ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ 03:45 ರಿಂದ 05:21ರ ವರೆಗೆ, ಯಮಘಂಡ ಕಾಲ 09:17 ರಿಂದ 10:54ರ ವರೆಗೆ, ಗುಳಿಕ ಕಾಲ 12:30 ರಿಂದ 02:08ರ ವರೆಗೆ.
ಮೇಷ: ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ದಾಖಲೆಗಳು ಸರಿಯಾಗಿರಲಿ. ಆರೋಗ್ಯವು ಹದವು ತಪ್ಪಬಹುದು. ವಾಹನಕ್ಕಾಗಿ ಖರ್ಚನ್ನು ಮಾಡಬೇಕಾದೀತು. ನಿಮ್ಮ ಸಹಾಯವನ್ನು ಯಾರಾದರೂ ಕೇಳಿಬರಬಹುದು. ಒಂಟಿಯಾಗಿ ಇರಲು ನೀವಿಂದು ಇಷ್ಟಪಡಬಹುದು. ಭೂಮಿಯ ಕಲಹವು ತಾತ್ಕಾಲಿಕವಾಗಿ ನಿಲ್ಲಬಹುದು. ಸುಮ್ಮನೇ ಕುಳಿತು ಅಸಾಂವಿಧಾನಿಕ ವಿಚಾಗಳಲ್ಲಿ ಮಗ್ನರಾಗಬಹುದು. ವಾಹನ ಚಲಾಯಿಸಲು ನಿನಗೆ ಆತಂಕವಾಗಬಹುದು. ಮೊಂಡು ಧೈರ್ಯವನ್ನು ಮಾಡುವುದು ಬೇಡ.
ವೃಷಭ: ಇಂದು ನಿಮ್ಮ ಸ್ನೇಹ ಸಂಬಂಧವು ಸಡಿಲಾಗುವ ಸಾಧ್ಯತೆ ಇದೆ. ಹೊಸಬರನ್ನು ನೀವು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಒತ್ತಡದ ವಾತಾವರಣವನ್ನು ನೀವು ನಿಭಾಯಿಸಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವ ಸಾಧ್ಯತೆ ಇದೆ. ನಿಮ್ಮ ಸಂತೋಷವನ್ನು ಹಾಳುಮಾಡಲು ಕೆಲವರು ಚಿಂತಿಸಬಹುದು. ನಿಮ್ಮ ಘಟ್ಟಿತನವನ್ನು ನೀವು ಇಟ್ಟಕೊಳ್ಳುವುದು ಉತ್ತಮ. ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು.
ಮಿಥುನ: ನಿಮ್ಮದೇ ಹಣವಾದರೂ ನೀವು ಅದನ್ನು ಪಡೆಯಲು ಓಡಾಟ ಮಾಡಬೇಕಾದೀತು. ಸರ್ಕಾರಿ ದಾಖಲೆಗಳನ್ನು ನೀವು ಜೋಪಾನ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು. ಬಂಧುಗಳನ್ನು ನೀವು ಭೇಟಿ ಮಾಡುವ ಸಂದರ್ಭವು ಬರಬಹುದು. ನಿಮ್ಮ ನಿಯಮ ಪಾಲನೆ ನಿಮಗೆ ಖುಷಿ ಕೊಟ್ಟೀತು. ನಿಮಗೆ ಒತ್ತಡದಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿ ಹೋಗಿರಬಹುದು. ತಾಯಿಯ ಸಹಕಾರವನ್ನು ನೀವು ಅಧಿಕವಾಗಿ ಬಯಸುವಿರಿ. ಜನರೊಟ್ಟಿಗೆ ಬೆರೆಯಲು ನಿಮಗೆ ಇಂದು ಸಮಯ ಸಾಕಾಗದು. ಸಂಗಾತಿಯನ್ನು ನೀವು ಖುಷಿಪಡಿಸಲು ಪ್ರಯತ್ನಿಸುವಿರಿ.
ಕಟಕ: ಯಾರ ಬಗ್ಗೆಯೂ ತಿಳಿಯದೇ ಮಾತನಾಡುವುದು ನಿಮಗೆ ಉಚಿತವಲ್ಲ. ವಂಚನೆಗೆ ನೀವು ಬೆಲೆಯನ್ನು ಕೊಡಬೇಕಾದೀತು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ನೀವು ಬಹಳ ಪ್ರಯತ್ನ ಪಡುವಿರಿ. ನೀವು ಇಂದು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರುವಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸಲು ಸಾಧ್ಯ. ಪ್ರೀತಿಯಿಂದ ಅವರ ಜೊತೆ ಬರೆಯಿರಿ. ನಿಮ್ಮ ಮನಸ್ಸೂ ಹಗುರಾದೀತು. ವಿದ್ಯಾರ್ಥಿಗಳಿಗೆ ಓದಿನ ಆಸಕ್ತಿಯನ್ನು ತೋರಿಸಲು ಪೋಷಕರು ಶ್ರಮಿಸುವರು.
ಸಿಂಹ: ನೀವು ಇಂದು ಸಂಬಂಧಗಳ ಬೆಲೆಯನ್ನು ಅರ್ಥಮಾಡಿಕೊಳ್ಳುವಿರಿ. ವಿರೋಧದ ನಡುವೆಯೂ ನಿಮ್ಮ ಕೆಲಸವನ್ನು ನೀವು ಮಾಡಿಯೇ ತೀರುವಿರಿ. ಅಧಿಕ ಖರ್ಚು ನಿಮ್ಮನ್ನು ಚಿಂತೆಗೆ ತಳ್ಳಬಹುದು. ದೂರ ಪ್ರಯಾಣವನ್ನು ನೀವು ಇಷ್ಟಪಡುವಿರಿ. ದೈವದ ಸ್ಮರಣೆಯನ್ನು ಮಾಡಿ ನೀವು ಮುಂದುವರಿಯುವುದು ಒಳ್ಳೆಯದು. ಮೇಲಧಿಕಾರಳಿಂದ ಉದ್ಯೋಗದ ವರದಿ ನೀಡಲು ಆದೇಶ ಬರಬಹುದು. ಉದ್ಯೋಗದಲ್ಲಿ ನಿಶ್ಚಿಂತೆಯಿಂದ ಇದ್ದ ನಿಮಗೆ ಆತಂಕವು ಆರಂಭವಾಗಬಹುದು. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ.
ಕನ್ಯಾ: ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಬಹುದು. ಮನೆಯ ನಿರ್ಮಾಣವೂ ನಿಧಾನವಾಗಿ ನಿಮಗೆ ಬೇಸರವಾದೀತು. ನಿಮ್ಮ ಮಾತಿಗೆ ಬೆಲೆ ಇಲ್ಲದೇ ನೀವು ಸುಮ್ಮನಿರುವಿರಿ. ನೀವು ನಡೆಸುವ ಉದ್ಯಮವೂ ಸದ್ಯ ವೇಗವನ್ನು ಕಳೆದುಕೊಳ್ಳಬಹುದು. ನೀವು ಮನೆಯಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಯಾರದೋ ಅನುಕಂಪವನ್ನು ಪಡೆಯಲು ನೀವು ಪ್ರಯತ್ನಿಸುವಿರಿ. ನಿಮ್ಮದಾದ ಕೆಲವು ಆಚರಣೆಗಳನ್ನು ನೀವು ಬಿಡದೇ ಮಾಡುವಿರಿ. ವಿದೇಶದ ಪ್ರಯಾಣ ನಿಮಗೆ ಖುಷಿ ಇದ್ದರೂ ಸಂದರ್ಭವು ಅದಕ್ಕೆ ಅನುಕೂಲವಾಗಿಲ್ಲ. ಪಕ್ಷಪಾತ ಧೋರಣೆಯನ್ನು ನೀವು ಬಿಟ್ಟರೆ ಮಾತ್ರ ಒಳ್ಳೆಯದು.
ತುಲಾ: ನಿಮಗೆ ದಂಪತಿಯ ಜೊತೆ ಪುಣ್ಯಸ್ಥಳಗಳ ಭೇಟಿ ಮಾಡುವ ಬಯಕೆ ಇರಲಿದೆ. ಪತ್ನಿಗಾಗಿ ಅಚ್ಚರಿಯ ಉಡುಗೊರೆಯೊಂದನ್ನು ನೀವು ಕೊಡುವಿರಿ. ನೀವಿಂದು ಖರ್ಚಿನ ವಿಚಾರಕ್ಕೆ ಯಾವ ಹಿಂಜರಿಕೆಯನ್ನೂ ಇಟ್ಟಕೊಂಡಿರುವುದಿಲ್ಲ. ಮನೆಯಲ್ಲಿ ದೊಡ್ಡ ಧಾರ್ಮಿಕ ಕಾರ್ಯವನ್ನು ಮಾಡುವ ಯೋಚನೆ ಮಾಡುವಿರಿ. ಮಕ್ಕಳ ಜೊತೆ ಹರಟೆ ಹೊಡೆಯುತ್ತ ನಿಮ್ಮ ಕಾಲವನ್ನು ಸಂತೋಷದಿಂದ ಕಳೆಯುವಿರಿ. ನಿಮ್ಮಲ್ಲಿ ಒಂದು ರೀತಿ ನೆಮ್ಮದಿಯು ಸಹಜವಾಗಿ ಉತ್ಪತ್ತಿಯಾಗಲಿದೆ. ನಿಮ್ಮ ವರ್ತನೆಯನ್ನು ಗಮನಿಸುತ್ತಿರಬಹುದು. ಮಾತಿನಲ್ಲಿ ಸ್ಪಷ್ಟತೆ, ಮಂದಹಾಸವಿರಲಿ. ನೀವಂದುಕೊಂಡ ಕಾರ್ಯವು ಆಗಬಹುದು.
ವೃಶ್ಚಿಕ: ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ ಮೇಲೆ ಪರಿಣಾಮ ಬೀರೀತು. ಹೊಸ ಉದ್ಯಮಗಳಿಗೆ ಸದ್ಯ ಮುಂದುವರಿಯಿರಿಯುವುದು ಬೇಡ. ನ್ಯಾಯಾಲಯದ ಮೆಟ್ಟಲೇರುವ ಸಂದರ್ಭವನ್ನು ನೀವು ತಂದುಕೊಳ್ಳುವುದು ಬೇಡ. ಬೆಟ್ಟ ಗುಡ್ಡಗಳನ್ನು ಸುತ್ತುವುದು ನಿಮಗೆ ಪ್ರಿಯವಾದ ಸಂಗತಿಯಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯ ಕೊರತೆ ಹೆಚ್ಚು ಕಾಣುವುದು. ಇನ್ನೊಬ್ಬರ ಮೇಲೆ ನಿಮಗೆ ಬಹಳ ಅಕ್ಕರೆ
ಉಂಟಾಗಬಹುದು. ಸಹೋದರಿಯ ಆನಾರೋಗ್ಯದಲ್ಲಿ ನೀವು ಬಹಳ ಶ್ರಮವಿಸುವಿರಿ. ಒತ್ತಡಗಳಿಗೆ ಸಿಲುಕಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ.
ಧನು: ಇಂದು ನಿಮಗೆ ಬೆಳಗ್ಗೆಯಿಂದ ಮನಸ್ಸು ಜಾಡ್ಯದಿಂದ ಇರಲಿದೆ. ಸ್ವಾಭಿಮಾನದ ವಿಚಾರಕ್ಕೆ ಬಂದರೆ ನೀವು ಬಹಳ ನಿಷ್ಠುರರು. ಯಾರ ಸಹಾಯವನ್ನೂ ಬಾಯೊಡೆದು ಕೇಳುವ ಜಾಯಮಾನವಲ್ಲ. ಅತಿಯಾದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ತಳ್ಳಬಹುದು. ವಿವಾಹವು ನಿಮಗೆ ವಿಳಂಬ ಎಂದು ಕೇಳುವುದು ಬೇಸರ ತರಿಸಬಹುದು. ಶತ್ರುಗಳನ್ನು ನೀವೇ ಸೃಷ್ಟಿ ಮಾಡಿಕೊಳ್ಳುವುದು ಸರಿಯಲ್ಲ. ಈ ದಿನ ಬೇಸರ ಎನಿಸಿದರೆ ಹೊರಗೆ ಒಂಟಿಯಾಗಿ ಸುತ್ತಾಡಿ ಬನ್ನಿ. ಮನಸ್ಸಿಗೂ ದೇಹಕ್ಕೂ ಹಿತವೆನಿಸಬಹುದು. ಆರೋಗ್ಯವನ್ನು ಆಹಾರದ ಮೂಲಕವೇ ಸರಿಯಾಗಿ ಇಟ್ಟುಕೊಳ್ಳಿ.
ಮಕರ: ನಿಯಮಗಳು ನಿಮಗೆ ತೊಂದರೆಯಾದೀತು. ಅದನ್ನು ಮುರಿಯಲು ನೀವು ಪ್ರಯತ್ನಿಸಬಹುದು. ನಿಮಗೆ ಮಾರ್ಗದರ್ಶನ ಮಾಡಲು ಯಾರಾದರೂ ಬರಬಹುದು. ನಿಮ್ಮ ವೃತ್ತಿಯನ್ನು ಬಹಳ ಇಷ್ಟಪಟ್ಟ ಮಾಡುವಿರಿ. ಸಹೋದರರು ನಿಮಗೆ ಇಂದು ಬೇಕಾದ ಸಹಾಯ ಮಾಡಬಹುದು. ನೀವಿಂದು ಬಹಳ ಗಂಭೀರವಾಗಿ ಇದ್ದು ನಿಮ್ಮ ಜೊತೆ ಮಾತನಾಡಲು ಭಯಪಡುವರು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಅವರಿಗೆ ಬೇಕಾದುದನ್ನು ಕೊಡುವಿರಿ. ದೂರಪ್ರಯಾಣವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ವ್ಯವಹಾರವನ್ನು ಮಾಡುವಾಗ ಜಾಗರೂಕತೆ ಇರಲಿ.
ಕುಂಭ: ನಿಮಗೆ ಬರುವ ಅಪವಾದವನ್ನು ನೀವು ನುಂಗಿಕೊಂಡರೂ ನಿಮ್ಮವರು ಅದನ್ನು ಸಹಿಸಲಾರರು. ನಿಮ್ಮ ಸಮಾಜ ಸೇವೆಗೆ ಇಂದು ಫಲಿತಾಂಶ ಬರಬಬಹುದು. ಆಕಸ್ಮಿಕ ಧನದಿಂದ ಸಂತೋಷವಾಗಲಿದೆ. ಕಛೇರಿಯಲ್ಲಿ ನಿಮ್ಮ ಕೆಲಸಗಳು ವಿಳಂಬವಾಗಬಹುದು. ಆಧಿಕೃತ ಮಾಹಿತಿಯನ್ನು ಪಡೆಯದೇ ನೀವು ಯಾವ ನಿರ್ಧಾರಕ್ಕೂ ಬರುವುದು ಬೇಡ. ನಿಮ್ಮ ಹಣವು ಮೋಜಿಗೋಸ್ಕರ ಖಾಲಿಯಾಗಬಹುದು. ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಅಸಾಧ್ಯ. ಸಂಗಾತಿಯ ಮಾತನ್ನು ನೀವು ನಿರಾಕರಿಸಿದ ಕಾರಣ ಸಿಟ್ಟಾಗುವ ಸಾಧ್ಯತೆ ಇದೆ. ನೀವು ಇಂದು ಮಿತ ಬಳಕೆಯನ್ನು ಇಷ್ಟೊಡವಹುದು.
ಮೀನ: ನಿಮ್ಮ ಹಣವು ಹೋಗಬೇಕಾದ ವ್ಯಕ್ತಿಗೆ ಹೋಗದೇ ತಪ್ಪಿ ಇನ್ನೊಬ್ಬರಿಗೆ ಹೋಗಿ ನಿಮಗೆ ತೊಂದರೆ ಆದೀತು. ಹಿರಿಯರ ಮಾತಿಗೆ ಅಗೌರವ ಬೇಡ. ಒಂದು ಉದ್ಯೋಗದಲ್ಲಿ ಮನವು ಸ್ಥಿರವಾಗಿರಲಿ. ಅವಮಾನವಂತೆ ಕಂಡರೆ ಅಲ್ಲಿಂದ ದೂರನಡೆಯಿರಿ. ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಬಹುದು. ಸ್ನೇಹಕ್ಕೆ ಅನುಗುಣವಾಗಿ ನಿಮ್ಮ ಪ್ರತ್ಯುಪಕಾರವಿರಲಿದೆ. ಧನಾಗಮನದ ನಿರೀಕ್ಷೆಯಲ್ಲಿ ನೀವಿರುವಿರಿ. ಸತ್ಯಾಸತ್ಯತೆಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗದೇ ಇದ್ದೀತು. ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ.
ಲೋಹಿತಶರ್ಮಾ – 8762924271 (what’s app only)
Published On - 12:02 am, Tue, 6 June 23