AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monthly Horoscope July 2025: ಜುಲೈ ತಿಂಗಳ ಭವಿಷ್ಯದಲ್ಲಿ ನಿಮ್ಮ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ…!

2025ರ ಜುಲೈ ತಿಂಗಳಲ್ಲಿ ಗ್ರಹಗತಿಗಳು ಬಹಳ ಬದಲಾವಣೆಯಾಗಲಿವೆ. ಶುಕ್ರನು ಗುರುವಿನ ಜೊತೆ ಮಿಥುನದಲ್ಲಿ, ಸೂರ್ಯ ಹಾಗೂ ಬುಧರು ಕರ್ಕಾಟಕದಲ್ಲಿ, ಕುಜನು ಕನ್ಯಾದಲ್ಲಿ ಇರುವನು. ಶನಿ ಮೀನದಲ್ಲಿ, ರಾಹು ಕುಂಭ, ಕೇತು ಸಿಂಹ. ಯಾವ ಗ್ರಹರೂ ಸ್ವಕ್ಷೇತ್ರ ಅಥವಾ ಉಚ್ಚಕ್ಷೇತ್ರದಲ್ಲಿ ಇಲ್ಲ. ಮಿತ್ರ ಅಥವಾ ಶತ್ರು ಕ್ಷೇತ್ರಗಳಲ್ಲಿ ಸ್ಥಿತರಾಗಿದ್ದಾರೆ. ಹಾಗಾಗಿ ಕೆಲವುಬಾರಿ ಶುಭ ಗ್ರಹರಿಂದಲೇ ಅಶುಭವೂ ಕಾಣಿಸುವುದು. ದೈವವು ಅನುಕೂಲವಾತವಾಗಿ ನಿಮ್ಮನ್ನು ದಡಕ್ಕೆ ಸೇರಿಸುವುದು. ಎಲ್ಲ ಗ್ರಹರೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

Monthly Horoscope July 2025: ಜುಲೈ ತಿಂಗಳ ಭವಿಷ್ಯದಲ್ಲಿ ನಿಮ್ಮ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ...!
Masa Bhavishya
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ|

Updated on: Jun 29, 2025 | 6:19 PM

Share

ಮೇಷ ರಾಶಿ : ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಜುಲೈ ತಿಂಗಳಲ್ಲಿ ಮಿಶ್ರಫಲ. ರಾಶಿಯ ಅಧಿಪತಿ ಕುಜ ಷಷ್ಠದಲ್ಲಿ ಇರುವನು. ವೈರಮನೋಭಾವ ಇರುವವರೂ ಬಂದು ಶರಣಾಗುವರು. ಸಂಗಾತಿಯ ಜೊತೆ ವಾಗ್ವಾದ ನಡೆಯುವುದು. ಮಕ್ಕಳ ಬಗ್ಗೆ ಸಲ್ಲದ ಮಾತು ಕೇಳುವಿರಿ. ಕುಟುಂಬ ನಿಮ್ಮನ್ನು ಇಷ್ಟಪಡಲಿದೆ. ಉದ್ಯೋಗವು ಯಥಾಸ್ಥಿತಿಯಲ್ಲಿ ನಿಮ್ಮನ್ನು ಇರಿಸುವುದು. ಆದಾಯವನ್ನು ರಕ್ಷಿಸಿಕೊಳ್ಳಿ. ಕಾರ್ತಿಕೇಯನ ಸ್ಮರಣೆಯನ್ನು ಮಾಡುತ್ತಿರಿ.

ವೃಷಭ ರಾಶಿ : ಜುಲೈ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಶುಕ್ರನು ದ್ವಿತೀಯದಲ್ಲಿ ನಿಮಗೆ ಸುಖವನ್ನು ಕೊಡಿಸುವನು. ನಿಮ್ಮ ಮಾತು ಮನೋಹರವಾಗಿ ಇರಲಿದ್ದು ಎಲ್ಲವೂ ಆಗುವಂತೆ ಮಾಡುವುದು. ಗುರುಬಲವು ನಿಮಗೆ ಇನ್ನಷ್ಟು ಬಲ ನೀಡುವುದು. ಉದ್ಯೋಗದಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಕೆಲಸವು ನಡೆಯಲಿದ್ದು, ಅಸಹಜ ಸೋಲನ್ನು ಅನುಭವಿಸುವಿರಿ. ಕಲಾತ್ಮ ಮಾತುಗಳನ್ನು ನಿಮ್ಮವರು ಇಷ್ಟಪಡುವರು. ಸಂಗಾತಿಯಿಂದ ಲಾಭವಾಗುವುದು. ಉದ್ದಿನ ತಿನಿಸನ್ನು ಪ್ರಾಣಿಗಳಿಗೆ ನೀಡಿ.

ಮಿಥುನ ರಾಶಿ :ಈ ರಾಶಿಯವರಿಗೆ ಜುಲೈ ತಿಂಗಳು ಮಿಶ್ರ ಫಲ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಸೂರ್ಯನ ಜೊತೆ ಇದ್ದು ಮಾತನ್ನು ಸೌಮ್ಯವಾಗಿ ಆಡಿಸಲಾರನು. ನಿಮ್ಮ ಗೆಲುವು ಸ್ವಾಭಾವಿಕವಾಗಿ ಇರದು. ಸಹೋದರರ ನಡುವೆ ವೈಷಮ್ಯ ಬರಲಿದೆ. ಮಾನಸಿಕ ಗೊಂದಲಗಳು ಬರದಂತೆ ನಿರ್ವಹಿಸಿ. ಉದ್ಯೋಗದಲ್ಲಿ ನಿರಾಸಕ್ತಿ ಇದ್ದರೂ ಕೆಲಸವನ್ನು ಮಾಡಬೇಕಾದ ಸ್ಥಿತಿ ಇದೆ. ಕುಟುಂಬದಿಂದ ದೂರಾಬೇಕಾಗಬಹುದು. ಸಂತಾನದಿಂದ ಆನಂದ ಹೆಚ್ಚಾಗುವುದು. ಸೀತಾರಾಮರ ಆರಾಧನೆ ಮಾಡಿ.

ಕರ್ಕಾಟಕ ರಾಶಿ :ರಾಶಿಯಲ್ಲಿ ಈ ತಿಂಗಳು ಬುಧ ಹಾಗೂ ಸೂರ್ಯರು ಇರಲಿದ್ದು ತಂದೆ ತಾಯಿ‌ ಹಾಗೂ ಮಕ್ಕಳ ಸಂಬಂಧ ಏಕರೂಪಕ್ಕೆ ಬರಲಿದೆ. ಗುರುಬಲ ಕಡಿಮೆ. ಉದ್ಯೋಗದ ಬದಲವಣೆ ಅಥವಾ ಉದ್ಯಮದಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲು ಈ ತಿಂಗಳು ಬೇಡ. ಸುಳ್ಳಾಡುವುದನ್ನು ನಿಲ್ಲಿಸುವುದು ಸೂಕ್ತ. ಇನ್ನೊಬ್ಬರಿಗೆ ಅದು ಗೊತ್ತಾಗಿ ಮತ್ತೊಂದು ಕಡೆಗೆ ತಿರುಗಲಿದೆ. ಹಿರಿಯರ ಸೇವೆಗೆ ಅವಕಾಶವಿರಲಿದೆ. ಗುರುದರ್ಶನ, ಸ್ತವಗಳನ್ನು ಮಾಡಿ.

ಸಿಂಹ ರಾಶಿ :ಜುಲೈ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ದ್ವಾದಶದಲ್ಲಿ ಇದ್ದಾನೆ. ತಂದೆಯ ಆರೋಗ್ಯ ಹಾಳು ಜೊತೆಗೆ ಏನು ಮಾಡಬೇಕೆಂಬ ಸ್ಥೈರ್ಯವೂ ಹೋಗುವುದು. ಆತ್ಮವಿಶ್ವಾಸವನ್ನು ಜೊತೆಗಿದ್ದವರು ತುಂಬುವರು. ಗುರುಬಲ ನಿಮಗೆ ಕಾಲಕಾಲಕ್ಕೆ ಬೇಕಾದ ಸಹಕಾರವನ್ನು ಕೊಡಲಿದೆ. ಶುಕ್ರನೂ ಏಕಾದಶದಲ್ಲಿ ಭೋಗ ವಸ್ತುಗಳ ಖರೀದಿಗೆ ಮನಸ್ಸು ಮಾಡಿಸುವನು. ನಿಮ್ಮ ಮಾತು ಕೋಪದಿಂದ ಇರುವಂತೆ ತೋರುವುದು. ಸಂಗಾತಿಗೆ ಗಾಯಗಳಾಗಬಹುದು. ಮಹಾಗಣಪತಿ ದೂರ್ವಾ ಸಮರ್ಪಣೆ ಮಾಡಿ.

ಕನ್ಯಾ ರಾಶಿ :ಇದು ರಾಶಿ ಚಕ್ರದ ಆರನೇ ರಾಶಿಯಾಗಿದ್ದು ಜುಲೈ ತಿಂಗಳಲ್ಲಿ ನಿಮಗೆ ಮಿಶ್ರಫಲವಿದೆ. ರಾಶಿಯ ಅಧಿಪತಿ ಏಕಾದಶದಲ್ಲಿ ಇರುವನು. ಪೂರ್ವಾರ್ಜಿತ ಆಸ್ತಿಯನ್ನು ಪಡೆಯುವ ಯೋಚನೆ ಬರಲಿದೆ. ವಿವಾಹವು ಕಾರಣಾಂತರಗಳಿಂದ ಮುಂದೆ ಹೋಗಲಿದ್ದು, ಬೇಸರಿಸುವ ಅವಶ್ಯತೆ ಇಲ್ಲ. ಉದ್ಯಮವನ್ನು ಯಶಸ್ವಿಯಾಗಿ ನೀವು ಮುಂದುವರಿಸುವಿರಿ. ಕೋಪದ ಸನ್ನಿವೇಶ ಬಂದರೂ ಅದನ್ನು ನಿಮ್ಮೊಳಗೇ ನಿಗ್ರಹಿಸಿಕೊಳ್ಳಿ. ಶಿವನಿಗೆ ಅಭಿಷೇಕದ ಸಂಕಲ್ಪ ಮಾಡಿ.

ತುಲಾ ರಾಶಿ :ತಿಂಗಳು ನಿಮಗೆ ಶುಭ. ರಾಶಿಯ ಅಧಿಪತಿ ನವಮದಲ್ಲಿ ಇರುವನು. ಗೌರವ ಸ್ಥಾನಮಾನಗಳು ಸಿಗುವುದು. ಅನೇಕ ಸುಖ ಭೋಗಗಳು ಅನಿರೀಕ್ಷಿತವಾಗಿ ನಿಮಗೆ ಸಿಗಲಿವೆ. ಶತ್ರುಗಳಿಂದ ನೀವು ದೂರವಾಗುವಿರಿ. ಉದ್ಯೋಗದಲ್ಲಿ ಸ್ಥಾನವನ್ನು ಪಡೆಯುವಿರಿ. ಮಕ್ಕಳ ಅನಾರೋಗ್ಯವನ್ನು ಸರಿಪಡಿಸಿಕೊಳ್ಳುವಿರಿ. ಆದಾಯವನ್ನು ಸರಿಯಾದ ಮಾರ್ಗದಿಂದ ಪಡೆದುಕೊಳ್ಳಿ. ಆಯುಧ ಮುಂತಾದ ವ್ಯಾಪಾರಕ್ಕೆ ನಷ್ಟವಾಗುವುದು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಿ. ಸುಬ್ರಹ್ಮಣ್ಯನ ಉಪಾಸನೆಗೆ ಹೆಚ್ಚು ಸಮಯ ಕೊಡಿ.

ವೃಶ್ಚಿಕ ರಾಶಿ :ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಮಿಶ್ರಫಲ. ರಾಶಿಯ ಅಧಿಪತಿಯ ಸ್ಥಾನ ಬದಲಾವಣೆಯಾಗಿದೆ. ಏಕಾದಶದಲ್ಲಿ ಸ್ಥಿತನಾಗಿದ್ದು ಭೂ ವ್ಯವಹಾರದಲ್ಲಿ ಒಳ್ಳೆಯ ಪ್ರಗತಿಯನ್ನು ಕೊಡುವನು. ಹೊಸ ಸ್ಥಳದ ಖರೀದಿಯೂ ಸಾಧ್ಯವಿದೆ. ನೀರಾವರೀ ಜಾಗವನ್ನು ಹಾಗೂ ಭೋಗಿಸಿದ ಭೂಮಿಯನ್ನು ಪಡೆಯುವಿರಿ. ಸ್ತ್ರೀಯರಿಂದ ಅಪಮಾನ ಮಾಡಿಸಿಕೊಳ್ಳುವಿರಿ. ಮಕ್ಕಳ ಬಗ್ಗೆ ಕಾಳಜಿ ಇಲ್ಲದೇಹೋಗುವುದು. ತಂದೆ ಹಾಗೂ ಸಹೋದರರ ಒಡನಾಡ ಖುಷಿಕೊಡುವುದು. ಕುಟುಂಬದಲ್ಲಿ ವೈರ ಪ್ರವೇಶ ಮಾಡಲಿದೆ. ನಾಗಾರಾಧನೆಯನ್ನು ಮಾಡಿ.

ಧನು ರಾಶಿ :ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ಸಪ್ತಮದಲ್ಲಿ ಈ ತಿಂಗಳು. ಅಷ್ಟು ಮಾತ್ರವಲ್ಲದೇ ಶುಕ್ರನೂ ಜೊತೆಗಿರುವನು. ವಿವಾಹ ವಿಜೃಂಭಣೆಯಿಂದ ನಡೆಯಲಿದೆ. ಉತ್ತಮ ಕುಲದ ವಧೂಪ್ರಾಪ್ತಿ. ಮನೆಯ ಬಗ್ಗೆ ಯಾವುದೇ ಸ್ಪಂದನ ವಿರದೇ ನಿರ್ಲಿಪ್ತತೆಯಿಂದ ಇರುವಿರಿ. ಉದ್ಯೋಗದಲ್ಲಿ ಸ್ವಂತ ಬುದ್ಧಿಯನ್ನು ಬಳಸಲು ಹೋಗಿ ತೊಂದರೆಗೆ ಸಿಕ್ಕಿಬೀಳುವಿರಿ. ವಿದೇಶ ಸಂಚಾರದ ಉತ್ಸಾಹದಲ್ಲಿ ಇರವಿರಿ. ಗೌರವಿಸುವವರನ್ನು ಅನಾದರಿಸುವುದು ಬೇಡ. ಸುಬ್ರಹ್ಮಣ್ಯನಿಗೆ ಉತ್ತಪ್ಪ ಸೇವೆಯನ್ನು ಮಾಡಿಸು.

ಮಕರ ರಾಶಿ :ಈ ರಾಶಿವರಿಗೆ ಮೂಲ ತಿಂಗಳಲ್ಲಿ ಅಶುಭ. ರಾಶಿಯ ಅಧಿಪತಿ ತೃತೀಯದಲ್ಲಿ. ಪ್ರಯತ್ನ ಪೂರ್ಣ ಫಲ ಕೊಟ್ಟರೂ ನಿಮಗೆ ಬೇಕಾದಾಗ ಕೊಡದು. ವಿವಾಹಕ್ಕೆ ಪ್ರತಿರೋಧ ಬಂದರೂ ಲೆಕ್ಕಿಸಲಾರಿರಿ. ಹಿರಿಯರ ಬಗ್ಗೆ ಅಗೌರ. ಸಂಗಾತಿಯನ್ನು ವಿನಾಕಾರಣ ದೂಷಿಸುವಿರಿ. ಉದ್ಯೋಗದಲ್ಲಿ ಶತ್ರು ಬಾಧೆಯಿಂದ ಕಿರಿಕಿರಿ. ಅಧಿಕಾರಿಗಳಿಗೆ ನಿಮ್ಮ ಬಗ್ಗೆ ಅಸಮಾಧಾನ ಇರಲಿದೆ. ಅನಾರೋಗ್ಯಕ್ಕೆ ಚಿಕಿತ್ಸೆ ಫಲ ಕೊಡದು. ವಿದೇಶ ಪ್ರಯಾಣದ ಸಿದ್ಧತೆಯಲ್ಲಿ ಇರುವಿರಿ. ಪವನಪುತ್ರನಿಗೆ ಕ್ಷೀರಾಭಿಷೇಕ ಮಾಡಿಸಿ.

ಕುಂಭ ರಾಶಿ :ಈ ತಿಂಗಳಲ್ಲಿ ನಿಮಗೆ ಶುಭ. ದ್ವಾದಶಾಧಿಪತಿ ಶನಿ ದ್ವಿತೀಯದಲ್ಲಿ ಇದ್ದಾನೆ. ಕೆಲಸವನ್ನು ಮಾಡಿಯೂ ಬಾರದೇ ಇದ್ದ ಹಣವನ್ನು ಪಡೆಯಬಹುದು. ಬುದ್ಧಿಯು ಅತ್ಯಂತ ವಿಚಿತ್ರವಾಗಿ ಯೋಚಿಸುವುದು. ಅಘಟಿತವಾಗುವ ಘಟನೆಯನ್ನು ಊಹಿಸಿಕೊಂಡು ವಿಕಾರವಾಗಬಹುದು. ವಿವಾಹಕ್ಕೆ ಗೊಂದಲದಲ್ಲಿ ಇರುವಿರಿ. ಕರ್ಮಾಧಿಪತಿ ಅಷ್ಟಮದಲ್ಲಿ ಇದ್ದಾನೆ. ಬುಧ ಸ್ಥಾನವಾಗಿದ್ದು ಆರೋಗ್ಯದಲ್ಲಿ ಬಾಧೆಯನ್ನು ಕೊಡುವನು‌. ತಂದೆಯ ಜೊತೆ ಮನಸ್ತಾಪವನ್ನು ಎದುರಿಸುವಿರಿ. ಮಕ್ಕಳ ಬಗ್ಗೆ ಕಾಳಜಿ ಇರಲಿದೆ.

ಮೀನ ರಾಶಿ :ಜುಲೈ ತಿಂಗಳಲ್ಲಿ ನಿಮಗೆ ಶುಭ. ರಾಶಿ ಅಧಿಪತಿ ಚತುರ್ಥದಲ್ಲಿ ಬುಧನ ರಾಶಿಯಲ್ಲಿ ಇದ್ದಾನೆ. ಶುಕ್ರನೂ ಜೊತೆಗಿರುವ ಕಾರಣ ಕೌಟುಂಬಿಕ ಭಿನ್ನಾಭಿಪ್ರಾಯ ದೂರಾಗುವುದು. ಮಕ್ಕಳಿಂದ ಹಾಗೂ ಸಂಗಾತಿಯಿಂದ ಸಂತೋಷ ಪ್ರಾಪ್ತಿ. ಉದ್ಯೋಗದಲ್ಲಿ ಚಮತ್ಕಾರ ಕಾಣಿಸಿಕೊಳ್ಳಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಗಮನಿಸುವಿರಿ. ಹೆಚ್ಚು ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬರಲಿದೆ. ಮರಳಿ ಬರದ ಕಾರ್ಯಕ್ಕೆ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಜಾಗರೂಕತೆಯಿಂದ ಆರ್ಥಿಕ ವ್ಯವಹಾರದಲ್ಲಿ ತೊಡಗಿ.

-ಲೋಹಿತ ಹೆಬ್ಬಾರ್ – 8762924271 (what’s app only)

ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ