Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಮಾತಿನ‌ ಮೇಲೆ‌ ನಿಗಾ ಇಟ್ಟುಕೊಳ್ಳಿ, ಸುಳ್ಳು ಮಾತುಗಳಿಂದ ತೊಂದರೆಯಾದಿತು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಮಾತಿನ‌ ಮೇಲೆ‌ ನಿಗಾ ಇಟ್ಟುಕೊಳ್ಳಿ, ಸುಳ್ಳು ಮಾತುಗಳಿಂದ ತೊಂದರೆಯಾದಿತು
ಇಂದಿನ ರಾಶಿಭವಿಷ್ಯ, ಜೂನ್ 14Image Credit source: Freepik
Follow us
Rakesh Nayak Manchi
|

Updated on: Jun 14, 2023 | 12:45 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:33ರ ವರೆಗೆ.

ಧನುಸ್ಸು: ಅಧ್ಯಯನದ ವಿಚಾರದಲ್ಲಿ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟವಾದೀತು. ಒತ್ತಾಯಕ್ಕೆ ಮಣಿದು ನಿಮ್ಮ ಪೂರ್ವಯೋಜನೆಯನ್ನು ಬದಲಿಸುವಿರಿ. ದೊಡ್ಡವರ ವಿಚಾರದಲ್ಲಿ ಮೂಗುತೂರಿಸುವಿರಿ. ನೂತನ ವಸ್ತ್ರಗಳನ್ನು ಧರಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಹಿತಶತ್ರುಗಳು ಎಂದು ಅನ್ನಿಸಿದರೆ ಅವರನ್ನು ದೂರವಿಡುವುದು ಉತ್ತಮ. ಹೂಡಿಕೆಯನ್ನು ಮಾಡಲು ಹೋಗಿ ಮೋಸಕ್ಕೆ ಒಳಗಾಗುವಿರಿ. ಪಶ್ಚಾತ್ತಾಪ ಪಟ್ಟು ಪ್ರಯೋಜನವಾಗದು. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುವುದು.

ಮಕರ: ಗುರುಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಲು ಕಷ್ಟಪಡುವರು. ಪ್ರಯಾಣದ ಸುಖವು ನಿಮಗೆ ಸಿಗಲಿದೆ. ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ದೂರವಾಗಿರಲಿದೆ. ಮಕ್ಕಳು ದಾರಿ ತಪ್ಪಬಹುದು. ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯ. ತಾಯಿಯ ಜೊತೆ ಕಲಹವಾಗುವ ಸಾಧ್ಯತೆ ಇದೆ. ನಿಮ್ಮನ್ನು ನೆಚ್ಚುವವರು ಹೆಚ್ಚಾಗಬಹುದು. ಅಧಿಕ ಮಾತನ್ನಾಡುವುದು ಬೇಡ.

ಕುಂಭ: ಎಂದೋ ಆರಂಭವಾದ ಕಾರ್ಯವು ಕುಂಟುತ್ತಾ ಸಾಗವುದು. ಜಾಡ್ಯದಿಂದ ನೀವು ಇಂದು ಮಾಡುವ ಕೆಲಸವನ್ನು ಮಾಡುವುದಿಲ್ಲ. ಸ್ವತಂತ್ರ ಆಲೋಚನೆಗಳು ನಿಮಗೆ ಪೂರಕವಾಗುವುದು. ವ್ಯವಸ್ಥೆಯಲ್ಲಿನ ಧನಾತ್ಮಕ ಅಂಶಗಳನ್ನು ಹುಡುಕಿಕೊಂಡು ಮುಂದೆ ಸಾಗಿರಿ. ಆಸ್ತಿಯ ವಿಚಾರವಾಗಿ ವಿವಾದಗಳು ಆಗಬಹುದು. ನಿಮ್ಮ ಮನಸ್ಸು ಹೇಳಿದ ದಾರಿಯಲ್ಲಿ ಸಾಗಲು ನಿಮಗೆ ಕಷ್ಟವಾದೀತು. ಅಧಿಕ ಚಿಂತನೆಯನ್ನು ಮಾಡಿ ನಿಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳುಬಹುದು. ನೂತನ ವಸ್ತುಗಳನ್ನು ಖರೀದಿಸುವಲ್ಲಿ ಮೋಸವಾಗಬಹುದು. ಸಣ್ಣ ವಿಷಯವನ್ನು ನೀವು ದೊಡ್ಡ‌ ಮಾಡುವುದು‌ ಬೇಡ. ಏಕಾಂತವು ನಿಮಗೆ ಹಿತವೆನಿಸಬಹುದು.

ಮೀನ: ಅಧಿಕಾರಯುತವಾದ ಮಾತಿನಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಸ್ನೇಹಿತರು ಸಂಪತ್ತನ್ನು ಬಯಸಬಹುದು. ಕೈಲಾದ ಸಹಾಯವನ್ನು ಮಾಡುವಿರಿ. ಬಳಕೆಯಲ್ಲಿ ಇಲ್ಲದೇ ನಿಮ್ಮ ಸಂಬಂಧಗಳು ಸಡಿಲಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾಮಾರುವ ಸನ್ನಿವೇಶ ಬರಬಹುದು. ವ್ಯಾಪಾರವನ್ನು ಬಹಳ ನಾಜೂಕಾಗಿ ಮಾಡಬೇಕಿದೆ. ನೀವಾಡಿದ ಸುಳ್ಳು ಮಾತುಗಳಿಂದಲೇ ನಿಮಗೆ ತೊಂದರೆಯಾಗಬಹುದು. ಮಾತಿನ‌ ಮೇಲೆ‌ ನಿಗಾ ಇರಲಿ.

-ಲೋಹಿತಶರ್ಮಾ ಇಡುವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ