Horoscope 02 Nov: ದಿನಭವಿಷ್ಯ, ಪೂರ್ವಾಪರ ಯೋಚನೆ ಮಾಡದೇ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 02 Nov: ದಿನಭವಿಷ್ಯ, ಪೂರ್ವಾಪರ ಯೋಚನೆ ಮಾಡದೇ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:43 ರಿಂದ 03:10 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:29 ರಿಂದ 07:56 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:49ರ ವರೆಗೆ.

ಮೇಷ ರಾಶಿ: ತಾಯಿ ಮಾತಿನಿಂದ ನಿಮಗೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರಬಹುದು.‌ ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ನಿಮ್ಮ‌ ಬಳಿಯ‌ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ವಿದ್ವಾಂಸರ ಭೇಟಿಯು ಅಕಸ್ಮಾತ್ ಆಗಿ ಆಗುವುದು.

ವೃಷಭ ರಾಶಿ: ನಿಮ್ಮ ಯೋಜನೆಯು ಸಕಾರವಾಗದೇ ಇರುವುದು ನಿಮಗೆ ಕಷ್ಟವಾಗಬಹುದು. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ‌ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು. ಕೆಲವು ಸಂಬಂಧಗಳು‌ ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು. ವ್ಯಾಪಾರದಲ್ಲಿ ನಿಮ್ಮ ತಂತ್ರವು ಫಲಿಸಿದ್ದು ಖುಷಿಯಾದೀತು.

ಮಿಥುನ ರಾಶಿ: ಅಗ್ನಿಯ ಭೀತಿಯು ಇರಲಿದೆ. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ‌ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ.‌ ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು. ಪ್ರಾಮಾಣಿಕತೆಯಿಂದ‌ ನಿಮಗೇ ಕಷ್ಟವಾಗುವುದು. ಎಲ್ಲವನ್ನೂ ನೀವೇ ನಿಭಾಯಿಸಬೇಕಾದೀತು.

ಕಟಕ ರಾಶಿ: ಕುಟುಂಬದ ಸಹಿತವಾಗಿ ನೀವು ಬಂಧುಗಳ‌ ಮನೆಗೆ ಹೋಗುವಿರಿ. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ‌ ಕೆಲಸ ಮಾಡುವಿರಿ. ದೂರ ಬಂಧುಗಳ‌ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು.‌ ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ‌ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ‌ ದ್ವಂದ್ವಗಳು ಇರಬಹುದು. ವಿದ್ಯಾರ್ಥಿಗಳು ಅನಾರೋಗ್ಯದ ಕಾರಣಕ್ಕೆ ಓದಿನ ಬಗ್ಗೆ ಗಮನ ಕೊಡುವುದು ಕಷ್ಟವಾದೀತು.

ಸಿಂಹ ರಾಶಿ: ವ್ಯಾಪಾರದಲ್ಲಿ ಸ್ಪರ್ಧೆಗಳು ಶುರುವಾಗಿ ನಿಮಗೆ ಆದಾಯ ನಷ್ಟವಾಗಬಹುದು.‌ ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ.‌ ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು. ನಿಮ್ಮ ಮಾನಸಿಕ ಅಸಮಾಧಾನಕ್ಕೆ ದೈವದ ಮೊರೆ ಹೋಗುವುದು ಒಳಿತು. ಆಸ್ತಿಯನ್ನು ಉಳಿಸಿಕೊಳ್ಳುವುದೇ ತಲೆನೋವಾಗಬಹುದು. ಮನೆಯಿಂದ ದೂರವಿದ್ದವರು ಹತ್ತಿರವಾಗಬೇಕು ಎನಿಸಬಹುದು. ಕುಲದೇವರ ಆರಾಧನೆಯಲ್ಲಿ ತೊಡಗುವಿರಿ.

ಕನ್ಯಾ ರಾಶಿ: ಹಲವರ ಒತ್ತಡದ ಕಾರಣ ನೂತನ ಗೃಹನಿರ್ಮಾಣವನ್ನು ಆರಂಭಿಸುವಿರಿ. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಮಾಡಬೇಕಾಗಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ವಾತ‌ದೋಷದಿಂದ ನಿಮಗೆ ಕಷ್ಟವಾಗುವುದು. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಮಕ್ಕಳಿಂದ‌ ನಿಮಗೆ ಪ್ರೀತಿಯಿಂದ ಉಡುಗೊರೆ ಕೊಡುವರು. ಅಧ್ಯಾತ್ಮದಲ್ಲಿ ಮನಸ್ಸು ಹೆಚ್ಚಿರುವುದು. ವಿವಾಹವನ್ನು ತಿರಸ್ಕರಿಸುವಿರಿ.

ತುಲಾ ರಾಶಿ: ನಿಮ್ಮ ಅಂದುಕೊಂಡ ಕಾರ್ಯವು ವೇಗವನ್ನು ಪಡೆಯದೇ ಇರಲು ಹಿತಶತ್ರುಗಳೇ ಕಾರಣವಾಗುವರು. ನಿಮ್ಮನ್ನು ಎದುರಗೆ ಹೊಗಳುವರು. ಅಜಾಗರೂಕತೆಯಿಂದ‌ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಯಾರದೋ ಕಾರ್ಯಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ಆರ್ಥಿಕತೆಯನ್ನು ಬಲಗೊಳಿಸಲು ಅನ್ಯ ಉದ್ಯೋಗವನ್ನು ಮಾಡಬೇಕಾಗಬಹುದು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳುವಿರಿ. ಕಲಾವಿದರಿಗೆ ಉತ್ಸಾಹವು ಕಡಿಮೆ‌ ಇರುವುದು.

ವೃಶ್ಚಿಕ ರಾಶಿ: ಹಿರಿಯರ ಮಾತಿನಂತೆ ಇಂದು ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಾಮಾಜಿಕ‌ ಗೌರವವನ್ನು ಪಡೆಯಲು ಆಸೆ ಇರುವುದು. ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ವಾಹನದಿಂದ ನಿಮಗೆ ಆದಾಯ ಸಿಗುವುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗಬಹುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ‌. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು.‌ ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮ್ಮನ್ನು ಸ್ತಬ್ಧಗೊಳಿಸಬಹುದು. ಆದಾಯ ಹೆಚ್ಚಾಗಲಿ ದೇವರನ್ನೊಂದೇ ಪ್ರಾರ್ಥಿಸಿದರೆ ಸಾಲದು, ಪುರುಷಪ್ರಯತ್ನವೂ ಬೇಕು.

ಧನು ರಾಶಿ: ಇಂದು ನಿಮ್ಮ ಶ್ರಮಕ್ಕೆ ಯೋಗ್ಯವಾದ ಫಲದ ನಿರೀಕ್ಷೆಯಲ್ಲಿ ಇರಬಹುದು. ಹೂಡಿಕೆಯಿಂದ ಸ್ವಲ್ಪ ನಷ್ಟವಾದಂತೆ ಕಾಣಬಹುದು. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ಬಹಳ ಕಾಲದಿಂದ ಮುಗಿಯದ ಕೆಲಸವನ್ನು ಇಂದು ಒಂದು ಹಂತಕ್ಕೆ ತರುವಿರಿ. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ.

ಮಕರ ರಾಶಿ: ನೂತನ ವಸ್ತುಗಳ ಮೇಲೆ‌ ನಿಮಗೆ ಪ್ರೀತಿ ಹೆಚ್ಚಿರುವುದು. ವಿದೇಶದಲ್ಲಿ ಓದುವ ಆಸೆಯು ನಿಮ್ಮೊಳಗೆ ಆರಂಭವಾಗುವುದು. ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಉತ್ತಮ ವಿಶ್ವಾಸಿಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ‌ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ‌ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ. ಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಸಂತೋಷಪಡಬಹುದು. ಯೋಜನೆಯನ್ನು ಯಾರಿಗೂ ಹೇಳದೇ ನಿಮ್ಮಷ್ಟಕ್ಕೇ ಮಾಡಿ.

ಕುಂಭ ರಾಶಿ: ವಾಹನ ಖರೀದಿಗೆ ಮಿತ್ರರಿಂದ ಸರಿಯಾದ ಸಲಹೆ ಸಿಗಬಹುದು. ಮನೆಯ ದುರಸ್ತಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶಪ್ರಯಾಣವನ್ನು ಮಾಡಬೇಕಾಗಬಹುದು. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದೇ ಆಡಿದ ನಿಮ್ಮ ಮಾತುಗಳಿಂದ ಕಲಹವಾಗಬಹುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳು ಸಿಗುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರ ಉಪಯೋಗಕ್ಕೆ ದಾನವಾಗಿ ನೀಡುವಿರಿ.

ಮೀನ ರಾಶಿ: ಸ್ನೇಹಸಂಬಂಧ ಗಟ್ಟಿಮಾಡಿಕೊಳ್ಳಲು ಇಷ್ಟವಾಗುವುದು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ಉದ್ಯೋಗದಲ್ಲಿನ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡಬಹುದು. ಮೊದಲೇ ಸಮಯವನ್ನು ಸರಿಯಾಗಿ ನಿರ್ಧರಿಸಿಕೊಂಡು ಕಾರ್ಯವನ್ನು ಆರಂಭಿಸಿದರೆ ಸಕಾಲಕ್ಕೆ ಮುಗಿಯುವುದು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಖರ್ಚು ಬಂದರೆ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ಸಂಕೀರ್ಣ ವಿಚಾರವನ್ನು ನ್ಯಾಯಾಲಯವೇ ಬಗೆಹರಿಸೀತು.

ಲೋಹಿತಶರ್ಮಾ 8762924271 (what’s app only)