Monthly Horoscope: ಮಾಸಭವಿಷ್ಯ, ಈ ರಾಶಿಯವರಿಗೆ ಆದಾಯದ ಜೊತೆಗೆ ಈ ತಿಂಗಳು ಅನಗತ್ಯ ಒತ್ತಡವೂ ಹೆಚ್ಚಾಗಲಿದೆ

ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ ಪ್ರಪಂಚದಾದ್ಯಂತ ಜ್ಯೋತಿಷ್ಯವನ್ನು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಯವರಿಗೆ ಜುಲೈ ತಿಂಗಳು ಹೇಗಿರುತ್ತದೆ? ಅವರ ಆರ್ಥಿಕ ಮತ್ತು ಆರೋಗ್ಯ ಸ್ಥಿತಿ ಏನು? ಎಂಬುದನ್ನು ಇಲ್ಲಿ ತಿಳಿಯಿರಿ.

Monthly Horoscope: ಮಾಸಭವಿಷ್ಯ, ಈ ರಾಶಿಯವರಿಗೆ ಆದಾಯದ ಜೊತೆಗೆ ಈ ತಿಂಗಳು ಅನಗತ್ಯ ಒತ್ತಡವೂ ಹೆಚ್ಚಾಗಲಿದೆ
ಪ್ರಾತಿನಿಧಿಕ ಚಿತ್ರImage Credit source: Getty Images
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Digi Tech Desk

Updated on:Jul 04, 2023 | 11:19 AM

ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ ಪ್ರಪಂಚದಾದ್ಯಂತ ಜ್ಯೋತಿಷ್ಯವನ್ನು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಯವರಿಗೆ ಜುಲೈ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಮತ್ತು ಆರೋಗ್ಯ ಸ್ಥಿತಿ ಏನು? ಶುಭ ಅಶುಭ ಇದೆಯೇ? ಇತ್ಯಾದಿ ಮಾಹಿತಿ ಮಾಸಭವಿಷ್ಯ (Monthly Horoscope)ದಲ್ಲಿದೆ.

ಮೇಷ: ಜುಲೈ ತಿಂಗಳು ಮೇಷ ರಾಶಿಗೆ ಮಿಶ್ರ ಫಲ. ಕೇತುವಿನ ದೃಷ್ಟಿ ನಿಮ್ಮ ಮೇಲಿರಲಿದೆ. ದೇಹಕ್ಕೆ ತೊಂದರೆಯಾಗಬಹುದು. ಕೆಲವು ವಸ್ತುಗಳು ಸಂತೋಷವನ್ನೂ ಕೊಡಬಹುದು.‌ ಸೂರ್ಯನು ಮಿಥುನವನ್ನು ತೊರೆದು ಕರ್ಕಟಕಕ್ಕೆ ಹೋಗುವನು. ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುವನು. ವಾಹನವನ್ನು ಖರೀದಿಯ ಆಲೋಚನೆ ಇದ್ದರೆ ಈ ತಿಂಗಳಲ್ಲಿ ಖರೀದಿಸಿರಿ. ಕೆಲವು ಗೌಪ್ಯ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡುವಿರಿ. ಈ ತಿಂಗಳು ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಹೊಸ ಕೆಲಸವನ್ನು ಆರಂಭಿಸುತ್ತಿದ್ದು ಜಾಗರೂಕತೆಯಿಂದ ಕೆಲಸ ಮಾಡಿ. ಅಗತ್ಯ. ವಿವಾದವನ್ನು ತಪ್ಪಿಸಿ ಇಲ್ಲದಿದ್ದರೆ ಗೌರವ ಕಳೆದುಕೊಳ್ಳಬಹುದು. ಈ ತಿಂಗಳು ಮಕ್ಕಳ ಅಜಾಗರೂಕತೆಯಿಂದ ಕಿರಿಕಿರಿ ಉಂಟಾಗುತ್ತದೆ. ಪೋಷಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು. ಯಾವುದೇ ರಾಜಕೀಯ ಕ್ಷೇತ್ರಗಳಿಂದ ಸಂತೋಷ ಬರುತ್ತದೆ.

ವೃಷಭ: ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಇರುತ್ತದೆ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ, ಆದರೆ ಯಾವುದೇ ಒಪ್ಪಂದ ಅಥವಾ ವ್ಯವಹಾರದಲ್ಲಿ ಜಾಗರೂಕತೆ ಮುಖ್ಯ. ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ ಆದರೆ ಶತ್ರುಗಳ ಅಥವಾ ನಿಮ್ಮ ನೋಡಿ ಅಸೂಯೆ ಪಡುವರು. ಹಳೆಯ ಸಹೋದ್ಯೋಗಿಯ ವರ್ತನೆಗಳು ಒತ್ತಡಕ್ಕೆ ಕಾರಣವಾಗಬಹುದು. ಹಳೆಯ ಸಂಬಂಧಗಳು ಸುಧಾರಿಸುತ್ತದೆ. ವ್ಯಾಪಾರ ಸಂಬಂಧಗಳು ಬಲವಾಗಿರುತ್ತವೆ. ಸಂತೋಷದ ಸಾಧನಗಳು ಹೆಚ್ಚಾಗುತ್ತವೆ. ಕುಟುಂಬ ವಿವಾದಗಳನ್ನು ತಪ್ಪಿಸಿ. ಇಲ್ಲದಿದ್ದರೆ ಕಷ್ಟವಾದೀತು. ವ್ಯಾಪಾರಕ್ಕೆ ಸಂಬಂಧಪಟ್ಟ ಪ್ರವಾಸಗಳನ್ನು ಮುಂದೂಡಿ. ವಿರೋಧಿಗಳು ತಲೆ ಎತ್ತುತ್ತಾರೆ ಆದರೆ ಅವರ ಮೋಸದ ಜಾಲದಿಂದ ತಪ್ಪಿಸಿಕೊಳ್ಳುವಿರಿ.

ಮಿಥುನ: ಗುರುಬಲವು ನಿಮಗೆ ಶುಭವನ್ನು ತರುತ್ತದೆ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವಿರಿ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಕೆಲಸದ ಒತ್ತಡ ಹೆಚ್ಚಾಗಿದ್ದು, ಅದನ್ನು ನಿಭಾಯಿಸಲು ಕಷ್ಡಪಡುವಿರಿ. ನಿಮ್ಮ ಪ್ರೀತಿಪಾತ್ರರನ್ನು ಬೆಂಬಲಿಸಿ. ಅವರ ಸಂತೋಷದಲ್ಲಿ ಭಾಗಿಯಾಗಿ. ವೃತ್ತಿಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಲು ಅವಕಾಶಗಳು ಇರಲಿವೆ. ತೃತೀಯದಲ್ಲಿ ಬುಧ, ಕುಜ, ಶುಕ್ರಯೋಗವು ಆಗಲಿದ್ದು ಸಹೋದರನ ಸಹಾಯವು ನಿಮಗೆ ಸಿಗಲಿದೆ. ಚಿಂತನಶೀಲರಾಗಿ ಕೆಲಸ ಮಾಡಿ, ಯಾವುದೇ ಅವಘಡ ಇರುವುದಿಲ್ಲ. ವಿರೋಧಿಗಳನ್ನು ಸೋಲಿಸಲು ಅನೇಕ ವಿಧವಾದ ಪ್ರಯತ್ನವನ್ನು ಮಾಡುವಿರಿ. ಹೆತ್ತವರ ಆರೋಗ್ಯದಲ್ಲಿ ತೊಂದರೆಯಾಗಬಹುದು. ಪೋಷಕರ ಜೊತೆ ಬಾಂಧವ್ಯವು ಮಧುರವಾಗಿ ಇರುತ್ತದೆ.

ಕರ್ಕಾಟಕ: ಜುಲೈ ತಿಂಗಳು ಸಾಮಾನ್ಯ ತಿಂಗಳೆಂದೇ ಹೇಳಬಹುದು. ನಿಮಗೆ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಈ ತಿಂಗಳು ಸಂತೋಷದಿಂದ ಕೂಡಿರುತ್ತದೆ. ವೃತ್ತಿಯ ದೃಷ್ಟಿಯಿಂದ ತಿಂಗಳ ಪ್ರಾರಂಭವು ಉತ್ತಮ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಪರಿಣಾಮವನ್ನು ಹೆಚ್ಚಿಸಲು ನೀವು ಉತ್ಸುಕರಾಗಿರುವಿರಿ. ನಿಮ್ಮ ಆರ್ಥಿಕತೆಯು ಸದೃಢವಾಗಿದ್ದು ಖರ್ಚಿಗಾಗಿ ನೀವು ಹೆದರುವುದಿಲ್ಲ. ಈ ನೀವು ತಿಂಗಳ ಮಧ್ಯದಲ್ಲಿ ಹೆಚ್ಚು ಶ್ರಮವಹಿಸಿದರೂ ಕಡಿಮೆ ಲಾಭವನ್ನು ಪಡೆಯುವಿರಿ. ಇದು ನಿಮಗೆ ಉತ್ಸಾಹವನ್ನು ಸ್ವಲ್ಪ ಕುಗ್ಗಿಸುವುದು.‌ ಕೆಲವು ಅಡೆತಡೆಗಳು ನಿಮಗೆ ಜೀವವೇ ಸಾಕೆನಿಸುವಷ್ಟರ ಮಟ್ಟಿಗೆ ಮಾಡುತ್ತವೆ. ಇವುಗಳಿಗೆ ವಿಚಲಿತರಾಗದೇ ಮುನ್ನಡೆದರೆ ಉತ್ತಮ ಮಾರ್ಗವು ಸಿಗುವುದು. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯು ಇರಲಿದೆ. ಹಿರಿಯರ ಸಲಹೆಯ ಮೇರೆಗೆ ನೀವು ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದುವಿರಿ.

ಸಿಂಹ: ಜುಲೈ ಮಾಸದಲ್ಲಿ ನೀವು ಜೀವನವನ್ನು ಬಹಳ ಉತ್ಸಾಹದಿಂದ ಮತ್ತು ಸಂತೋಷದಿಂದ ಕಳೆಯುವಿರಿ. ಈ ಸಮಯವು ಪ್ರೀತಿಯ ವ್ಯವಹಾರಗಳಿಗೆ ಒಳ್ಳೆಯದಲ್ಲ. ಹೆಚ್ಚು ಯೋಚಿಸುವುದು ಹಾನಿಕಾರಕವಾಗಿದೆ. ಆದ್ದರಿಂದ ಯಾವುದೇ ವಿಷಯಗಳ ಕುರಿತು ಹೆಚ್ಚು ಯೋಚಿಸದಿರಿ. ಹಠಾತ್ ಪ್ರವಾಸದ ಸಾಧ್ಯತೆಯೂ ಇರಬಹುದು. ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಈ ತಿಂಗಳು ನಿಮ್ಮ ಜೀವನದ ಮಹತ್ವದ ತಿರುವು ಆಗಲಿದೆ. ಇತರರ ಜೊತೆ ಮಧುರವಾದ ಮಾತು ವ್ಯವಹಾರಗಳನ್ನು ಬೆಳೆಸಿಕೊಳ್ಳಿ. ಅನೇಕ ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು.‌ ಆಧ್ಯಾತ್ಮಿಕ ಪ್ರವೃತ್ತಿ ಹೆಚ್ಚಾಗುತ್ತದೆ. ಅವಿವಾಹಿತ ಜನರ ಮದುವೆ ಪ್ರಸ್ತಾಪವು ಬಲಗೊಳ್ಳುತ್ತದೆ. ನಿಮ್ಮ ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳಿ. ಸ್ನೇಹಿತರಿಗೆ ಸಂಬಂಧಿಸಿದ ಸುದ್ದಿ ಸಂತೋಷವನ್ನು ನೀಡುತ್ತದೆ.

ಕನ್ಯಾ: ಈ ತಿಂಗಳು ನಿಮ್ಮ ಆತ್ಮವಿಶ್ವಾಸವು ಅಧಿಕವಾಗಿ ಇರುವುದು. ಯಶಸ್ಸು ನಿಮ್ಮ ನಿಖರವಾದ ಮೌಲ್ಯಮಾಪನಕ್ಕೆ ಸಾಕ್ಷಿಯಾಗಿದೆ. ಗೌರವವು ಸಿಗುತ್ತದೆ. ಈ ಸಮಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯದತ್ತ ಇರುವ ನಿರ್ಲಕ್ಷ್ಯವನ್ನು ತಪ್ಪಿಸಿ. ಪ್ರೇಮ ಸಂಬಂಧಕ್ಕೆ ಸಮಯ ಉತ್ತಮವಾಗಿದೆ. ನಿಮ್ಮ ಸೃಜನಶೀಲತೆ ಹೆಚ್ಚಾಗಿ ವೃತ್ತಿಯಲ್ಲಿ ಉತ್ತಮ‌ಸ್ಥಾನವನ್ನು ಗಳಿಸುವಿರಿ. ನಿಮ್ಮ ಆಲೋಚನೆಗಳಿಗೆ ಮೆಚ್ಚುಗೆ ಸಿಗಬಹುದು. ಕುಟುಂಬದ ಸಂತೋಷ ಹೆಚ್ಚಾಗುತ್ತದೆ. ಈ ತಿಂಗಳು, ನಿಮ್ಮ ಸ್ವಂತ ಹಿತೈಷಿಗಳು ಯಾರೆಂದು ನೀವು ಸರಿಯಾಗಿ ಗುರುತಿಸುವಿರಿ. ಅನೇಕ ಪ್ರಭಾವಿಗಳು ನಿಮ್ಮೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಚಿಂತನೆಯೊಂದಿಗೆ ಹೊಸ ಉದ್ಯಮ ಅಥವಾ ಉದ್ಯಮವನ್ನು ಪ್ರಾರಂಭಿಸಿ. ಇತರರೊಂದಿಗೆ ವ್ಯವಹರಿಸುವಾಗ ಮಾತಿನ ಮೇಲೆ ನಿಯಂತ್ರಿಣವಿರಲಿ.

ತುಲಾ: ಈ ತಿಂಗಳು ಹೆಚ್ಚಿನ ಸಮೃದ್ಧಿಯು ಇರಲಿದೆ. ದೈಹಿಕ ಆನಂದವು ಹೆಚ್ಚಾಗುತ್ತದೆ. ಖ್ಯಾತಿ ಹೆಚ್ಚಾಗುತ್ತದೆ. ಆದರೆ ನಿಮ್ಮ ಹತ್ತಿರದಲ್ಲಿರುವವರೇ ನಿಮ್ಮ ಬಗ್ಗೆ ಬೆರಳು ತೋರಿಸಿ ಮಾತನಾಡುತ್ತಾರೆ. ವೃತ್ತಿಜೀವನದಲ್ಲಿ ಗೌರವ ಸಿಗಲಿದೆ. ಆದಾಯವೂ ಉತ್ತಮವಾಗಿದೆ. ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಹೂಡಿಕೆಯಿಂದ ಧನ ಲಾಭವಾಗಲಿದೆ. ಪ್ರಯತ್ನಗಳು ಹೊಸ ಬಣ್ಣವನ್ನು ಪಡೆದುಕೊಳ್ಳಬಹುದು. ನೀವು ತಾಯಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮನಸ್ಸಿನಲ್ಲಿ ತೃಪ್ತಿ ಇರುತ್ತದೆ. ಸಂಪತ್ತು ಮತ್ತು ಸೌಂದರ್ಯ ಹೆಚ್ಚಾಗುತ್ತದೆ. ತಿಂಗಳ ಮಧ್ಯದಲ್ಲಿ ಶುಭವಾಗಲಿದೆ. ಸಮಯದ ಲಾಭವನ್ನು ಪಡೆದುಕೊಳ್ಳಿ. ಆಕಸ್ಮಿಕ ಹಣವನ್ನು ಪಡೆಯಬಹುದು. ಅಪಾಯಕಾರಿ ಹೂಡಿಕೆಯು ಪ್ರಯೋಜನ ಪಡೆಯುತ್ತದೆ. ನಿಮ್ಮ ವಿರುದ್ಧ ಲಿಂಗದ ಸಹೋದ್ಯೋಗಿಯಿಂದ ಒತ್ತಡ ಬರಬಹುದು.

ವೃಶ್ಚಿಕ: ಈ ತಿಂಗಳು ನಿಮಗಾಗಿ ಮಿಶ್ರ ಫಲವನ್ನು ನೀಡುತ್ತದೆ. ಭೂಮಿಗೆ ಸಂಬಂಧಿಸಿದ ಕೆಲಸದಲ್ಲಿ ಲಾಭ ದೊರೆಯುತ್ತದೆ. ತಜ್ಞರ ಸಲಹೆಯು ಪ್ರಯೋಜನಕಾರಿಯಾಗಿದೆ. ಕಠಿಣ ಪರಿಶ್ರಮಕ್ಕಿಂತ ಕಡಿಮೆ ಲಾಭ ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ನೀವು ಯಾವುದಾದರೂ ವಿಷಯದಲ್ಲಿ ಸಂದಿಗ್ಧತೆಗೆ ಒಳಗಾಗಬಹುದು. ವೃತ್ತಿಜೀವನದಲ್ಲಿ ಸಹೋದ್ಯೋಗಿಗಳ ಸಹಕಾರವನ್ನು ನೀಡಲಿದ್ದಾರೆ. ಮಾನಸಿಕ ಚುರುಕುತನ ಹೆಚ್ಚಾಗುತ್ತದೆ. ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ. ತಿಂಗಳು ನೀವು ಅಂದಾಜಿನ ಹೂಡಿಕೆಯನ್ನು ತಪ್ಪಿಸುವುದು ಉತ್ತಮ, ಇಲ್ಲದಿದ್ದರೆ ನಷ್ಟ ಸಾಧ್ಯ. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಕೋಪ ಮತ್ತು ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ.‌ ಯಾರನ್ನೂ ಹೆಚ್ಚು ನಂಬಬೇಡಿ.

ಧನು: ಈ ತಿಂಗಳು ನಿಮಗೆ ಉತ್ತಮವಾಗಿದೆ. ಗುರು ನಿಮ್ಮ ರಾಶಿಚಕ್ರದ ಅಧಿಪತಿಯಾದ್ದರಿಂದ ಅವನ ಶುಭ ದೃಷ್ಟಿಯು ನಿಮಗೆ ಲಾಭವನ್ನು ಕೊಡುತ್ತವೆ. ಉತ್ತಮ ಕರ್ಮಗಳನ್ನು ಸಂಪಾದಿಸಲಾಗುವುದು. ಸಂತೋಷ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಸಮಯ ಅತ್ಯುತ್ತಮವಾಗಿದೆ. ಸರ್ಕಾರಿ ಅಧಿಕಾರಿಗಳ ಜೊತೆ ಸಂಬಂಧ ಬಲಗೊಳ್ಳುವುದು. ಕಾರ್ಯ ಕ್ಷೇತ್ರದಲ್ಲಿ ಕೆಲವು ಉದ್ವೇಗ ಕಾಣಿಸಿಕೊಳ್ಳುತ್ತದೆ.‌ ಆದರೆ ಆಂತರಿಕ ಸಾಮರ್ಥ್ಯದೊಂದಿಗೆ ನೀವು ಪ್ರತಿಕೂಲ ಸಂದರ್ಭಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ನೀವು ಉತ್ತಮ ಕುಟುಂಬ ಸಂತೋಷವನ್ನು ಪಡೆಯುತ್ತೀರಿ. ತಾತ್ವಿಕ ವಿಚಾರಗಳು ಕಾಣಿಸಿಕೊಳ್ಳುತ್ತವೆ. ನಿಗೂಢ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮಿಂದ ಸ್ನೇಹಿತರು ಪ್ರಯೋಜನ ಪಡೆಯುತ್ತಾರೆ. ವೃತ್ತಿಜೀವನವು ಜೇಬಿನಲ್ಲಿ ಹಣವನ್ನು ಸುರಿಸುತ್ತದೆ. ಮಹತ್ವಾಕಾಂಕ್ಷೆಗಳು ಈಡೇರುವ ಸಮಯ ಇದಾಗಿದೆ. ಸಂಬಂಧಿಕರ ಯಶಸ್ಸು ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ.

ಮಕರ: ತಿಂಗಳ ಆರಂಭದಲ್ಲಿ, ಆರ್ಥಿಕ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಬುಧನ ದೃಷ್ಟಿಯು ರಾಜಕೀಯ ಪ್ರಭಾವವನ್ನು ಹೆಚ್ಚಿಸುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಇರುತ್ತದೆ. ಸಣ್ಣ ತೊಂದರೆ ಬರುತ್ತದೆ. ಅದು ಕೂಡ ಬೇಗನೆ ನಿವಾರಣೆಯಾಗುತ್ತದೆ. ನಿಮ್ಮ ಖ್ಯಾತಿಗೆ ಒಂದು ಅನನ್ಯ ಕಲ್ಪನೆಯು ನೆರವಾಗುವುದು. ಯಾರಿಂದಲೋ ಪಡೆದ ಮೆಚ್ಚುಗೆಯು ಸಂತೋಷವನ್ನು ತರುತ್ತದೆ. ಕುಟುಂಬ ಸದಸ್ಯರ ನಿರೀಕ್ಷೆಗಳು ಹೆಚ್ಚಾಗುತ್ತವೆ, ಆದರೆ ಪ್ರೀತಿಪಾತ್ರರ ವರ್ತನೆಯು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಪಾಯಗಳನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು. ಇಲ್ಲದಿದ್ದರೆ ನೀವು ಅವುಗಳ ದುಷ್ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪೋಷಕರ ಆರೋಗ್ಯದಲ್ಲಿ ತೊಂದರೆಯಾಗುವ ಸಾಧ್ಯತೆಗಳಿವೆ. ವ್ಯಾಪಾರ ಹೆಚ್ಚಾಗುತ್ತದೆ. ವೃತ್ತಿಜೀವನವೇ ನಿಮ್ಮ ಮೊದಲ ಆದ್ಯತೆಯಾಗಿರಬೇಕು. ಅಲ್ಪಾವಧಿಯ ಹೂಡಿಕೆಯನ್ನು ತಪ್ಪಿಸಿ. ಸಹೋದರನ ಕುಟುಂಬದಲ್ಲಿ ಒತ್ತಡ ಸೃಷ್ಟಿಯಾಗಬಹುದು.

ಕುಂಭ: ಈ ತಿಂಗಳು ಸಾಮಾನ್ಯವಾಗಿ ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ. ಪ್ರತಿಯೊಂದು ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಮನೋಭಾವ ಬಲಗೊಳ್ಳುತ್ತದೆ. ಹೊಸ ಉದ್ಯಮಗಳಿಗೆ ಸೇರಲು ಅವಕಾಶವಿರುತ್ತದೆ. ಹೊಸ ವ್ಯವಹಾರದಿಂದ ಲಾಭದ ಲಕ್ಷಣಗಳಿವೆ. ಆರೋಗ್ಯ ಮತ್ತು ಜೀವನದ ಬಗ್ಗೆ ಇದ್ದ ಅನಗತ್ಯ ಸುಳ್ಳು ಆಲೋಚನೆಗಳು ಬಹಿರಂಗಗೊಳ್ಳುತ್ತವೆ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಂಚಾರ ಮಾಧ್ಯಮಗಳಲ್ಲಿ ಸಂಪರ್ಕ ಹೊಂದಿದ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವಿರೋಧಿಗಳು ಮೊದಲು ಕಿರುಕುಳ ನೀಡಲು ಆರಂಭಿಸುತ್ತಾರೆ. ಅನಂತರ ಅವರು ನಿಮ್ಮ ಕೀರ್ತಿಯನ್ನು ಕಂಡು ದಿಗ್ಭ್ರಾಂತರಾಗುವರು ಸಮೀಪವರ್ತಿಗಳ ಸಹಾಯದಿಂದ, ಯಶಸ್ಸಿನ ಹಾದಿ ಕಂಡುಬರುತ್ತದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದ – ವಿವಾದಗಳನ್ನು ತಪ್ಪಿಸಿ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹಾದಿ ಕಾಣಲಿದೆ. ಹೊಸ ಸಂಪರ್ಕಗಳು ಪ್ರಯೋಜನವನ್ನು ನೀಡುತ್ತದೆ. ಸಾಹಿತ್ಯದಲ್ಲಿ ಆಸಕ್ತಿ ಇರುತ್ತದೆ.

ಮೀನ: ಈ ತಿಂಗಳು ಗ್ರಹಗತಿಗಳ ಪರಿಣಾಮವಾಗಿ ಧೈರ್ಯ ಮತ್ತು ಉಗ್ರತೆಯಿಂದ ಹೆಚ್ಚಾಗುತ್ತದೆ.‌ ಆದ್ದರಿಂದ ನಿಮ್ಮನ್ನು ನಿಯಂತ್ರಿಸಲು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಿ. ಆದಾಯದ ಜೊತೆಗೆ ಈ ತಿಂಗಳು ಅನಗತ್ಯ ಒತ್ತಡವೂ ಹೆಚ್ಚಾಗುತ್ತದೆ. ಯಾರೊಬ್ಬರ ಮಾತುಗಳು ಮನಸ್ಸನ್ನು ನೋಯಿಸಬಹುದು. ಜನರ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡಿ. ನೀವು ಉತ್ತಮ ನಡವಳಿಕೆಯನ್ನು ಇಟ್ಟುಕೊಂಡರೆ, ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಶತ್ರುಗಳನ್ನು ಸೋಲಿಸಲಾಗುತ್ತದೆ. ಓದುವಿಕೆ, ಬರವಣಿಗೆ ಮತ್ತು ಕವನ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನೀವು ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಇದು ನಿಮಗೆ ಸಂತೋಷ ನೀಡುತ್ತದೆ. ವೃತ್ತಿಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಲಿದೆ. ಅನೇಕ ಸಂಕೀರ್ಣ ಕಾರ್ಯಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಲಾಗುವುದು. ನೀವು ಪ್ರಯತ್ನಿಸುವ ಎಲ್ಲ ಪ್ರದೇಶಗಳಿಂದಲೂ ನಿಮಗೆ ಲಾಭ ಸಿಗುತ್ತದೆ. ವೈವಾಹಿಕ ಜೀವನವು ಸಾಮಾನ್ಯವಾಗಿರುತ್ತದೆ, ಆದರೆ ನಿಮ್ಮ ಮನೋಧರ್ಮವು ನಿಮ್ಮ ಸಂಗಾತಿಯ ಕೋಪ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ.

-ಲೋಹಿತಶರ್ಮಾ (ವಾಟ್ಸ್​ಆ್ಯಪ್-8762924271)

Published On - 12:05 am, Sun, 2 July 23

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್