. ಎಲ್ಲರಿಂದ ದೂರಾಗುವ ಸ್ಥಿತಿಯನ್ನು ತಂದುಕೊಳ್ಳಬಹುದು. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ, ಹಿರಿಯರಿಂದ ಉಪದೇಶ ಪ್ರಾಪ್ತಿ. ನಾಯಕರಿಗೆ ಬೆಂಬಲಕ್ಕಿಂತ ವಿರೋಧಿಗಳ ಧ್ವನಿಯೇ ಹೆಚ್ಚು ಕೇಳಿಸುವುದು. ಕೃಷಿಗಾಗಿ ಮಾಡಿದ ಬಾಕಿ ಸಾಲವನ್ನು ತೀರಿಸುವಿರಿ. ದುರಭ್ಯಾಸವು ನಿಮ್ಮ ಗುರಿಯನ್ನೇ ತಪ್ಪಿಸಿಹಾಕುವುದು. ಹಣಕ್ಕಾಗಿ ಸ್ನೇಹಿತರು ನಿಮ್ಮನ್ನು ಅತಿಯಾಗಿ ಪೀಡಿಸಯಾರು. ಅನಾರೋಗ್ಯ ಅತಿಯಾದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ಮಾತ್ರ ನೀವು ಸಂತೋಷವಾಗಿ ಇರುವಿರಿ.
ಮೀನ ರಾಶಿ: ಇಂದು ಸೋಲು ಗೆಲುವಿನ ಲೆಕ್ಕಾಚಾರವನ್ನು ಮಾಡಿಕೊಂಡು ಮುನ್ನಡೆಯುವಿರಿ. ಎಲ್ಲ ವಿಷಯಕ್ಕೂ ಇದು ಬೇಕಾಗದು. ಮನೋರಂಜನೆಗೆ ಇದು ಅಡ್ಡಿಯಾಗಬಾರದು. ಕುಟುಂಬದಲ್ಲಿ ಆದ ಮನಸ್ತಾಪ ಇಂದಿನ ದಿನವನ್ನೇ ತಿಂದುಹಾಕುವುದು. ಆಕಸ್ಮಿಕವಾಗಿ ಹಣದ ವ್ಯಯವೂ ಆಗಲಿದ್ದು ಮನಸ್ಸಿಗೆ ಮತ್ತಷ್ಟು ನೋವು. ನಿಮ್ಮ ಮನಸ್ಸಿನ ಹಾಗೂ ದೈಹಿಕ ಚೈತನ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಮಯವನ್ನು ಕ್ರೀಡೆಗೆ ಮೀಸಲಿಡುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿ ಬಂದರೆ ಕಷ್ಟವಾಗುವುದು. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಆರೋಗ್ಯವನ್ನು ಜಾಗರೂಕತೆಯಿಂದ ಕಾಪಾಡಿಕೊಂಡರೂ ನಿಮ್ಮ ಕ್ರಮದಲ್ಲಿ ವ್ಯತ್ಯಾಸ ಕಾಣಿಸಬಹುದು. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಮಾನಸಿಕವಾಗಿ ಕುಗ್ಗುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸುವಲ್ಲಿ ಹಿನ್ನಡೆ. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ.




