
ಗ್ರಹಣವು ಪ್ರಪಂಚದ ವಿಸ್ಮಯಗಳಲ್ಲಿ ಒಂದು. ಆಕಾಶದಲ್ಲಿ ಸಂಚರಿಸುವ ಸೂರ್ಯ ಹಾಗೂ ಚಂದ್ರರಿಗೆ ಗ್ರಹಣ ಎನ್ನುವುದು ಆಗಾಗ ಉಂಟಾಗುತ್ತದೆ. ಇದಕ್ಕೆ ಪೌರಣಿಕ ಕಥೆ ಒಂದು ರೀತಿಯಲ್ಲಿ ಗ್ರಹಣದ ಪರಿಚಯವನ್ನು ಮಾಡಿಸಿದರೆ, ವಾಸ್ತವವಾಗಿ ಇದು ಖಗೋಳದಲ್ಲಿ ನಡೆಯುವ ಕೌತುಕವೇ ಆಗಿದೆ. ಗೃಹ್ಯತೇ ಇತಿ ಗ್ರಹಣಮ್ – ಹಿಡಿಯಲ್ಪಪಡುತ್ತದೆ ಎನ್ನುವುದು ಗ್ರಹಣ ಪದದ ಅರ್ಥ. ಯಾರು, ಯಾರನ್ನು ಹಿಡಿಯುತ್ತಾರೆ ಎಂದರೆ ರಾಹು ಮತ್ತು ಕೇತುಗಳು. ಇವುಗಳು ಗ್ರಹಗಳು ಸಂಚರಿಸುವ ಪೂರ್ವ ಮತ್ತು ಪಶ್ಚಿಮದ ಕ್ರಾಂತಿ ವೃತ್ತ ಹಾಗು ನಾಡೀ ವೃತ್ತಗಳು ಸಂಧಿಸುವ ಸ್ಥಳ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ.
ಚಂದ್ರ ಗ್ರಹಣ ಸಂಭವಿಸುವುದು ಎಂದಿಗೂ ಹುಣ್ಣಿಮೆಯ ದಿನದಂದೇ ಆಗಿದೆ. ಸೂರ್ಯನ ಗ್ರಹಣ ಅಮಾವಾಸ್ಯೆಗೆ ಸಂಭವಿಸುವುದು. ಇದು ಸೂರ್ಯ ಚಂದ್ರ ಭೂಮಿಗಳ ಸಂಚಾರದಲ್ಲಿ ಉಂಟಾಗುವ ವ್ಯತ್ಯಾಸದಿಂದ ಆಗುವುದು. ಚಂದ್ರ ಮತ್ತು ಸೂರ್ಯರ ನಡುವೆ ಸರಿಯಾಗಿ ಭೂಮಿ ಬಂದಾಗ ಗ್ರಹಣವಾಗಲಿದೆ. ಭೂಮಿ ನೆರಳು ಚಂದ್ರ ಮೇಲೆ ಬಿದ್ದಾಗ ಗ್ರಹಣವಾಗಲಿದೆ. ಒಮ್ಮೊಮ್ಮೆ ಒಂದು ರೀತಿಯಲ್ಲಿ ಆಗುತ್ತದೆ.
ಖಗೋಳದಲ್ಲಿ ಗ್ರಹಣವು ಆಗಾಗ ಸಂಭವಿಸುತ್ತದೆ. ಆದರೆ ಭಾರತೀಯರಿಗೆ ಅದು ತೋರದು. ಅನ್ಯ ದೇಶದವರಿಗೆ ಗೋಚರವಾಗುತ್ತದೆ. ಗೋಚರಿಸಿದರೂ ಒಂದೇ ರೀತಿಯಲ್ಲಿ ಗ್ರಹಣ ಕಾಣಿಸದು. ಅದಕ್ಕೆ ಕಾರಣ ಭೂಮಿ ಹಾಗು ಚಂದ್ರನ ಸಂಚಾರದ ವೇಗವು ಯಾವ ಪ್ರಮಾಣದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಅದಾಗಲಿದೆ.
ಈ ಬಾರಿ ಸುದೀರ್ಘವಾದ ಗ್ರಹಣ ಆಗಲಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸ್ಪರ್ಶದಿಂದ ಆರಂಭಿಸಿ ಮೋಕ್ಷಪರ್ಯಂತರದ ಅವಧಿಯಾಗಿದೆ. 9-30 ರಿಂದ 1-30 ಗ್ರಹಣದ ಅವಧಿ.
ಇದನ್ನು ಅತ್ಯಂತ ಪವಿತ್ರವಾದ ಕಾಲ ಎಂದು ಕರೆದಿದ್ದಾರೆ. ಪ್ರಾಚೀನ ಕಾಲದಲ್ಲಿ ಮಂತ್ರಗಳ ಸಿದ್ಧಿಯನ್ನು ಇದೇ ಕಾಲದಲ್ಲಿ ಮಾಡಿಕೊಳ್ಳುವುದನ್ನು ಪುರಾಣಗಳು ತಿಳಿಸುತ್ತವೆ. ಈ ಸಮಯದಲ್ಲಿ ಮಾಡಿದ ಉಪಾಸನೆಗೆ ದುಪ್ಪಟ್ಟು ಫಲವೆಂಬುದು ಕಂಡುಕೊಂಡವರ ಅಂಬೋಣ. ಹಾಗಾಗಿ ಇದು ಉಪಾಸನೆಗೆ ಯೋಗ್ಯವಾದ ಕಾಲ. ಇಡೀ ವಾತಾವರಣ, ಪರಿಸರವೇ ಗ್ರಹಣ ಕಾಲದಲ್ಲಿ ನಿಶ್ಶಬ್ದವಾಗಿ ಇರುತ್ತದೆ. ಹಾಗಾಗಿ ಮನುಷ್ಯನೂ ತನ್ನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ ಧಾರ್ಮಿಕವಾದ ಅದರಲ್ಲೂ ಆತ್ಮೋದ್ಧರಕ್ಕೆ ಬೇಕಾದ ತಯಾರಿಯನ್ನು ಮಾಡಿದರೆ ಅದರ ಫಲ ಹೆಚ್ಚು.
ಗ್ರಹಣದ ಆರಂಭದಲ್ಲಿ ಸ್ನಾನ ಹಾಗೂ ಗ್ರಹಣ ಮೋಕ್ಷವನ್ನು ನೋಡಿ ಇನ್ನೊಂದು ಸ್ನಾನ ಮಾಡುವುದು. ಸ್ನಾನವನ್ನು ತೀರ್ಥಕ್ಷೇತ್ರ, ಪವಿತ್ರ ನದಿ ಹಾಗೂ ಸಮುದ್ರದಲ್ಲಿ ಮಾಡುವುದು ಶ್ರೇಯಸ್ಸು. ಸಮುದ್ರ ಸ್ನಾನವನ್ನು ಬೇರೆ ದಿನಗಳಲ್ಲಿ ಮಾಡದೇ ಇಂತಹ ಸಂದರ್ಭಗಳಲ್ಲಿ ಮಾಡುವುದೆಂದ ಶಾಸ್ತ್ರಗಳು ತಿಳಿಸುತ್ತದೆ.
ಗ್ರಹಣ ಕಾಲದಲ್ಲಿ ನಿಷೇಧಿಸುವ ಅನೇಕ ಕರ್ಮಗಳಲ್ಲಿ ಭೋಜನವೂ ಒಂದು. ಉಳಿದೆಲ್ಲ ಕಾರ್ಯಗಳು ಗ್ರಹಳ ಕಾಲದಲ್ಲಿ ಮಹತ್ತ್ವವನ್ನು ಪಡೆದರೆ, ಭೋಜನವನ್ನು ಗ್ರಣಾರಂಭದ ಪೂರ್ವದಲ್ಲಿ ಹನ್ನೆರಡು ಗಂಟೆಗಳಿಂದಲೇ ಆರಂಭ. ಅಲ್ಲಿಂದಲೇ ಗ್ರಹಣದ ಚಟುವಟಿಕೆಗಳು ಆರಂಭವಾಗಲಿದೆ. ಗ್ರಹಣ ಕಾಲದಲ್ಲಿ ಜಠರಾಗ್ನಿಯ ತನ್ನ ಕಾರ್ಯವನ್ನು ನಿಲ್ಲಿಸಬೇಕು, ಅದೂ ತಪಸ್ಸಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಹಿಂದಿನ ವಿಧಿ.
ಇದನ್ನೂ ಓದಿ: ಪಿತೃ ಪಕ್ಷದ ಸಮಯದಲ್ಲಿ ಗರ್ಭಿಣಿಯರು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಗ್ರಹಣವು ರಾಶಿ ನಕ್ಷತ್ರಗಳಿಗೆ ಅಶುಭ, ಮಿಶ್ರ, ಶುಭ ಫಲವನ್ನು ನೀಡುತ್ತವೆ. ಅದನ್ನು ಆಧರಿಸಿ ಅಶುಭ ಹಾಗೂ ಮಿಶ್ರಫಲದವರು ದೋಷ ನಿವಾರಣೆಗೆ ಅಕ್ಕಿ, ಉದ್ದನ್ನು ದಾನ ಮಾಡುವುದು, ಹಾಗೆಯೇ ಸತ್ಪಾತ್ರರಿಗೆ ದಾನ ಮಾಡುವುದೂ ಪುಣ್ಯಸಂಗ್ರಹಕ್ಕೆ ಕಾರಣವಾಗಲಿದೆ. ಶುಭ ಕರ್ಮಗಳು ಈ ಸಮಯದಲ್ಲಿ ಶ್ರೇಷ್ಠವಾದ ಫಲವನ್ನು ಕೊಡುತ್ತದೆ.
ಮಲಗುವುದು, ಊಟ ಮಾಡುವುದು, ಕುಡಿಯುವುದು, ಸಂಭೋಗ ಮಾಡುವುದು, ಹರಟೆ ಹೊಡೆಯುವುದು, ಕಲಹ ಮಾಡುವುದು, ಪ್ರಯಾಣ ಮಾಡುವುದು, ಮನೆಯ ಆಫೀಸ್ ಕೆಲಸ ಇವುಗಳನ್ನು ಮಾಡುವುದು ನಿಷೇಧ ಎನ್ನಲಾಗಿದೆ.
ಈ ಬಾರಿಯ ಚಂದ್ರ ಗ್ರಹಣವು ಮಿಥುನ, ಸಿಂಹ, ತುಲಾ, ಮಕರ ರಾಶಿಯವರಿಗೆ ಮಿಶ್ರ ಹಾಗೂ ಕರ್ಕಾಟಕ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಅಶುಭ. ಇವರು ಗ್ರಹಣ ಶಾಂತಿಯನ್ನೂ ಅನುಷ್ಠಾನವನ್ನು ಯಥೋಚಿತ ರೀತಿಯಲ್ಲಿ ಮಾಡಬೇಕು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ