Horoscope 21 August: ದಿನಭವಿಷ್ಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಕಾಳಜಿ, ಓದಿಗೆ ಪ್ರೇರಣೆ ಕೊಡುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 21 August: ದಿನಭವಿಷ್ಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಕಾಳಜಿ, ಓದಿಗೆ ಪ್ರೇರಣೆ ಕೊಡುವಿರಿ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:43ರ ವರೆಗೆ.

ನಾಗಪಂಚಮಿಗೆ ಎಲ್ಲರಿಗೂ ಶುಭಾಶಯಗಳು. ಅನಂತಂ ವಾಸಕೀ ಶೇಷಂ
ಪದ್ಮನಾಭಂ ಚ ಕಂಬಲಮ್ |
ಶಂಖಪಾಲಂ ಧಾರ್ತರಾಷ್ಟ್ರಂ
ತಕ್ಷಕಂ ಕಲಿನಂ ತಥಾ ||

ಎಂದು ಪಠಿಸಿ ನವ ನಾಗರ ಸ್ಮರಣೆಯನ್ನು ಮಾಡಿ ನಾಗದೋಷದಿಂದ ಉಂಟಾದ ದೇಹಪೀಡೆ, ಸಂತಾನಕ್ಕೆ ಪ್ರತಿಬಂಧಕವಾದ ದೋಷ ಹಾಗೂ ಕಾರ್ಯಗಳಲ್ಲಿ ಉಂಟಾಗುವ ವಿಘ್ನಗಳನ್ನೆಲ್ಲ ಪರಿಹರಿಸುವಂತೆ ಬೇಡಿಕೊಳ್ಳಿ. ನಾನಾ ವಿಧವಾದ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಪ್ರಸಾದವನ್ನು ಸ್ವೀಕರಿಸಿ.

ಮೇಷ ರಾಶಿ: ನಿಮಗೆ ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳಬೇಕು ಎಂದು ಅನ್ನಿಸುವುದು. ಸಹೋದ್ಯೋಗಿಗಳ ಸಹಕಾರದಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ನಿಮಗೆ ಅಚ್ಚರಿಯನ್ನು ಉಂಟುಮಾಡಬಹುದು. ಕೆಲವರ ವ್ಯಕ್ತಿತ್ವವು ನೀವು ಅನುಸರಿಸುವಿರಿ. ಅಪರಿಚಿತರು ಇರುವ ಕಡೆ ನೀವು‌ ಮೌನಕ್ಕೆ ಶರಣಾಗುವಿರಿ. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ಭಾವನೆಗಳನ್ನು ಲೆಕ್ಕಿಸದೇ ಕೆಲಸದಲ್ಲಿ ಮಗ್ನರಾಗುವಿರಿ. ಆಹಾರದಿಂದ ನಿಮಗೆ ತೊಂದರೆ ಆಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ನಾಗದೇವರ ಆರಾಧನೆಯನ್ನು ಮಾಡಿ.

ವೃಷಭ ರಾಶಿ: ನೀವಾಡಿದ ಸುಳ್ಳು ನಿಮ್ಮವರ ಮನಸ್ಸಿಗೆ ನಾಟುವುದು. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗುವುದು. ಎಲ್ಲ ವಿಚಾರದಲ್ಲಿಯೂ ಗೊಂದಲವನ್ನು ಮಾಡಿಕೊಳ್ಳುವಿರಿ. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಮನಸ್ಸು ಬಹಳ ದುರ್ಬಲವಾಗಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೋಗದೇ ಕಾರ್ಯದಲ್ಲಿಯೇ ಹೆಚ್ಚು ತೊಡಗಿಕೊಳ್ಳುವರು. ಯೋಗ್ಯತೆ ಇದ್ದರೂ ಯೋಗದ ಅಭಾವದಿಂದ ಎತ್ತರಕ್ಕೆ ಏರಲು ಸಮಯವನ್ನು ತೆಗೆದುಕೊಳ್ಳಬೇಕಾಗಬಹುದು. ಪ್ರಯಾಣದಿಂದ ಆಯಾಸವಾಗಲಿದೆ. ವಿಶ್ರಾಂತಿಯ ಅವಶ್ಯಕತೆ ಇರಲಿದೆ. ಯಾವ ಸಂದರ್ಭದಲ್ಲೂ ನೀವು ಸಹಾಯಕ್ಕೆ ಸಿಗುವಿರಿ.

ಮಿಥುನ ರಾಶಿ: ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗುವುದು. ಕಾರ್ಯದ‌ ಕಡೆ ಹೆಚ್ಚು ಗಮನವಿರಲಿ. ಯಾರಿಗೂ ಸಾಲವಾಗಿ ಹಣವನ್ನು ಕೊಡುವುದು ಬೇಡ. ಪುನಃ ಬರುತ್ತದೆ ಎಂಬ ನಿರೀಕ್ಷೆಯೂ ಬೇಡ. ಒತ್ತಡವು ಆಧಿಕವಾದರೆ ಎಲ್ಲಿಗಾದರೂ ಹೋಗಿ ಬನ್ನಿ. ರಾಜಕೀಯವಾಗಿ ನೀವು ಹೊಸ‌ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಿರಿ. ಸ್ನೇಹಿತರ ಜೊತೆಗಿನ ಓಡಾಟದಿಂದ‌ ನಿಮ್ಮವರಿಗೆ ಅನುಮಾನವು ಬರಬಹುದು. ನೀವಾಡುವ ಮಾತು ಜವಾಬ್ದಾರಿಯುತ ಸ್ಥಾನದಿಂದ ಬರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕುಟುಂಬದ ವಿಚಾರವನ್ನು ನೀವೇ ಎತ್ತಿಕೊಂಡು ಕಲಹವನ್ನು ಸೃಷ್ಟಿಸಿ ಆಮೇಲೆ ಜಾರಿಕೊಳ್ಳುವಿರಿ. ಸಾಮಾನ್ಯರ ನಡುವೆ ಸಮಾನ್ಯರಂತೆ ವರ್ತಿಸಿ.

ಕರ್ಕ ರಾಶಿ: ಅಧಿಕಾರ ಪ್ರಾಪ್ತಿಯ ಬೆನ್ನಲ್ಲೇ ಶತ್ರುಗಳನ್ನೂ ಕಟ್ಟಿಕೊಳ್ಳುವಿರಿ. ಹಿತಶತ್ರುಗಳಿಂದ ಎಚ್ಚರವಾಗಿರುವುದು ಅವಶ್ಯಕ. ಚಂಚಲ‌ವಾದ ಮನಸ್ಸು ನಿಮ್ಮ ಸಂಗತಿಯನ್ನು ಮರೆಮಾಚಿಸಬಹುದು. ನಿಮ್ಮ ಆದಾಯದ ಮೂಲವನ್ನು ಯಾರಾದರೂ ಕುತೂಹಲದಿಂದ ಕೇಳಿಯಾರು. ನಿಮ್ಮ ಮನಸ್ಸು ನಕಾರತ್ಮಕ ಚಿಂತನೆಯಲ್ಲಿಯೇ ಹೆಚ್ಚು ಇರಲಿದೆ. ಹಳೆಯ ಗೆಳತಿಯು ನಿಮ್ಮನ್ನು ಪುನಃ ಇಷ್ಟಪಡುವರು. ಯಾರದರೂ ನಿಮ್ಮ ಪರಿಚಿತರನ್ನುವಂತೆ ನಟಿಸಬಹುದು. ಎಷ್ಟೇ ತಾಳ್ಮೆಯಿಂದ ವರ್ತಿಸಿದರೂ ನಿಮಗೆ ಸಿಗಬೇಕಾದ ಫಲವು ಸಿಗದು. ದಾಂಪತ್ಯಜೀವನವು ಅಲ್ಪ ಸರಸ ಸ್ವಲ್ಪ ವಿರಸದಿಂದಲೂ ಇರುವುದು.

ಸಿಂಹ ರಾಶಿ: ಗೆಳೆಯರು ಮಾಡಿದ ತಮಾಷೆಯು ನಿಮಗೆ ಕಂಟಕವಾಗಬಹುದು. ನಿಮ್ಮ ಇಂದಿನ ಕೆಲಸವು ಆದರೂ ಅದಕ್ಕೆ ಹೆಚ್ಚು ಶ್ರಮ, ಸಮಯ ಎರಡನ್ನೂ ಕೊಡಬೇಕಾದೀತು. ನೀವಿಂದು ಕುಳಿತಲ್ಲಿ ಕುಳಿತುಕೊಳ್ಳದೇ ನೀರಿನಿಂದ ಹೊರಬಂದ ಮೀನಿನಂತೆ ಒದ್ದಾಡುವಿರಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಗಳೂ ಇರಲಿ. ಯಾರನ್ನಾದರೂ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೋಪವನ್ನು ನಿಯಂತ್ರಣಕ್ಕೆ ತಂದುಕೊಂಡಷ್ಟು ನಿಮ್ಮ ಕಾರ್ಯವು ಯಶಸ್ಸು ಪಡೆಯುವುದು.ಇಂದಿನ ಕೆಲವು ಸಂದಿಗ್ಧವಾದ ಪರಿಸ್ಥಿತಿಯನ್ನು ನೀವು ಸರಳವಾಗಿ ನಿಭಾಯಿಸಲು ಕಲಿಯುವ ಅವಶ್ಯಕತೆ ಇದೆ.‌ ನಿಮ್ಮ ಸೌಂದರ್ಯಕ್ಕೆ ಯಾರಾದರೂ ಮನಸೋಲಬಹುದು.

ಕನ್ಯಾ ರಾಶಿ: ನಿಮಗೆ ಗೊತ್ತೇ ಇರದ ಕೆಲಸದಿಂದ ನಿಮಗೆ ಅಪವಾದವು ಕೇಳಿಬರುವುದು. ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲೂ ಆಗದು. ಬೇರೆ ಬೇರೆ ಆಲೋಚನೆಯು ನಿಮ್ಮ ಕೆಲಸದ ವೇಗವನ್ನು ನಿಯಂತ್ರಿಸುವುದು. ಪ್ರೇಮವು ನಿಮಗೆ ವಿಘ್ನದಂತೆ ತೋರಬಹುದು. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡುವರು. ಮಕ್ಕಳ ವಿಚಾರಕ್ಕೆ ಅಪಮಾನವನ್ನು ಎದುರಿಸಬೇಕಾಗಬಹುದು. ಎಲ್ಲ ಕಡೆಗಳಿಂದಲೂ ನಿಮ್ಮ ಅಸಮಾಧಾನವಾಗುತ್ತಿದ್ದು ಯಾರ ಬಳಿಯೂ ಹೇಳಿಕೊಳ್ಳಲಾಗದ ಸ್ಥಿತಿಯೂ ಇರಲಿದೆ. ಅನಾರೋಗ್ಯದ ಕಾರಣ ಹಣವೂ ನಿಮ್ಮ ಕೈಯಲ್ಲಿ ಇರದು. ಯಾರನ್ನಾದರೂ ಕೇಳೋಣ ಎಂದರೆ ನಿಮ್ಮ‌ ಮಾತಿನ ಮೇಲೆ ಯಾರಿಗೂ ವಿಶ್ವಾಸವೇ ಬಾರದು. ಭವಿಷ್ಯದ ಸುಂದರ ದಿನಗಳೊಂದೇ ನಿಮಗೆ ಸದ್ಯದ ಭರವಸೆ ಆಗಿದೆ‌.

ತುಲಾ ರಾಶಿ: ಇಂದು ನೀವು ಬಂಧುಗಳಿಗೆ ಸಹಕಾರ ಮಾಡುವಿರಿದಾರೂ ಪ್ರತಿಫಲದ ಅಪೇಕ್ಷೆಯು ಇರಲಿದೆ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರು ಇದ್ದರೆ ಅವರಿಂದ ದೂರವಿರಿ. ಬೇರೆಯವರಿಗೆ ತೊಂದರೆಯನ್ನು ನೀಡಿ ಕೆಲಸವನ್ನು ಸಾಧಿಸುವುದು ನಿಮಗೆ ಇಷ್ಟವಾಗದು. ಕಾನೂನಿಗೆ ಸಂಬಂಧಿಸಿದ್ದನ್ನು ಏಕಾಂಗಿಯಾಗಿ ನಿಭಾಯಿಸಿ ಜಯಿಸುವಿರಿ. ನೀವು ಕೊಟ್ಟ ಹಣವನ್ನು ಹಿಂದಿರುಗಿ ಪಡೆಯಲು ಕಷ್ಟವಾದೀತು. ವಿನಾಕಾರಣ ಮನಸ್ಸು ಬೆಳಗಿನಿಂದಲೇ ಮಂಕಾಗಿ ಇರುವುದು. ಬಂಧುಗಳ ಕಷ್ಟವನ್ನು ಹಂಚಿಕೊಳ್ಳುವಿರು. ಸರ್ಪರಾಜನಾದ ಆದಿಶೇಷನನ್ನು ಪೂಜಿಸಿ. ದೇಹಕ್ಕೆ ಸಂಬಂಧಿಸಿದ ರೋಗವು ಮಾಯವಾಗುವುದು.

ವೃಶ್ಚಿಕ ರಾಶಿ: ಆಸ್ತಿಯ ಖರೀದಿಯ ವಿಚಾರದಲ್ಲಿ ನಿಮಗೆ ಸರಿಯಾ ನಿರ್ಧಾರವನ್ನು ತೆಗೆದುಕೊಳ್ಳಲಾಗದೇ ಒದ್ದಾಡುವಿರಿ. ಇನ್ನೊಬ್ಬರ ಆದಾಯದ ಮೇಲೆ ಕಣ್ಣು ಹಾಕುವುದು ಸರಿಯಲ್ಲ. ನಿಮ್ಮ ಬಲವಾದ ಇಚ್ಛಾಶಕ್ತಿಯು ನಿಮಗೆ ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿಯಾಗುವುದು. ನಿಮ್ಮ ಯೋಗ್ಯವಾದ ಯೋಜನೆ ಇದ್ದರೂ ಅದನ್ನು ಸಂದರ್ಭಕ್ಕೆ ಸರಿಯಾಗಿ ಹೇಳುವುದು ಉತ್ತಮ. ಯಾರದೋ ಬಳಿ ಹೇಳಿ ಅದರ ಯಶಸ್ಸನ್ನು ಮತ್ಯಾರೋ ಪಡೆಯುವಂತೆ ಆಗುವುದು. ನಿಮ್ಮ ಬಗ್ಗೆ ಇದ್ದ ಪೂರ್ವಾಗ್ರಹದ ಭಾವನೆಗಳು ನಿಮ್ಮ‌ಇಂದಿನ ವರರ್ತನೆಯಿಂದ ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ಮೌನವಹಿಸುವಿರಿ. ನಿಮ್ಮ ವಿರುದ್ಧ ಏನಾದರೂ ನಡೆದರೆ ಕುಗ್ಗುವ ಅವಶ್ಯಕತೆ ಇಲ್ಲ.

ಧನು ರಾಶಿ: ವಿವಾಹಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕಗಳು ಬರಲಿದ್ದು ನಿಶ್ಚಯವಾದ ವಿವಾಹವು ಅನ್ಯಾನ್ಯ ಕಾರಣಗಳಿಂದ ಮುಂದೆ ಹೋಗುವುದು. ದೈವಜ್ಞರನ್ನು ಭೇಟಿಯಾಗಿ ಸಮಸ್ಯೆಗೆ ಇರುವ ಪರಿಹಾರವನ್ನು ಪಡೆದು, ಅದನ್ನು ಕುಲಪುರೋಹಿತರ ಸಮಕ್ಷಮದಲ್ಲಿ ಮಾಡಿಸಿ. ವಿದ್ಯೆಯ ಕಾರಣಕ್ಕೆ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಒತ್ತಡದ ಕಾರಣದಿಂದ ಶಿರೋವೇದನೆ ಕಾಣಿಸಿಕೊಳ್ಳುವುದು. ಇಂದು ನೀವು ಮಾಡಿದ ಕೆಲಸವು ನಿಷ್ಪ್ರಯೋಜಕ ಆಗಬಹುದು. ಇಂದಿನ ಬೇಸರವನ್ನು ಕಳೆಯಲು ಎಲ್ಲಿಗಾದರೂ ಹೊರಗೆ ಹೋಗಲಿದ್ದೀರಿ. ಅಶಕ್ತರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಕಲಾವಿದರಿಗೆ ಸೂಕ್ತ ಸ್ಥಾನಮಾನವು ಪ್ರಾಪ್ತವಾಗದೇ ಹೋಗುವುದು.

ಮಕರ ರಾಶಿ: ನಿಮ್ಮ ವಾಹನಕ್ಕಾಗಿ ಅಧಿಕ ಖರ್ಚನ್ನು ಮಾಡಬೇಕಾಗಿ ಬರಬಹುದು. ಆಲಸ್ಯದಿಂದ ಇರುವ ಕಾರಣ ಕಛೇರಿಯಲ್ಲಿ ಮೇಲಧಿಕಾರಿಯಿಂದ ನಿಮಗೆ ಸೂಚನೆ ಬರಬಹುದು. ಮಿತ್ರರ ನಡುವೆ ಬರುವ ಮನಸ್ತಾಪಗಳು ಅಯಾ ಸಂದರ್ಭಕ್ಕೆ ಮಾತ್ರ ಆಗಿರಲಿ. ನಿಮಗೆ ಬರುವ ಜವಾಬ್ದಾರಿಯನ್ನು ನೀವು ತಳ್ಳಿಹಾಕುವಿರಿ. ಪ್ರೇಮ ಪಾಶಕ್ಕೆ ಬೀಳುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಹೆಚ್ಚೆಯನ್ನು ಇಡಿ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ಸರಿ ಮಾಡಿಕೊಳ್ಳಿ. ಪ್ರೀತಿಯ ಮಾತುಗಳೇ ನಿಮ್ಮತ್ತ ಜನರನ್ನು ಆಕರ್ಷಿಸುವುದು ಮತ್ತು ವ್ಯಾಪಾರವು ಲಾಭದಾಯಕವಾಗುವುದು. ಮಹಾಗಣಪತಿ ಸ್ತೋತ್ರವು ನಿಮ್ಮ ಅಡೆತಡೆಗಳನ್ನು ನಿವಾರಿಸುವುದು.

ಕುಂಭ ರಾಶಿ: ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡುವಿರಿ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡುವ ತಾಳ್ಮೆ ಹಾಗೂ ಸಮಯ ಎರಡೂ ಇರಬಾರದು. ಬರಬೇಕಾದ ಹಣದಲ್ಲಿ ಸ್ವಲ್ಪ ಬಂದಿದ್ದು ನಿಮಗೆ ಸಂತೋಷವಾಗಲಿದೆ. ಇಂದು ನಿಮ್ಮ ಉತ್ಸಾಹವನ್ನು ಯಾರೂ ಕಡಿತಗೊಳಿಸಲು ಸಾಧ್ಯವಿಲ್ಲ. ಎಂತಹ ಕೆಲಸವೂ ಅನಾಯಾಸವಾಗಿ ಮುಗಿಯುವುದು. ಆದಾಯದ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಲಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಇಂದಿನ ನಿಮ್ಮ ಪ್ರಯಾಣವು ಬಹಳ ಗೊಂದಲ ಮಯವಾಗಿ ಇರುವರು. ಇನ್ನೊಬ್ಬರನ್ನು ಬೊಟ್ಟು ತೋರಿಸುವುದು ಕಡಿಮೆ ಮಾಡಿ.

ಮೀನ ರಾಶಿ: ಕುಟುಂಬದಲ್ಲಿ ಹಿರಿಯರಿಗೆ ಅನಾರೋಗ್ಯದಿಂದ ಆತಂಕದ ವಾತಾವರಣ ಇರಲಿದೆ. ಬಹಳ ದಿನಗಳಿಂದ ಮಾಡಬೇಕಿದ್ದ ಆಭರಣ ಖರೀದಿಯನ್ನು ಮುಂದೂಡಿ ಇಂದು ಖರೀದಿಸುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಿಸುವವರಾಗಿದ್ದರೆ ನಿಮಗೆ ಅನೇಕ ವಸ್ತುಗಳು ಲಾಭವಾಗಿ ಬರಲಿವೆ. ಬೆನ್ನು ನೋವು ಅಧಿಕವಾಗುವುದು. ವೃತ್ತಿಯನ್ನೇ ನಂಬಿ ಜೀವನವನ್ನು ನಡೆಸುವವರಿಗೆ ಹಠಾತ್ ಆಗಿ ಕೆಲಸದಿಂದ ಕೈ ಬಿಡುವುದು ಕಷ್ಟವಾದೀತು. ನಿಮ್ಮ ತಂತ್ರಗಳು ವ್ಯಾಪಾರದಲ್ಲಿ ಲಾಭವನ್ನು ತಂದೀತು. ಸಮಯಕ್ಕೆ ಉಚಿತವಾದ ಮಾತನ್ನು ಆಡಿ. ನಾಗ ದೇವರಿಗೆ ಶುದ್ಧ ಗೋವಿನ ಕ್ಷೀರದಿಂದ ಅಭಿಷೇಕ ಮಾಡಿ. ನಿಮ್ಮ ದೇಹಪೀಡಯು ಶಮನವಾಗುವುದು.

ಲೋಹಿತಶರ್ಮಾ – 8762924271 (what’s app only)