Horoscope: ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ತಿಳಿಯುವುದು
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್ 05: ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಹಾಗಾದರೆ ಡಿಸೆಂಬರ್ 05ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೃದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:13ರ ವರೆಗೆ, ಯಮಘಂಡ ಕಾಲ ಸಂಜೆ 06:45 ರಿಂದ 08:10 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:34ರಿಂದ 10:59 ರವರೆಗೆ.
ತುಲಾ ರಾಶಿ: ನಿಷ್ಕಾಮದಿಂದ ಮಾಡುವ ಕಾರ್ಯದಿಂದ ನೆಮ್ಮದಿ. ನಿಮ್ಮ ಖರ್ಚಿನ ಅಂದಾಜು ಮೀರಿದಂತೆ ನಿಮಗೆ ಕಾಣಿಸಬಹುದು. ಎಲ್ಲ ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ನಿಮ್ಮ ಆದಾಯವನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಸರ್ಕಾರಿ ಕಾರ್ಯವು ವಿಳಂಬವಾಗಬಹುದು. ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು. ಪ್ರೀತಿಯನ್ನು ಗೌಪ್ಯವಾಗಿ ಇಡುವಿರಿ. ಆಲಸ್ಯದಿಂದ ಹಿರಿಯರು ನಿಮ್ಮ ಬಗ್ಗೆ ಹೇಳಿಯಾರು. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು. ವಿಶ್ವಾಸವನ್ನು ಉಳಿಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನ ಇರುವುದು.
ವೃಶ್ಚಿಕ ರಾಶಿ: ಎಲ್ಲವನ್ನೂ ಸಂಭ್ರಮಿಸಿದರೆ ಯಾವುದೂ ಕಷ್ಟವೆನಿಸದು. ನಿಮ್ಮನ್ನು ಅನಾದರ ಮಾಡಿದಂತೆ ಕಂಡುಬಂದೀತು. ಸುಮ್ಮನೇ ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಸಾಕಷ್ಟು ಪ್ರಯತ್ನದ ಫಲವಾಗಿ ಉದ್ಯಮದ ದಾರಿಯು ಸುಗಮವಾಗುವುದು. ಪ್ರೇಮವಿವಾಹವು ತೀರ್ಮಾನವಾಗುವುದು. ಹೊಸ ಮನೆಯ ಖರೀದಿಯ ಯೋಚನೆ ಮಾಡುವಿರಿ. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ದಿನದಂತೆ ಇರದು. ನಿಮ್ಮದಾದ ಕಾರ್ಯದಲ್ಲಿ ನೀವು ಮಗ್ನರಾಗುವುದು ಉತ್ತಮ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವುದು ಬೇಡ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು. ನಿಮಗೆ ಹೂಡಿಕೆಯ ಬಗ್ಗೆ ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು. ಮರಣದ ಭೀತಿಯು ನಿಮ್ಮನ್ನು ಕಾಡುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಕೆಲವು ಅನುಭವಗಳು ನಿಮಗೆ ಪಾಠವಾಗಬಹುದು.
ಧನು ರಾಶಿ: ನಿಮಗೆ ಹೊಂದಾಣಿಕೆ ಸ್ವಭಾವವು ಹಿಡಿಸುವುದಿಲ್ಲ. ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ಮೋಹದಲ್ಲಿ ನೀವು ಬೀಳುವಿರಿ. ಖರ್ಚಿನಿಂದ ನೀವು ಆತಂಕಗೊಳ್ಳುವಿರಿ. ನಿಮ್ಮ ಸಮಯವನ್ನು ಸಹೋದ್ಯೋಗಿಗಳು ಹಾಳು ಮಾಡುವರು. ಮನಸ್ಸಿನ ಚಾಂಚಲ್ಯದಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ಇನ್ನೊಬ್ಬರ ಯೋಚನೆಯನ್ನು ಕದಿಯಬಹುದು. ಸಹೋದರನಿಂದ ಅರ್ಥಿಕ ಸಹಾಯವನ್ನು ಪಡೆಯುವಿರಿ. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ನಿಜವನ್ನು ಹೇಳಲು ಕಷ್ಟವಾಗಬಹುದು. ಅನಪೇಕ್ಷಿತ ಖರ್ಚನ್ನು ನಿಯಂತ್ರಣಕ್ಕೆ ತರಬೇಕು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.
ಮಕರ ರಾಶಿ: ಸಾಲವನ್ನು ತೀರಿಸುವ ಬಗ್ಗೆ ಸಣ್ಣ ಪ್ರಯತ್ನವನ್ನಾದರೂ ಮಾಡಿ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ. ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯದು. ಪ್ರೇಮ ಸಂಬಂಧದಿಂದ ನಿಮಗೆ ಇಂದು ಹಾಯೆನಿಸುವುದು. ಒತ್ತಡದ ನಡುವೆಯೂ ನಿಮ್ಮ ಕೆಲಸವನ್ನು ಸರಳ ಮಾಡಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯಕ್ಕೆ ಸರಿಯಾದ ಕೆಲಸವನ್ನು ಮಾಡಿ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು. ಉದ್ಯಮವು ಬೆಳವಣಿಗೆಯಿಂದ ಸಂತೋಷವಾಗಲಿದೆ.
ಕುಂಭ ರಾಶಿ: ನಿಮ್ಮ ನಕಾರಾತ್ಮಕ ಆಲೋಚನೆಗಳು ಇತರರಿಗೂ ತಿಳಿದೀತು. ಮನಶ್ಚಾಂಚಲ್ಯದಿಂದ ಕೆಲಸದಲ್ಲಿ ತೊಂದರೆ ಆಗುವುದು. ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಗಳಿಗೆ ತಂದೆಯಿಂದ ಬೇಕಾದ ಸಹಾಯವು ಸಿಗಬಹುದು. ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಮಯವನ್ನು ಕೊಡುವಿರಿ. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ. ಅನಾರೋಗ್ಯವನ್ನು ಮನೆಮದ್ಸಿನಿಂದ ಕಡಿಮೆ ಮಾಡಿಕೊಳ್ಳಿ. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಸ್ವಾಭಿಮಾನವೇ ನಿಮ್ಮನ್ನು ಮುನ್ನುಗ್ಗಲು ಬಿಡದು.
ಮೀನ ರಾಶಿ: ನಿಮಗೆ ಯಾವುದೇ ಕಟ್ಟುಪಡುಗಳಲ್ಲಿ ಇರಲು ಮನಸ್ಸಾಗದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ಮಕ್ಕಳ ಬಗ್ಗೆ ಕಾಳಜಿ ಇರಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ. ಸ್ತ್ರೀಯರ ಜೊತೆ ಹೆಚ್ಚು ಸಮಯ ಇರುವಿರಿ. ಕೃಷಿಯಲ್ಲಿ ಆಸಕ್ತಿಯು ಹೆಚ್ಚಾಗಬಹುದು. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.