ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ:ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:46 ರಿಂದ 09:23 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:52 ರಿಂದ 12:37 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:50 ರ ವರೆಗೆ.
ಮೇಷ: ಇಂದಿನ ನಿಮ್ಮ ಪ್ರಯಾಣ ವ್ಯರ್ಥವಾಗಬಹುದು. ಅನಿರೀಕ್ಷಿತವಾಗಿ ಆರ್ಥಿಕ ನಷ್ಟವಾಗಬಹುದು. ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ. ಹೊಸ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಸ್ನೇಹಿತರು ನಿಮ್ಮಿಂದ ದೂರಾಗಬಹುದು. ನಿಮ್ಮ ಮಾತನ್ನು ಧಿಕ್ಕರಿಸುವರು. ಸಂಗಾತಿಯ ಜೊತೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತ ದಿನವನ್ನು ಕಳೆಯುವಿರಿ. ನಿಮ್ಮೆದುರು ಆಗುವ ಎಲ್ಲ ಘಟನೆಗಳನ್ನು ಸಮಾಧಾನ ಚಿತ್ತದಿಂದ ಗಮನಿಸಿ. ದೈವದಲ್ಲಿ ಹೆಚ್ಚು ವಿಶ್ವಾಸವಿಟ್ಟು ಮುಂದೆ ಹೆಜ್ಜೆ ಇಡಿ.
ವೃಷಭ: ಒಂದುಷ್ಟು ಶಿಸ್ತಿನಿಂದ ನೀವು ಇರಬೇಕಾದೀತು. ನಿಮ್ಮ ಗಂಭೀರವಾದ ನಡೆಯು ಕೆಲವರಿಗೆ ಕಷ್ಟವಾಗಬಹುದು. ದೂರ ಬಂಧುಗಳು ನಿಮ್ಮನ್ನು ಭೇಟಿಯಾಗಲು ಬರುವರು. ನಿಮ್ಮ ಮಾತಿನಿಂದ ಸಂತೋಷಪಡುವರು. ಆಹಾರದ ಅಭಾವದಿಂದ ನಿಮಗೆ ತೊಂದರೆಯಾದೀತು. ಪುಣ್ಯಸ್ಥಳಗಳಿಗೆ ಹೋಗುವಿರಿ. ಉತ್ತಮ ಉದ್ಯೋಗವನ್ನು ಬಿಟ್ಟುಕೊಳ್ಳುವಿರಿ. ಯಾರ ಮಾತಿಗೂ ಗೌರವವನ್ನು ಕೊಡದೇ ನಿಮ್ಮದೇ ಚಿಂತನೆಯಲ್ಲಿ ಇರುವಿರಿ. ಸ್ವಭಾವವನ್ನು ಬದಲಿಸಿಕೊಳ್ಳಬೇಕಾದೀತು. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು.
ಮಿಥುನ: ಕಛೇರಿಯಲ್ಲಿ ನಿಮ್ಮ ಸಾಮರ್ಥ್ಯವು ಅರ್ಥವಾಗುವುದು. ಎಲ್ಲರಂತೆ ಬದುಕಬೇಕು ಎಂಬ ಆಸೆ ಇದ್ದರೂ ಆರ್ಥಿಕವಾಗಿ ಬಲವಾಗಲು ಕಷ್ಟವಾದೀತು. ಹಳೆಯ ಘಟನೆಗಳು ಮರೆತುಹೋಗುವ ಸಾಧ್ಯತೆ ಇದೆ. ನೀವು ಹೆಚ್ಚಿನ ಮಾರ್ಗದರ್ಶನವನ್ನು ಹಿರಿಯರಿಂದ ಬಯಸುವಿರಿ. ಉನ್ನತ ಹುದ್ದೆಯನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಿರಿ. ಕಳೆದುಹೋದುದರ ಬಗ್ಗೆ ಬಹಳ ಚಿಂತನೆಯನ್ನು ಮಾಡುವಿರಿ. ಸಂಗಾತಿಯ ಕಡೆಯಿಂದ ಪ್ರೀತಿಯು ಸಿಗಲಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಚ್ಛಿಸುವುದಿಲ್ಲ. ನಿಮ್ಮ ಸಂದರ್ಭೋಚಿತ ಸಲಹೆಯನ್ನು ಸ್ವೀಕರಿಸುವರು.
ಕಟಕ: ನಿಮ್ಮ ಸ್ನೇಹಿತರ ಬಳಗ ದೊಡ್ಡದಿದ್ದು ಎಲ್ಲರಿಗೂ ಸಂತೋಷವನ್ನು ಕೊಡುವಿರಿ. ಅಪರಿಚಿತ ಊರಿಗೆ ಹೋಗಿ ಸ್ವಲ್ಪ ಕಷ್ಟವಾದೀತು. ಮನೆಯಿಂದ ಅಶುಭವಾರ್ತೆಯು ಬರಬಹುದು. ಮನಸ್ಸನ್ನು ಗಟ್ಟಿಮಾಡಿಕೊಳ್ಳಿ. ಜ್ವರದಿಂದ ಬಳಲುವಿರಿ. ಪ್ರಯಾಣದ ಆಯಾಸವು ನಿಮಗೆ ಕಾರ್ಯದಲ್ಲಿ ನಿರಾಸಕ್ತಿ ಇರಲಿದೆ. ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಳ್ಳಬೇಡಿ. ಮಕ್ಕಳು ನಿಮ್ಮ ಬಳಿ ಏನನ್ನಾದರೂ ಹೇಳಿಕೊಳ್ಳಲು ಬಯಸಬಹುದು. ಅದನ್ನು ಆಲಿಸಿ. ವಿದೇಶದಿಂದ ಸ್ವದೇಶಕ್ಕೆ ಬರಲು ಇಚ್ಛಿಸುವಿರಿ. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ.
ಸಿಂಹ: ನಿಮ್ಮ ಸಂಕಟವನ್ನು ಪರಿಹರಿಸಿಕೊಳ್ಳಲು ದೈವದ ಮೊರೆ ಹೊಗುವಿರಿ. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಯಶಸ್ಸು ಕುಂಟಿತವಾಗಲಿದೆ. ಸುಳ್ಳನ್ನು ಹೇಳಿ ಸತ್ಯವನ್ನು ಮುಚ್ಚಿಡುವಿರಿ. ನೋವಾಗುವಂತೆ ನೀವು ಮಾತನಾಡುವಿರಿ. ನಿಮ್ಮ ಅತಿಯಾದ ಮಾತು ಇನ್ನೊಬ್ಬರಿಗೆ ಕಿರಿಕಿರಿಯನ್ನು ಉಂಟುಮಾಡೀತು. ಯಾರ ಸಲಹೆಯನ್ನೂ ಕೇಳದೇ ಹೂಡಿಕೆ ಮಾಡುವಿರಿ. ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಂಡು ಬೇಸರವಾಗಲಿದೆ. ದಾಂಪತ್ಯದಲ್ಲಿ ಕೆಲವು ಜೀರ್ಣವಾಗದ ಮಾತುಗಳನ್ನು ಕೇಳುವಿರಿ.
ಕನ್ಯಾ: ನಿಮ್ಮಿಂದ ಆಗದ ಕೆಲಸವನ್ನು ಮತ್ತೆ ಮತ್ತೆ ಮಾಡಲು ಹೋಗಿ ಅಪಮಾನಕ್ಕೆ ಒಳಗಾಗಬೇಡಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಇಷ್ಟಪಡಲು ನೀವು ಕಾರಣವನ್ನು ಹುಡುಕುವಿರಿ. ಏಕಾಗ್ರತೆಯಿಂದ ಇರಲು ನಿಮಗೆ ಕಷ್ಟವಾದೀತು. ಕೆಲಸಕ್ಕಾಗಿ ಬಹಳ ಸಮಯ ಕಾಯಬೇಕಾಗಬಹುದು. ಅದರೂ ಇಂದೇ ಆಗುತ್ತದೆ ಎಂಬ ನಿರೀಕ್ಷೆ ಬೇಡ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವಿರಿ. ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಬಹುದು. ಬಹಳ ದಿನಗಳ ಅನಂತರ ಸಹೋದರನ ಜೊತೆ ಕೆಲವು ಸಮಯವನ್ನು ಕಳೆಯುವಿರಿ.
ತುಲಾ: ಆರ್ಥಿಕವಾದ ನಷ್ಟವನ್ನು ಸರಿಮಾಡಿಕೊಳ್ಳಲು ನೀವು ಉದ್ಯೋಗವನ್ನು ಬದಲಿಸುವಿರಿ. ವಾದದಲ್ಲಿ ನೀವು ಸೋಲುವ ಸಾಧ್ಯತೆ ಇದ್ದು, ಗೆಲ್ಲಲು ನಿಮ್ಮ ಪರಿಶ್ರಮವು ಅಧಿಕವಾಗಲಿದೆ. ನಿಮ್ಮ ಪ್ರಯಾಣವನ್ನು ಮುಂದೂಡುವಿರಿ. ಇನ್ನೊಬ್ಬರ ಸಮಸ್ಯೆಯನ್ನು ಮಧ್ಯಸ್ತಿಕೆಯಿಂದ ಪರಿಹರಿಸುವಿರಿ. ನಿಮ್ಮನ್ನು ಪೂರ್ವಪುಣ್ಯವು ಕಾಪಾಡುವುದು. ಸದ್ಯಕ್ಕೆ ಸಿಕ್ಕ ಉದ್ಯೋಗವನ್ನು ಅಚ್ಚುಕಟ್ಟಾಗಿ ಮಾಡಿರಿ. ಸರ್ಕಾರಿ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ಸರ್ಕಾರಿ ಶಿಕ್ಷಕರು ಭಡ್ತಿಯನ್ನು ಪಡೆಯುವರು.
ವೃಶ್ಚಿಕ: ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ವತಂತ್ರನಿರ್ಧಾರವನ್ನು ತೆಗೆದುಕೊಳ್ಳದೇ ಉದ್ಯೋಗಿಗಳ ಅಭಿಪ್ರಾಯವನ್ನೂ ಕಲೆಹಾಕಿ ಅಂತಿಮನಿರ್ಧಾರಕ್ಕೆ ಬರುವುದು ಉತ್ತಮ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗಂತೆ ಸರಿ ಮಾಡಿಕೊಳ್ಳಬೇಕಾಗಬಹುದು. ಆಕಸ್ಮಿಕ ವಾರ್ತೆಯು ನಿಮಗೆ ಆಚ್ಚರಿಯನ್ನು ತಂದೀತು. ವಿದೇಶಿ ಕಂಪನೆಯಲ್ಲಿ ನೀವು ಕೆಲಸಕ್ಕೆ ಸೇರುವಿರಿ. ಹೊಟ್ಟೆಯ ನೋವಿನಿಂದ ನೀವು ಬಳಲಬಹುದು. ಸಮಸ್ಯೆಗಳು ಬರುವ ಮೊದಲೇ ನೀವು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮ್ಮ ಪ್ರಯಾಣವು ತೊಂದರೆಯಿಂದ ಕೂಡಿರಲಿದೆ.
ಧನು: ಲೆಕ್ಕ ಪರಿಶೋಧಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಸಂಗಾತಿಯ ಮನೋಭಾವವನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಾಗದು. ನಿಮ್ಮ ಕೆಳಗೆ ಕೆಲಸ ಮಾಡುವವರು ಸರಿಯಾಗಿ ನಿರ್ವಹಿಸದೇ ನೀವು ಅನಂತರ ಮಾಡಬೇಕಾದೀತು. ವ್ಯಂಗ್ಯದಿಂದ ಕೂಡಿದ ಮಾತಿನಲ್ಲಿ ಸ್ಪಷ್ಟತೆ ಇರದು. ನಿಮ್ಮ ಯೋಜನೆಯನ್ನು ಸರಿಯಾಗಿ ಪ್ರಸ್ತುತ ಪಡಿಸಿ. ನೀವು ಇಷ್ಟಪಟ್ಟ ವಸ್ತುವನ್ನು ಇಂದು ಪಡೆಯುವಿರಿ. ನಿಮ್ಮ ಕೆಲಸವನ್ನು ತಪ್ಪಾಗುವುದು ಎಂಬ ಭಯದಿಂದ ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮ್ಮ ಪ್ರತಿನಿತ್ಯದ ಉದ್ಯೋಗದ ಸಮಯವು ಬದಲಾಗಿದ್ದು ನಿಮಗೆ ಅದಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು. ಸೊಂಟಕ್ಕೆ ಸಂಬಂಧಿಸಿದ ನೋವು ಇರಲಿದೆ.
ಮಕರ: ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಇಂದು ಯೋಚನೆ ಅಸಾಧ್ಯವಾದೀತು. ಕುಟುಂಬದ ಜೊತೆ ಸಮಯವನ್ನು ಕಳೆಯಲು ಸಾಧ್ಯವಾಗದೇ ಇರಬಹುದು. ಇಂದು ನಿಮಗೆ ಸಿಕ್ಕ ಗೌರವವನ್ನು ಕಂಡು ಶತ್ರುಗಳು ಹುಟ್ಟಿಕೊಂಡಾರು. ಉದ್ಯೋಗವನ್ನು ಬದಸಲಿಸುವಿರಿ. ಅಧಿಕಾರವನ್ನು ಪಡೆಯಲು ಕೆಟ್ಟ ಮಾರ್ಗವನ್ನು ಹಿಡಿಯುವಿರಿ. ಅಪರಿಚಿತರ ಒಡನಾಟವನ್ನು ಕಡಿಮೆ ಮಾಡಿ. ಸರಳ ಜೀವನವನ್ನು ಇಷ್ಟಪಡುವಿರಿ. ಹೊಸ ವಸ್ತ್ರಗಳನ್ನು ಖರೀದಿಮಾಡುವಿರಿ. ರಾತ್ರಿ ಕೆಟ್ಟ ಸ್ವೊ್ನದಿಂದ ನಿದ್ರೆ ಬಾರದೇ ಇದ್ದೀತು.
ಕುಂಭ: ಇಂದು ನೀವು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ. ಮಾತಿಗೆ ಎದುರುತ್ತರ ಕೊಡುವಿರಿ. ವಿವೇಚನೆಯನ್ನು ಕಳೆದುಕೊಂಡು ಇಂದಿನ ಮಾತುಕತೆಗಳು ತಾರಕಕ್ಕೆ ಹೋಗಬಹುದು. ನಿಮ್ಮ ಪರಾಕ್ರಮವು ಕೆಲಸದಲ್ಲಿ ಇರಲಿ. ಬಂಧುಗಳು ನಿಮ್ಮನ್ನು ದೂರವಿಡಬಹುದು. ನಿಮ್ಮ ವಸ್ತುವನ್ನು ಇನ್ನೊಬ್ಬರ ಬಳಕೆಗೆ ಕೊಡಲಿದ್ದೀರಿ. ಮಾನಭಂಗವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇಂದು ಆರಾಮಾಗಿ ಇರಬೇಕೆಂದುಕೊಂಡಿದ್ದರೆ ಇರಲಾಗದು. ಕಛೇರಿಯಲ್ಲಿ ಒತ್ತಡದ ವಾತಾವರಣ ಇದ್ದಕಾರಣ ನಿಮ್ಮ ಪೂರ್ವಯೋಜನೆ ಸಫಲವಾಗದು. ಕಫಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಬಹುದು.
ಮೀನ: ಸಮಯಕ್ಕೆ ಬೆಲೆ ಕೊಟ್ಟು ಇಂದಿನ ಕೆಲಸವನ್ನು ಮಾಡಿ. ಧಾರ್ಮಿಕವಾಗಿ ನೀವು ಹೆಚ್ಚು ಆಸಕ್ತರಾಗಬೇಕಾಗುತ್ತದೆ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಹಾಯ ಸಿಗಲಿದೆ, ಕೇಳಿ ಪಡೆಯಿರಿ. ಅಧಿಕ ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ನಿಮ್ಮ ವ್ಯಾಜ್ಯವು ನ್ಯಾಯಾಲಯದ ಮೆಟ್ಟಿಲೇರಬಹುದು. ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಇಲ್ಲವೆನ್ನಬೇಡಿ. ಕೈಲಾದುದನ್ನು ಮಾಡಿ. ನಿಮ್ಮ ವಿದ್ಯೆಗೆ ಯೋಗ್ಯವಾದ ಹುದ್ದೆಗೆ ನೀವು ಹುಡುಕಾಡುವಿರಿ. ಆದಷ್ಟು ವಸ್ತುಸ್ಥಿತಿಯಂತೆ ಆಲೋಚಿಸಿ. ವಾಹನವನ್ನು ಚಲಾಯಿಸುವ ಎಚ್ಚರವಿರಲಿ. ಪ್ರೇಮಪ್ರಕರಣದಲ್ಲಿ ಯಾವ ವ್ಯತ್ಯಸವೂ ಆಗದೇ ನಿಮ್ಮ ನಿರೀಕ್ಷೆ ಹುಸಿಯಾಗಬಹುದು.
ಲೋಹಿತಶರ್ಮಾ 8762924271 (what’s app only)
Published On - 12:02 am, Mon, 3 July 23