AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya 2021 Date: ಅಕ್ಷಯ ತೃತೀಯ ದಿನ, ಸಮಯ, ಶುಭ ಮುಹೂರ್ತ ಮತ್ತು ಆಚರಣೆಯ ಮಹತ್ವ ತಿಳಿಯಿರಿ

Akshaya Tritiya 2021: ಅಕ್ಷಯ ತೃತೀಯವನ್ನು ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯ ಸಮಯದಲ್ಲಿ ಆಚರಿಸಲಾಗುತ್ತದೆ. ಅಕ್ಷಯ ಎಂಬ ಪದ ಸಂಸ್ಕೃತದಿಂದ ಬಂದಿದ್ದು ಶಾಶ್ವತ (ಅಂತ್ಯವಿಲ್ಲ) ಎಂಬ ಅರ್ಥವನ್ನು ನೀಡುತ್ತದೆ.

Akshaya Tritiya 2021 Date: ಅಕ್ಷಯ ತೃತೀಯ ದಿನ, ಸಮಯ, ಶುಭ ಮುಹೂರ್ತ ಮತ್ತು ಆಚರಣೆಯ ಮಹತ್ವ ತಿಳಿಯಿರಿ
ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು
shruti hegde
|

Updated on:May 12, 2021 | 12:03 PM

Share

ಈ ವರ್ಷದ ಅಕ್ಷಯ ತೃತೀಯವನ್ನು ಮೇ 14ರಂದು ಅಚರಿಸಲಾಗುತ್ತಿದೆ. ಅಖಾ ತೀಜ್​ ಎಂದೂ ಕರೆಯಲ್ಪಡುವ ಈ ಹಬ್ಬವು ಹಿಂದೂ ಮತ್ತು ಜೈನರಿಗೆ ಅತ್ಯಂತ ಶುಭ ತರುವ ಹಬ್ಬ ಎಂಬ ನಂಬಿಕೆ ಇದೆ. ಅಕ್ಷಯ ತೃತೀಯವನ್ನು ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯ ಸಮಯದಲ್ಲಿ ಆಚರಿಸಲಾಗುತ್ತದೆ. ಅಕ್ಷಯ ಎಂಬ ಪದ ಸಂಸ್ಕೃತದಿಂದ ಬಂದಿದ್ದು ಶಾಶ್ವತ (ಅಂತ್ಯವಿಲ್ಲ) ಎಂಬ ಅರ್ಥವನ್ನು ನೀಡುತ್ತದೆ. ಹಾಗಾಗಿ ಶುಭ ತರುವ ಈ ದಿನದಂದು ಜನರು ಹೊಸ ಕೆಲಸಗಳನ್ನು ಅಥವಾ ವ್ಯವಹಾರದಲ್ಲಿ ಶುಭ ತರುವ ಹೊಸ ಹೆಜ್ಜೆಯೊಂದಿಗೆ ಸಾಗಲು ಬಯಸುತ್ತಾರೆ.

ಅಕ್ಷಯ ತೃತೀಯ 2021ರ ದಿನಾಂಕ, ಸಮಯ ಮತ್ತು ಶುಭ ಮುಹೂರ್ತ ಅಕ್ಷಯ ತೃತೀಯ ಆಚರಣೆ ದಿನ: ಇದೇ ಮೇ ತಿಂಗಳು 14ನೇ ತಾರೀಕು ಶುಕ್ರವಾರದಂದು ಆಚರಿಸಲಾಗುತ್ತದೆ.

ಅಕ್ಷಯ ತೃತೀಯದ ಪೂಜಾ ಮುಹೂರ್ತ: ಬೆಳಗಿನ ಜಾವ 5:38ರ ಶುಭ ಮುಹೂರ್ತದಲ್ಲಿ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12:18ಕೊನೆಗೊಳ್ಳುತ್ತದೆ.

ತೃತೀಯ ತಿಥಿ: ಮೇ 14ರಂದು ಬೆಳಿಗ್ಗೆ 5:38ಕ್ಕೆ ಪ್ರಾರಂಭವಾದರೆ ಮೇ 15ರ ಬೆಳಿಗ್ಗೆ 7:59ಕ್ಕೆ ಕೊನೆಗೊಳ್ಳುತ್ತದೆ.

ಅಕ್ಷಯ ತೃತೀಯ ಆಚರಣೆಯ ಮಹತ್ವ ಅಕ್ಷಯ ತೃತೀಯವನ್ನು ಭಗವಂತ ವಿಷ್ಣುವಿಗೆ ಅರ್ಪಿಸಲಾದ ದಿನ ಎಂದು ಹೇಳುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ತ್ರಯ ಯುಗವು ಅಕ್ಷಯ ತೃತೀಯದಲ್ಲಿ ಪ್ರಾರಂಭವಾಯಿತು. ಹಲವು ವರ್ಷಗಳಲ್ಲಿ ಅಕ್ಷಯ ತೃತೀಯವು ಪರಶುರಾಮನ ಜಯಂತಿಗೆ ಹೊಂದಿಕೆಯಾಗುತ್ತದೆ. ಹಾಗೂ ಭಗವಂತ ಪರಶುರಾಮ ವಿಷ್ಣುವಿನ ಅರನೇ ಅವತಾರವಾದ್ದರಿಂದ ಪರಶುರಾಮ ಜಯಂತಿಯನ್ನು ಈ ದಿನದಂದೇ ಆಚರಿಸಲಾಗುತ್ತದೆ.

ಅಕ್ಷಯ ತೃತೀಯ ದಿನದಂದು ಹೊಸ ಕೆಲಸ ಪ್ರಾರಂಭಿಸಲು ಒಳ್ಳೆಯ ದಿನವಾದ್ದರಿಂದ ಜನರು ಅಮೂಲ್ಯವಾದ ಲೋಹ ಖರೀದಿಗೆ ಮುಂದಾಗುತ್ತಾರೆ. ಕುಟುಂಬಕ್ಕೆ ಸಮೃದ್ಧಿಯ ಜೊತೆಗೆ ಅದೃಷ್ಟ ಒಲಿದು ಬರುತ್ತದೆ ಎಂಬ ನಂಬಿಕೆ ಇರುವುದರಿಂದ ಅನೇಕರು ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇಷ್ಟಪಡುತ್ತಾರೆ. ಹಾಗೂ ಈ ದಿನ ವಿಶೇಷವಾಗಿ ಮನೆಯಲ್ಲಿ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಯಜ್ಞ- ಯಾಗಾದಿಗಳನ್ನು ಮಾಡಿಸುವವರು ಈ ದಿನ ಹಮ್ಮಿಕೊಳ್ಳುವುದು ಉತ್ತಮ. ಈ ದಿನ ಮಾಡಿದ ಒಳ್ಳೆಯ ಕೆಲಸ ವರ್ಷಪೂರ್ತಿ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ದಾನ-ಧರ್ಮ ಮಾಡುವವರು ಬಡವರಿಗೆ ಊಟ, ಬಟ್ಟೆ, ಹಣ ಹಾಗೂ ಇನ್ನಿತರ ವಸ್ತುಗಳನ್ನು ನೀಡಲು ಮುಂದಾಗುತ್ತಾರೆ. ಜೊತೆಗೆ, ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಉಂಟಾಗಲಿ ಎಂದು ಜನರು ವಿಷ್ಣುವಿನ ಮೊರೆ ಹೋಗುವ ದಿನ ಇದಾಗಿದೆ.

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ

Published On - 12:00 pm, Wed, 12 May 21