Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

|

Updated on: May 04, 2023 | 6:00 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 4) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 4 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಯಮಘಂಡ ಕಾಲ 06:10 ರಿಂದ 07:45ರ ವರೆಗೆ, ಗುಳಿಕ ಕಾಲ 09:20 ರಿಂದ 10:54ರ ವರೆಗೆ.

ಸಿಂಹ: ಕಂಡಿದ್ದನ್ನು ಕಂಡಂತೆ ಹೇಳುವವರಾದರೂ ತಾಳ್ಮೆ ಇಟ್ಟುಕೊಳ್ಳುವು ಒಳ್ಳೆಯದು. ಕಂಡಿದ್ದು ಮಾತ್ರ ಸತ್ಯವೆನ್ನಲು ಬಾರದು. ಉದ್ಯೋಗದ ನಿಮಿತ್ತ ದೂರ ಇದ್ದವರಿಗೆ ತೊಂದರೆಗಳು ಬರಬಹುದು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. ನಿಮ್ಮನ್ನು ಗುಂಪಿನಿಂದ ಹೊರಗಿಡುವ ಯೋಚನೆಯನ್ನು ಮಾಡಿಯಾರು. ನಿಮಗೆ ಸಿಕ್ಕಷ್ಟರಲ್ಲಿಯೇ ಸುಖವನ್ನು ಅನುಭವಿಸಿ. ಮೃಷ್ಟಾನ್ನ ಭೋಜನಕ್ಕೆ ತೆರಳುವಿರಿ. ದೂರ ಪ್ರಯಾಣಕ್ಕೆ ಹೋಗಿದ್ದರೆ ತೊಂದರೆಯಾಗಬಹುದು. ಅಪರಿಚರಿಂದ ಮೋಸ ಹೋಗುವ ಸಾಧ್ಯತೆ ಇದೆ.

ಕನ್ಯಾ: ನಿಮಗೆ ಅನ್ನಿಸಿದ್ದನ್ನು ಮಾಡುವುದಾದರೂ ಹಿರಿಯರ ಒಪ್ಪಿಗೆ ಪಡೆಯಿರಿ. ಕೃಷಿಗೆ ಸಂಬಂಧಪಟ್ಟ ಚಟುವಟಿಯಲ್ಲಿ ಭಾಗವಹಿಸುವಿರಿ. ದಿನಚರಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಭವಿಷ್ಯದ ಕುರಿತು ನಿಮಗಿರುವ ಕಲ್ಪನೆಯನ್ನು ಪತ್ನಿಯ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನ ಬೇಡ. ನಂಬಿಕೆಯಿಂದಲೇ ಮಾತನಾಡಿ.‌ ತಪ್ಪು ಮಾಡುವವನೂ ಸುಮ್ಮನಾದಾನು. ಮಗಳ ವಿವಾಹವನ್ನು ಮುಗಿಸಿ ಸ್ವಲ್ಪ ಭಾರವನ್ನು ಕಳೆದುಕೊಂಡಂತೆ ಅನ್ನಿಸಬಹುದು. ಪತಿಯನ್ನು ಪ್ರೀತಿಯ ಮಾತುಗಳಿಂದ ಓಲೈಸಿಕೊಳ್ಳುವಿರಿ.

ತುಲಾ: ಧಾರ್ಮಿಕ ಕಾರ್ಯಗಳನ್ನು ಮಾಡಲು‌ ಮನಸ್ಸಾಗಲಿದೆ. ಅಪರಿಚಿತ ಕರೆಗೆ ನೀವು ಸ್ಪಂದಿಸಬೇಕಾಗಿಲ್ಲ. ಹಳೆಯ ರೋಗಕ್ಕೆ ಔಷಧೀಯು ಸಿಗಬಹುದು. ನಿಮ್ಮ ಇಷ್ಟದವರನ್ನು ನೀವು ಭೇಟಿಯಾಗಲಿದ್ದೀರಿ. ಅಶಿಸ್ತಿನ ವಿಚಾರಕ್ಕೆ ಕೋಪಗೊಳ್ಳುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದಿಂದ ಒತ್ತಡವು ಬರಬಹುದು. ವೈದ್ಯರನ್ನು ಭೇಟಿ ಮಾಡಿ ನಿಮಗೆ ಆಗುತ್ತಿರುವ ನಿಮ್ಮ ಮೇಲೆ ತಪ್ಪು ತಿಳಿವಳಿಕೆಯು ಬರಬಹುದು. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ವಿವಾಹ ಸಮಾರಂಭಗಳಿಗೆ ಹೋಗಲಿದ್ದೀರಿ. ಅತಿಯಾದ ನೀರನ ಪ್ರದೇಶದಲ್ಲಿ ಜಾಗರೂಕರಾಗಿರಿ.

ವೃಶ್ಚಿಕ: ಎಲ್ಲ ಕೆಲಸಗಳನ್ನೂ ನೀವು ಒಬ್ಬರೇ ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡು ಕೆಲಸಗಳು ಅಪೂರ್ಣವಾಗಲಿದೆ. ವಸ್ತ್ರಗಳನ್ನು ಮಾರಾಟ ಮಾಡುವವರು ನೀವು ಆಗಿದ್ದರೆ ಅಲ್ಪ‌ ಲಾಭವನ್ನೂ ಪಡೆಯುವಿರಿ. ಉದ್ಯೋಗದಲ್ಲಿ ನಿಮ್ಮ ಸಮೂಹದ ಜೊತೆ ಕಲಹ ಮಾಡಿಕೊಳ್ಳುವಿರಿ. ವಾಹನ ಚಲಿಸುವಾಗ ಎಚ್ಚರಿಕೆ ಇರಲಿ. ಅಪಘಾತವಾಗುವ ಸಾಧ್ಯತೆ ಇದೆ.‌ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದರೆ ಇಂದು ನಿಮಗೆ ಅದು ಸಾಕು ಎನಿಸಬಹುದು. ಒಂದೇ ರೀತೀಯ ಕೆಲಸದಿಂದ ಬೇಸರವಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಸುತ್ತಾಟ ನಡೆಸುವಿರಿ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಮಾಡಿ. ಬರುವ ಆಪತ್ತು ಕಡಿಮೆಯಾದೀತು.