Astrology Tips: ಮೇಷ ರಾಶಿಯಿಂದ ಮೀನದ ತನಕ ತಿದ್ದುಕೊಳ್ಳಬೇಕಾದ ಗುಣಗಳಿವು

Astrology Tips: ಪ್ರತಿ ವ್ಯಕ್ತಿಗೆ ಅವರದೇ ಸಾಮರ್ಥ್ಯ ಇರುತ್ತದೆ. ಅದೇ ರೀತಿಯಲ್ಲಿ ದೌರ್ಬಲ್ಯಗಳಿರುತ್ತವೆ. ಜ್ಯೋತಿಷ ರೀತಿಯಲ್ಲಿ ಯಾವ ರಾಶಿಯವರ ಮಿತಿಗಳೇನು ಎಂಬ ಆಸಕ್ತಿಕರ ಸಂಗತಿಗಳು ಇಲ್ಲಿವೆ.

Astrology Tips: ಮೇಷ ರಾಶಿಯಿಂದ ಮೀನದ ತನಕ ತಿದ್ದುಕೊಳ್ಳಬೇಕಾದ ಗುಣಗಳಿವು
ರಾಶಿ ಚಕ್ರ
Follow us
Srinivas Mata
| Updated By: Skanda

Updated on: May 21, 2021 | 6:45 AM

ಪ್ರತಿ ವ್ಯಕ್ತಿಯಲ್ಲೂ ಒಂದೊಂದು ಸಾಮರ್ಥ್ಯ ಇರುತ್ತದೆ. ತಮ್ಮ ಇಷ್ಟದ ಕ್ಷೇತ್ರ ಅಥವಾ ಹವ್ಯಾಸ ಹೀಗೆ ಯಾವುದರಲ್ಲಾದರೂ ಬಲಿಷ್ಠರಾಗಿರುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ಕೆಲ ದೌರ್ಬಲ್ಯಗಳು ಕೂಡ ಇರುತ್ತವೆ. ಯಾರು ತಮ್ಮ ದೌರ್ಬಲ್ಯಗಳನ್ನು ಮೀರಿ, ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ವಿ ಆಗುತ್ತಾರೆ. ಇಂದಿನ ಈ ಲೇಖನದಲ್ಲಿ ರಾಶಿಗೆ ಅನುಸಾರವಾಗಿ ದೌರ್ಬಲ್ಯವನ್ನು ತಿಳಿಸಲಾಗುತ್ತಿದೆ. ಇದನ್ನು ಮೀರಿ ನಿಂತರೆ ಯಶಸ್ಸು ಎಂಬುದು ಪುಟ್ಟ ಕಾಂಪೌಂಡ್​ ದಾಟುವಷ್ಟು ಕೂಡ ಕಷ್ಟವಲ್ಲ. ಹಾಗಿದ್ದರೆ ಯಾವುದು ಆ ದೌರ್ಬಲ್ಯ ಎಂಬುದನ್ನು ರಾಶಿಗೆ ಅನುಗುಣವಾಗಿ ನೋಡೋಣ.

ಮೇಷ ಈ ರಾಶಿಯವರು ಹುಂಬರು. ನಿಮ್ಮಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಯಾರಾದರೂ ಹೇಳಿದರೆ ಅದನ್ನು ಹೇಗಾದರೂ ಸುಳ್ಳು ಮಾಡ್ತೀನಿ ಅಂತ ಹೊರಟು ಬಿಡ್ತಾರೆ. ಹಾಗೆ ಬಂಡೆಗೆ ತಲೆ ಚಚ್ಚಿಕೊಂಡು ಎಷ್ಟೋ ಬಾರಿ ಪೆಟ್ಟು ಮಾಡಿಕೊಳ್ತಾರೆ. ಆದರೆ ಕೆಲವು ಸಲ ಇವರ ಪಾಲಿಗೆ ಅದು ಸಾಮರ್ಥ್ಯ. ಆದರೆ ತುಂಬ ಸಲ ಪೆಟ್ಟು, ಹೊಡೆತ, ನೋವು ಎಲ್ಲ.

ವೃಷಭ ಏನನ್ನಾದರೂ ಸಹಿಸಿಕೊಳ್ಳಬಲ್ಲೆ ಎಂಬುದು ಇವರ ನಂಬಿಕೆ. ಗೊತ್ತಿದ್ದೂ ಗೊತ್ತಿದ್ದೂ ಮೋಸ ಹೋಗ್ತಾರೆ. ಇನ್ನೂ ಕೆಲ ಸಲ ಹುಡುಕಿಕೊಂಡು ಹೋಗಿ, ಹಣ- ಸಮಯ ಕಳೆದುಕೊಂಡು ಬರ್ತಾರೆ. ಎಷ್ಟು ಸಲ ಕೆಳಗೆ ಬಿದ್ದರೂ ಇವರು ಮತ್ತೊಂದು ಮೋಸ ಹೋಗುವುದಕ್ಕೆ ಸಿದ್ಧವಾಗಿ ಬಿಡ್ತಾರೆ.

ಮಿಥುನ ವಿಪರೀತವಾದ ಆಲೋಚನೆ ಇವರ ಸಮಸ್ಯೆ. ಸಣ್ಣ ಕಡ್ಡಿಯನ್ನೂ ಗುಡ್ಡ ಮಾಡಿ, ಏನೇನೋ ಆಲೋಚನೆ ಮಾಡಿಬಿಡ್ತಾರೆ. ಇವರಿಗೆ ಆಗಾಗ ತಲೆ ನೋವು ಕಾಡುತ್ತಲೇ ಇರುತ್ತೆ. ಏಕೆಂದರೆ ತಮ್ಮನ್ನ ಯಾರು ಬೇಕಾದರೂ ಮೋಸ ಮಾಡಬಹುದು. ಹೇಗೆ ಬೇಕಾದರೂ ಮೋಸ ಮಾಡಬಹುದು, ಹೇಗೆಲ್ಲ ಮಾಡಬಹುದು ಅಥವಾ ಮಾಡಿರಬಹುದು ಅಂತಲೇ ಯೋಚಿಸುತ್ತಾ ಇರುತ್ತಾರೆ.

ಕಟಕ ಇವರಿಗೆ ತಾವು ಒಳ್ಳೆಯವರು ಅಂತನ್ನಿಸಿಕೊಳ್ಳುವ ಚಪಲ. ಇವರ ಸಂಪಾದನೆಯಲ್ಲಿ ದೊಡ್ಡ ಭಾಗದ ಮೊತ್ತ ಯಾರ್ಯಾರದೋ ಪಾಲಾಗುತ್ತದೆ. ಇವರು ಜಾಮೀನಾಗಿ ನಿಲ್ಲುತ್ತಾರೆ. ಸಹಾಯ ಅಂತ ಮಾಡುತ್ತಾರೆ. ಕೆಲವು ಸಲ ಯೋಗ್ಯರು ಸಹ ಸಿಗುವುದು ಉಂಟು. ಆದರೆ ಬಹುತೇಕ ಸಲ ಸಿಗಲ್ಲ.

ಸಿಂಹ ನಾನು ಯಾಕೆ ಇನ್ನೊಬ್ಬರ ಮಾತು ಕೇಳಬೇಕು? ಇದು ಇವರ ಪ್ರಶ್ನೆ. ಒಳ್ಳೆಯದೋ ಕೆಟ್ಟದ್ದೋ ಅದು ವಿಷಯವೇ ಅಲ್ಲ. ಯಾಕೆ ಕೇಳಬೇಕು ಅನ್ನೋದು ಮೂಲ ಪ್ರಶ್ನೆ. ಅದರಲ್ಲೂ ಟೀಕೆ, ವಿಮರ್ಶೆ ಅಂದರೆ ಮುಗಿದೇ ಹೋಯಿತು. ಮತ್ತೆ ಅಂಥವರ ಕಡೆಗೆ ತಿರುಗಿ ಕೂಡ ನೋಡಲ್ಲ.

ಕನ್ಯಾ ತಮಗೆ ಗೊತ್ತಿರುವುದು ಮಾತ್ರ ಸರಿ. ಉಳಿದಿದ್ದೆಲ್ಲ ತಪ್ಪು ಎಂಬ ಇವರ ಆಲೋಚನೆ ಬಹಳ ನಷ್ಟವನ್ನು ತರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವುದಕ್ಕೆ ಹೊರಡುವ ಇವರು, ಮುಖ್ಯವಾದ ವಿಷಯಗಳನ್ನೇ ತಪ್ಪಿಸಿ ಬಿಡ್ತಾರೆ ಅಥವಾ ಸಮಯ ಸಾಕಾಗದೆ ಮಾಡೋದಿಕ್ಕೆ ಆಗೋದಿಲ್ಲ. ಈ ರಾಶಿಯವರನ್ನು ಒಪ್ಪಿಸಿ, ಸೈ ಅನಿಸಿಕೊಳ್ತೀನಿ ಅಂತ ಹೊರಟರೆ ಅದಕ್ಕಿಂತ ಹುಚ್ಚು ಸಾಹಸ ಮತ್ತೊಂದಿಲ್ಲ.

ತುಲಾ ನನಗೆಷ್ಟು, ನಿನಗೆಷ್ಟು ಎಂದು ಇವರ ಬೀಜ ಮಂತ್ರ. ಕೈಯಲ್ಲಿ ತಕ್ಕಡಿ ಹಿಡಿದವರಂತೆ ಎಲ್ಲದರಲ್ಲೂ ಲೆಕ್ಕಾಚಾರ ಹಾಕುವ ಇವರು ಕೆಲವು ಸಲ ಕುಟುಂಬಸ್ಥರು ಹಾಗೂ ಸಂಬಂಧಿಕರು, ಸ್ನೇಹಿತರ ಮಧ್ಯೆ ಎಂಥ ಹೃದಯ ಹೀನ ವ್ಯಕ್ತಿ ಎನಿಸಿಕೊಂಡು ಬಿಡುತ್ತಾರೆ. ಆದರೆ ಇವರ ದೃಷ್ಟಿಯಲ್ಲಿ ಪ್ರಾಕ್ಟಿಕಲ್ ವ್ಯಕ್ತಿತ್ವ ಅಂದುಕೊಂಡಿರುತ್ತಾರೆ.

ವೃಶ್ಚಿಕ ಯಾವುದನ್ನೂ ಯಾರನ್ನೂ ನಂಬದ ಇವರಿಗೆ ನೆಮ್ಮದಿ ಅಂತ ಸಿಗುವುದೇ ಕಷ್ಟ. ಏಕೆಂದರೆ, ಅತ್ಯಂತ ಕಡಿಮೆ ಬೆಲೆಗೆ ಒಂದು ವಸ್ತು ಸಿಕ್ಕಿದೆ ಅಂತ ಇವರಿಗೇ ಖಾತ್ರಿ ಆದ ಮೇಲೂ ಇನ್ಯಾರಾದರೂ, ಅಯ್ಯೋ ಜಾಸ್ತಿ ಕೊಟ್ಟರಲ್ಲ, ಅಂದರೆ ಮುಗಿದು ಹೋಯಿತು. ಅನುಮಾನ, ಸಂದೇಹಗಳೇ ಇವರ ಸಂತೋಷವನ್ನು ಕಿತ್ತುಕೊಂಡು ಬಿಡುತ್ತದೆ.

ಧನುಸ್ಸು ಇವರು ಒಂದು ಬಗೆಯಲ್ಲಿ ಗ್ಯಾನ ಬಂದ ಗಿರಾಕಿ. ಯಾರ್ಯಾರ ಜತೆಗೋ ಹೊಂದಿಕೊಂಡು, ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಇವರನ್ನು ಇಷ್ಟಪಡೋರ ಹತ್ತಿರ ಸಿಕ್ಕಾಪಟ್ಟೆ ಕಿತ್ತಾಡ್ತಾರೆ. ಇವರೇ ಬಾಯಿಗೆ ಬಂದ ಹಾಗೆ ಬಯ್ದು, ಆ ನಂತರ ತಮಗೇ ಅನ್ಯಾಯ ಆಗಿದೆ ಅನ್ನೋ ಥರ ಜೋರಾಗಿ ಅತ್ತೂ ಬಿಡುತ್ತಾರೆ. ಪ್ರೀತಿ- ಸ್ನೇಹದ ವಿಷಯದಲ್ಲಿ ಸರಿಯಾದ ಜಡ್ಜ್​ಮೆಂಟ್ ಇಟ್ಟುಕೊಳ್ಳಬೇಕು ಇವರು.

ಮಕರ ಇವರಿಗೆ ಏನು ಬೇಕು, ಹೇಗಿರಬೇಕು, ಅದೇನು ನಿರೀಕ್ಷೆ ಮಾಡ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಕೂಡ ಪಡಬಾರದು. ಏಕೆಂದರೆ ಆ ಬಗ್ಗೆ ಇವರಿಗೇ ಸ್ಪಷ್ಟತೆ ಇರಲ್ಲ. ಜತೆಗೆ ಸೋಮಾರಿತನವೂ ಇರುತ್ತದೆ. ಕೆಲವು ಸಲ ವಿಪರೀತ ಆಶಾವಾದದಿಂದ ಮಾತಾಡಿ, ಮತ್ತೆ ಕೆಲವು ಸಲ ಆಕಾಶವೇ ಕಳಚಿ ಬಿದ್ದಂತೆ ಇರುತ್ತಾರೆ. ಆಲೋಚನೆಯಲ್ಲಿ ಸ್ಪಷ್ಟತೆ ಇರಬೇಕು.

ಕುಂಭ ದುಡ್ಡು ಮುಖ್ಯವೋ ಸಂಬಂಧ ಮುಖ್ಯವೋ, ಇಲ್ಲಿರಬೇಕೋ ಅಲ್ಲಿಗೆ ಹೋಗಬೇಕೋ, ದೇವರಿದ್ದಾನೋ ಇಲ್ಲವೋ ಹೀಗೆ ಪ್ರಶ್ನೆಗಳೇ ಮುಗಿಯದ ರಾಶಿ ಇದ್ದರೆ ಅದು ಕುಂಭ ರಾಶಿಯವರು. ಎಲ್ಲವನ್ನೂ ಮೇಲ್ನೋಟಕ್ಕೆ ಒಪ್ಪಿಕೊಳ್ಳುವಂತೆ ಕಾಣುವ ಇವರು ಏನನ್ನೂ ಒಪ್ಪಿಕೊಳ್ಳುವ ಪೈಕಿ ಅಲ್ಲ. ಸೋಮಾರಿತನದಲ್ಲಿ ಮಕರ- ಕುಂಭದವರು ಒಂದೇ ಬಳ್ಳಿಯ ಹೂಗಳಿದ್ದ ಹಾಗೆ.

ಮೀನ ಜವಾಬ್ದಾರಿ ಅಂದರೆ ಇವರಿಗೆ ರೇಜಿಗೆ ಬಂದುಹೋಗುತ್ತದೆ. ತಮ್ಮಷ್ಟಕ್ಕೆ ಇರಬೇಕು, ಆದರೆ ಸಿಗುವುದೆಲ್ಲವೂ ಸಿಗಬೇಕು ಅನ್ನೋರು ಇವರು. ಎಷ್ಟು ನಯ- ನಾಜೂಕಾಗಿ ಮಾತನಾಡುವುದಕ್ಕೆ ಸಾಧ್ಯವೋ ಅಷ್ಟೂ ಪ್ರಯತ್ನಿಸುತ್ತಾರೆ. ಜವಾಬ್ದಾರಿಯನ್ನು ತಾವಾಗಿಯೇ ತೆಗೆದುಕೊಳ್ಳದಿದ್ದರೆ ಇವರ ಏಳ್ಗೆ ಕಷ್ಟ.

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

ಇದನ್ನೂ ಓದಿ: Marriage Horoscope: ಏನಿದು ಷಷ್ಟಾಷ್ಟಕ ದೋಷ? ಈ ಎರಡು ರಾಶಿಗಳ ಮಧ್ಯೆ ವಿವಾಹ ಏಕೆ ದೋಷಪ್ರದ?

(Here is the characterstics to rectify by an individual on the basis of zodiac signs from Aries to Pisces)

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?