Daily Horoscope: ಪ್ರೀತಿ ತೋರಿಸಿಲ್ಲವೆಂದು ನಿಮ್ಮ ಸಂಗಾತಿ ಸಿಟ್ಟಾಗಬಹುದು, ಸಮಯ ನೀಡಿ

ಇಂದಿನ (2023 ಏಪ್ರಿಲ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಪ್ರೀತಿ ತೋರಿಸಿಲ್ಲವೆಂದು ನಿಮ್ಮ ಸಂಗಾತಿ ಸಿಟ್ಟಾಗಬಹುದು, ಸಮಯ ನೀಡಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 21, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಭರಣೀ, ಯೋಗ : ಪ್ರೀತಿ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಮಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:58 ರಿಂದ 12:31ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:50 ರಿಂದ 09:24ರ ವರೆಗೆ.

ಮೇಷ: ನಿಮಗಿಂದು ಪ್ರೀತಿಯನ್ನು ಕಳೆದುಕೊಳ್ಳತ್ತೇನೋ ಎಂಬ ಭಯವಿರಲಿದೆ. ಅನುಕೂಲವಿದ್ದರೆ ದೂರದಲ್ಲಿರುವ ತಂದೆ-ತಾಯಿಯರನ್ನು ಭೇಟಿ ಮಾಡಿ ಬನ್ನಿ. ನಿಮ್ಮ ಮನೆಯಯಿಂದ ನೀವು ಇಷ್ಟಪಡುವ ಪ್ರಾಣಿಯು ಕಾಣೆಯಾಗಬಹುದು. ನೀವು ನಿಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಂಡು ಸಂತೋಷವನ್ನೂ ಸಂಕಟವನ್ನೂ ಪಡುವಿರಿ. ನಿಮ್ಮ ಸಂಗಾತಿಯು ನೀವು ಪ್ರೀತಿ ತೋರಿಸಿಲ್ಲವೆಂದು ಸಿಟ್ಟಾಗಬಹುದು. ಆದಷ್ಟು ಸಮಯವನ್ನು ಅವರಿಗೆ ಕೊಡಿ, ಖುಷಿಪಡಿಸಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣಮಾಡಬೇಡಿ. ದೈವಕೃಪೆ ಸ್ವಲ್ಪ ಕಡಿಮೆ ಇದ್ದು ಅದನ್ನು ಹೆಚ್ಚು ಮಾಡಿಕೊಳ್ಳಿ.

ವೃಷಭ: ಆರ್ಥಿಕಮೂಲಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಿ. ಒಳ್ಳೆಯವರ ಸಹವಾಸವನ್ನು ಮೂದಲಿಸದೇ ಪ್ರೀತಿಯಿಂದ ಮಾತನಾಡಿ. ಬಂಧುಗಳ ವಿವಾಹಸಮಾರಂಭಗಳಿಗೆ ನೀವು ಹೋಗಲಿದ್ದೀರಿ. ಉತ್ತಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ.‌ ಇಲ್ಲವಾದರೆ ಅನಂತರ ದುಃಖಿಸಿ ಪ್ರಯೋಜನವಾಗದು. ಕುಲಕಸುಬನ್ನು ಕಲಿಯುವ ಮನಸ್ಸಾದೀತು, ಮುಂದುವಿರಿಸಿ. ಪ್ರಾಣಿಗಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅಧ್ಯಾಪನವೃತ್ತಿಯಲ್ಲಿ ಇದ್ದವರಿಗೆ ವಿದ್ಯಾರ್ಥಿಗಳು ಉಡುಗೊರೆಯೊಂದನ್ನು ನೀಡುವರು. ನಿಮ್ಮಿಂದ ಆಶೀರ್ವಾದವನ್ನು ಪಡೆದುಕೊಳ್ಳುವರು. ಇಂದು ಅಲಂಕಾರಕ್ಕೆ ಹೆಚ್ಚು ಸಮಯ ತಗುಲುವುದು. ಕುಲಗುರುವಿನ ಪ್ರಾರ್ಥನೆ ಮಾಡಿ.

ಮಿಥುನ: ಮಾತಿಗಾಗಿ ಮಾತು ಬೆಳೆಯಬಹುದು. ಅದು ಮತ್ತೇನೋ ಆಗುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಮಕ್ಕಳ ಮಾತು ನಿಮ್ಮನ್ನು ವಿಚಲಿತಗೊಳಿಸೀತು. ದಿನದ ಒಂದಿಷ್ಟು ಹೊತ್ತು ದೇವರಿಗಾಗಿ ಸಮಯವನ್ನು ಇಡಿ. ಅಭ್ಯಂಗಸ್ನಾನದ ಬಯಕೆಯಾಗುವುದು. ತಲೆ ಗಟ್ಟಿ ಇದೆ ಎಂದು ಬಂಡೆಗೆ ಹೋಗಿ ಕುಟ್ಟಲಾಗದು. ಅದೃಷ್ಟವಿದೆ ಎಂದು ಅಸಾಧ್ಯವಾದುದಕ್ಕೆ ನೀವು ಕೈ ಹಾಕಬೇಡಿ. ನಿಮ್ಮ ಇತಿಮಿತಿಗಳನ್ನು ನೋಡಿ ಮುಂದುವರಿಯಿರಿ. ನಿಮ್ಮಿಂದ ಸಾಲ ಪಡೆದವರ ಜೊತೆ ವಿವಾದವಾಗಬಹುದು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯುಳ್ಳವರಾಗುವಿರಿ. ಸ್ತ್ರೀಯರಿಂದ ಅಪವಾದಬರಬಹುದು. ಕುಲದೇವಿಯ ಸ್ಮರಣೆ ಮಾಡಿ.

ಕರ್ಕ: ಇಂದು ನೀವು ಸಾಲಕೊಟ್ಟ ಹಣವು ಬರುತ್ತದೆ ಎಂಬ ನಿರೀಕ್ಷೆಯು ಸುಳ್ಳಾಗಬಹುದು. ದುಂದುವೆಚ್ಚ ಮಾಡಿದ ಕಾರಣ ಮನೆಯಲ್ಲಿ ಕಲಹವಾಗಬಹುದು. ಕಛೇರಿಗೆ ವಿಳಂಬವಾಗಿ ಹೋಗಿ ಮೇಲಧಿಕಾರಿಗಳ‌ ಕೆಂಗಣ್ಣಿಗೆ ಗುರಿಯಾಗುವಿರಿ. ಸರಿ ಹಾಗು ತಪ್ಪುಗಳ ನಿರ್ಧಾರವನ್ನು ಮಾಡಲು ಬರದಿದ್ದರೆ ಯಾರದಾದರೂ ಸಹಕಾರ ತೆಗೆದುಕೊಳ್ಳಿ. ಅಹಂಕಾರಪಟ್ಟು ಪ್ರಯೋಜನವಿಲ್ಲ. ಅದು ಸೋತ ಅನಂತರ ಅರಿವಾದೀತು.‌ ಈಗಲೇ ಅದನ್ನು ಬಿಡುವುದು ಒಳ್ಳೆಯದು. ನಿಮ್ಮದಲ್ಲದ್ದನ್ನು ಬಯಸಿ ಮಾನಿಸಿಕವಾಗಿ ನೋವುಣ್ಣುವಿರಿ. ಖುಷಿಯಾಗಿರು ಅನೇಕ ವಿಚಾರಗಳನ್ನು ಬಿಟ್ಟು ದುಃಖದ ಸಂಗತಿಯನ್ನೇ ನೆನೆಯುವಿರಿ. ಅನಿರೀಕ್ಷಿತವಾಗಿ ಹಣವು ಖಾಲಿಯಾಗುವುದು.

ಸಿಂಹ: ಉನ್ನತ ಅಧಿಕಾರಕ್ಕೆ ಹೋಗುವ ಸಂಭವಿದ್ದರೂ ಹಿತಶತ್ರುಗಳ ಪಿತೂರಿಯಿಂದ ಅಥವಾ ಹಿಂದೆಂದೋ ಆಡಿದ ಮಾತಿನ್ನೇ ಇಟ್ಟುಕೊಂಡು ನಿಮಗೆ ಹುದ್ದೆಯನ್ನು ಕೊಡದೇಹೋಗಬಹುದು. ನಿಮ್ಮ ಸ್ಥಿರಾಸ್ತಿಯನ್ನು ಅತಿಕ್ರಮಣ ಮಾಡಲು ಹೊಂಚುಹಾಕುತ್ತಿದ್ದಾರೆ. ನೀವು ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜಕೀಯದ ಹಿನ್ನೆಯನ್ನು ಇಟ್ಟುಕೊಂಡು ನೀವು ಮುಂದುವರಿಯಬೇಕು. ಹೊಂದಾಣಿಕೆಯಿಂದ ಕಲಹವನ್ನು ಸರಿಮಾಡಿಕೊಳ್ಳಿ. ಇಂದು ನಿಮಗೆ ಹೋಗಬೇಕಾದಲ್ಲಿಗೆ ಹೋಗಲು ಆಗಲಿಲ್ಲ ಎಂದು ಬಹಳ ಬೇಸರವಾದೀತು. ಮನೆಯವರನ್ನು ಶಪಿಸಲೂಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಕಾಲವಾಗಿದೆ.

ಕನ್ಯಾ: ಇಷ್ಟು ವರ್ಷದ ಪರಿಶ್ರಮವು ಇಂದು ವ್ಯರ್ಥವಾಗುವುದು. ವಿಶೇಷವಾಗಿ ವಿದ್ಯಾರ್ಥಿಗಳು ಈ ವಿಚಾರದಲ್ಲಿ ಹತಾಶೆಗೊಳ್ಳುವರು. ಕುಟುಂಬದ ವಿಚಾರದಲ್ಲಿ ನಿಮಗೆ ಸಂತೋಷವು ಅಷ್ಟಾಗಿ ಆಗದು. ನಿಮ್ಮವರನ್ನು ತಮಾಷೆಮಾಡಲು ಹೋಗಿ ಗಂಭೀರವಾದೀತು. ಜ್ವರಾದಿ ರೋಗಗಳು ಕಾಣಿಸಿಕೊಂಡು ವೈದ್ಯರ ಮೂಲಕ ಕಡಿಮೆಯಾಗಲಿದೆ. ಭವಿಷ್ಯಕ್ಕೆ ಹಣವನ್ನು ಹೂಡುವ ಮನಸ್ಸಿದ್ದರೂ ಹಣದ ಕೊರತೆ ಇರಲಿದೆ. ಸ್ನೇಹಿತರ ಜೊತೆ ಭೋಜನಕೂಟ ಏರ್ಪಾಡಾಗಲಿದೆ. ಪ್ರೇಯಸಿಯನ್ನು ಕಾಣದೇ ಬೇಸರಿಸುವಿರಿ.

ತುಲಾ: ನಿಮ್ಮ ಕೆಲಸದ ಬಗ್ಗೆ ನಿಮ್ಮ ಗಮನವಿರಲಿ. ಇನ್ನೊಬ್ಬರ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸಿ. ಅಶ್ಲೀಷಪದಗಳನ್ನು ಬಳಸಿ ಮನೆಯಲ್ಲಿ ಬೈಗುಳ ತಿನ್ನುವಿರಿ. ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವಿರಿ. ಆತುರದಲ್ಲಿ ಏನನ್ನಾದರೂ ಮಾಡಿಕೊಂಡುಬಿಟ್ಟೀರಿ. ಬೆಳಗಿನ ಹೊತ್ತಿನಲ್ಲಿ ಇಂದಿನ ಕೆಲಸದ ಪಟ್ಟಿಯನ್ನು ಕಂಡು ತಲೆಬಿಸಿಯಾಗಿತ್ತು.‌ ಕಛೇರಿಯ ಹಾಗೂ ಮನೆಯ ಕೆಲಸವನ್ನು ನಿಭಾಯಿಸುವುದು ನಿಮಗೆ ಕಷ್ಟವೇ. ಆದರೂ ಅನಿವಾರ್ಯವಾಗಿರುತ್ತದೆ. ಕಾರ್ಯಕ್ಕಾಗಿ ಇಂದಿನ ಓಡಾಟವು ವ್ಯರ್ಥವೇ ಸರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ.

ವೃಶ್ಚಿಕ: ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರಲಿದೆ. ಬೇಸರಿಸಬೇಕಿಲ್ಲ‌. ಮುಂಬರುವ ದಿನಗಳು ಅವನ್ನೆಲ್ಲ ಸರಿದೂಗಿಸುವುದು‌ ಅಧಿಕಾರಿಗಳು ನಿಮ್ಮ ಕಾರ್ಯವನ್ನು ಕಂಡು ಪ್ರಶಂಸಿಸುವರು. ನೀವು ಜನನಾಯಕರಾಗಿದ್ದರೆ ನಿಮಗೆ ಉತ್ತಮ‌ ಬೆಂಬಲವು ಸಿಗಲಿದೆ. ರಾಜಕೀಯಕ್ಷೇತ್ರದವರು ಉತ್ತಮ ತಂತ್ರವನ್ನು ಈಗಿನಿಂದಲೇ ರೂಪಿಸಿಕೊಳ್ಳುವುದು ಉತ್ತಮ. ಕೊನೆಯ ಕ್ಷಣದವರೆಗೆ ಕಾಯಬೇಕಿಲ್ಲ. ಕಲಾವಿದರು ಕಲಾಪ್ರದರ್ಶನಕ್ಕೆ ವಿದೇಶಕ್ಕೆ ತೆರಳಬಹುದು. ಬೇಕಾದ ವ್ಯವಸ್ಥೆಯ ಜೊತೆ ಹೋಗಿ. ಹೊಸ ವಾತಾವರಣವು ನಿಮಗೆ ಪ್ರತಿಕೂಲವಾದೀತು. ಹಣವೂ ಗೊತ್ತಾಗದಂತೆ ಖಾಲಿಯಾದೀತು.

ಧನುಸ್ಸು: ಯಾವುದನ್ನು ಎಷ್ಟು ಮಾಡಬೇಕು ಎಂಬ ಜ್ಞಾನವಿರಲಿ. ಎಲ್ಲರ ಸಲಹೆಯನ್ನೂ ಮಾಡಲು ಹೋಗಿ ಯಾವುದೂ ಕೈಗೂಡದಂತೆ ಆಗುವುದು. ಭೂಮಿಯ ವ್ಯವಹಾರವು ಇಂದು ಅನಾಯಾಸವಾಗಿ ಮುಗಿಯುವುದು. ನೀವು ಬೀಳಲೆಂದೇ ಸ್ತ್ರೀಯೋರ್ವಳು ದೊಡ್ಡ ಕಂದಕವನ್ನು ಕೊರೆದಿರುವಳು. ಹೇಳಬೇಕಾದುದನ್ನು ನೇರವಾಗಿ ಸಂಕ್ಷೇಪವಾಗಿ ಹೇಳಿ. ಸಿಟ್ಟು ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಗ್ರಹಿಸಲು ಶ್ರಮವಹಿಸದೇ ಇರುವುದು ವಿಷಾದಕರ ಸಂಗತಿಯಾಗುವುದು. ಸಂಗಾತಿಯಿಂದ ಧನಸಹಾಯವನ್ನು ಪಡೆಯುವಿರಿ. ಉದ್ಯೋಗವನ್ನು ಬಿಡುವ ಆಲೋಚನೆ ಇದ್ದು, ಮನೆಯ ಸ್ಥಿತಿಯನ್ನು ಕಂಡು ಈ ತೀರ್ಮಾನಕ್ಕೆ ಬನ್ನಿ.

ಮಕರ: ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರೆ ನಿಮ್ಮ ಬೆಲೆಯೇ ಕಡಿಮೆಯಾಗುವುದು. ಒಮ್ಮೆ ಹೇಳಿ‌ ಸುಮ್ಮನಾಗಿ. ಹೂಡಿಕೆ ಮಾಡಿದ ಹಣದಿಂದ ಜೀವನ ನಡೆಸುವ ಸ್ಥಿತಿ ಬಂದಿದೆ ಎಂದು ಸಂಕಟಪಡುವಿರಿ. ಕೆಲವು ದಿನ ಹೀಗೆ ಇರಲಿದೆ. ದೈವದಲ್ಲಿ ಭಕ್ತಿಯಿಡಿ. ಯಾರ ಮೇಲೇ ಕುತಂತ್ರ ಮಾಡುವ ಅವಶ್ಯಕತೆ ಇಲ್ಲ. ನಿಮಗೆ ಸಿಗಬೇಕಾದುದು ಸಿಕ್ಕೇ ಸಿಗುತ್ತದೆ. ಸಿಗಲಿಲ್ಲವೆಂದರೆ ನಿಮ್ಮದಲ್ಲ ಅದು ಎಂದರ್ಥ. ಅಧಿಕಾರವನ್ನು ಸಂತೋಷಪಡಿಸಲು ಏನನ್ನಾದರೂ ಮಾಡುವಿರಿ. ಶುದ್ಧ ಬಟ್ಟೆಗೆ ಸಣ್ಣ ಚುಕ್ಕಿಯೂ ಎದ್ದು ತೋರುತ್ತದೆ. ಆಹಾರದ ಬಗ್ಗೆ ಗಮನವಿರಿಸಿಕೊಂಡು ತಿನ್ನಿ. ಭೂಮಿಯ ವ್ಯವಹಾರ ಸದ್ಯ ಬೇಡ.

ಕುಂಭ: ಆರ್ಥಿಕಸ್ಥಿತಿಯು ಅಭಿವೃದ್ಧಿ ಹೊಂದಿದರೂ ಯಾವುದೋ ಕಾರಣಕ್ಕೆ ಅದು ಖಾಲಿಯಾಗುವುದು. ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿಸಿರಿಕೊಳ್ಳಿ. ಇಂದು ಕಾಣೆಯಾಗಬಹುದು. ಕುಟುಂಬದಲ್ಲಿ ಒಡಕು ಬರುವಂತೆ ಕಂಡರೆ ಹಿರಿಯರಾದ ತಾವು ಅದನ್ನು ಸರಿ‌ಮಾಡಿಕೊಳ್ಳಲು ಪ್ರಯತ್ನಿಸಿ, ಹಾಗೆಯೇ ಬಿಡಬೇಡಿ. ಕೋಪದಿಂದ ಏನನ್ನಾದರೂ ಹೇಳಿ ಅನಂತರ ಮುಜುಗರವನ್ನು ಅನುಭವಿಸುವಿರಿ. ತಾಳ್ಮೆ‌ ನಿಮಗೆ ಬಹಳ ಮುಖ್ಯವಾಗಲಿದೆ. ಸರ್ಕಾರದ ಕೆಲಸವು ಮುಂದಿನವಾರಕ್ಕೆ ಹೋಗಲಿದೆ. ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳುವಿರಿ.

ಮೀನ: ಅಪರಿಚಿತರು ನಿಮ್ಮನ್ನು ಕಾಣಬೇಕೆಂದು ಬಂದು ಉದ್ಯೋಗದಲ್ಲಿ ಪಾಲುದಾರಿಕೆಯ ಪ್ರಸ್ತಾಪ ಮಾಡುವರು. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವಿರಿ. ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಬೇಡವೆಂದರೂ ನಿಮಗೇ ಬರಲಿದೆ. ಮನೆಯಲ್ಲಿ ಕಛೇರಿಯ ವಿಷಯವಾಗಿ ಜಗಳವೂ ನಡೆಯಬಹುದು. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ಸರಿಯಾಗುವ ತನಕ ತಾಳ್ಮೆ ಇರಲಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್