ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 24, 2023 | 10:06 PM

ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದನ್ನು ನೋಡಣ.

ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ
ಕುಜ ಹಾಗೂ ಶುಕ್ರರ ಯೋಗದಿಂದ ಯಾರಿಗೆ ಏನಾಗಲಿದೆ?
Follow us on

ಕುಜ ಹಾಗೂ ಶುಕ್ರರು ಜಾತಕದಲ್ಲಿ ವಿಶೇಷ ಗ್ರಹಗಳಾಗಿರುತ್ತವೆ. ಈ ಎರಡು ಗ್ರಹಗಳಿಂದ ವಿವಾಹ ಹಾಗೂ ಪ್ರೀತಿಯ ವಿಚಾರವನ್ನು ಹೆಚ್ಚಾಗಿ ಚಿಂತಿಸುತ್ತಾರೆ. ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದುದನ್ನು ನೋಡಣ.

ವೃಶ್ಚಿಕ ರಾಶಿ: ಈ ರಾಶಿಯಲ್ಲಿಯೇ ಗ್ರಹಗಳ ಯೋಗವು ಆಗುವ ಕಾರಣ ಈ ರಾಶಿಯವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಆದರೆ ಯಾರನ್ನೇ ಇಷ್ಟಪಡುವುದಾದರೂ ಸುಮ್ಮನೇ ಕುರುಡಾಗಿ ಇಷ್ಟಪಡುವುದು ಬೇಡ. ಮನಸ್ಸನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದುವರಿಯುವುದು ಸೂಕ್ತ.

ಮಕರ ರಾಶಿ : ಈ ರಾಶಿಯವರ ಪ್ರತಿಭೆಯ ಹಾಗೂ ಸಾಮರ್ಥ್ಯವನ್ನು ಕಂಡು ಪ್ರೀತಿ ಉಂಟಾಗುವುದು. ಸ್ನೇಹವೇ ಪ್ರೀತಿಯಾಗಿ ಬದಲಾಗುವುದು.

ಇದನ್ನೂ ಓದಿ:Astrology: 2024 ರಲ್ಲಿ, ಈ ನಾಲ್ಕು ರಾಶಿಯವರ ಭವಿಷ್ಯ ಬದಲಾಗಲಿದೆ, ಇದು ಆರ್ಥಿಕ ಲಾಭದ ಸಂಕೇತ

ಕುಂಭ ರಾಶಿ : ಈ ರಾಶಿಯವರಿಗೂ ಯಾರದ್ದಾದರೂ ಮೇಲೆ ಪ್ರೀತಿ ಉಂಟಾಗಬಹುದು. ಆದರೆ ಒಂದೇ ಕಡೆಯ ಪ್ರೀತಿಯು ಇರಲಿದೆ. ಇನ್ನೊಂದು ಕಡೆಯಿಂದ ನಿಮಗೆ ಯಾವುದೇ ಸೂಚನೆಯೂ ಸಿಗದು ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಭಾವವಿದೆ ಎನ್ನುವುದನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಲು ಆಗದು. ಆತಂಕವೂ ಒಂದುಕಡೆ ಕೆಲಸವನ್ನು ಮಾಡುತ್ತಲೇ ಇರುತ್ತದೆ.

ವೃಷಭ ರಾಶಿ :ಈ ರಾಶಿಯು ಶುಕ್ರನ ರಾಶಿಯಾದ ಕಾರಣ ವೃಶ್ಚಿಕ ಹಾಗೂ ವೃಷಭ ರಾಶಿಯವರ ಮೇಲೆ ಪರಸ್ಪರ ಪ್ರೀತಿಯು ಉಂಟಾಗಬಹುದು. ಪ್ರೇಮಿಗಳ ವಿವಾಹವು ನಿಶ್ಚಯವಾಗುವುದು.

ಮಿಥುನ ರಾಶಿ : ಈ ರಾಶಿಯವರಿಗೆ ಪ್ರೀತಿಯು ಉಂಟಾದರೂ ಪೂರ್ಣವಾದ ಒಪ್ಪಿಗೆಯು ಇರಲಾರದು. ಬಹಳ ಜಿಜ್ಞಾಸೆಗಳು ಇವರ ಮನಸ್ಸಿನಲ್ಲಿ ಇರುವುದು. ಬಂಧುಗಳ ನಡುವೆಯೇ ಪ್ರೀತಿಯು ಅಂಕುರಿಸಬಹುದು.

– ಲೋಹಿತ ಹೆಬ್ಬಾರ್, ಇಡುವಾಣಿ

Published On - 10:00 pm, Sun, 24 December 23