Nithya Bhavishya: ಅಹಿತಕರ ಸುದ್ದಿಯು ನಿಮ್ಮನ್ನು ಕುಗ್ಗಿಸಬಹುದು, ಸೀತಾಕಲ್ಯಾಣ ಪ್ರಸಂಗ ಪಠಿಸಿ

ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಅಹಿತಕರ ಸುದ್ದಿಯು ನಿಮ್ಮನ್ನು ಕುಗ್ಗಿಸಬಹುದು, ಸೀತಾಕಲ್ಯಾಣ ಪ್ರಸಂಗ ಪಠಿಸಿ
ಪ್ರಾತಿನಿಧಿಕ ಚಿತ್ರImage Credit source: maharashtratimes.com
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 20, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮವಾರ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 08:09 ರಿಂದ 09:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:10 ರಿಂದ 12:40ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:41ರ ವರೆಗೆ.

ಮೇಷ: ನೀವು ಇಂದು ನಿಮ್ಮ ಕುಟುಂಬದಲ್ಲಿ ಒಳ್ಳೆಯ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸುವಿರಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ದೀರ್ಘಕಾಲದ ಖಾಯಿಲೆಯು ಇಂದು ಸ್ವಲ್ಪ ಕಡಿಮೆಯಾಗಲಿದೆ. ಅನಾರೋಗ್ಯದ ಆಸ್ಪತ್ರೆಗೆ ದಾಖಲಾಗುವ ಸಂಭವವಿದೆ. ಇದರಿಂದ ಆರ್ಥಿಕವಾಗಿ ಏರುಪೇರಾಗಬಹುದು. ಮಕ್ಕಳು ನಿಮ್ಮೊಂದಿಗೆ ಕಳೆಯಲು ಇಚ್ಛಿಸುವರು. ಅವರ ಬಯಕೆಯನ್ನು ಪೂರೈಸಿ. ವೈಯಕ್ತಿಕ ಕೆಲಸದ ಕಾರಣ ಕಛೇರಿಯ ಕಾರ್ಯಗಳು ಹಿಂದುಳಿಯಬಹುದು. ನಿಮ್ಮ ಸಂಗಾತಿಯನ್ನು ಬೆಂಬಲಿಸಿ,ದುರ್ಬಲಗೊಂಡ ಬಂಧವನ್ನು ಮತ್ತೆ ಬಲಗೊಳಿಸಿ. ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗಿ ಧ್ಯಾನ ಮಾಡಿ ಬನ್ನಿ.

ವೃಷಭ: ಇಂದು ಕೆಲವೊಂದು ಸಮಸ್ಯೆಗಳ ಇದ್ದರೂ ಅದನ್ನು ಬದಿಗೊತ್ತಿ ಸಕಾರಾತ್ಮಕ ಚಿಂತನೆಯಿಂದ ಅದನ್ನು ಸರಿಪಡಿಸಿಕೊಳ್ಳುವಿರಿ‌. ನಿಮ್ಮ ಕಾರ್ಯಗಳು ಅಪರಿಪೂರ್ವಾಗುತ್ತದೆ ಎಂಬ ಭರವಸೆಯಿದ್ದರೆ ಅದನ್ನು ಬಿಟ್ಟುಬಿಡಿ‌. ಆರ್ಥಿಕವಾದ ಹೂಡಿಕೆಯನ್ನು ಇಂದು ಮಾಡುವುದು ಬೇಡ. ಅಪವ್ಯಯವಾದೀತು. ಸುಮ್ಮನೇ ಓಡಾಟವಾಗುವುದು. ಅಪರಿತರನ್ನು ಪರಿಚಿತರನ್ನಾಗಿ ಮಾಡಿಕೊಳ್ಳಿ. ಸ್ನೇಹ ಬೆಳೆಸಲು ಸಮಯವನ್ನು ತೆಗೆದುಕೊಳ್ಳಿ. ಕೆಲವು ಚುಚ್ಚು ಮಾತುಗಳು ಕೇಳುವುದು. ತಲೆ ಕೆಡಿಸಿಕೊಳ್ಳದೇ ಜಾಣ್ಮೆಯಿಂದ ಪರಿಹರಿಸಿ‌. ಕುಲದೇವರ ಸ್ಮರಣೆ ಮಾಡಿ.

ಮಿಥುನ: ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಾಯ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ವಿವಾದವಾದೀತು. ಅಹಿತಕರ ಸುದ್ದಿಯು ನಿಮ್ಮನ್ನು ಕುಗ್ಗಿಸೀತು. ವ್ಯವಹಾರದ ಬಗ್ಗೆ ಗಂಭೀರ ನಿರ್ಧಾರ ತೆಗೆದುಕೊಳ್ಳಿ. ಪತಿ-ಪತ್ನಿಯರ ನಡುವೆ ಇದ್ದ ಮನಸ್ತಾಪಗಳು ಬಗೆಹರಿಯಲಿವೆ. ರಾಮಾಯಣದಲ್ಲಿ ಬರುವ ಸೀತಾಕಲ್ಯಾಣ ಪ್ರಸಂಗವನ್ನು ಪಠಿಸಿ. ವೈಮಸ್ಯವು ಸೌಮನಸ್ಯವಾಗುವುದು.

ಕಟಕ: ಇಂದು ಒಂದೇ ರೀತಿಯ ದಿನಚರಿಯನ್ನು ಅನುಸರಿಸಿ ಬೇಸರಗೊಂಡು ಹೊಸತರನಾದ ಕ್ರಮವನ್ನು ಆರಂಭಿಸುವಿರಿ. ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಆರ್ಥಿಕತೆಯ ದುರ್ಬಲದಿಂದಾಗಿ ದುರ್ಮಾರ್ಗದವನ್ನು ಅನುಸರಿಸುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮವಲ್ಲ. ಮಾನಸಿಕ ನೆಮ್ಮದಿಯು ಕಡಿಮೆ ಆಗಲಿದೆ. ಶಿವಕವಚವನ್ನು ಓದಿ.

ಸಿಂಹ: ಪಿತ್ರಾರ್ಜಿತ ಆಸ್ತಿಯು ಸಮಸ್ಯೆಯಿಂದ ಕೂಡಿದ್ದು ಇಂದು ಅದಕ್ಕೆ ಪರಿಹಾರವು ಅನ್ಯ ವ್ಯಕ್ತಿಗಳಿಂದ ಸಿಗಲಿದೆ. ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ತಂದೆ-ತಾಯಿ ಅಥವಾ ಹಿರಿಯರ ಗೌರವಕ್ಕೆ ಚ್ಯುತಿ ತರುವ ಕೆಲಸವನ್ನು ಮಾಡುವಿರಿ. ಜಾಗರೂಕರಾಗಿರಿ. ವಿವಾಹವು ವಿಳಂಬವಾದರೆ ಬೇಸರಿಸಬೇಡಿ. ಉತ್ತಮವಾದುದನ್ನು ನಿರೀಕ್ಷಿಸಿ. ವ್ಯವಹಾರ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ಪ್ರಯೋಗಕ್ಕೆ ತರುವಿರಿ. ಹನುಮಾನ್ ಚಾಲೀಸ್ ನಿಮ್ಮ ದುರ್ಬಲತೆಯನ್ನು ಸರಿ ಮಾಡುತ್ತದೆ.

ಕನ್ಯಾ: ಇಂದು ಜಾಣತನದಿಂದ ಕೆಲಸ ಮಾಡಿ. ಇದರಿಂದ ನೀವು ಜಟಿಲವಾದ ಸಮಸ್ಯೆಯನ್ನು ಸರಾಗವಾಗಿ ಪರಿಹರಿಸಿಕೊಳ್ಳುವಿರಿ. ಪುತ್ರೋತ್ಸವವಿರಲಿದೆ. ಧಾರ್ಮಿಕಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅನುಭವಿಗಳ ಸಲಹೆಯನ್ನು ಅವಶ್ಯವಾಗಿ ಪಡೆದುಕೊಳ್ಳಿ. ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡಾರು. ಅತಿಯಾದ ಒತ್ತಡವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವುದು. ವ್ಯಾಪಾರದಲ್ಲಿ ಲಾಭವು ಅಧಿಕವಾಗಲಿದೆ. ವಿಷ್ಣುಸಹಸ್ರನಾಮವನ್ನು ಓದಿ. ಮುನ್ನೋಟ ತರೆದುಕೊಳ್ಳುವುದು.

ತುಲಾ: ಈ ದಿನ ಹೆಚ್ಚಿನ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಂದ ಕಳೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ಯುವಕರು ಕೆಟ್ಟ ಅಭ್ಯಾಸಗಳತ್ತ ಗಮನ ಹರಿಸುವರು. ಕೆಟ್ಟ ನಿರ್ಧಾರಗಳು ಇಂದು ದುಃಖಕ್ಕೆ ಕಾರಣವಾಗಬಹುದು. ವ್ಯಾಪಾರ ಯೋಜನೆಗಳು ಯಶಸ್ವಿಯಾಗಲಿವೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಆಹಾರದ ವ್ಯತ್ಯಾಸದಿಂದ ತೊಂದರೆಗಳು ಬಂದಾವು. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಮಹಾಗಣಪತಿಗೆ ದೂರ್ವಾಪತ್ರೆಯನ್ನು ನೀಡಿ.

ವೃಶ್ಚಿಕ: ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಕಾರ್ಯಗಳು ಇಂದು ನಡೆಯುವ ಸಾಧ್ಯತೆ ಇದೆ‌. ಕುಟುಂಬದಲ್ಲಿ ವಾರ್ಷಿಕವಾದ ಧಾರ್ಮಿಕಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇರಲಿದೆ. ಮನೆಗೆ ಅವಶ್ಯಕವಿರುವ ವಸ್ತುಗಳಿಗ ಖರೀದಿ ಆಗಲಿದೆ. ಹಣ ಹೊರಹರಿವು ಹೆಚ್ಚಾಗಲಿದೆ. ಮನೆಯ ಸದಸ್ಯರು ನಿಮ್ಮ ಆರೋಗ್ಯದ ಮೇಲಿಟ್ಟ ಕಾಳಜಿಯನ್ನು ಅರಿಯುವಿರಿ. ಇಂದು ನೀವು ಮಾಡಲೇಬೇಕಾದ ಕೆಲಸವನ್ನು ಬಿಟ್ಟು ಆಪ್ತತೆಯ ಕಾರಣಕ್ಕೆ ಅವರ ಕೆಲಸವನ್ನು ಮಾಡಿಕೊಡಲಿದ್ದೀರಿ. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಲಿ. ಒತ್ತಡದಿಂದ ದೂರವಿರಲು ಸಂಗೀತವನ್ನೋ ಉದ್ಯಾನವನವನ್ನೋ ಆರಿಸಿಕೊಳ್ಳುವಿರಿ. ವ್ಯಾಪಾಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ಪ್ರಾಣಾಂತಿಕ ವೇದನೆ ಇದ್ದರೆ ಮೃತ್ಯುಂಜಯ ಮಂತ್ರವನ್ನು ಪಠಿಸಿ.

ಧನುಸ್ಸು: ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯ, ತಾಳ್ಮೆ, ಆತ್ಮವಿಶ್ವಾಸವನ್ನು ಬಿಡದೇ ಕಾಪಾಡಿಕೊಳ್ಳುವುದು ನಿಮ್ಮ ವಿಶೇಷತೆಯಾಗಿದೆ. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ನಿಮ್ಮ ಪ್ರಯತ್ನಕ್ಕೆ ವಿಧಿಯು ಅನುಕೂಲವನ್ನು ಮಾಡಿಸಿ ಬೆಂಬಲವನ್ನು ನೀಡಲಿದೆ. ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದು ಪೋಷಕರು ಮಾಡಬೇಕಿದೆ. ನಿಮ್ಮ ದೈನಂದಿನ ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನೂ ಗಮನವನ್ನೂ ಕೊಡಿ. ಉದ್ಯೋಗದಲ್ಲಿ ಸಹವರ್ತಿಗಳ ಮತ್ತು ಉದ್ಯೋಗಿಗಳ ಸಹಕಾರ ಸಿಗಲಿದೆ. ವಿವಾಹಕ್ಕೆ ವಿಘ್ನಗಗಳು ಬರುತ್ತಿದ್ದರೆ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.

ಮಕರ: ಅಸಾಧ್ಯವೆಂದು ಬಿಟ್ಟಿದ್ದ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸ್ನೇಹಿತರು ನಿಮ್ಮ ಕಾರ್ಯಕ್ಕೆ ವಿರೋಧವನ್ನು ವ್ಯಕ್ತಪಡಿಸಬಹುದು. ಸ್ವಂತ ವಾಹನದಲ್ಲಿ ನೀವೊಬ್ಬರೇ ಪ್ರಯಾಣಿಸುವುದು ಬೇಡ. ಪತ್ರಿಕಾವಲಯದಲ್ಲಿ ಕೆಲಸ ಮಾಡುವವರಿಗೆ ಮೆಚ್ಚುಗೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ಇದ್ದರೂ ಎಲ್ಲರ ನಡುವೆ ಒಂದು ರೀತಿಯ ಆಂತರವಿರಲಿದೆ. ಐಕಮತ್ಯವನ್ನು ಪಠಿಸಿ. ಮನಸ್ಸುಗಳು ಒಂದಾದೀತು.

ಕುಂಭ: ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಸಾಧಿಸುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ಆರ್ಥಿಕ ಚಟುವಟಿಕೆಯು ಮಂದಗತಿಯಲ್ಲಿ ಸಾಗಲಿದೆ. ಆಲಸ್ಯದಿಂದ ಎಷ್ಟೋ ಉತ್ತಮ‌ ಕಾರ್ಯಗಳು ಕೈತಪ್ಪಿ ಹೋಗುವುದು. ಅಶ್ರದ್ಧೆಯು ಕೆಲಸದಲ್ಲಿ ಹೆಚ್ಚು ಕಾಣಲಿದೆ. ವ್ಯಾಪರವು ಊರ್ಜಿತವಾಗಿ ನೀವು ಆರ್ಥಿಕವಾಗಿ ಸಬಲರಾಗುವಂತೆ ಮಾಡಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ಅಲ್ಪ ವಿಶ್ರಾಂತಿ‌ ಪಡೆದು ಮುಂದಿನ ಕಾರ್ಯಕ್ಕೆ ತೆರಳಿ. ಹನುಮಾನ್ ಚಾಲೀಸ್ ಪಠಣವು ನಿಮಗೆ ಬಲವನ್ನು ಕೊಡುತ್ತದೆ.

ಮೀನ: ನೂತನ ಯೋಜನೆಗಳನ್ನು ಆರಂಭಿಸಲು ಮನಸ್ಸು ಮಾಡುವಿರಿ. ಬಂಧುಗಳ ಸಹಾಯದಿಂದ ಯೋಜನೆಗಳನ್ನು ಪ್ರಾರಂಭಿಸುವಿರಿ. ವಿವಾಹಕ್ಕೆ ಸಂಬಂಧಿಸದಂತೆ ಖರೀದಿಗಳು ಆಗಲಿವೆ. ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಹಿರಿಯರ ಸಲಹೆ ಪಡೆಯಿರಿ. ನಿಮ್ಮ ವ್ಯವಹಾರಗಳನ್ನು ಮಿತವಾಗಿದ್ದಷ್ಟು ಒಳ್ಳೆಯದು. ಒತ್ತಡದ ಪರಿಣಾಮದಿಂದ ನಿಮ್ಮ ನಿದ್ರಾಭಂಗವಾದೀತು. ದಾಂಪತ್ಯವು ಸುಂದರವಾಗಲು ಉಡುಗೊರೆ ಆಶ್ಚರ್ಯದ ಉಡುಗೊರೆ ಕೊಡುವಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಚೆನ್ನಾಗಿರಲು ಯೋಗ, ಧ್ಯಾನವನ್ನು ಮಾಡಿ.

ಲೋಹಿತಶರ್ಮಾ ಇಡುವಾಣಿ

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್