AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಇಂದು ಈ ರಾಶಿಯವರು ಸುಳ್ಳು ಹೇಳಿ ಸಿಕ್ಕಿಬೀಳಲಿದ್ದಾರೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದು ಈ ರಾಶಿಯವರು ಸುಳ್ಳು ಹೇಳಿ ಸಿಕ್ಕಿಬೀಳಲಿದ್ದಾರೆ
ಇಂದಿನ ರಾಶಿ ಭವಿಷ್ಯImage Credit source: Maharashtratimes.Com
Rakesh Nayak Manchi
|

Updated on: Apr 21, 2023 | 6:25 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಭರಣೀ, ಯೋಗ : ಪ್ರೀತಿ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಮಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:58 ರಿಂದ 12:31ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:50 ರಿಂದ 09:24ರ ವರೆಗೆ.

ಧನುಸ್ಸು: ಯಾವುದನ್ನು ಎಷ್ಟು ಮಾಡಬೇಕು ಎಂಬ ಜ್ಞಾನವಿರಲಿ. ಎಲ್ಲರ ಸಲಹೆಯನ್ನೂ ಮಾಡಲು ಹೋಗಿ ಯಾವುದೂ ಕೈಗೂಡದಂತೆ ಆಗುವುದು. ಭೂಮಿಯ ವ್ಯವಹಾರವು ಇಂದು ಅನಾಯಾಸವಾಗಿ ಮುಗಿಯುವುದು. ನೀವು ಬೀಳಲೆಂದೇ ಸ್ತ್ರೀಯೋರ್ವಳು ದೊಡ್ಡ ಕಂದಕವನ್ನು ಕೊರೆದಿರುವಳು. ಹೇಳಬೇಕಾದುದನ್ನು ನೇರವಾಗಿ ಸಂಕ್ಷೇಪವಾಗಿ ಹೇಳಿ. ಸಿಟ್ಟು ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಗ್ರಹಿಸಲು ಶ್ರಮವಹಿಸದೇ ಇರುವುದು ವಿಷಾದಕರ ಸಂಗತಿಯಾಗುವುದು. ಸಂಗಾತಿಯಿಂದ ಧನಸಹಾಯವನ್ನು ಪಡೆಯುವಿರಿ. ಉದ್ಯೋಗವನ್ನು ಬಿಡುವ ಆಲೋಚನೆ ಇದ್ದು, ಮನೆಯ ಸ್ಥಿತಿಯನ್ನು ಕಂಡು ಈ ತೀರ್ಮಾನಕ್ಕೆ ಬನ್ನಿ.

ಮಕರ: ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರೆ ನಿಮ್ಮ ಬೆಲೆಯೇ ಕಡಿಮೆಯಾಗುವುದು. ಒಮ್ಮೆ ಹೇಳಿ‌ ಸುಮ್ಮನಾಗಿ. ಹೂಡಿಕೆ ಮಾಡಿದ ಹಣದಿಂದ ಜೀವನ ನಡೆಸುವ ಸ್ಥಿತಿ ಬಂದಿದೆ ಎಂದು ಸಂಕಟಪಡುವಿರಿ. ಕೆಲವು ದಿನ ಹೀಗೆ ಇರಲಿದೆ. ದೈವದಲ್ಲಿ ಭಕ್ತಿಯಿಡಿ. ಯಾರ ಮೇಲೇ ಕುತಂತ್ರ ಮಾಡುವ ಅವಶ್ಯಕತೆ ಇಲ್ಲ. ನಿಮಗೆ ಸಿಗಬೇಕಾದುದು ಸಿಕ್ಕೇ ಸಿಗುತ್ತದೆ. ಸಿಗಲಿಲ್ಲವೆಂದರೆ ನಿಮ್ಮದಲ್ಲ ಅದು ಎಂದರ್ಥ. ಅಧಿಕಾರವನ್ನು ಸಂತೋಷಪಡಿಸಲು ಏನನ್ನಾದರೂ ಮಾಡುವಿರಿ. ಶುದ್ಧ ಬಟ್ಟೆಗೆ ಸಣ್ಣ ಚುಕ್ಕಿಯೂ ಎದ್ದು ತೋರುತ್ತದೆ. ಆಹಾರದ ಬಗ್ಗೆ ಗಮನವಿರಿಸಿಕೊಂಡು ತಿನ್ನಿ. ಭೂಮಿಯ ವ್ಯವಹಾರ ಸದ್ಯ ಬೇಡ.

ಕುಂಭ: ಆರ್ಥಿಕಸ್ಥಿತಿಯು ಅಭಿವೃದ್ಧಿ ಹೊಂದಿದರೂ ಯಾವುದೋ ಕಾರಣಕ್ಕೆ ಅದು ಖಾಲಿಯಾಗುವುದು. ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿಸಿರಿಕೊಳ್ಳಿ. ಇಂದು ಕಾಣೆಯಾಗಬಹುದು. ಕುಟುಂಬದಲ್ಲಿ ಒಡಕು ಬರುವಂತೆ ಕಂಡರೆ ಹಿರಿಯರಾದ ತಾವು ಅದನ್ನು ಸರಿ‌ಮಾಡಿಕೊಳ್ಳಲು ಪ್ರಯತ್ನಿಸಿ, ಹಾಗೆಯೇ ಬಿಡಬೇಡಿ. ಕೋಪದಿಂದ ಏನನ್ನಾದರೂ ಹೇಳಿ ಅನಂತರ ಮುಜುಗರವನ್ನು ಅನುಭವಿಸುವಿರಿ. ತಾಳ್ಮೆ‌ ನಿಮಗೆ ಬಹಳ ಮುಖ್ಯವಾಗಲಿದೆ. ಸರ್ಕಾರದ ಕೆಲಸವು ಮುಂದಿನವಾರಕ್ಕೆ ಹೋಗಲಿದೆ. ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳುವಿರಿ.

ಮೀನ: ಅಪರಿಚಿತರು ನಿಮ್ಮನ್ನು ಕಾಣಬೇಕೆಂದು ಬಂದು ಉದ್ಯೋಗದಲ್ಲಿ ಪಾಲುದಾರಿಕೆಯ ಪ್ರಸ್ತಾಪ ಮಾಡುವರು. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವಿರಿ. ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಬೇಡವೆಂದರೂ ನಿಮಗೇ ಬರಲಿದೆ. ಮನೆಯಲ್ಲಿ ಕಛೇರಿಯ ವಿಷಯವಾಗಿ ಜಗಳವೂ ನಡೆಯಬಹುದು. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ಸರಿಯಾಗುವ ತನಕ ತಾಳ್ಮೆ ಇರಲಿ.

-ಲೋಹಿತಶರ್ಮಾ ಇಡುವಾಣಿ