Monthly Horoscope April: ಮೇಷ ರಾಶಿಗೆ ಏಪ್ರಿಲ್​​ ತಿಂಗಳು ಶುಭಾ, ವೃಷಭ ರಾಶಿಗೆ ಅನಾರೋಗ್ಯ, ಆರ್ಥಿಕವಾಗಿ ನಷ್ಟ ಸಂಭವಿಸಲಿದೆ

ಏಪ್ರಿಲ್ ಮಾಸ ಭವಿಷ್ಯ: ಏಪ್ರಿಲ್​​ ತಿಂಗಳು ಯಾವೆಲ್ಲ ರಾಶಿಗಳಿಗೆ ಶುಭಾ, ಅಶುಭಾ, ಯಾವೆಲ್ಲ ದೋಷಕ್ಕೆ, ಪೂಜಾ ಕ್ರಮಗಳನ್ನು ಮಾಡಬೇಕು. ಈ ತಿಂಗಳ ನಿಮ್ಮ ದಿನ ವಿಶೇಷಗಳೇನು? ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

Monthly Horoscope April: ಮೇಷ ರಾಶಿಗೆ ಏಪ್ರಿಲ್​​ ತಿಂಗಳು ಶುಭಾ, ವೃಷಭ ರಾಶಿಗೆ ಅನಾರೋಗ್ಯ, ಆರ್ಥಿಕವಾಗಿ ನಷ್ಟ ಸಂಭವಿಸಲಿದೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 01, 2023 | 1:11 PM

ಏಪ್ರಿಲ್​​ ತಿಂಗಳು ಯಾವೆಲ್ಲ ರಾಶಿಗಳಿಗೆ ಶುಭಾ, ಅಶುಭ, ಯಾವೆಲ್ಲ ದೋಷಕ್ಕೆ, ಪೂಜಾ ಕ್ರಮಗಳನ್ನು ಮಾಡಬೇಕು. ಈ ತಿಂಗಳ ನಿಮ್ಮ ದಿನ ವಿಶೇಷಗಳೇನು? ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನಿಮ್ಮ ರಾಶಿಗೆ ಯಾವೆಲ್ಲ ಲಾಭ, ನಷ್ಟ, ಶುಭಾ, ಅಶುಭಗಳಿದೆ ಎಂಬುದನ್ನು ಇಲ್ಲಿ ನೋಡಿ.

ಮೇಷ :

ಏಪ್ರಿಲ್ ತಿಂಗಳು ಶುಭಫಲವವನ್ನು ನೀಡಲಿದೆ. ಈ ತಿಂಗಳ ಕೊನೆಯ ಭಾಗದಲ್ಲಿ ಗುರು ದ್ವಾದಶದಿಂದ ನಿಮ್ಮ ರಾಶಿಗೆ ಪ್ರವೇಶವನ್ನು ಪಡೆದುಕೊಂಡಿದ್ದಾನೆ. ಇಷ್ಟು ದಿನ ಅನುಭವಿಸುತ್ತಿದ್ದ ಅಪಮಾನ, ಧನನಷ್ಟ ಇವೆಲ್ಲವೂ ದೂರವಾಗಿ ನೆಮ್ಮದಿಯ ನಿಟ್ಟುಸಿರನ್ನು ಬಿಡಲಿದ್ದೀರಿ. ಅದೇ ರೀತಿ ರವಿಯೂ, ಬುಧ, ರಾಹು ನಾಲ್ಕು ಗ್ರಹಗಳು ಮೇಷರಾಶಿಯಲ್ಲಿ ಇರಲಿದೆ. ರಾಹುವಿನ ಯೋಗದಿಂದ ಸ್ವಲ್ಪ ಮಿಶ್ರಫಲವಿರಲಿದೆ. ಬುಧಾದಿತ್ಯಯೋಗದಿಂದ ನಿಮ್ಮ ಬುದ್ಧಿಯು ಪ್ರಕಟಗೊಳ್ಳುವುದು. ಶುಕ್ರನು ಸ್ವಗೃಹಕ್ಕೆ ಬಂದು ಆರ್ಥಿಕಾಭಿವೃದ್ಧಿಯನ್ನು ಮಾಡುವನು.

ವೃಷಭ:

ಈ ತಿಂಗಳಿಂದ ಸ್ವಲ್ಪ ಅಶುಭಗಳು ಇರಲಿವೆ. ಗುರುವು ಏಕಾದಶಸ್ಥಾನದಿಂದ ದ್ವಾದಶಸ್ಥಾನಕ್ಕೆ ಬರಲಿದ್ದಾನೆ. ಅನಾರೋಗ್ಯ, ಅಪಮಾನ, ಆರ್ಥಿಕವಾಗಿ ನಷ್ಟವನ್ನು ಅನುಭವಿಸಬೇಕಾಗಬಹುದು. ದ್ವಾದಶಸ್ಥಾನದಲ್ಲಿ ಬುಧ, ರವಿ, ಗುರು, ರಾಹುಗಳು ಇದ್ದು ಬುದ್ಧಿಗೆ ಜಾಡ್ಯವುಂಟಾಗಬಹುದು. ಬುದ್ಧಿಗೆ ಯಾವುದನ್ನೂ ತೋಚದಂತೆ ಮಾಡುತ್ತವೆ. ವೃಷಭದ ಶುಕ್ರನು ಸದ್ಯ ನಿಮಗೆ ಅಮಂಗಲಾದಿಗಳನ್ನು ದೂರ ಮಾಡುವವನಾಗಿದ್ದಾನೆ. ಗುರುವಿನ ದರ್ಶನ, ಆಶೀರ್ವಾದಗಳು ಅಗತ್ಯವಾಗಿ ಪಡೆದುಕೊಳ್ಳಬೇಕು.

ಮಿಥುನ:

ಈ ರಾಶಿಯವರಿಗೆ ಈ ಮಾಸದಿಂದ ಅತ್ಯಂತ ಶುಭವಿರಲಿದೆ. ಈ‌ ಮಾಸದ ಅಂತ್ಯದಲ್ಲಿ ಗುರುವು ಏಕಾದಶಸ್ಥಾನಕ್ಕೆ ಬರಲಿದ್ದು ಇಷ್ಟು ದಿನದ ದುಃಖ, ಅನಾರೋಗ್ಯ, ನೋವು, ಆರ್ಥಿಕ ಸಂಕಟಗಳೆಲ್ಲ ಸರಿಯಾಗಿ ಸುಖದ ಜೀವನ ಇರಲಿದೆ. ಏಕಾದಶಸ್ಥಾನದಲ್ಲಿ ರವಿ, ಬುಧ ಹಾಗೂ ರಾಹುವೂ ಇರಲಿದ್ದು ನಿಮ್ಮ ಅಭೀಷ್ಟಗಳು ಸಿದ್ಧಿಸುವುವು. ದ್ವಾದಶದಲ್ಲಿರುವ ಶುಕ್ರನು ನಿಮ್ಮ ಆರ್ಥಿಕತೆಗೆ ಸ್ವಲ್ಪ ಹೊಡೆತ ಕೊಟ್ಟಾನು. ನಿಮ್ಮ ರಾಶಿಯಲ್ಲಿ ಇರುವ ಕುಜನು ನಿಮಗೆ ಆಯುಧಗಳಿಂದ ನೋವನ್ನು ನೀಡುವನು. ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯಿರಿ.

ಕಟಕ:

ಈ ಮಾಸದಲ್ಲಿ ಒಂದು ವರ್ಷದಿಂದ ನವಮದಲ್ಲಿರುವ ಗುರುವು ದಶಮಕ್ಕೆ ಬದಲಾಗುವನು. ಗುರುಬಲವು ಅಷ್ಟಾಗಿ ನಿಮಗಿರುವುದಿಲ್ಲ. ಗುರುವಿನ ದರ್ಶನವನ್ನು ಆಗಾಗ ಮಾಡುತ್ತಿರಬೇಕಾಗುವುದು. ದಶಮದಲ್ಲಿರುವ ರವಿ, ಬುಧ, ರಾಹುಗಳು ಉದ್ಯೋಗದ ಸ್ಥಳದಲ್ಲಿ ನಿಮ್ಮನ್ನು ಉನ್ನತಮಟ್ಟಕ್ಕೇರಿಸುವರು. ಏಕಾದಶಕ್ಕೆ ಬರಲಿರುವ ಶುಕ್ರನು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವನು. ಕಲಾವಿದರಾಗಿದ್ದರೆ ಉತ್ತಮ ಅವಕಾಶಗಳನ್ನು ಶುಕ್ರನು ನೀಡುವನು. ವಿದ್ಯುತ್ ಉಪಕರಣಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ವಾಹನಗಳು ರಿಪೇರಿಗೆ ಬರಬಹುದು. ಶನಿಯೂ ಅಷ್ಟಮದಲ್ಲಿದ್ದು ನೋವು, ದುಃಖಗಳು ಅಧಿಕವಾಗಬಹುದು. ಶಿವಕವಚವನ್ನು ಪಠಿಸಿ.

ಸಿಂಹ:

ಈ ಮಾಸದಿಂದ ನಿಮಗೆ ಶುಭಾಧಿಕ್ಯವಿರಲಿದೆ. ಗುರುವು ಇಷ್ಟು ದಿನ ಅಷ್ಟಮದಲ್ಲಿದ್ದು ಮಾನಸಿಕ ಅಶಾಂತಿಯನ್ನು ನೀಡಿದ್ದನು. ಈ ಮಾಸದ ಕೊನೆಯಲ್ಲಿ ನವಮಕ್ಕೆ ಬಂದು ನಿಂಮ ಪೂರ್ವಸುಕೃತವನ್ನು ನೀಡುವನು. ಗೌರವಗಳನ್ನು ತಂದುಕೊಡಲಿದ್ದಾನೆ. ಆರೋಗ್ಯವು ಸ್ಥಿರವಾಗಿರಲಿದೆ. ಆರ್ಥಿಕಮಟ್ಟವೂ ಅಭಿವೃದ್ಧಿಯನ್ನು ಹೊಂದುವುದು. ನವಮಕ್ಕೆ ರವಿಯು ಬರಲಿದ್ದು ತಂದೆಯಿಂದ ಲಾಭವೂ ತಂದೆಯ ಆರೋಗ್ಯದಲ್ಲಿ ಸ್ಥಿರತೆಯೂ ಇರಲಿದೆ. ನವಮದಲ್ಲಿರುವ ರಾಹುವು ಸ್ವಲ್ಪ ಮಟ್ಟಿನ ಪ್ರತಿಕೂಲವನ್ನು ಉಂಟುಮಾಡಬಹುದು. ದಶಮದಲ್ಲಿರುವ ಶುಕ್ರನು ವಿನ್ಯಾಸವೃತ್ತಿಯನ್ನು ಅರಸುತ್ತಿದ್ದರೆ, ಕಲಾವಿದರಾಗಿ ವೃತ್ತಿಯನ್ನು ಆರಂಭಿಸುವವರಿದ್ದರೆ ಶುಭವನ್ನೇ ಮಾಡುವನು. ಹನುಮಾನ್ ಚಾಲೀಸ್ ಪಠಣ ಮಾಡಿ. ಸಪ್ತಮದಲ್ಲಿರುವ ಶನಿಯು ಮಂಗಲವನ್ನು ನೀಡುವನು.

ಕನ್ಯಾ:

ಈ‌ ಮಾಸದಿಂದ ಸಪ್ತಮದಲ್ಲಿರುವ ಗುರುವು ಅಷ್ಟಮಕ್ಕೆ ಚಲಿಸುವನು.‌ ಇಷ್ಟು ದಿನಗಳ ಕಾಲ ಅನುಭವಿಸಿದ್ದ ಸಿಹಿಯ ಅನುಭವಕ್ಕೆ ಕಹಿಯೂ ಸೇರಲಿದೆ. ಅಪಮಾನವನ್ನು ಸಹಿಸಿಕೊಳ್ಳುವುದು ಕಷ್ಟವಾದೀತು. ವಿವಿಧ ರೀತಿಯಲ್ಲಿ ಸಂಪತ್ತು ನಷ್ಟವಾಗಬಹುದು. ರವಿ ಮತ್ತು ಬುಧರ ಯೋಗವು ನಿಮ್ಮ ಆರೋಗ್ಯವನ್ನೂ ತಗ್ಗಿಸಬಹುದು. ತಂದೆಯ ಹಾಗೂ ಸಹೋದರರ ಆರೋಗ್ಯದಲ್ಲಿ ಜ್ವರಾದಿಗಳಿಂದ ಬಾಧೆಯು ಉಟಾಗಬಹುದು. ನವಮದಲ್ಲಿರುವ ಶುಕ್ರನು ನಿಮಗೆ ಹಿತಕರವಾದ ಅನುಭವವನ್ನು, ಸಂಪತ್ತಿನ ತೊಂದರೆ ಇದ್ದರೆ ಮಿತ್ರರಿಂದ, ಪತ್ನಿಯಿಂದ ಅಥವಾ ತಾಯಿಯ ಸಂಬಂಧಿಗಳಿಂದ ಧನಸಹಾಯ ಸಿಗಬಹುದು. ಸಾಪ್ಟ್ ವೇರ್ ಉದ್ಯೋಗವನ್ನು ಅರಸುತ್ತಿದ್ದರೆ ಸಿಗಬಹುದು. ಶಿವನಿಗೆ ರುದ್ರಾಭಿಷೇಕವನ್ನು ಮಾಡಿ ಆಪತ್ತನ್ನು ಪರಿಹರಿಸಿಕೊಳ್ಳಿ.

ಇದನ್ನೂ ಓದಿ: Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಏ.01ರ ರಾಶಿ ಭವಿಷ್ಯ ಹೀಗಿದೆ

ತುಲಾ:

ಈ ಮಾಸದಿಂದ ನಿಮಗೆ ಶುಭಕಾಲವು ಆರಂಭವಾಗಲಿದೆ. ಇಷ್ಟು ದಿನಗಳ ಕಾಲ ಷಷ್ಠದಲ್ಲಿರುವ ಗುರುವು ನಿಮಗೆ ಶತ್ರುಗಳಿಂದ ಬಹಳ ತೊಂದರೆಗಳನ್ನು ಕೊಡಿಸಿದ್ದನು. ಮಾನಸಿಕ ನೆಮ್ಮದಿಯನ್ನು ದೂರಮಾಡಿದ್ದನು. ಇನ್ನು ಅದೆಲ್ಲವೂ ದೂರವಾಗಲಿದೆ. ಶತ್ರುಬಾಧೆಯೂ ನಿಲ್ಲಲಿದೆ. ವಿವಾಹಕ್ಕೆ ತಯಾರಿಯನ್ನು ಮಾಡಿಕೊಳ್ಳಬಹುದು. ತಂದೆಯ ಕಾರಣದಿಂದ ನಿಮ್ಮ ವಿವಾಹವು ನಿಶ್ಚವಾಗಬಹುದು. ಗುರುಬಲವು ಈ ತಿಂಗಳ ಮಧ್ಯದಿಂದ ಇರಲಿದೆ. ಅಷ್ಟಮದಲ್ಲಿರುವ ಶುಕ್ರನು ನಿಮ್ಮ ಪ್ರೇಮವನ್ನು ಸ್ಥಗಿತಗೊಳಿಸುವನು. ದಾಂಪತ್ಯದಲ್ಲಿ ಕಲಹವನ್ನು ತರಿಸಲಿರುವನು. ಸಂಪತ್ತೂ ಪತ್ನಿಯ ಕಾರಣದಿಂದ ಅಥವಾ ಸ್ತ್ರೀನಿಮಿತ್ತ ಖಾಲಿಯಾಗುವುದು. ಲಕ್ಷ್ಮೀನಾರಾಯಣ ಸ್ತೋತ್ರಗಳು ನಿಮಗೆ ಸಂತಸವನ್ನು ನೀಡುವುದು.

ವೃಶ್ಚಿಕ:

ಈ ತಿಂಗಳಿಂದ ನಿಮ್ಮ ಗ್ರಹಗತಿಗಳಲ್ಲಿ ಅಲ್ಪ ಬದಲಾವಣೆ ಆಗಲಿದೆ. ಪಂಚಮದಲ್ಲಿರುವ ಗುರುವು ಷಷ್ಠಸ್ಥಾನಕ್ಕೆ ಪ್ರವೇಶ ಮಾಡುವನು. ಪುತ್ರರಿಂದ ಸಂತೋಷವನ್ನು, ಪ್ರತಿಭೆಯ ಅನಾವರಣವನ್ನು ಮಾಡಿದ್ದ ನಿಮಗೆ ಶತ್ರುಗಳು ಹುಟ್ಟಿಕೊಳ್ಳುವರು. ನಿರಂತರ ಸಣ್ಣ ಕಾಟವೂ ಸಿಗಲಿದೆ. ಸ್ಥಾನಭ್ರಷ್ಟತೆಯೂ ಆಗಬಹುದು. ಎಚ್ಚರಿಕೆಯಿಂದ ಹೆಜ್ಜೆ ಇರಡಬೇಕಾದ ಸ್ಥಿತಿ ಇದೆ. ಷಷ್ಠದಲ್ಲಿರುವ ಸೂರ್ಯ ಮತ್ತು ಬುಧರು ತಂದೆ ಮತ್ತು ಸಹೋದರರಿಂದ ಕಷ್ಟವನ್ನೂ ಅನುಭವಿಸಬಹುದು. ಇವರ ಪ್ರೋತ್ಸಾಹವು ಇಲ್ಲದೇ ಹೋಗಬಹುದು. ದ್ವಾದಶದ ಕೇತುವೂ ವಾಹನಾದಿಗಳಿಂದ ನಷ್ಟವನ್ನು ಕೊಡುವನು. ಮಹಾಗಣಪತಿಯ ಆರಾಧನೆಯನ್ನು ನಾನಾ ಪ್ರಕಾರವಾಗಿ ಮಾಡಿ.

ಧನುಸ್ಸು:

ಈ ತಿಂಗಳಿಂದ ನಿಮಗೆ ಅನುಕೂಲವಾತವೇ ಬೀಸಲಿದೆ. ಚತುರ್ಥದಲ್ಲಿ ಗುರು-ಹಿರಿಯರಿಂದ ಸಹಾಯವನ್ನು ಕೊಡಿಸಿದ್ದಾನೆ. ಕುಟುಂಬದಲ್ಲಿ ನೆಮ್ಮದಿಯನ್ನು, ಒಳ್ಳೆಯ ಮಾತನ್ನೂ ಆಡಿದ್ದಾನೆ. ಪಂಚಮಕ್ಕೆ ಹೋಗಲಿರುವ ಗುರುವು ನಿಮಗೆ ಇನ್ನಷ್ಟು ಉತ್ತಮವಾದುದನ್ನು ಮಾಡುವನು. ನಿಮ್ಮ ಪ್ರತಿಭೆಗೆ ಸೂಕ್ತವಾದ ಸ್ಥಾನವನ್ನು ಕೊಡಿಸುವನು.‌ ಮಕ್ಕಳಿಂದ ಸುಖವನ್ನು ಪಡೆಯುವಿರಿ. ಬುಧ ಮತ್ತು ರವಿಯರು ನಿಮ್ಮನ್ನು ಉನ್ನತಮಟ್ಟಕ್ಕೆ ಏರಿಸುವರು. ಷಷ್ಠದಲ್ಲಿರುವ ಶುಕ್ರನು ತಾಯಿಯ ಕಡೆಯವರಿಂದ ಅಥವಾ ಪತ್ನಿಯ ಕಡೆಯಿಂದ ಅಪಮಾನವನ್ನು ಮಾಡಿಸುವನು. ಸಪ್ತಮದಲ್ಲಿರುವ ಕುಜನು ಮಾನಸಿಕ ಗೊಂದಲವನ್ನು ಉಂಟುಮಾಡುವನು. ಸುಬ್ರಹ್ಮಣ್ಯನ ಸ್ತೋತ್ರವನ್ನು ಮಾಡಿ.

ಮಕರ:

ಈ ತಿಂಗಳಿಂದ ಕೆಲವು ಗ್ರಹಗಳ ಗತಿ ಬದಲಾಗಲಿದೆ.‌ ತೃತೀಯದಲ್ಲಿರುವ ಗುರುವು ಚತುರ್ಥಕ್ಕೆ ಹೋಗುವನು. ಗುರುಬಲವು ಇರುವುದಿಲ್ಲ. ವಿವಾಹ ಮೊದಲಾದ ಮಂಗಲ ಕಾರ್ಯಗಳಿಗೆ ಕಾಲವು ಚೆನ್ನಾಗಿಲ್ಲ. ಚತುರ್ಥದಲ್ಲಿರುವ ರವಿ, ಬುಧ ಹಾಗೂ ರಾಹುಗಳು ಕುಟುಂಬದಲ್ಲಿ ಅಶಾಂತಿಯನ್ನು, ಬಂಧುಗಳ ಜೊತೆ ಕಲಹವನ್ನು ಮಾಡಿಸುವರು. ಷಷ್ಠದಲ್ಲಿರುವ ಕುಜನು ಶತ್ರುನಾಶಕನಾಗಿರುವನು. ಸಾಡೇಸಾಥ್ ನ ಉತ್ತರಾರ್ಧವು ನಡೆಯುತ್ತಿದ್ದ ಜೀವನವು ಸಾಕೆನಿಸಬಹುದು. ತಂದೆಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಶನೈಶ್ಚರನ ಸ್ತೋತ್ರವನ್ನು ಮಾಡಿ.

ಕುಂಭ:

ಈ ತಿಂಗಳಿಂದ ಶುಭಾಶುಭವಾದ ಮಿಶ್ರಫಲಗಳು ಇರಲಿವೆ. ಗುರುವು ದ್ವಿತೀಯದಿಂದ ತೃತೀಯಸ್ಥಾನಕ್ಕೆ ಚಲಿಸಲಿದ್ದಾನೆ. ಪೂರ್ವಜರ ಸಂಪತ್ತನ್ನು ಅನುಭವಿಸುತ್ತಿದ್ದ ನಿಮಗೆ ಸ್ವಾಮರ್ಥ್ಯದಿಂದ ಸಂಪತ್ತನ್ನು ಗಳಿಸುವಿರಿ. ಸಹೋದರರ ಜೊತೆ ಸಾಮರಸ್ಯವು ಉಂಟಾಗಲಿದೆ. ತೃತೀಯದಲ್ಲಿ ರಾಹು, ಸೂರ್ಯ ಮತ್ತು ಬುಧರಿದ್ದು ನಿಮ್ಮ‌ ಪರಾಕ್ರಮ, ಸಾಮರ್ಥ್ಯ ಪರಿಚಯಾಗಲಿದೆ. ಚತುರ್ಥಸ್ಥಾನಕ್ಕೆ ಶುಕ್ರನ ಪ್ರವೇಶವಾಗಲಿದ್ದು ಪತ್ನಿಯ ಕಡೆಯಿಂದ ಸಹಾಯವೂ ಸಹವಾಸವೂ ಸಿಗಲಿದೆ. ಶನಿಯು ನಿಮ್ಮದೇ ಗೃಹದಲ್ಲಿ ಇರುವ ಕಾರಣ ಆಲಸ್ಯವು ಇರಲಿದೆ. ಮೃತ್ಯುಂಜಯನ ಸ್ತೋತ್ರ ಮಾಡಿ.

ಮೀನ:

ಈ ರಾಶಿತವರಿಗೆ ಇಷ್ಟು ದಿನ ಗುರುವಿನ‌ ಅಲ್ಪಬಲವಿದ್ದು ಗುರುಬಲದ ವೃದ್ಧಿಯಾಗಲಿದೆ.‌ ಬರಬೇಕಾದ ಸಂಪತ್ತುಗಳು ಸಿಗಬಹುದು.‌ ದ್ವಿತೀಯದಲ್ಲಿರುವ ಸೂರ್ಯ ಮತ್ತು ಬುಧರು ಬುದ್ಧಿವಂತಿಕೆಯಿಂದ ತಂದೆ ಮತ್ತು ಸಹೋದರ ಸಮೀಪದಿಂದ‌ ಸಂಪತ್ತು ಸಿಗುವಂತೆ ಮಾಡುವರು. ಕೃತ್ರಿಮಮಾರ್ಗವನ್ನೂ ಬಳಸಿಕೊಳ್ಳಬಹುದು. ಸಹೋದರಿಗೆ ನೀವು ಸಹಾಯ ಮಾಡುವಿರಿ. ಚತುರ್ಥದಲ್ಲಿ ಕುಜನಿರುವ ಕಾರಣ ನಿಮ್ಮ ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆ‌ ಇದೆ. ತಾಳ್ಮೆಯನ್ನು ಕಳೆದುಕೊಳ್ಳದೇ ವ್ಯವಹರಿಸುವು ಉತ್ತಮ. ಸಾಡೇಸಾಥ್ ಶನಿಯು ಪೂರ್ವಾರ್ಧದಲ್ಲಿ ಇರುವುದರಿಂದ ಶಿವಾರ್ಚನೆಯನ್ನು ಮಾಡುವ ಅಗತ್ಯವಿದೆ.

-ಲೋಹಿತಶರ್ಮಾ, ಇಡುವಾಣಿ

8762924271

Published On - 1:10 pm, Sat, 1 April 23

ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
Video: ಮುಳ್ಳುಗಳ ಮೇಲೆ ಮಲಗುವ ಬಾಬಾ
Video: ಮುಳ್ಳುಗಳ ಮೇಲೆ ಮಲಗುವ ಬಾಬಾ
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ