AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Medical Astrology: ಹೃದಯಾಘಾತ ಅಥವಾ ಹೃದಯ ಸ್ಥಂಭನದ ಕಾಲವನ್ನು ಸೂಚಿಸುವ ಜ್ಯೋತಿಷ್ಯ ಗ್ರಹಗತಿ

ತೀರ ಇತ್ತೀಚಿಗೆ 42 ವರ್ಷದ ಶೆಫಾಲಿ ಝರೀವಾಲಾ ಹೃದಯಾಘಾತದಿಂದ ಸಾವನ್ನಪ್ಪಿದರು. ಇದೇ ಹೃದಯಾ‌ಘಾತಕ್ಕೆ ಹಾಸನ ಜಿಲ್ಲೆಯ 16 ಮಂದಿ ಒಂದೇ ತಿಂಗಳಲ್ಲಿ ಸಾವನ್ನದ್ದಾರೆ. ಇಡೀ ದೇಶದಲ್ಲಿ ಹೃದಯಾಘಾತ- ಹೃದಯ ಸ್ಥಂಭನ ಸುದ್ದಿಯಲ್ಲಿದೆ. ಶಾಲೆ ಮಕ್ಕಳು ಸಹಿತ ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ಮೆಡಿಕಲ್ ಅಸ್ಟ್ರಾಲಜಿ ಅಥವಾ ವೈದ್ಯಕೀಯ ಜ್ಯೋತಿಷ್ಯ ಎಂಬ ಬಹಳ ದೊಡ್ಡ ವ್ಯಾಪ್ತಿಯ ಅಧ್ಯಯನ ಬೇಡುವ ವಿಷಯ- ಜ್ಞಾನದ ಬಗ್ಗೆ ತಿಳಿಸಲಾಗುತ್ತಿದೆ. ಇಂದಿನ ಲೇಖನದಲ್ಲಿ ಹೃದಯಘಾತ ಅಥವಾ ಹೃದಯ ಸ್ಥಂಭನದ ಅಪಾಯ ತಂದೊಡ್ಡಬಹುದಾದ ಗ್ರಹ ಸ್ಥಿತಿಯ ವಿಶ್ಲೇಷಣೆಯನ್ನು ತಿಳಿಸಲಾಗಿದೆ.

Medical Astrology: ಹೃದಯಾಘಾತ ಅಥವಾ ಹೃದಯ ಸ್ಥಂಭನದ ಕಾಲವನ್ನು ಸೂಚಿಸುವ ಜ್ಯೋತಿಷ್ಯ ಗ್ರಹಗತಿ
ಸಾಂದರ್ಭಿಕ ಚಿತ್ರ
ಸ್ವಾತಿ ಎನ್​ಕೆ
| Updated By: ವಿವೇಕ ಬಿರಾದಾರ|

Updated on: Jun 29, 2025 | 4:40 PM

Share

Medical Astrology: ಹೃದಯಾಘಾತ ಅಥವಾ ಹೃದಯ ಸ್ಥಂಭನದ ಕಾಲವನ್ನು ಸೂಚಿಸುವ ಜ್ಯೋತಿಷ್ಯ ಗ್ರಹಗತಿ ಹೃದಯಾಘಾತ (Herat Attack) ಅಥವಾ ಹೃದಯ ಸ್ಥಂಭನಕ್ಕೆ (Caridiac Arrest) ವೈದ್ಯಕೀಯ ಕಾರಣಗಳನ್ನು ಹಲವಾರು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಜ್ಯೋತಿಷ್ಯದಲ್ಲೂ ಹೃದಯಾಘಾತ ಅಥವಾ ಹೃದಯ ಸ್ಥಂಭನದ ಬಗ್ಗೆ ಕೆಲವು ಕಾರಣಗಳು ಅಥವಾ ಗ್ರಹಸ್ಥಿತಿಯನ್ನು ಹೇಳಲಾಗುತ್ತದೆ. Medical Astrology ಅಥವಾ ವೈದ್ಯಕೀಯ ಜ್ಯೋತಿಷ್ಯದಲ್ಲಿ ಹೇಳಲಾಗಿರುವುದನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಇಲ್ಲಿರುವ ಕಾರಣಗಳ ಪೈಕಿ ಯಾವುದಾದರೂ ಒಂದು, ಕೆಲವು ವೇಳೆ ಒಂದಕ್ಕಿಂತ ಹೆಚ್ಚು ಏಕ ಕಾಲದಲ್ಲಿ ಸೃಷ್ಟಿಯಾಗಿ ಈ ಅನಾಹುತಕ್ಕೆ ದಾರಿ ಆಗಬಹುದು. ಆದ್ದರಿಂದ ಇವುಗಳನ್ನು ‘ಹಾಗೂ’ ಮತ್ತು “ಅಥವಾ” ಎರಡೂ ರೀತಿಯಲ್ಲೂ ಓದಿಕೊಳ್ಳುವುದು.

  • ಒಬ್ಬ ವ್ಯಕ್ತಿಯ ಜನ್ಮ ಜಾತಕದಲ್ಲಿ ಲಗ್ನದಿಂದ ಅಥವಾ ಲಗ್ನಾಧಿಪತಿ ಅಥವಾ ಚಂದ್ರ ಇರುವ ರಾಶಿಯಿಂದ ಅಥವಾ ಚಂದ್ರ ಇರುವ ರಾಶಿಯ ಅಧಿಪತಿ ಇರುವ ಸ್ಥಾನದಿಂದ ಮೂರನೇ ಮನೆಯಲ್ಲಿ ಗುರು ಗ್ರಹ (Jupiter) ಇದ್ದಲ್ಲಿ
  • ಜನನ ಸಮಯದಲ್ಲಿ ಇರುವಂಥ ಗ್ರಹ ಸ್ಥಿತಿಯಲ್ಲಿ ಹೃದಯಕ್ಕೆ ಅಧಿಪತಿಯಾದ ರವಿ (Sun) ಗ್ರಹವು ದುರ್ಬಲವಿದ್ದರೆ.
  • ಇನ್ನು ಜನ್ಮ ಜಾತಕದಲ್ಲಿನ ಮಂದ ಗ್ರಹದ ಸ್ಥಿತಿ, ಅಂದರೆ ಶನಿಯು (Saturn) ಸಹ ದುರ್ಬಲನಾಗಿದ್ದರೆ
  • ಜನನ ಸಮಯದಲ್ಲಿ ಕುಜ (Mars) ಗ್ರಹವು ಬಲಿಷ್ಠನಾಗಿದ್ದು, ಬುಧ (Mercury) ಗ್ರಹ ದುರ್ಬಲನಾಗಿದ್ದಲ್ಲಿ ಆಗ ಕೂಡ ಹೃದಯ ಸ್ಥಂಭನ ಸಂಭವಿಸುತ್ತದೆ.
  • ಜಾತಕರಿಗೆ ಯಾವ ದಶೆ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ಆ ದಶಾಧಿಪತಿಯಿಂದ ನಾಲ್ಕನೇ ಮನೆಯಲ್ಲಿ ರವಿ ಅಥವಾ ಶನಿ ಗ್ರಹ ಇದ್ದರೂ ಆ ಸಮಯದಲ್ಲಿ ಹೃದಯಾಘಾತ ಸಂಭವಿಸುತ್ತದೆ.
  • ಇನ್ನು ಯಾವ ಜಾತಕರಿಗೆ ಜನ್ಮ ಜಾತಕದಲ್ಲಿನ ಲಗ್ನದಿಂದ ಎಂಟನೇ ಮನೆಯಲ್ಲಿ ರವಿ ಗ್ರಹ ಇದ್ದು, ಅದೇ ರವಿಯ ದಶೆ ನಡೆಯುತ್ತಿರುವ ಕಾಲದಲ್ಲಿ ಅಪಾಯ ಸಾಧ್ಯತೆ ಇರುತ್ತದೆ.
  • ಯಾವ ವ್ಯಕ್ತಿಯ ಜನ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಶನಿ ಸಂಚರಿಸುವ ಅವಧಿ ಇರುತ್ತದೆಯಲ್ಲಾ ಆಗಲೂ ಅಪಾಯದ ಬಗ್ಗೆ ಜಾಗ್ರತೆ ವಹಿಸಬೇಕು.
  • ಜನನ ಕಾಲದಲ್ಲಿ ಶನಿ ಗ್ರಹ ಎಲ್ಲಿ ಸ್ಥಿತವಾಗಿರುತ್ತದೆ ಅಲ್ಲಿಂದ ಎಂಟನೇ ಮನೆಯಲ್ಲಿ ಗೋಚಾರಕ್ಕೆ ಅಷ್ಟಮಕ್ಕೆ ಬಂದಾಗ ಎಚ್ಚರವಾಗಿರಬೇಕು (ಉದಾಹರಣೆ: ಜನನ ಕಾಲದಲ್ಲಿ ಯಾರಿಗೆ ಸಿಂಹ ರಾಶಿಯಲ್ಲಿ ಶನಿ ಇರುತ್ತದೆ, ಅಂಥವರಿಗೆ ಈಗ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಅಷ್ಟಮವಾಗುತ್ತದೆ.).
  • ಆಹಾರ ಅಪಥ್ಯ, ಪಿತ್ಥವನ್ನು ಉದ್ರೇಕಿಸುವ ಆಹಾರ, ಅಭ್ಯಾಸದಿಂದ ಸುಖಾಸುಮ್ಮನೆ ನಿದ್ದೆಗೆಡುವುದು, ಮನಸ್ಸನ್ನು ಉದ್ರೇಕಿಸುವ- ವಿಕಾರಗೊಳಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು. ಇಂಥವು ಹೃದಯಾಘಾತದ- ಹೃದಯ ಸ್ಥಂಭನದ ಸಾಧ್ಯತೆಗೆ ಮತ್ತೂ ಕಾರಣವಾಗುತ್ತವೆ.

ಪರಿಹಾರ ಏನು?:

ಸದ್ವಿಚಾರ ಚಿಂತನೆ, ಆಹಾರ- ಜೀವನ ಶೈಲಿಯಲ್ಲಿ ಸರಿಯಾದ ಪದ್ಧತಿಯನ್ನು ಅನುಸರಿಸುವುದು ಅತ್ಯವಶ್ಯಕ. ದೈವ ಹಾಗೂ ದೇಹ ಎರಡಕ್ಕೂ ಸರಿಯಾದ ಪದ್ಧತಿಯಲ್ಲಿ ಅನುಸರಣೆ ಆಗಬೇಕು. ತಪ್ಪಾದ ಕ್ರಮ ಹಾಗೂ ವಿಧಾನ ಅಪಾಯಕಾರಿ.

ಪೂಜಾ ಪರಿಹಾರಗಳೆಂದರೆ, ಮೃತ್ಯುಂಜಯ ಹೋಮ, ಜಪ, ಹರಿವಾಯುಸ್ತುತಿ ಹೋಮ, ಪ್ರಾಣಾಯಾಮ, ಯೋಗಾಭ್ಯಾಸ, ಶವಾಸನ ಇತ್ಯಾದಿ ಆಸನಗಳ ಮೂಲಕ ರಕ್ಷಣೆಗೆ ಅವಕಾಶಗಳು ಇರುತ್ತವೆ. ಇನ್ನು ಆದಷ್ಟೂಮತ್ತು ಬರಿಸುವ ಆಹಾರ ಪದಾರ್ಥಳಾದ ಗಸಗಸೆ, ಉದ್ದಿನ ಪದಾರ್ಥಗಳಂಥದ್ದರ ಸೇವನೆ ಕಡಿಮೆ ಮಾಡಿಕೊಂಡರೆ ಕ್ಷೇಮ. ಶುದ್ಧ ತೆಂಗಿನ ಎಣ್ಣೆಯಲ್ಲಿ ಕರಿದ ಪದಾರ್ಥ ಸೇವಿಸಬಹುದು. ರಾತ್ರಿ ಮಲಗುವ ಹೊತ್ತಿಗೆ ಒಂದು ಚಮಚ ತೆಂಗಿನ ಎಣ್ಣೆ ಸೇವಿಸಿದರೆ ಉತ್ತಮ ಆರೋಗ್ಯ. ಒಟ್ಟಿನಲ್ಲಿ ಗ್ರಹ-ಗೃಹ ಹಾಗೂ ದೈವ- ದೇಹದ ಬಗ್ಗೆ ಪರಿಜ್ಞಾನ ಇರುವುದು ಅತ್ಯವಶ್ಯ.

ಲೇಖಕ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ