Numerology: ಹೆಸರಲ್ಲೇನಿದೆ ಅನ್ನೋ ಮುಂಚೆ ಏನೇನೆಲ್ಲ ಇದೆ ಎಂಬುದನ್ನು ತಿಳಿಯಿರಿ

Numerology: ಹೆಸರಲ್ಲೇನಿದೆ ಅನ್ನೋ ಮುಂಚೆ ಏನೇನೆಲ್ಲ ಇದೆ ಎಂಬುದನ್ನು ತಿಳಿಯಿರಿ
ಪ್ರಾತಿನಿಧಿಕ ಚಿತ್ರ

ನ್ಯೂಮರಾಲಜಿಯಲ್ಲಿ ಬಹಳ ಆಸಕ್ತಿಕರವಾದ ಸಂಗತಿ ಇಲ್ಲಿದೆ. ಹೆಸರಲ್ಲಿ ಏನಿದೆ ಎಂಬ ಪ್ರಶ್ನೆ ನಿಮಗೆ ಇದ್ದಲ್ಲಿ ಇಲ್ಲಿರುವ ಲೇಖನ ಇಂಟರೆಸ್ಟಿಂಗ್ ಅನಿಸುತ್ತದೆ.

Srinivas Mata

| Edited By: Ayesha Banu

May 28, 2021 | 6:58 AM


ನ್ಯೂಮರಾಲಜಿಯಲ್ಲಿ ಇಂಟರೆಸ್ಟಿಂಗ್ ಅನ್ನಿಸುವಂಥ ಸಂಗತಿಯನ್ನು ನಿಮಗೆ ಈ ದಿನ ತಿಳಿಸುತ್ತಿದ್ದೇವೆ. ಆರಂಭದಲ್ಲೇ ಹೇಳಬೇಕಾದ ಸಂಗತಿ ಏನೆಂದರೆ, ಇದು ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ. ಅನುಸರಿಸಬೇಕು ಅನ್ನಿಸಿದರೆ ಅನುಸರಿಸಿ. ಈ ವಿಚಾರದಲ್ಲಿ ಬಲವಂತ ಏನಿಲ್ಲ. ಆದರೆ ಈ ಬಗ್ಗೆ ಸೂಕ್ಷ್ಮವಾಗಿ ಆಲೋಚನೆಯಂತೂ ಮಾಡಿ. ಜನ್ಮ ದಿನಾಂಕ ಹಾಗೂ ಹೆಸರು ಎರಡೂ ಮುಖ್ಯವಾಗುತ್ತದೆ. ಎರಡೂ ಚೆನ್ನಾಗಿ ಹೊಂದಾಣಿಕೆ ಆದಲ್ಲಿ ಬದುಕು ಸರಾಗ. ಸವಾಲುಗಳು ಕೂಡ ಅಷ್ಟೇನೂ ಚಿಂತೆ ತಂದೊಡ್ಡುವುದಿಲ್ಲ. ಈಗ ಇಂಗ್ಲಿಷ್​ ಹೆಸರನ್ನೇ ಎಲ್ಲ ಕಡೆಯೂ ವ್ಯವಹಾರಕ್ಕೆ ಬಳಸುವ ರೂಢಿಯಲ್ಲಿರುವವರು ಕಡ್ಡಾಯವಾಗಿ ಗಮನಿಸಬೇಕಾದ ಸಂಗತಿ. ಏಕೆಂದರೆ ಕೆಲವರು ತಮ್ಮ ಮಾತೃಭಾಷೆಯಲ್ಲೇ ಸಹಿ ಮಾಡುತ್ತಾರೆ. ಆದ್ದರಿಂದ ಅವರಿಗೆ ಇದು ಅಷ್ಟಾಗಿ ಅನ್ವಯ ಆಗಲ್ಲ. ಆದರೆ ಇಂಗ್ಲಿಷ್​ನಲ್ಲಿ ಹೆಸರು ಬಳಸುತ್ತಿದ್ದೀರಿ ಅಂತಾದರೆ ಖಂಡಿತಾ ಈ ಲೇಖನವನ್ನು ಒಮ್ಮೆ ಗಂಭೀರವಾಗಿ ಪರಿಗಣಿಸಿ.

ತಮ್ಮ ಜನ್ಮದಿನಕ್ಕೆ ಹಾಗೂ ಜನ್ಮ ದಿನಾಂಕ ಪೂರ್ತಿಯಾಗಿ ಕೂಡಿದರೆ ಒಟ್ಟುಗೂಡುವಂತೆ ಸಂಖ್ಯೆಗೆ ಹೊಂದಾಣಿಕೆ ಆಗುವಂತೆ ಹೆಸರನ್ನು ಇಟ್ಟುಕೊಳ್ಳುವುದನ್ನು ನೋಡಿರುತ್ತೀರಿ ಹಾಗೂ ಸ್ವತಃ ಇಟ್ಟುಕೊಂಡಿರಲೂ ಬಹುದು. ಆದರೆ ಕೆಲವರು ಮುಖ್ಯವಾದ ಅಂಶವನ್ನು ಮರೆತು ಬಿಡುತ್ತಾರೆ ಅಥವಾ ಗೊತ್ತಿರುವುದಿಲ್ಲ. ಅದೇನು ಅಂದರೆ ಹೆಸರಿನಲ್ಲೇ ಬರುವ ನೆಗೆಟಿವ್ ಎನರ್ಜಿ. ಹೆಸರಿನಲ್ಲಿ SAD, ASH, GUN, NIL, END, SH, HARSH ಇಂಥದ್ದು ಬಾರದಿರುವಂತೆ ನೋಡಿಕೊಳ್ಳಿ. ಉದಾಹರಣೆಗೆ, PRASAD, ASHWINI, GUNDURAO, SUNIL, RAJENDRA, DINESH, HARSHA ಹೀಗೆ ಹೆಸರನ್ನು ಇಂಗ್ಲಿಷ್​ನಲ್ಲಿ ಬರೆದಾಗ ಈ ರೀತಿ ಬರಬಾರದು. SAD- ದುಃಖ, ASH- ಬೂದಿ, GUN- ಬಂದೂಕು, NIL- ಖಾಲಿ, END- ಕೊನೆ, SH- ಮೌನ, HARSH- ಒರಟು -ಈ ರೀತಿಯ ನೆಗೆಟಿವ್ ಪರಿಣಾಮಗಳನ್ನು ಆ ಹೆಸರುಗಳು ತರುತ್ತವೆ.

ಇನ್ನು ದೇವರ ಹೆಸರನ್ನು ಇಡಬಾರದು. ಮನೆಯ ದೇವರ ಹೆಸರನ್ನು ನಾಮಕರಣದ ಸಂದರ್ಭದಲ್ಲಿ ಇಡಬಹುದೇ ವಿನಾ ಅದೇ ವ್ಯವಹಾರ ನಾಮ ಆಗಬಾರದು. ಇದರಿಂದ ಸಾಂಸಾರಿಕವಾಗಿ ಬಹಳ ಸವಾಲುಗಳನ್ನು ಆ ಹೆಸರಿನವರು ಎದುರಿಸುತ್ತಾರೆ. ಒಂದಲ್ಲ ಒಂದು ಸಂದರ್ಭದಲ್ಲಿ ಬದುಕಿನ ಬಗ್ಗೆ ಜುಗುಪ್ಸೆ ಬರುತ್ತದೆ. ಮತ್ತು ಈ ಹೆಸರನ್ನು ಇಟ್ಟುಕೊಳ್ಳುವಷ್ಟು ಚೈತನ್ಯ ಜೀವಕ್ಕೆ ಇರಬೇಕಾಗುತ್ತದೆ. ಈ ಹೆಸರನ್ನು ಇಟ್ಟುಕೊಂಡವರಿಗೆ ಮಾನಸಿಕವಾದ ಒತ್ತಡ ಇರುತ್ತದೆ. ಆದ್ದರಿಂದ ದೇವರ ಹೆಸರನ್ನು ಜನ್ಮ ನಾಮಕ್ಕೆ ಅಂತ ಇಟ್ಟುಕೊಳ್ಳಬಹುದೇ ಹೊರತು ವ್ಯವಹಾರಕ್ಕೆ ಬೇಡ.

ಈ ಲೇಖನದಲ್ಲಿನ ಸಂಗತಿ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಲ್ಲ. ದೀರ್ಘವಾದ ಅಧ್ಯಯನ ಹಾಗೂ ಅನುಭವದಿಂದ ಬಂದಿರುವಂಥದ್ದು. ನಿತ್ಯವೂ ಭೇಟಿ ಮಾಡುವಂಥ ವ್ಯಕ್ತಿಗಳ ಹೆಸರಲ್ಲೂ ಅಡಗಿರುವುವೇನು ಅನ್ನುವುದನ್ನು ವಿಶ್ಲೇಷಿಸುವುದಕ್ಕೆ ಆರಂಭಿಸಿದರೆ ನಿಮಗೂ ಗೊತ್ತಾಗುತ್ತದೆ. ಹೆಸರನ್ನು ಇಂಗ್ಲಿಷ್​ನಲ್ಲಿ ಬರೆದುಕೊಂಡು, ಅದರಲ್ಲಿ ಎರಡಕ್ಷರವೋ, ಮೂರೋ ಅಥವಾ ನಾಲ್ಕೋ ಪ್ರತ್ಯೇಕವಾಗಿ ಸೇರಿದರೆ ನೀಡುವಂಥ ಅರ್ಥ ಏನು ಎಂಬುದನ್ನು ಬಿಡಿಸುತ್ತಾ ಹೋಗಿ. ಮೊದಮೊದಲಿಗೆ ನಿಮ್ಮ ಪಾಲಿಗೆ ಪದಬಂಧದ ರೀತಿ ಎನಿಸುತ್ತದೆ. ಒಗಟು, ಕುತೂಹಲ ಹಾಗೂ ಕೌತುಕ ಎಲ್ಲವೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಅಂದಹಾಗೆ ನೀವು ಮುಂದೆ ಯಾರಿಗಾದರೂ ಹೆಸರು ಇಡುವ, ಸೂಚಿಸುವ ಅವಕಾಶ ಸಿಕ್ಕಾಗ ಈ ಲೇಖನವನ್ನು ಒಮ್ಮೆ ನೆನಪಿಸಿಕೊಳ್ಳಿ.

ಇದನ್ನೂ ಓದಿ: Numerology Predictions: 1ರಿಂದ 9ರ ಸಂಖ್ಯೆಗೆ ಯಾವ ದಿನದಲ್ಲಿ ಹುಟ್ಟಿದರೆ ಯಾವ ಗ್ರಹದ ಪ್ರಭಾವ? ಹೇಗಿರುತ್ತದೆ ಸ್ವಭಾವ?

ಇದನ್ನೂ ಓದಿ: Numerology Number 7: ಯಾವುದೇ ತಿಂಗಳ 7, 16, 25ರಂದು ಹುಟ್ಟಿದವರ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಏನು ಹೇಳಲಾಗಿದೆ ಗೊತ್ತೆ?

(Here is an interesting article about numerology in Kannada. It explains how numbers, alphabets and word meaning influence on an individual)

Follow us on

Related Stories

Most Read Stories

Click on your DTH Provider to Add TV9 Kannada