Sandhi Shanti: ದಶಾ ಸಂಧಿ ಶಾಂತಿ ಎಂದರೇನು? ಅದನ್ನು ಯಾವಾಗ ಮಾಡಿಸಬೇಕು?

Dasha Sandhi Shanti Tips: ದಶಾ ಸಂಧಿ ಶಾಂತಿ ಅಂದರೇನು, ಅದು ಯಾವಾಗ ಮಾಡಿಸಿಕೊಳ್ಳಬೇಕು ಹಾಗೂ ಆ ಸಮಯದಲ್ಲಿ ಏನೆಲ್ಲ ಸಮಸ್ಯೆಗಳು ಎದುರಾಗಬಹುದು ಎಂದು ವಿವರಿಸುವಂಥ ಲೇಖನ ಇಲ್ಲಿದೆ.

Sandhi Shanti: ದಶಾ ಸಂಧಿ ಶಾಂತಿ ಎಂದರೇನು? ಅದನ್ನು ಯಾವಾಗ ಮಾಡಿಸಬೇಕು?
ರಾಶಿ ಚಕ್ರ
Follow us
Srinivas Mata
| Updated By: Digi Tech Desk

Updated on:May 22, 2021 | 9:49 AM

ಜ್ಯೋತಿಷಿಗಳ ಬಳಿ ಹೋಗಿ ಜಾತಕ ತೋರಿಸುವುದಕ್ಕೇ ಭಯ ಆಗುತ್ತದೆ ಅನ್ನೋ ಕಾಲ ಇದು. ಅಯ್ಯೋ, ಏನಾದರೂ ಒಂದು ಹೇಳಿಬಿಡ್ತಾರೆ. ಆ ಶಾಂತಿ, ಹೋಮ- ಹವನ ಅಂತ ಸಾವಿರಾರು, ಲಕ್ಷಾಂತರ ರೂಪಾಯಿ ಹೇಳುತ್ತಾರೆ. ಅದರ ಬದಲಿಗೆ ಕಷ್ಟವೋ ಸುಖವೋ ಅನುಭವಿಸುವುದು ಉತ್ತಮ ಅನ್ನೋರು ಜಾಸ್ತಿ. ಈ ವಿಚಾರಕ್ಕೆ ಬಂದಾಗ ಪೂರ್ತಿಯಾಗಿ ಆಲೋಚನೆ ತಪ್ಪು ಅಂತ ತೆಗೆದು ಹಾಕೋದಿಕ್ಕೆ ಆಗಲ್ಲ. ಏಕೆಂದರೆ, ಕೆಲವರದು ಸ್ವಂತ ಅನುಭವ, ಮತ್ತೆ ಕೆಲವರದು ಸ್ನೇಹಿತರು- ಕುಟುಂಬಸ್ಥರ ಕಷ್ಟಗಳನ್ನು ನೋಡಿರುತ್ತಾರೆ. ಆದರೆ ಜ್ಯೋತಿಷದ ರೀತ್ಯಾ ನಿಜವಾಗಿಯೂ ಮಾಡಿಸಿಕೊಳ್ಳಬೇಕಾದ ಕೆಲವು ಶಾಂತಿಗಳಿವೆ. ಕನ್ನಡದಲ್ಲೇ ಅಥವಾ ನಿಮಗೆ ಯಾವ ಭಾಷೆ ಓದಿ, ತುಂಬ ಚೆನ್ನಾಗಿ ಅರ್ಥೈಸಿಕೊಳ್ಳಲು ಸಾಧ್ಯವೋ ಅದರಲ್ಲೇ ಜ್ಯೋತಿಷ ಗ್ರಂಥ ಖರೀದಿಸಿ, ಪರಿಶೀಲಿಸಿಕೊಂಡು ಮುಂದುವರಿಯಿರಿ. ಈ ದಿನದ ಲೇಖನದಲ್ಲಿ ಅಂಥದ್ದೊಂದು ಸಂಧಿ ಶಾಂತಿಯ ಬಗ್ಗೆ ತಿಳಿಸಲಾಗುತ್ತದೆ. ಈಗಾಗಲೇ ಹೇಳಿರುವ ಹಾಗೆ ಗ್ರಂಥದಲ್ಲಿ, ಇಂಟರ್​ನೆಟ್​ನಲ್ಲಿ ಒಂದಕ್ಕೆ ನಾಲ್ಕು ಬಾರಿ ಪರಿಶೀಲಿಸಿಕೊಂಡು, ಒಬ್ಬ ಜ್ಯೋತಿಷಿಗಳನ್ನು ಮಾತನಾಡಿಸಿಕೊಂಡು, ಆ ನಂತರವೇ ತೀರ್ಮಾನ ಕೈಗೊಳ್ಳಿ.

ದಶಾ ಸಂಧಿ ಶಾಂತಿ ಅಂದರೇನು? ಜ್ಯೋತಿಷದಲ್ಲಿ ಮೂರು ದಶೆಗಳು ಬದಲಾಗುವ ಕಾಲಕ್ಕೆ ಶಾಂತಿ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಅಂದರೆ ಆ ಜಾತಕರಿಗೆ ನಿರ್ದಿಷ್ಟ ದಶೆ ಮುಗಿದು, ಮುಂದಿನ ದಶೆ ಶುರುವಾಗುವಾಗ ದಶಾ ಸಂಧಿ ಶಾಂತಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿಸಿಕೊಳ್ಳುವುದರಿಂದ ಕೆಲವು ಸಮಸ್ಯೆಗಳು ಅಲ್ಪ ಪ್ರಮಾಣದಲ್ಲೇ ನಿವಾರಣೆ ಆಗುತ್ತವೆ. ಆ ಗ್ರಹಗಳ ಬಲ ದೊರೆತು, ಧೈರ್ಯ ಸಿಕ್ಕಂತಾಗುತ್ತದೆ.

ಯಾವ್ಯಾವುದು ಆ ದಶಾ ಸಂಧಿ ಕಾಲಗಳು? ಕುಜ ದಶೆ ಮುಗಿದು ರಾಹು ದಶೆಯ ಆರಂಭದಲ್ಲಿ ಕುಜ- ರಾಹು ಸಂಧಿ ಶಾಂತಿ, ರಾಹು ದಶೆಯು ಮುಗಿದು ಗುರು ದಶೆಯು ಶುರುವಾಗುತ್ತದಲ್ಲಾ ಆಗ ರಾಹು- ಬೃಹಸ್ಪತಿ ಸಂಧಿ ಶಾಂತಿ ಹಾಗೂ ಶುಕ್ರ ದಶೆಯು ಮುಗಿದು ರವಿ ದಶೆಯು ಶುರುವಾಗುತ್ತದಲ್ಲಾ ಆಗ ಶುಕ್ರಾದಿತ್ಯ ಸಂಧಿ ಶಾಂತಿಯನ್ನು ಮಾಡಿಸಬೇಕು.

ಯಾವ ದಶೆಯ ಆರಂಭ ಹಾಗೂ ಮುಕ್ತಾಯ ಎಂಬುದು ಹೇಗೆ ಗೊತ್ತಾಗುತ್ತದೆ? ಜನ್ಮ ಜಾತಕದಲ್ಲಿ ದಶಾ ಕಾಲಗಳ ಬಗ್ಗೆ ವಿವರಣೆ ಇರುತ್ತದೆ. ಆದ್ದರಿಂದ ಜಾತಕದಲ್ಲಿ ಅದನ್ನು ಪರಿಶೀಲಿಸಿಕೊಳ್ಳಬೇಕು. ಈ ಹಿಂದೆಲ್ಲ ಯಾವ ಸಂದರ್ಭದಲ್ಲಿ ಈ ದಶಾ ಸಂಧಿ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಜಾತಕದಲ್ಲಿ ಬರೆದಿಡಲಾಗುತ್ತಿತ್ತು. ಈಗಲೂ ಬರೆದಿರುವಂಥದ್ದು ಇರಬಹುದು. ಅಥವಾ ಕಂಪ್ಯೂಟರ್ ಜಾತಕ ಇದ್ದಲ್ಲಿ ನೋಡಿಕೊಂಡರೆ ಗೊತ್ತಾಗುತ್ತದೆ. ಅಂದರೆ ಆ ದಶೆ ಮುಗಿದು, ಮುಂದಿನ ದಶೆ ಶುರುವಾಗುವ ಮುಂಚೆ ಶಾಂತಿ ಮಾಡಿಸಿಕೊಳ್ಳಬೇಕು.

ದಶಾ ಸಂಧಿ ಶಾಂತಿ ಯಾವಾಗ ಮಾಡಿಸಿಕೊಳ್ಳಬೇಕು? ಆ ನಿರ್ದಿಷ್ಟ ದಶೆಯು ಮುಗಿದು ಮತ್ತೊಂದು ದಶೆಯು ಆರಂಭವಾಗುವ ಮೂರರಿಂದ ಆರು ತಿಂಗಳ ಮೊದಲಿಗೆ ದಶಾ ಸಂಧಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಆಗ ಅನಾಹುತಗಳಿಂದ ರಕ್ಷಣೆ ದೊರೆಯುತ್ತದೆ.

ಈ ದಶೆ ಬದಲಾವಣೆ ಸಂದರ್ಭದಲ್ಲಿ ಆಗುವ ದುಷ್ಫಲಗಳೇನು? ವಿದ್ಯೆಗೆ ಅಡ್ಡಿ, ವಿವಾಹ ಮುರಿದು ಬೀಳುವುದು, ರೋಗ ಬಾಧೆ, ದೊಡ್ಡ ಶಸ್ತ್ರಚಿಕಿತ್ಸೆಗಳು ಆಗುವುದು, ಅಗ್ನಿ ಅವಘಡ, ವ್ಯಾಪಾರದಲ್ಲಿ ವಿಪರೀತ ನಷ್ಟ, ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುವುದು ಹೀಗೆ ವಿವಿಧ ಸಮಸ್ಯೆ ಹಾಗೂ ಸವಾಲುಗಳು ಒಂದರ ಹಿಂದೆ ಒಂದರಂತೆ ಕಾಡುತ್ತವೆ.

ಈ ದಶಾ ಸಂಧಿ ಶಾಂತಿ ಇದೆಯಲ್ಲಾ ಇದು ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುತ್ತದೆ. ಈ ಕುರಿತಾಗಿ ಗ್ರಂಥಗಳಲ್ಲೂ ಉಲ್ಲೇಖ ಸಿಗುತ್ತದೆ.

ಇದನ್ನೂ ಓದಿ: Astrology Tips: ಮೇಷ ರಾಶಿಯಿಂದ ಮೀನದ ತನಕ ತಿದ್ದುಕೊಳ್ಳಬೇಕಾದ ಗುಣಗಳಿವು

ಇದನ್ನೂ ಓದಿ: Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

(What is dasha sandhi shanti and know how it which helps to overcome from malefic effects of planets on an individual)

Published On - 6:50 am, Sat, 22 May 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ