AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಇಂದಿನ ರಾಶಿಭವಿಷ್ಯ, ಅತಿಯಾದ ವಿಶ್ವಾಸವು ಈ ರಾಶಿಯವರಿಗೆ ತೊಂದರೆಯನ್ನು ತಂದೀತು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಅತಿಯಾದ ವಿಶ್ವಾಸವು ಈ ರಾಶಿಯವರಿಗೆ ತೊಂದರೆಯನ್ನು ತಂದೀತು
ಇಂದಿನ ರಾಶಿಭವಿಷ್ಯImage Credit source: istock
Rakesh Nayak Manchi
|

Updated on: Jun 15, 2023 | 12:45 AM

Share

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.

ಧನುಸ್ಸು: ನಿಮ್ಮ ಸ್ಥಾನವನ್ನು ಬಿಟ್ಟುಕೊಡಲು ನೀವು ಒಪ್ಪುವುದಿಲ್ಲ. ಯಾರ ಒತ್ತಡವನ್ನೂ ನೀವು ಸ್ವೀಕರಿಸಲು ತಯಾರಿರುವವುದಿಲ್ಲ. ನಿಮ್ಮನ್ನು ಅಪ್ರಾಮಾಣಿಕರೆಂದು ಹೀಗಳೆಯಬಹುದು.‌ ಇಂದು ನಿಮ್ಮ ಅಭಿಪ್ರಾಯವನ್ನು ಆಪ್ತರ ಜೊತೆ ಹಂಚಿಕೊಳ್ಳಲಿದ್ದೀರಿ. ಅತಿಯಾದ ವಿಶ್ವಾಸವು ನಿಮಗೆ ತೊಂದರೆಯನ್ನು ತಂದೀತು. ಅತ್ಯಾಪ್ತತೆಯಿಂದ ನಿಮಗೆ ಸಂಕಟವಾಗಬಹುದು. ಹಿರಿಯರ ಮಾತುಗಳನ್ನು ತಿರಸ್ಕರಿಸುವ ಮಾನಸಿಕತೆ ಇರಲಿದೆ. ಧಾರ್ಮಿಕ ಕಾರ್ಯಕ್ಕೆ ವಿಘ್ನವು ಉಂಟಾಗಬಹುದು. ಅನವಶ್ಯಕವಾಗಿ ದ್ವೇಷವನ್ನು ಬೆಳೆಸಿಕೊಳ್ಳಲಿದ್ದೀರಿ. ಮಹಾಗೌರಿಯನ್ನು ಆರಾಧಿಸಿ.

ಮಕರ: ನಿಮ್ಮ ವಸ್ತುವನ್ನು ನೀವೇ ಪಡೆದುಕೊಳ್ಳಲು ಓಡಾಟ ಮಾಡಬೇಕಾದೀತು. ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಕೇಳಬೇಕಾದ ಸ್ಥಿತಿ ಬರಬಹುದು. ಆಂತರಿಕ ಕಲಹವು ಇಂದು ಬಹಿತಂಗವಾಗಬಹುದು. ಯಥೇಷ್ಟವಾಗಿ ಸುತ್ತಾಡುವ ಮನಸ್ಸು ಇರಲಿದೆ. ನಿಮ್ಮ ಬಗ್ಗೆಯೇ ನಿಮಗೆ ವಿಶ್ವಾಸದ ಕೊರತೆ ಇರಲಿದೆ. ಸಮಾಧಾನ ಚಿತ್ತದಿಂದ ನೀವು ನಿಮ್ಮ ಅವಲೋಕನವನ್ನು ಮಾಡುವಿರಿ. ಅಸಭ್ಯ ಮಾತುಗಳಿಂದ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು. ತೀರ್ಥಕ್ಷೇತ್ರಗಳಿಗೆ ಹೋಗಲಿದ್ದೀರಿ. ನಿಯಮಬದ್ಧತೆಯನ್ನು ನೀವು ಮೀರುವ ಸಾಧ್ಯತೆ ಇದೆ. ಶಿವಕವಚವನ್ನು ಪ್ರಾತಃಕಾಲದಲ್ಲಿ ಪಠಿಸಿ.

ಕುಂಭ: ಬಂಧುಗಳ ಭೇಟಿಗಾಗಿ ನೀವು ದೂರಪ್ರಯಾಣ ಮಾಡುವಿರಿ. ನಿಮ್ಮಲ್ಲಿ ಏನನ್ನೋ ಸಾಧಿಸಿದ ತೃಪ್ತಿ ಇರಲಿದೆ. ಬರಬೇಕಾದ ಹಣವು ಬಾರದೇ ಮೋಸವಾಗಲಿದೆ. ನಿಮ್ಮದೇ ಕೆಲಸಗಳ ನಡುವೆ ನೀವು ಕಳೆದು ಹೋಗುವಿರಿ.‌ ಕುಟುಂಬಕ್ಕೆ ಸಮಯ ಕೊಡಲು ಕಷ್ಟವಾದೀತು. ನಿಮ್ಮ ಅನಾರೋಗ್ಯವು ಇಂದು ಹೆಚ್ಚಾಗಬಹುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಇಂದು ಅವಕಾಶ ಸಿಗಬಹುದು. ನೀವು ಮುಂಗಡವಾಗಿ ಕೊಟ್ಟ ಹಣವು ಬಾರದೇ ಹೋದೀತು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸಹೋದರರ ನಡುವೆ ರಹಸ್ಯ ಸಮಾಲೋಚನೆ ನಡೆಯಬಹುದು. ಹನುಮಾನ್ ಸ್ತೋತ್ರವನ್ನು ಪಠಿಸಿ.

ಮೀನ: ನಿಮಗೆ ಆಹಾರಾಭಾವವು ಆಗಬಹುದು. ಕಲ್ಪಿಸಿಕೊಂಡ ವಿಚಾರವು ಹಾಗೆಯೇ ಆಗಲಿದ್ದು ನಿಮಗೆ ಆಶ್ಚರ್ಯ ಆಗಬಹುದು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ನೀವು ಕೊಡಲಿದ್ದೀರಿ. ಉದ್ಯೋಗದಿಂದ ನಿಮ್ಮನ್ನು ಕೈಬಿಡುವ ಭಯವು ಕಾಡಬಹುದು. ತಲೆ ನೋವಿನಿಂದ ಇಂದು ಕಷ್ಟಪಡುವಿರಿ. ಕಾರಣಾಂತರಗಳಿಂದ ಮುಂದೆ ಹೋಗುತ್ತಿದ್ದ ವಿವಾಹವು ನಿಶ್ಚಯವಾಗಬಹುದು.ಲ. ಆಪ್ತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಚಿಂತೆಯಿಂದ ನಿದ್ರೆ ಕೆಡುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ಹರಟೆ ಹೊಡೆಯುವಿರಿ. ಪರಿಶ್ರಮವು ಇಂದು ಹೆಚ್ಚಾಗಬಹುದು. ಕಾಲಭೈರವನ ಸನ್ನಿಧಿಗೆ ಹೋಗಿ ಬನ್ನಿ.

-ಲೋಹಿತಶರ್ಮಾ ಇಡುವಾಣಿ