ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

Daily Horoscope Mach 15: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 15ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Mar 15, 2026 | 12:20 AM

ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯನ್ನು ಬರೆಯಿರಿ. ಇದರಿಂದ ನಕಾರಾತ್ಮಕ ಆಲೋಚನೆಗಳು ದೂರ ಆಗಲಿದೆ. ಕುಟುಂಬ ಸದಸ್ಯರ ಮಧ್ಯೆ ಸಾಮರಸ್ಯ ಮೂಡಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವೇ ನಂಬುವುದಕ್ಕೆ ಸಾಧ್ಯವಿಲ್ಲದ ಗಾಸಿಪ್ ನಿಮ್ಮ ಬಗ್ಗೆ ಹರಿದಾಡಲಿದೆ. ಸಂಬಂಧಿಕರ ಬಳಿ ಈ ಹಿಂದೆ ನೀವು ಮಾಡಿದಂಥ ಸಾಲವೋ ಅಥವಾ ಆಸ್ತಿ ವ್ಯವಹಾರವೋ ವಿಪರೀತ ಒತ್ತಡವನ್ನು ಸೃಷ್ಟಿ ಮಾಡಲಿದೆ. ನಕ್ಕು ಸುಮ್ಮನಾಗ ಬೇಕಾದ ಆಕ್ಷೇಪ, ಆಪಾದನೆಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಮುಖ್ಯವಾದ ವಸ್ತುವೊಂದನ್ನು ಒಂದು ಕಡೆ ಇಟ್ಟು, ಮತ್ತೊಂದು ಕಡೆ ಹುಡುಕಾಟ ನಡೆಸುವಂತಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಂತವಾಗಿ ವ್ಯವಹಾರ ಶುರು ಮಾಡುವುದಕ್ಕೆ ಸ್ನೇಹಿತರು ಹಾಗೂ ಸಂಬಂಧಿಕರು ಸಹ ಉತ್ತೇಜನ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಯಾರು ಸ್ವ ಉದ್ಯೋಗ ಮಾಡಬೇಕು ಎಂದು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವಿರೋ ಅಂಥವರಿಗೆ ಸಲೀಸಾಗಿ ಹಣ ಸಿಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಉದ್ಯೋಗ ಬದಲಾವಣೆ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಸದ್ಯಕ್ಕೆ ಬದಲಾವಣೆ ಮಾಡುವುದು ಬೇಡ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಪ್ರಕೃತಿ ಮಧ್ಯದಲ್ಲಿ ಸಮಯ ಕಳೆಯಬೇಕು, ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ನಿಶ್ಚಯ ಮಾಡಲಿದ್ದೀರಿ. ಜಿಮ್, ಯೋಗ ಅಥವಾ ಪ್ರಾಣಾಯಾಮಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Follow Us