Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 18 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಸಿಂಹ: ಹುಣ್ಣನ್ನು ಕೆದಕಿದಷ್ಟೂ ಅದು ದೊಡ್ಡ ಗಾಯವಾಗುವುದು. ಅದೇ ರೀತಿ ಸಮಸ್ಯೆಯನ್ನು ಕೆದಕಿದಷ್ಟೂ ದೊಡ್ಡದಾಗುವುದು. ಮಾತನಾಡದೇ ಸುಮ್ಮನಿರಿ. ತಾನಾಗಿಯೇ ತಣ್ಣಗಾಗುವುದು. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದಿಕೆಯಾಗಲಿದೆ. ಖರ್ಚನ್ನು ತಡೆಗಟ್ಟುವ ಸೂತ್ರವನ್ನು ಕಂಡುಕೊಳ್ಳಿ. ಲ ಮನಸ್ಸು ಹೇಳಿದಂತೆ ಕೇಳದೇ ಸಮಾಧಾನದಿಂದ ಇರಿ. ನಿಮಗೆ ಅವಶ್ಯಕತೆ ಇರುವ ಮಾಹಿತಿಯನ್ನು ಸರಿಯಾದ ಕಡೆಯಿಂದ ಪಡೆದುಕೊಳ್ಳಿ. ಯಾರ ಮಾತನ್ನೋ ನಂಬಿ ನಿಮ್ಮವರನ್ನು ಕಳೆದುಕೊಳ್ಳಬೇಡಿ.
ಕನ್ಯಾ: ಊರಿಂದ ಊರಿಗೆ ವರ್ಗಾವಣೆಯಾಗುತ್ತಿರುವುದಕ್ಕೆ ಬೇರಸಮಾಡಿಕೊಳ್ಳುವಿರಿ. ಅದಕ್ಕೆ ನಿಮ್ಮ ಸ್ನೇಹಿತರು ಸಮಾಧಾನವನ್ನು ಮಾಡುವುದು ಬಿಟ್ಟು ಸೊಪ್ಪು ಹಾಕುವರು. ದುಶ್ಚಟಕ್ಕೆ ನಿಮ್ಮ ಸ್ನೇಹಿತರು ನಿಮ್ಮನ್ನು ಬೀಳಿಸಿಯಾರು. ದೂರದ ಊರಿಗೆ ಎಷ್ಟೋ ದಿನಗಳ ಅನಂತರ ಪತ್ನಿಯ ಒತ್ತಾಯದ ಮೇರೆಗೆ ದಂಪತಿಸಹಿತ ಪ್ರಯಾಣ ಮಾಡುವಿರಿ. ಎಷ್ಟೋ ದಿನದ ಹಿಂದೆ ಹೊಸ ವಸ್ತುಗಳನ್ನು ಖರೀದಿಸಿದ್ದು ಇಂದು ನಿಮಗೆ ನೆನಪಾಗುವುದು. ಆರೋಗ್ಯದ ಕಡೆ ಹೆಚ್ಚು ಗಮನವಹಿಸುವ ಅಗತ್ಯವಿದೆ. ದಿನಚರಿಯನ್ನು ಸರಿಮಾಡಿಕೊಳ್ಳಿ.
ತುಲಾ: ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದು ನಿಮಗೆ ಅಚ್ಚರಿಯಾಗಬಹುದು. ಸದ್ಯ ಗ್ರಹಗತಿಗಳ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ನಿಮಗೆ ಅಪರೂಪದ ಉಡುಗೊರೆಯನ್ನು ಸ್ನೇಹಿತರು ಕಳುಹಿಸಿಕೊಡುವರು. ಇನ್ನೊಬ್ಬರ ವಿಷಯಕ್ಕೆ ಮೂಗು ತೂರಿಸಲು ಹೋಗದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗಿರಿ. ನಾಲಿಗೆಯ ಚಾಪಲ್ಯಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಎಂತಹ ಆಘಾತದ ಸ್ಥಿತಿಯನ್ನೂ ನಿರಾತಂಕವಾಗಿ ಎದುರಿಸುವಿರಿ. ಕಂಡಿದ್ದನ್ನು ಸತ್ಯವೆಂದು ನಂಬಬೇಡಿ. ಸಮಯ ಸರಿದಾಗ ಅರಿವಾಗುವುದು.
ವೃಶ್ಚಿಕ: ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡುವುದು ಉಚಿತ. ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಅಪವಾದಗಳನ್ನು ಕೇಳುವ ಸ್ಥಿತಿಯೂ ಬರಬಹುದು. ಮನಸ್ಸಿನಲ್ಲಿ ದೃಢತೆ ಇರಲಿ. ಇಂದು ಅನಿವಾರ್ಯವೊಂದು ಒದಗಿ ಬಂದಾಗ ಇದನ್ನು ಮೊದಲೇ ಕಲಿಯಬೇಕಿತ್ತು ಎಂದನ್ನಿಸುವುದು. ನಿಮಗೆ ಕೊಟ್ಟ ಹುದ್ದೆಯನ್ನು ನಿರ್ವಹಿಸುವಾಗ ಅದರ ಭಾರವೆಷ್ಟು ಎಂದು ಅರಿಯಿರಿ. ದಾಂಪತ್ಯವು ನಿಮಗೆ ಒಂದಿಷ್ಟು ಅನುಕೂಲತೆಗಳನ್ನು ಸೃಷ್ಟಿಸುತ್ತದೆ. ನಿಮ್ಮನ್ನು ಅಳೆಯುತ್ತಿರುವರು ಎಂಬುದನ್ನು ಗಮನಿಸಿ.