Rashi Bhavishya: ಇಂದಿನ ರಾಶಿಭವಿಷ್ಯ, ಅಧಿಕ ಖರ್ಚಿನಿಂದ ಈ ರಾಶಿಯವರಿಗೆ ತೊಂದರೆಗಳು ಬರಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ಅಧಿಕ ಖರ್ಚಿನಿಂದ ಈ ರಾಶಿಯವರಿಗೆ ತೊಂದರೆಗಳು ಬರಬಹುದು
ಇಂದಿನ ರಾಶಿಭವಿಷ್ಯImage Credit source: istock
Follow us
Rakesh Nayak Manchi
|

Updated on:Jun 15, 2023 | 8:34 PM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 15 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.

ಸಿಂಹ: ಸಮಯಕ್ಕೆ ಗೌರವ ಕೊಡುವುದನ್ನು ನೀವು ಕಲಿಯಬೇಕಾದೀತು. ಕಲಾವಿದರು ಸುಮ್ಮನೆ ಕುಳಿತು ಕಾಲಕಳೆಯುವ ಸಂಭವವಿದೆ. ಏನಾದರೂ ಹೊಸತನವನ್ನು ಹುಟ್ಟಿಸಿಕೊಳ್ಳಬಹುದು. ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಅಧಿಕ ಖರ್ಚಿನಿಂದ ನಿಮಗೆ ತೊಂದರೆಗಳು ಬರಬಹುದು. ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸಗಳನ್ನು ಮಾಡಲು ಆಗದೇ ಇರುವುದು. ಅಧಿಕಾರಿ ವರ್ಗದಿಂದ ನಿಮಗೆ ಕಿರಿಕಿರಿ ಉಂಟಾಗಬಹುದು‌. ಹೊಸತನ್ನು ತಿಳಿದುಕೊಳ್ಳಲು ನೀವು ಸೋಲಬಹುದು. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ದುಃಖವಾಗಬಹುದು. ಸಿದ್ಧ ಉಡುಪುಗಳ ಮಾರಾಟದಿಂದ ಲಾಭವಾಗುವುದು.

ಕನ್ಯಾ: ದಾಂಪತ್ಯದಲ್ಲಿ ಸಾಮರಸ್ಯದ ಕೊರತೆವಿರಲಿದೆ. ಹಿರಿಯರ ಮಧ್ಯಸ್ತಿಕೆಯಿಂದ ಸಮಸ್ಯೆಗಳು ಪರಿಹಾರವಾಗಬಹುದು. ಮಕ್ಕಳ ಮೇಲೆ ಪ್ರೀತಿ ಅಧಿಕವಾಗಬಹುದು. ನಿಮ್ಮ ನಡೆತೆಗಳು ಅನುಮಾನವನ್ನು ಹುಟ್ಟಿಸಬಹುದು. ಹೂಡಿಕೆಯ ವಿಚಾರದಲ್ಲಿ ನೀವು ಅನುಭವಗಳನ್ನು ಕೇಳುವುದು ಉತ್ತಮ. ಮನೆಯ ಪರಿಸ್ಥಿತಿಯನ್ನು ಸುಧಾರಿಸಲು ನೀವು ಕಷ್ಟಪಡುವಿರಿ. ಅಧಿಕಾತದಿಂದ‌ ನಿಮ್ಮ‌ ಮಾತು ಕಠೋರವಾಗಿರುವುದು. ಸ್ವಾವಲಂಬಿಗಳಾಗಿ ಬದುಕಲು ಪ್ರಯತ್ನಿಸುವಿರಿ. ನಿಮ್ಮನ್ನು ಯಾರಾದರೂ ಅನಸುರಿಸುವರು. ಸಣ್ಣ ನೋವು ಇಂದು ದೊಡ್ಡದಾಗಿ ಅದನ್ನು ತಡೆಯಲು ಕಷ್ಟವಾದೀತು. ಗುರುಚರಿತ್ರೆಯನ್ನು ಪಠಿಸಿ.

ತುಲಾ: ಹೊಸ ಕಛೇರಿಯಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡುವಿರಿ. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಓಡಾಡಬೇಕಾಗಬಹುದು. ಪರಿಚಿತ ವ್ಯಕ್ತಿಗಳಿಂದಲೇ ನಿಮಗೆ ಮೋಸವಾಗಬಹುದು. ಸಂಗಾತಿಯನ್ನು ಸರಿಯಾಗಿ ಮಾಡಿಕೊಳ್ಳುವಿರಿ. ಇನ್ನೊಬ್ಬರ ವರ್ತನೆಯಿಂದ ನಿಮ್ಮಲ್ಲಿ ಗೊಂದಲವುಂಟಾಗಬಹುದು. ಪೂರ್ವನಿಗದಿತ ನಿಮ್ಮ ಕಾರ್ಯಗಳು ಅಸ್ತವ್ಯಸ್ತವಾಗಲಿದೆ. ನಿಮ್ಮ ಬಯಕೆಯನ್ನು ಪೂರೈಸಿಕೊಳ್ಳಲು ನೀವು ಕಷ್ಟಪಡುವಿರಿ. ಉದ್ವೇಗಕ್ಕೆ ನೀವು ಒಳಗಾಗುವಿರಿ. ಅಸಂಬದ್ಧ ಮಾತುಗಳಿಂದ ನಿಮಗೆ ಬೇಸರವಾಗಬಹುದು.

ವೃಶ್ಚಿಕ: ಕಛೇರಿಯಲ್ಲಿ ಒತ್ತಡದ ವಾತಾವರಣವಿರಲಿದೆ. ಒಳ್ಳೆಯ ಸುದ್ದಿಗಳು ನಿಮಗೆ ಸಂತೋಷವನ್ನು ನೀಡಬಹುದು. ತಂದೆಗೆ ಸಮಾನರಾದವರಲ್ಲಿ ಸಲುಗೆಯಿಂದ ಇರುವಿರಿ. ಇಂದಿನ ಕೆಲಸಗಳನ್ನು ಮುಂದೂಡುವುದು ಅನಿವಾರ್ಯವಾಗಬಹುದು. ರಾಜಕಾರಣಿಗಳು ಕರ್ತವ್ಯವನ್ನು ಮಾಡುವರು. ಬೇಸರವಾಗುವ ಮಾತುಗಳನ್ನು ನೀವು ಕಡಿಮೆ‌ಮಾಡಿಕೊಳ್ಳಿ. ನಿಮ್ಮ ಸ್ನೇಹಶೀಲತೆ ಎಲ್ಲರಿಗೂ ಇಷ್ಟವಾಗುವುದು. ಜನರ ಬೆಂಬಲವನ್ನು ಪಡೆಯಲು ಪ್ರಯತ್ನಿಸುವಿರಿ. ಆಗಿದ್ದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬೇಸರಗೊಳ್ಳುವ ಸಾಧ್ಯತೆ ಇದೆ. ನಾಗದೇವರನ್ನು ಪೂಜಿಸಿ.

-ಲೋಹಿತಶರ್ಮಾ ಇಡುವಾಣಿ

Published On - 12:30 am, Thu, 15 June 23

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ