ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ: ನಿಮ್ಮದಾದ ಕೆಲವು ನಿಲುವುಗಳಿಗೆ ನೀವು ಬದ್ಧರಾಗಿರಿ. ಧನವ್ಯವಹಾರದಲ್ಲಿ ನಿಮ್ಮನ್ನು ಯಾರಾದರೂ ವಂಚಿಸಬಹುದು. ಅನಿವಾರ್ಯತೆಯನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ನೀವು ನಿಮ್ಮ ನಡತೆಯನ್ನು ಬದಲಿಸಿಕೊಳ್ಳಲು ಹೋಗುವುದು ಬೇಡ. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡುವಿರಿ. ಆಪ್ತರು ದೂರವಾಗುವ ಸಂಕಟವನ್ನು ನೀವು ಜೀರ್ಣಿಸಿಕೊಳ್ಳುವ ಅಗತ್ಯವಿದೆ. ಆಪ್ತರಿಂದ ಉಡುಗೊರೆ ಸಿಗಬಹುದು. ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನೆಮ್ಮದಿಯನ್ನು ನೀವು ಪಡೆಯಲು ಪ್ರಯತ್ನಿಸುವಿರಿ.
ವೃಷಭ: ಸ್ಚಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಸಂಗಾತಿಯ ಬೆಂಬಲವನ್ನು ಪಡೆಯಲು ನೀವು ಸೋಲುವಿರಿ. ನಿಮ್ಮ ಹಠದ ಸ್ವಭಾವವು ಹೆಚ್ಚಿನ ಶುಭವನ್ನೇ ಕಳೆದುಕೊಳ್ಳುವಂತೆ ಮಾಡುವುದು. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳಲು ಹೋಗಬಹುದು. ಒಂದರಮೇಲೊಂದರಂತೆ ನಿಮಗೆ ಕರೆಗಳು ಬರಬಹುದು. ಅದನ್ನು ನಿವಾರಿಸಿಕೊಳ್ಳಲು ನಿಮಗೆ ಕಷ್ಟವಾದೀತು. ನಿಮ್ಮ ಚಿಂತನೆಯನ್ನು ಅರ್ಧಕ್ಕೆ ಕೈ ಬಿಟ್ಟು ಇನ್ನೊಬ್ಬರ ಕೆಲಸದಲ್ಲಿ ಭಾಗಿಯಾಗುವಿರಿ. ಮಹಾಗಣಪತಿಯನ್ನು ಕೆಲಸಕ್ಕೂ ಮೊದಲು ಪ್ರಾರ್ಥಿಸಿ.
ಮಿಥುನ: ಮನೆಯವರ ಪ್ರೀತಿಯನ್ನು ನೀವು ಕಳೆದುಕೊಳ್ಳುವಿರಿ. ನಿಮ್ಮ ಮಾತು ಅವರಿಗೆ ಬೇಸರವನ್ನು ತರಿಸೀತು. ಉದ್ಯೋಗದಲ್ಲಿ ಹೆಚ್ಚು ಒತ್ತಡ ಇರಲಿದೆ. ಸಹೋದ್ಯೋಗಿಗಳ ಸಹಾಯವನ್ನೂ ನೀವು ಪಡೆಯಬಹುದಾಗಿದೆ. ಹಿತಶತ್ರುವು ಬೆಂಬಲಿಸಿದಂತೆ ತೋರಲಿದೆ. ಸಮಾರಂಭಗಳಿಗೆ ನೀವು ಭಾಗವಹಿಸಲಿದ್ದೀರಿ. ತುರ್ತು ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಬಹುದು. ನಿಮಗೆ ಇಂದು ಅಶುಭವಾರ್ತೆಯು ಕೇಳಿಬರಬಹುದು. ಕೆಲಸವನ್ನು ಮುಕ್ತಾಯಗೊಳಿಸದೇ ಇರಲು ನಾನಾ ಕಾರಣಗಳು ದೊರೆಯಬಹುದು.
ಕರ್ಕ: ಸಾಮಾಜಿಕ ಕಾರ್ಯವು ನಿಮ್ಮ ಯಶಸ್ಸನ್ನು ತಂದುಕೊಡಬಹುದು. ಕೊರತೆಗಳನ್ನು ನೀಗಲು ನೀವು ಸ್ನೇಹಿತರಿಂದ ಸಹಾಯವನ್ನು ಪಡೆಯುವಿರಿ. ವಿಷಯದ ಸರಿಯಾದ ಆಯ್ಕೆ ಮಾಡಲು ನಿಮಗೆ ಕಷ್ಟವಾದೀತು. ಶಿಕ್ಷಕವೃತ್ತಿಯಲ್ಲಿ ನೀವು ಇದ್ದರೆ ವಿದ್ಯಾರ್ಥಿಗಳಿಂದ ಸಮ್ಮಾನವು ಸಿಗಲಿದೆ. ಅಸಹಜ ಬೆಳವಣಿಗೆಗೆ ನೀವು ಕಾರಣರಾಗುವಿರಿ. ಅನಾರೋಗ್ಯವು ಹೆಚ್ಚಾಗಬಹುದು. ವಾಹನಕ್ಕಾಗಿ ನೀವು ಹಣವನ್ನು ವ್ಯಯಿಸುವಿರಿ. ನೂತನ ಉದ್ಯೋಗಕ್ಕೆ ನೀವು ಪ್ರಯತ್ನಶೀಲರಾಗುವಿರಿ. ಅಲ್ಪಾವಧಿಯಲ್ಲಿ ಲಾಭವನ್ನು ಗಳಿಸಲು ಹೋಗಿ ಮುಗ್ಗರಿಸುವಿರಿ. ಸಣ್ಣ ಅಪಮಾನವೂ ನಿನಗರ ದೊಡ್ಡದಾಗಿ ತೋರುವುದು.
ಸಿಂಹ: ಸಮಯಕ್ಕೆ ಗೌರವ ಕೊಡುವುದನ್ನು ನೀವು ಕಲಿಯಬೇಕಾದೀತು. ಕಲಾವಿದರು ಸುಮ್ಮನೆ ಕುಳಿತು ಕಾಲಕಳೆಯುವ ಸಂಭವವಿದೆ. ಏನಾದರೂ ಹೊಸತನವನ್ನು ಹುಟ್ಟಿಸಿಕೊಳ್ಳಬಹುದು. ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಅಧಿಕ ಖರ್ಚಿನಿಂದ ನಿಮಗೆ ತೊಂದರೆಗಳು ಬರಬಹುದು. ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸಗಳನ್ನು ಮಾಡಲು ಆಗದೇ ಇರುವುದು. ಅಧಿಕಾರಿ ವರ್ಗದಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಹೊಸತನ್ನು ತಿಳಿದುಕೊಳ್ಳಲು ನೀವು ಸೋಲಬಹುದು. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ದುಃಖವಾಗಬಹುದು. ಸಿದ್ಧ ಉಡುಪುಗಳ ಮಾರಾಟದಿಂದ ಲಾಭವಾಗುವುದು.
ಕನ್ಯಾ: ದಾಂಪತ್ಯದಲ್ಲಿ ಸಾಮರಸ್ಯದ ಕೊರತೆವಿರಲಿದೆ. ಹಿರಿಯರ ಮಧ್ಯಸ್ತಿಕೆಯಿಂದ ಸಮಸ್ಯೆಗಳು ಪರಿಹಾರವಾಗಬಹುದು. ಮಕ್ಕಳ ಮೇಲೆ ಪ್ರೀತಿ ಅಧಿಕವಾಗಬಹುದು. ನಿಮ್ಮ ನಡೆತೆಗಳು ಅನುಮಾನವನ್ನು ಹುಟ್ಟಿಸಬಹುದು. ಹೂಡಿಕೆಯ ವಿಚಾರದಲ್ಲಿ ನೀವು ಅನುಭವಗಳನ್ನು ಕೇಳುವುದು ಉತ್ತಮ. ಮನೆಯ ಪರಿಸ್ಥಿತಿಯನ್ನು ಸುಧಾರಿಸಲು ನೀವು ಕಷ್ಟಪಡುವಿರಿ. ಅಧಿಕಾತದಿಂದ ನಿಮ್ಮ ಮಾತು ಕಠೋರವಾಗಿರುವುದು. ಸ್ವಾವಲಂಬಿಗಳಾಗಿ ಬದುಕಲು ಪ್ರಯತ್ನಿಸುವಿರಿ. ನಿಮ್ಮನ್ನು ಯಾರಾದರೂ ಅನಸುರಿಸುವರು. ಸಣ್ಣ ನೋವು ಇಂದು ದೊಡ್ಡದಾಗಿ ಅದನ್ನು ತಡೆಯಲು ಕಷ್ಟವಾದೀತು. ಗುರುಚರಿತ್ರೆಯನ್ನು ಪಠಿಸಿ.
ತುಲಾ: ಹೊಸ ಕಛೇರಿಯಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡುವಿರಿ. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಓಡಾಡಬೇಕಾಗಬಹುದು. ಪರಿಚಿತ ವ್ಯಕ್ತಿಗಳಿಂದಲೇ ನಿಮಗೆ ಮೋಸವಾಗಬಹುದು. ಸಂಗಾತಿಯನ್ನು ಸರಿಯಾಗಿ ಮಾಡಿಕೊಳ್ಳುವಿರಿ. ಇನ್ನೊಬ್ಬರ ವರ್ತನೆಯಿಂದ ನಿಮ್ಮಲ್ಲಿ ಗೊಂದಲವುಂಟಾಗಬಹುದು. ಪೂರ್ವನಿಗದಿತ ನಿಮ್ಮ ಕಾರ್ಯಗಳು ಅಸ್ತವ್ಯಸ್ತವಾಗಲಿದೆ. ನಿಮ್ಮ ಬಯಕೆಯನ್ನು ಪೂರೈಸಿಕೊಳ್ಳಲು ನೀವು ಕಷ್ಟಪಡುವಿರಿ. ಉದ್ವೇಗಕ್ಕೆ ನೀವು ಒಳಗಾಗುವಿರಿ. ಅಸಂಬದ್ಧ ಮಾತುಗಳಿಂದ ನಿಮಗೆ ಬೇಸರವಾಗಬಹುದು.
ವೃಶ್ಚಿಕ: ಕಛೇರಿಯಲ್ಲಿ ಒತ್ತಡದ ವಾತಾವರಣವಿರಲಿದೆ. ಒಳ್ಳೆಯ ಸುದ್ದಿಗಳು ನಿಮಗೆ ಸಂತೋಷವನ್ನು ನೀಡಬಹುದು. ತಂದೆಗೆ ಸಮಾನರಾದವರಲ್ಲಿ ಸಲುಗೆಯಿಂದ ಇರುವಿರಿ. ಇಂದಿನ ಕೆಲಸಗಳನ್ನು ಮುಂದೂಡುವುದು ಅನಿವಾರ್ಯವಾಗಬಹುದು. ರಾಜಕಾರಣಿಗಳು ಕರ್ತವ್ಯವನ್ನು ಮಾಡುವರು. ಬೇಸರವಾಗುವ ಮಾತುಗಳನ್ನು ನೀವು ಕಡಿಮೆಮಾಡಿಕೊಳ್ಳಿ. ನಿಮ್ಮ ಸ್ನೇಹಶೀಲತೆ ಎಲ್ಲರಿಗೂ ಇಷ್ಟವಾಗುವುದು. ಜನರ ಬೆಂಬಲವನ್ನು ಪಡೆಯಲು ಪ್ರಯತ್ನಿಸುವಿರಿ. ಆಗಿದ್ದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬೇಸರಗೊಳ್ಳುವ ಸಾಧ್ಯತೆ ಇದೆ. ನಾಗದೇವರನ್ನು ಪೂಜಿಸಿ.
ಧನುಸ್ಸು: ನಿಮ್ಮ ಸ್ಥಾನವನ್ನು ಬಿಟ್ಟುಕೊಡಲು ನೀವು ಒಪ್ಪುವುದಿಲ್ಲ. ಯಾರ ಒತ್ತಡವನ್ನೂ ನೀವು ಸ್ವೀಕರಿಸಲು ತಯಾರಿರುವವುದಿಲ್ಲ. ನಿಮ್ಮನ್ನು ಅಪ್ರಾಮಾಣಿಕರೆಂದು ಹೀಗಳೆಯಬಹುದು. ಇಂದು ನಿಮ್ಮ ಅಭಿಪ್ರಾಯವನ್ನು ಆಪ್ತರ ಜೊತೆ ಹಂಚಿಕೊಳ್ಳಲಿದ್ದೀರಿ. ಅತಿಯಾದ ವಿಶ್ವಾಸವು ನಿಮಗೆ ತೊಂದರೆಯನ್ನು ತಂದೀತು. ಅತ್ಯಾಪ್ತತೆಯಿಂದ ನಿಮಗೆ ಸಂಕಟವಾಗಬಹುದು. ಹಿರಿಯರ ಮಾತುಗಳನ್ನು ತಿರಸ್ಕರಿಸುವ ಮಾನಸಿಕತೆ ಇರಲಿದೆ. ಧಾರ್ಮಿಕ ಕಾರ್ಯಕ್ಕೆ ವಿಘ್ನವು ಉಂಟಾಗಬಹುದು. ಅನವಶ್ಯಕವಾಗಿ ದ್ವೇಷವನ್ನು ಬೆಳೆಸಿಕೊಳ್ಳಲಿದ್ದೀರಿ. ಮಹಾಗೌರಿಯನ್ನು ಆರಾಧಿಸಿ.
ಮಕರ: ನಿಮ್ಮ ವಸ್ತುವನ್ನು ನೀವೇ ಪಡೆದುಕೊಳ್ಳಲು ಓಡಾಟ ಮಾಡಬೇಕಾದೀತು. ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಕೇಳಬೇಕಾದ ಸ್ಥಿತಿ ಬರಬಹುದು. ಆಂತರಿಕ ಕಲಹವು ಇಂದು ಬಹಿತಂಗವಾಗಬಹುದು. ಯಥೇಷ್ಟವಾಗಿ ಸುತ್ತಾಡುವ ಮನಸ್ಸು ಇರಲಿದೆ. ನಿಮ್ಮ ಬಗ್ಗೆಯೇ ನಿಮಗೆ ವಿಶ್ವಾಸದ ಕೊರತೆ ಇರಲಿದೆ. ಸಮಾಧಾನ ಚಿತ್ತದಿಂದ ನೀವು ನಿಮ್ಮ ಅವಲೋಕನವನ್ನು ಮಾಡುವಿರಿ. ಅಸಭ್ಯ ಮಾತುಗಳಿಂದ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು. ತೀರ್ಥಕ್ಷೇತ್ರಗಳಿಗೆ ಹೋಗಲಿದ್ದೀರಿ. ನಿಯಮಬದ್ಧತೆಯನ್ನು ನೀವು ಮೀರುವ ಸಾಧ್ಯತೆ ಇದೆ. ಶಿವಕವಚವನ್ನು ಪ್ರಾತಃಕಾಲದಲ್ಲಿ ಪಠಿಸಿ.
ಕುಂಭ: ಬಂಧುಗಳ ಭೇಟಿಗಾಗಿ ನೀವು ದೂರಪ್ರಯಾಣ ಮಾಡುವಿರಿ. ನಿಮ್ಮಲ್ಲಿ ಏನನ್ನೋ ಸಾಧಿಸಿದ ತೃಪ್ತಿ ಇರಲಿದೆ. ಬರಬೇಕಾದ ಹಣವು ಬಾರದೇ ಮೋಸವಾಗಲಿದೆ. ನಿಮ್ಮದೇ ಕೆಲಸಗಳ ನಡುವೆ ನೀವು ಕಳೆದು ಹೋಗುವಿರಿ. ಕುಟುಂಬಕ್ಕೆ ಸಮಯ ಕೊಡಲು ಕಷ್ಟವಾದೀತು. ನಿಮ್ಮ ಅನಾರೋಗ್ಯವು ಇಂದು ಹೆಚ್ಚಾಗಬಹುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಇಂದು ಅವಕಾಶ ಸಿಗಬಹುದು. ನೀವು ಮುಂಗಡವಾಗಿ ಕೊಟ್ಟ ಹಣವು ಬಾರದೇ ಹೋದೀತು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸಹೋದರರ ನಡುವೆ ರಹಸ್ಯ ಸಮಾಲೋಚನೆ ನಡೆಯಬಹುದು. ಹನುಮಾನ್ ಸ್ತೋತ್ರವನ್ನು ಪಠಿಸಿ.
ಮೀನ: ನಿಮಗೆ ಆಹಾರಾಭಾವವು ಆಗಬಹುದು. ಕಲ್ಪಿಸಿಕೊಂಡ ವಿಚಾರವು ಹಾಗೆಯೇ ಆಗಲಿದ್ದು ನಿಮಗೆ ಆಶ್ಚರ್ಯ ಆಗಬಹುದು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ನೀವು ಕೊಡಲಿದ್ದೀರಿ. ಉದ್ಯೋಗದಿಂದ ನಿಮ್ಮನ್ನು ಕೈಬಿಡುವ ಭಯವು ಕಾಡಬಹುದು. ತಲೆ ನೋವಿನಿಂದ ಇಂದು ಕಷ್ಟಪಡುವಿರಿ. ಕಾರಣಾಂತರಗಳಿಂದ ಮುಂದೆ ಹೋಗುತ್ತಿದ್ದ ವಿವಾಹವು ನಿಶ್ಚಯವಾಗಬಹುದು.ಲ. ಆಪ್ತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಚಿಂತೆಯಿಂದ ನಿದ್ರೆ ಕೆಡುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ಹರಟೆ ಹೊಡೆಯುವಿರಿ. ಪರಿಶ್ರಮವು ಇಂದು ಹೆಚ್ಚಾಗಬಹುದು. ಕಾಲಭೈರವನ ಸನ್ನಿಧಿಗೆ ಹೋಗಿ ಬನ್ನಿ.
ಲೋಹಿತಶರ್ಮಾ – 8762924271 (what’s app only)