Numerology Predictions: 1ರಿಂದ 9ರ ಸಂಖ್ಯೆಗೆ ಯಾವ ದಿನದಲ್ಲಿ ಹುಟ್ಟಿದರೆ ಯಾವ ಗ್ರಹದ ಪ್ರಭಾವ? ಹೇಗಿರುತ್ತದೆ ಸ್ವಭಾವ?

Numerology Prediction in Kannada: ಯಾವ ದಿನಾಂಕದಲ್ಲಿ ಹುಟ್ಟಿದವರಿಗೆ ಯಾವ ಗ್ರಹದ ಪ್ರಭಾವ ಇರುತ್ತದೆ? ನ್ಯೂಮರಾಲಜಿ ಆಧಾರದಲ್ಲಿ ಇಲ್ಲಿ ವಿವರಿಸಲಾಗಿದೆ. ಅಂದ ಹಾಗೆ ನೀವು ಹುಟ್ಟಿದ ದಿನಾಂಕ ಯಾವುದು?

Numerology Predictions: 1ರಿಂದ 9ರ ಸಂಖ್ಯೆಗೆ ಯಾವ ದಿನದಲ್ಲಿ ಹುಟ್ಟಿದರೆ ಯಾವ ಗ್ರಹದ ಪ್ರಭಾವ? ಹೇಗಿರುತ್ತದೆ ಸ್ವಭಾವ?
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:May 12, 2021 | 11:41 AM

ಈ ಲೇಖನದಲ್ಲಿ ನಿಮಗೆ ಸಂಖ್ಯಾಶಾಸ್ತ್ರದ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ನೀಡಲಾಗುತ್ತಿದೆ. ಯಾವ ದಿನ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬುದರ ವಿವರ ಇದು. ನೀವು ಹುಟ್ಟಿದ ದಿನಾಂಕ ಯಾವುದು? ಅದರ ಆಧಾರದಲ್ಲಿ ನಿಮ್ಮ ಸಂಖ್ಯೆ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು. ಆ ನಂತರ ಯಾವ ಗ್ರಹದ ಪ್ರಭಾವ ನಿಮ್ಮ ಮೇಲಿದೆ ಎಂದು ತಿಳಿಯುತ್ತದೆ. ಒಂದೇ ಸಂಖ್ಯೆಯಲ್ಲಿ ಬರುವ ಜನ್ಮದಿನಕ್ಕೆ, ಅಂದರೆ 1, 2, 3, 4… ಹೀಗೆ 9ರ ತನಕ ಆಯಾ ಗ್ರಹದ ಪ್ರಭಾವ ತಿಳಿಯುವುದು ಕಷ್ಟ ಅಲ್ಲ. ಆದರೆ ಅಲ್ಲಿಂದ ಮುಂದೆ ಎರಡು ಅಂಕಿ ಬರುತ್ತದಲ್ಲಾ, ಅವೆರಡನ್ನು ಸೇರಿಸಿ, ಕೂಡಿದರೆ ಅಂತಿಮವಾಗಿ ಬರುತ್ತದಲ್ಲಾ ಅದು ಜನ್ಮ ಸಂಖ್ಯೆ ಆಗುತ್ತದೆ. ಇನ್ನು 11 ಮತ್ತು 22 ಇವೆರಡನ್ನು ಮಾಸ್ಟರ್ ನಂಬರ್ ಎನ್ನಲಾಗುತ್ತದೆ. ಅವು ಬಹಳ ಮುಖ್ಯವಾದದ್ದು ಹೇಗೆ ಎಂಬುದನ್ನು ಲೇಖನದಲ್ಲಿ ವಿವರಿಸಲಾಗುತ್ತದೆ. ಮೊದಲಿಗೆ ಜನ್ಮಸಂಖ್ಯೆ ಮತ್ತು ಗ್ರಹದ ಪ್ರಭಾವ ಯಾವುದು ಅಂತ ತಿಳಿಯಿರಿ.

ಯಾವುದೇ ತಿಂಗಳಿನ 1, 10, 19, 28 ಹುಟ್ಟಿದವರದು ಸಂಖ್ಯೆ 1 ಹಾಗೂ ಅಧಿಪತಿ ರವಿ ಯಾವುದೇ ತಿಂಗಳಿನ 2, 11, 20, 29ರಂದು ಹುಟ್ಟಿದಲ್ಲಿ ಸಂಖ್ಯೆ 2, ಅಧಿಪತಿ ಚಂದ್ರ ಯಾವುದೇ ತಿಂಗಳಿನ 3, 12, 21, 30ರಂದು ಹುಟ್ಟಿದಲ್ಲಿ ಸಂಖ್ಯೆ 3, ಅಧಿಪತಿ ಗುರು ಯಾವುದೇ ತಿಂಗಳಿನ 4, 13, 22, 31ರಂದು ಹುಟ್ಟಿದಲ್ಲಿ ಸಂಖ್ಯೆ 4, ಅಧಿಪತಿ ರಾಹು ಯಾವುದೇ ತಿಂಗಳಿನ 5, 14, 23ರಂದು ಹುಟ್ಟಿದಲ್ಲಿ ಸಂಖ್ಯೆ 5, ಅಧಿಪತಿ ಬುಧ ಯಾವುದೇ ತಿಂಗಳಿನ 6, 15, 24ರಂದು ಹುಟ್ಟಿದಲ್ಲಿ ಸಂಖ್ಯೆ 6, ಅಧಿಪತಿ ಶುಕ್ರ ಯಾವುದೇ ತಿಂಗಳಿನ 7, 16, 25ರಂದು ಹುಟ್ಟಿದಲ್ಲಿ ಸಂಖ್ಯೆ 7, ಅಧಿಪತಿ ಕೇತು ಯಾವುದೇ ತಿಂಗಳಿನ 8, 17, 26ರಂದು ಹುಟ್ಟಿದಲ್ಲಿ ಸಂಖ್ಯೆ 8, ಅಧಿಪತಿ ಶನಿ ಯಾವುದೇ ತಿಂಗಳಿನ 9, 18, 27ರಂದು ಹುಟ್ಟಿದಲ್ಲಿ ಸಂಖ್ಯೆ 9, ಅಧಿಪತಿ ಕುಜ

ಹೀಗೆ ಆಯಾ ದಿನದಂದು ಹುಟ್ಟಿದವರ ಅಧಿಪತಿ ಆಯಾ ಗ್ರಹ ಆಗುತ್ತದೆ. ಆದರೆ ಯಾರ ಜನ್ಮ ದಿನಾಂಕ ಎರಡು ಅಂಕಿಯಲ್ಲಿ ಬರುತ್ತದೋ ಅವರ ಮೇಲೆ ಮೂರು ಗ್ರಹದ ಪ್ರಭಾವವನ್ನು ಗಮನಿಸಬಹುದು. ಉದಾಹರಣೆಗೆ, 21 ಅಂದುಕೊಳ್ಳಿ. ಸಂಖ್ಯೆ 2= ಚಂದ್ರ, ಸಂಖ್ಯೆ 1= ರವಿ ಹಾಗೂ ಅವೆರಡನ್ನು ಕೂಡಿದರೆ ಬರುವ ಸಂಖ್ಯೆ 3, ಅಂದರೆ ಗುರು ಈ ಮೂರೂ ಗ್ರಹದ ಪ್ರಭಾವಳಿ ಇರುತ್ತದೆ. ಇನ್ನು ಮೊದಲೇ ಹೇಳಿದಂತೆ ಮಾಸ್ಟರ್ ನಂಬರ್ 11. ಈ ಸಂಖ್ಯೆಯಲ್ಲಿ 1 ಎರಡು ಸಲ ಇದೆ. ಅಂದರೆ ರವಿಯ ಪ್ರಭಾವ ಎರಡರಷ್ಟಿರುತ್ತದೆ ಹಾಗೂ ಚಂದ್ರನ ಪ್ರಭಾವವೂ ಇರುತ್ತದೆ. ಇನ್ನು 22ರ ಸಂಖ್ಯೆ ಹೇಳಬೇಕೆಂದರೆ 2 ಅಂದರೆ ಚಂದ್ರನ ಪ್ರಭಾವ ದುಪ್ಪಟ್ಟು ಹಾಗೂ 4 ಅಂದರೆ ರಾಹುವಿನ ಪ್ರಭಾವವೂ ಇರುತ್ತದೆ.

ಸಂಖ್ಯೆ 1 ರವಿ ಆಕರ್ಷಕ ವ್ಯಕ್ತಿತ್ವದವರಾದ ಇವರಲ್ಲಿ ನಾಯಕತ್ವ ಗುಣ ಇರುತ್ತದೆ. ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕಂಡುಬರುತ್ತಾರೆ. ರಾಜಕಾರಣದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಾರೆ. ಇತರರಿಗೆ ಸ್ವಲ್ಪ ಅಹಂಕಾರಿಗಳಂತೆ ಅನಿಸುವ ಇವರು, ಯಾವುದಕ್ಕೂ ಇತರರ ಮೇಲೆ ಅವಲಂಬಿತರಾಗುವುದಿಲ್ಲ ಎಂದು ನಿರ್ಧರಿಸಿರುತ್ತಾರೆ. ಸ್ವತಂತ್ರ ಮನೋಭಾವದ ಇವರು, ತಂಡದ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ. ಎಂಥದ್ದೇ ಸನ್ನಿವೇಶದಲ್ಲೂ ಕ್ರಿಯೇಟಿವ್ ಆಲೋಚನೆ ಮಾಡುವಂಥ ಸಾಮರ್ಥ್ಯ ಇವರಲ್ಲಿರುತ್ತದೆ.

ಸಂಖ್ಯೆ 2 ಚಂದ್ರ ತಾಯಿಯ ಕರುಳಿನ ಇವರು ಇತರರ ಮೇಲೆ ಅನುಕಂಪ ತೋರಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇತರರು ಇವರ ಮೇಲೆ ಪ್ರಭಾವ ಬೀರಿ ಮುಂದಕ್ಕೆ ತಳ್ಳಬೇಕಾಗುತ್ತದೆ. ಇತರರ ಕಷ್ಟವನ್ನೂ ತಮ್ಮದೇ ಎಂದು ಭಾವಿಸಿ, ಸಂತೈಸುವುದರಲ್ಲಿ ಇವರು ಎತ್ತಿದ ಕೈ. ವೈದ್ಯಕೀಯ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುವವರು ಇವರೇ. ಹೊಂದಾಣಿಕೆ ಸ್ವಭಾವ ಇರುತ್ತದೆ. ಕೃಷಿ- ಡೇರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬಲ್ಲಂಥ ಜನ ಇವರು.

ಸಂಖ್ಯೆ 3 ಗುರು ಪಾಸಿಟಿವ್ ಆಲೋಚನೆಯ, ತನ್ನ ಜತೆಗೆ ಇತರರನ್ನು ಮುನ್ನಡೆಸಿಕೊಂಡು ಹೋಗುವಂಥ ವ್ಯಕ್ತಿತ್ವದವರು ಇವರು. ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಇಂಥ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವವರು ಇವರು. ಸ್ನೇಹಿತರ ಮಧ್ಯದಲ್ಲಿ ಇವರ ಮಾತು, ಸಲಹೆ- ಸೂಚನೆಗಳಿಗೆ ಹೆಚ್ಚಿನ ತೂಕ ಇರುತ್ತದೆ. ದೇಶ- ವಿದೇಶಗಳಲ್ಲಿ ಸುತ್ತಾಡುವುದನ್ನು ಇಷ್ಟಪಡುವ ಜನ ಇವರು. ಪಾಠ- ಪ್ರವಚನಗಳಲ್ಲಿ ಕೂಡ ಬಹಳ ದೊಡ್ಡ ಹೆಸರು ಬರುತ್ತದೆ.

ಸಂಖ್ಯೆ 4 ರಾಹು ಇವರ ಏಕಾಗ್ರತೆ ಸಿಕ್ಕಾಪಟ್ಟೆ ಗಟ್ಟಿಯಾಗಿರುತ್ತದೆ. ಪಿಎಚ್​.ಡಿ.,ಯಂಥ ಅಧ್ಯಯನ, ಸಂಶೋಧನೆ, ಜ್ಯೋತಿಷ, ವೇದ, ನಿಗೂಢ ವಿದ್ಯೆಗಳಲ್ಲಿ ಆಸಕ್ತಿ ಇರುತ್ತದೆ. ಯಾವುದೇ ವಿಷಯವನ್ನಾದರೂ ಗಂಭೀರವಾಗಿ ಅಧ್ಯಯನ ಮಾಡುವಂಥ ಸ್ವಭಾವದವರು ಇವರು. ಆದರೆ ಇವರ ಬಾಲ್ಯದಲ್ಲಿ ಹಲವು ಸಮಸ್ಯೆಗಳು ಇರುತ್ತವೆ. ಒಂದು ಹಂತದ ನಂತರ ಸೇವಾ ಮನೋಃಭಾವದ ಮೂಲಕ ಹತ್ತಾರು ಜನಕ್ಕೆ ಸಹಾಯ ಮಾಡುತ್ತಾರೆ.

ಸಂಖ್ಯೆ 5 ಬುಧ ಇವರು ವಾಗ್ಮಿಗಳು. ತಮ್ಮ ಮಾತಿನ ಮೂಲಕ ಏನನ್ನಾದರೂ ಸಾಧಿಸಬಲ್ಲವರು. ದಲ್ಲಾಳಿಗಳು, ಕಮಿಷನ್ ಏಜೆಂಟ್​ಗಳು, ಮಾಧ್ಯಮಗಳಲ್ಲಿ, ಬುದ್ಧಿಯನ್ನು ಬಳಸಿ ಮಾಡುವಂಥ ಕೆಲಸ, ವ್ಯಾಪಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ರಾನ್ಸ್​ಪೋರ್ಟ್​ ವ್ಯವಹಾರಗಳಲ್ಲೂ ಯಶಸ್ಸು ಸಾಧಿಸುತ್ತಾರೆ. ಕೈ ಹಿಡಿದ ಕೆಲಸವನ್ನು ಮಾಡುವುದರಲ್ಲಿ ಏಕಾಗ್ರತೆ ಕೊರತೆ ಅಥವಾ ಚಂಚಲಚಿತ್ತತೆ ಕಾಡುತ್ತದೆ. ಅದನ್ನು ಮೀರಿದಲ್ಲಿ ದೊಡ್ಡದನ್ನು ಸಾಧಿಸಬಲ್ಲವರು.

ಸಂಂಖ್ಯೆ 6 ಶುಕ್ರ ಫ್ಯಾಷನ್ ಬಗೆಗಿನ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಇವರಿಗೆ ಹೆಚ್ಚು. ಈ ದಿನಾಂಕದಂದು ಹುಟ್ಟಿದ ಪುರುಷರು ಹೆಣ್ಣುಮಕ್ಕಳನ್ನು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸೆಳೆಯುತ್ತಾರೆ. ಹಣಕಾಸು ಸಂಸ್ಥೆಗಳು, ಬ್ಯೂಟಿಪಾರ್ಲರ್, ಷೇರು ಬ್ರೋಕಿಂಗ್ ಸಂಸ್ಥೆಗಳು, ಚಿತ್ರರಂಗ, ಫ್ಯಾಷನ್ ಡಿಸೈನ್ ಇಂಥ ಕಡೆ ಹೆಚ್ಚಾಗಿ ಕಂಡುಬರುತ್ತಾರೆ. ಇವರ ಅಹಂಕಾರಕ್ಕೆ ಪೆಟ್ಟು ನೀಡಿದರೆ ಅಂಥವರ ವಿರುದ್ಧವಾದರೂ ಬಡಿದಾಟಕ್ಕೆ ನಿಲ್ಲುವಂಥ ಸ್ವಭಾವ ಇವರದು.

ಸಂಖ್ಯೆ 7 ಕೇತು ಅಧ್ಯಾತ್ಮ ಹಾಗೂ ಸೇವೆ ಕಡೆಗೆ ಒಲವು ಹೆಚ್ಚಿರುವಂಥ ಜನರು ಇವರು. ವರ್ಕೋಹಾಲಿಕ್. ತಮ್ಮ ಕುಟುಂಬದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ಎಂಬುದು ಇವರ ಮೇಲಿನ ದೂರಾಗಿರುತ್ತದೆ. ಈ ದಿನಾಂಕದಲ್ಲಿ ಬರುವವರ ಪೈಕಿ ಹಲವರಿಗೆ ಸಾಂಸಾರಿಕವಾಗಿ ನಾನಾ ಭಿನ್ನಾಭಿಪ್ರಾಯಗಳು ಇರುತ್ತವೆ. ಸಕಾರಾತ್ಮಕ ಆಲೋಚನೆ ಮಾಡುವುದನ್ನು ಇವರು ಹೆಚ್ಚು ಮಾಡಬೇಕು. ಜೂಜು, ಸಟ್ಟಾ ವ್ಯವಹಾರ, ಮದ್ಯ- ಮಾದಕ ವಸ್ತುಗಳ ಸೇವನೆಯಿಂದ ಕಡ್ಡಾಯವಾಗಿ ದೂರ ಇರಲೇಬೇಕು.

ಸಂಖ್ಯೆ 8 ಶನಿ ಸ್ವಭಾವತಃ ಇವರಲ್ಲೊಂದು ಆಲಸ್ಯ ಇರುತ್ತದೆ. ಅದರಲ್ಲೂ ಯಾವುದೇ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ತುಂಬ ನಿಧಾನ ಮಾಡುತ್ತಾರೆ. ಸಿಮೆಂಟ್, ಕಬ್ಬಿಣ, ಮರಳಿನ ಮಾರಾಟ, ಕಾಂಟ್ರಾಕ್ಟ್, ಒಳಚರಂಡಿ ಕೆಲಸಗಳನ್ನು ಮಾಡಿಸುವಂಥ ವ್ಯವಹಾರವನ್ನು ಮಾಡುವುದರಲ್ಲಿ ಏಳ್ಗೆ ಕಾಣುತ್ತಾರೆ. ಇವರು ಮಾತಿನಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಜತೆಗೆ ತಮ್ಮ ಸುತ್ತ ಇರುವ ಸ್ನೇಹಿತರು- ಸಂಬಂಧಿಕರ ಬಗ್ಗೆ ಅತಿಯಾದ ನಂಬಿಕೆ ಒಳ್ಳೆಯದಲ್ಲ.

ಸಂಖ್ಯೆ 9 ಕುಜ ಈ ದಿನಾಂಕದಲ್ಲಿ ಬರುವವರನ್ನು ಸೈನಿಕರಿಗೆ ಹೋಲಿಸಲಾಗುತ್ತದೆ. ಸುಲಭಕ್ಕೆ ಪಟ್ಟು ಬಿಡುವವರಲ್ಲ. ಇನ್ನು ತಮಗೆ ಏನಾದರೂ ಸಿಗದೇ ಹೋದರೆ ಬೇಗ ಸಿಟ್ಟು ಮಾಡಿಕೊಳ್ಳುತ್ತಾರೆ. ಎಚ್​ಆರ್​ ಏಜೆನ್ಸಿ, ಪೊಲೀಸ್ ಇಲಾಖೆ, ಸೈನ್ಯ, ವಿದ್ಯುಚ್ಛಕ್ತಿ ಮಂಡಳಿ ಉದ್ಯೋಗಿಗಳು, ಡಿಟೆಕ್ಟಿವ್ ಏಜೆನ್ಸಿ ಏಜೆಂಟ್​ಗಳು, ಬಾಡಿಗಾರ್ಡ್​ಗಳು ಇಂಥವರೇ ಆಗಿರುತ್ತಾರೆ. ಎಲೆಕ್ಟ್ರಿಕಲ್ ವಸ್ತುಗಳ ಮಾರಾಟದಲ್ಲಿ ಭಾರೀ ಲಾಭವನ್ನು ಪಡೆಯುವ ಅವಕಾಶ ಇರುತ್ತದೆ. ಇವರು ನಿರ್ಧಾರ ಕೈಗೊಳ್ಳುವಾಗ ವಿವೇಚನೆ ಬಳಸಬೇಕು.

ಮೊದಲೇ ಹೇಳಿದ ಹಾಗೆ ಮಾಸ್ಟರ್ ನಂಬರ್​ಗಳಾದ 11 ಹಾಗೂ 22 ಇವೆರಡರ ಬಗ್ಗೆ ತಿಳಿಯುವಾಗ, 1ರ ಸಂಖ್ಯೆಯ ಪ್ರಭಾವ ಎರಡರಷ್ಟು ಜತೆಗೆ ಚಂದ್ರ ಹಾಗೂ 2ರ ಸಂಖ್ಯೆಯ ಪ್ರಭಾವ ಎರಡರಷ್ಟು ಮತ್ತು ರಾಹುವಿನ ಪ್ರಭಾವ ಇರುತ್ತದೆ.

ಇದನ್ನೂ ಓದಿ: Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

ಇದನ್ನೂ ಓದಿ: Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ

(Personality and characteristics of the native on the basis of numerology)

Published On - 10:50 pm, Tue, 11 May 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ