Rashi Bhavishya: ಈ ರಾಶಿಯವರು ತಮ್ಮಿಷ್ಟದವರ ಜೊತೆ ಸಮಯ ಕಳೆಯಲಿದ್ದಾರೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಈ ರಾಶಿಯವರು ತಮ್ಮಿಷ್ಟದವರ ಜೊತೆ ಸಮಯ ಕಳೆಯಲಿದ್ದಾರೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 14, 2023 | 12:10 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:33ರ ವರೆಗೆ.

ಮೇಷ: ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು. ಧನದ ಹಿಂದೆ ಹೋಗಿ ಸಂಬಂಧವನ್ನು ಕಳೆದುಕೊಳ್ಳಬಹುದು. ಮನೋವಿಕಾರಕ್ಕೆ ಬೇಕಾದ ಎಲ್ಲ ಅಂಶಗಳೂ ಇಂದು ಇರಲಿವೆ. ಇನ್ನೊಬ್ಬರ ಹಿತಚಿಂತನೆಯಲ್ಲಿ ನೀವು ಭಾಗಿಯಾಗುವಿರಿ. ಕಳೆದ ಸಮಯದ ಮೆಲುಕನ್ನು ನೀವು ಹಾಕುವಿರಿ. ಇಂದು ನಿಮಗೆ ಹಿತಕರವಾದ ವಾರ್ತೆತೊಂದು ಬರಲಿದ್ದು ಮನಸ್ಸು ಉಲ್ಲಾಸದಿಂದ ಕೂಡಿರಲಿದೆ. ಕುಟುಂಬದ ಜೊತೆ ಸಂತೋಷದಿಂದ ಕಾಲಕಳೆಯುವಿರಿ. ನಿಮ್ಮಿಷ್ಟದವರ ಜೊತೆ ಸಮಯವನ್ನು ಕಳೆಯುವಿರಿ.

ವೃಷಭ: ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನೀವು ಯಶಸ್ವಿಯಾಗುವಿರಿ. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನೀವು ಇಂದು ಉದ್ಯಮಿಗಳ ಜೊತೆ ಮುಖಾಖಿಯಾಗಲಿದ್ದೀರಿ. ವ್ಯವಹಾರವನ್ನು ಮಾಡುವಾಗ ನೀವು ಗ್ರಾಹಕರ ಬಗ್ಗೆ ಗಮನವಿಡುವುದು ಮುಖ್ಯವಾಗಲಿದೆ. ಯಂತ್ರಗಳ ಮಾರಾಟವು ನಿಮಗೆ ಅಧಿಕಲಾಭವನ್ನು ಕೊಟ್ಟೀತು. ಮನಶ್ಚಾಂಚಲ್ಯಕ್ಕೆ ಉಪಶಮನ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ನಿರ್ಧಾರವನ್ನು ನೀವು ಇಂದು ಸಡಿಲಮಾಡುವಿರಿ. ಒಂದೇ ಕೆಲಸದಿಂದ ಎರಡು ಫಲವನ್ನು ಪಡೆಯುವ ಸಾಧ್ಯತೆ ಇದೆ.

ಮಿಥುನ: ಮನೆಯನ್ನು ಕಟ್ಟಲು ನೀವು ಯೋಜನೆಯನ್ನು ರೂಪಿಸುವಿರಿ. ಹಣಕಾಸಿನ‌ ಒತ್ತಡವು ನಿಮಗೆ ಹೆಚ್ಚಿನ ಆಲೋಚನೆಯನ್ನು ಮಾಡಲು ಬಿಡದು. ಉಳಿತಾಯ ಮಾಡದೇ ಖರ್ಚು ಮಾಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳಿಂದ ಸಮ್ಮಾನ ದೊರೆಯುವುದು. ಅಧಿಕೃತವಾಗಿ ನಿಮಗೆ ಆಧಿಕಾರವು ನಿಮಗೆ ದೊರೆಯಬಹುದು. ಸಂತಾನವಿಲ್ಲ ಎಂಬ ಚಿಂತೆ ನಿಮ್ಮನ್ನು ಅಧಿಕವಾಗಿ ಕಾಡಲಿದೆ. ನೆಮ್ಮದಿಗೆಂದು ವಾಯುವಿಹಾರಕ್ಕೆ ಹೋಗಲು ಇಚ್ಛಿಸುವಿರಿ. ಧೈರ್ಯದಿಂದ ನೀವು ಕಾರ್ಯಗಳನ್ನು ಮಾಡಲು ಹಿಂಜರಿಯುವಿರಿ.

ಕರ್ಕ: ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಅಧಿಕಾರಿಗಳು ನಿಮ್ಮ ತಪ್ಪನ್ನು ಹುಡುಕಿ ಹೇಳುವರು. ಆಸ್ತಿಯ ವಿಚಾರಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆಂದು ಬರಬಹುದು. ಸಮಯೋಚಿತ ಅರಿವಿನಿಂದ ಇಂದಿನ ಅವಗಢವನ್ನು ತಪ್ಪಿಸುವಿರಿ. ಆಕಸ್ಮಿಕ ಧನಲಾಭವು ಆಗುವುದು. ಹಿರಿಯರು ನಿಮಗೆ ಲಾಭದಾಯಕವಾದ ಕೆಲಸವೊಂದನ್ನು ಮಾಡುವರು. ಅಶಿಸ್ತಿನಿಂದ ಇಂದು ನೀವು ವರ್ತಿಸುವಿರಿ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ