ಸ್ಕೂಟರ್, ಬೈಕ್ ಅಥವಾ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ನಿಮಗೆ ಆಗಿಬರುವಂಥ ಬಣ್ಣ ಯಾವುದು ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶ ಇದೆಯಾ? ಹಾಗಿದ್ದರೆ ಈ ಲೇಖನ ನಿಮಗೆ ಸಹಾಯ ಮಾಡಲಿದೆ. ಆದರೆ ನೆನಪಿಟ್ಟುಕೊಳ್ಳಿ, ಜನ್ಮ ಜಾತಕದಲ್ಲಿ ಶುಕ್ರ ಗ್ರಹ ಉತ್ತಮ ಸ್ಥಾನದಲ್ಲಿ ಇದ್ದರೆ ಮಾತ್ರ ವಿಲಾಸಿ ಕಾರುಗಳಲ್ಲಿ ಅಥವಾ ವಾಹನಗಳಲ್ಲಿ ಪ್ರಯಾಣಿಸುವ ಯೋಗ ಬರುತ್ತದೆ. ಹಾಗೊಂದು ವೇಳೆ ಇಲ್ಲದಿದ್ದಲ್ಲಿ ನಿಮ್ಮದೇ ವಾಹನಗಳು ಇದ್ದರೂ ಅದನ್ನು ಅನುಭವಿಸುವ ಯೋಗ ನಿಮಗೆ ಸಿಗುವುದಿಲ್ಲ. ಇನ್ನು ಜಾತಕದಲ್ಲಿ ರಾಹು ನೀಚ ಸ್ಥಾನದಲ್ಲಿ ಇದ್ದರೆ ಪದೇಪದೇ ಅಪಘಾತಗಳು ಸಂಭವಿಸುತ್ತವೆ. ದಶಾಸಂಧಿ ಕಾಲಗಳಲ್ಲೂ ಹೀಗೆ ಆಗುತ್ತದೆ. ಆದ್ದರಿಂದ ಅಂಥ ಸಮಯಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಉಳಿದಂತೆ ವಾಹನ ಖರೀದಿ ಸಮಯದಲ್ಲಿ ಗಮನದಲ್ಲಿ ಇರಿಸಿಕೊಳ್ಳಬೇಕಾದದ್ದು ಬಣ್ಣ ಹಾಗೂ ಸಂಖ್ಯೆ. ಈಗ ಯಾವ ರಾಶಿಯವರಿಗೆ ಯಾವುದು ಅದೃಷ್ಟದ ಬಣ್ಣ ಎಂಬುದನ್ನು ತಿಳಿದುಕೊಂಡು ಬಿಡಿ. ಸಂಖ್ಯೆಯ ಬಗ್ಗೆ ಇನ್ನೊಂದು ಸಲ ವಿವರಣೆ ನೀಡುವ ಪ್ರಯತ್ನ ಮಾಡಲಾಗುವುದು.
ಮೇಷ: ಈ ರಾಶಿಯ ಅಧಿಪತಿ ಕುಜ. ಆಗಿಬರುವ ಬಣ್ಣ ಕೆಂಪು, ಹಳದಿ ಹಾಗೂ ಕೇಸರಿ.
ವೃಷಭ: ಈ ರಾಶಿಯ ಅಧಿಪತಿ ಶುಕ್ರ. ಬಿಳಿ, ಹಸಿರು ಹಾಗೂ ಕಪ್ಪು ಬಣ್ಣ ಆಗಿಬರುತ್ತದೆ.
ಮಿಥುನ: ಬುಧ ಗ್ರಹವು ರಾಶ್ಯಾಧಿಪತಿ. ಕೆಂಪು, ಹುಲ್ಲಿನ ಹಸಿರು ಹಾಗೂ ಬೂದು ಬಣ್ಣ ಆಗುತ್ತದೆ.
ಕಟಕ: ಚಂದ್ರ ಈ ರಾಶ್ಯಾಧಿಪತಿ. ಬಿಳಿ, ಕೆಂಪು, ಹಳದಿ ಬಣ್ಣ ಆಗಿಬರುತ್ತದೆ.
ಸಿಂಹ: ರವಿಯು ಈ ರಾಶಿಯ ಅಧಿಪತಿ. ಕೆಂಪು, ಹಳದಿ, ಕೇಸರಿ ಮತ್ತು ಬಿಳಿ ಶುಭ ಬಣ್ಣಗಳು.
ಕನ್ಯಾ: ಬುಧ ಗ್ರಹ ಈ ರಾಶಿಯ ಅಧಿಪತಿ. ಕೆಂಪು, ಹುಲ್ಲು ಹಸಿರು, ಬೂದು ಬಣ್ಣ ಆಗಿಬರುತ್ತದೆ.
ತುಲಾ: ಶುಕ್ರ ಗ್ರಹ ಈ ರಾಶ್ಯಾಧಿಪತಿ. ಬಿಳಿ, ಹಸಿರು, ಕಪ್ಪು ಶುಭ ಬಣ್ಣಗಳು
ವೃಶ್ಚಿಕ: ಕುಜ ಗ್ರಹ ಅಧಿಪತಿ. ಕೆಂಪು, ಹಳದಿ ಮತ್ತು ಕೇಸರಿ ಅದೃಷ್ಟದ ಬಣ್ಣಗಳು.
ಧನಸ್ಸು: ಗುರು ಗ್ರಹ ರಾಶ್ಯಾಧಿಪತಿ. ಕೆಂಪು, ಹಳದಿ, ಕೇಸರಿ ಮತ್ತು ಹಿತ್ತಾಳೆ ಬಣ್ಣ ಆಗಿಬರುತ್ತದೆ.
ಮಕರ: ಶನಿ ಗ್ರಹ ಅಧಿಪತಿ. ನೀಲಿ, ಹಸಿರು, ಹಳದಿ ಅದೃಷ್ಟ ಬಣ್ಣಗಳು.
ಕುಂಭ: ಶನಿ ಗ್ರಹ ಅಧಿಪತಿ. ನೀಲಿ, ಹಸಿರು, ಹಳದಿ ಆಗಿಬರುವ ಬಣ್ಣಗಳು.
ಮೀನ: ಗುರು ಗ್ರಹ ರಾಶ್ಯಾಧಿಪತಿ. ಕೆಂಪು, ಹಳದಿ, ಕೇಸರಿ ಮತ್ತು ಹಿತ್ತಾಳೆ ಬಣ್ಣ ಚೆನ್ನಾಗಿ ಆಗಿಬರುತ್ತದೆ.
ಗ್ರಹದ ಆಧಾರದಲ್ಲಿ ಅದೃಷ್ಟ ಬಣ್ಣ ಯಾವುದು ಎಂಬುದರ ವಿವರ ಹೀಗಿದೆ:
ರವಿ: ಕೆಂಪು
ಚಂದ್ರ: ಬಿಳಿ
ಕುಜ: ರಕ್ತಕೆಂಪು
ಬುಧ: ಹಸಿರು
ಗುರು: ಹಳದಿ
ಶುಕ್ರ: ಬಿಳಿ ಮತ್ತು ತಿಳಿಹಸಿರು
ಶನಿ: ಗಾಢ ನೀಲಿ
ರಾಹು: ಬೂದು ಬಣ್ಣ
ಕೇತು: ಮಿಶ್ರ ಬಣ್ಣ
ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?
ಇದನ್ನೂ ಓದಿ: Sandhi Shanti: ದಶಾ ಸಂಧಿ ಶಾಂತಿ ಎಂದರೇನು? ಅದನ್ನು ಯಾವಾಗ ಮಾಡಿಸಬೇಕು?
(Before purchasing vehicle you can check lucky colours on the basis of zodiac sign and ruling plant of an individual)
Published On - 6:50 am, Sat, 29 May 21