Nitya Bhavishya: ಕಳೆದುಕೊಂಡದ್ದನ್ನು ಪಡೆಯಬೇಕೆಂಬ ಛಲ ನಿಮ್ಮಲ್ಲಿ, ಸಮಯಪ್ರಜ್ಞೆಯಿಂದ ಕೆಲಸ ಮಾಡಿ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಫೆಬ್ರವರಿ 11, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Nitya Bhavishya: ಕಳೆದುಕೊಂಡದ್ದನ್ನು ಪಡೆಯಬೇಕೆಂಬ ಛಲ ನಿಮ್ಮಲ್ಲಿ, ಸಮಯಪ್ರಜ್ಞೆಯಿಂದ ಕೆಲಸ ಮಾಡಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Feb 11, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:08 ರಿಂದ 06:34ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:14 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:08ರ ವರೆಗೆ.

ಮೇಷ ರಾಶಿ: ಇಂದು ಪಾಲುದಾರಿಕೆಯಲ್ಲಿ ಇರುವವರು ಒಂದೆಡೆ ಕುಳಿತು ಉದ್ಯೋಗದ ಮಾರ್ಪಾಡುಗಳನ್ನು ಚಿಂತಿಸುವಿರಿ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವಿರಿ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ಅಗ್ನಿಯ ಸ್ಥಳದ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುಉ. ರಾಜಕೀಯದಲ್ಲಿ ಭಾಗವಹಿಸಲು ನಿಮಗೆ ಪೂರ್ಣವಾದ ಮನಸ್ಸು ಇರದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಎಲ್ಲವನ್ನೂ ನೀವೇ ಹೇಳಿ ಬಾಯಿ ನೋವು ಮಾಡಿಕೊಳ್ಳಬೇಕಿಲ್ಲ. ನಡೆಯಿಂದಲೂ ತಿಳಿಸಬಹುದು.

ವೃಷಭ ರಾಶಿ: ಇಂದು ನಿಮಗೆ ಪುಣ್ಯಸ್ಥಳಕ್ಕೆ ಹೋಗುವ ಆಸೆ ಇದ್ದರೂ ಅದನ್ನು ಪೂರೈಸಿಕೊಳ್ಳಲಾಗದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಇನ್ನೊಬ್ಬರ ಬಗ್ಗೆ ಮಾಡುವ ತಮಾಷೆಯು ನಿಮ್ಮ ತಲೆನೋವಾದೀತು. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ಕೆಲಸವನ್ನು ಶಿಸ್ತಿನಿಂದ‌ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ನಿಧಾನವಾಗುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ಆಯುಧದಿಂದ ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.‌ ನಿರುದ್ಯೋಗದಲ್ಲಿ ಇರುವವರಿಗೆ ಉದ್ಯೋಗಕ್ಕೆ ಹೋಗುವುದು ಕಷ್ಟವಾಗುವುದು.

ಮಿಥುನ ರಾಶಿ: ಇಂದು ನಿಮಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರಲಿದ್ದು ಅದಕ್ಕೆ ಸಮಯವು ಹೆಚ್ಚು ಹೋಗುವುದು. ಅಪರಿಚಿತರ ಭಯವು ಇದ್ದಕ್ಕಿದ್ದಂತೆ ಕಾಡಬಹುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಸಂಗಾತಿಯ ಪ್ರೀತಿಯು ನಿಮಗೆ ಬೇಸರವನ್ನು ಕೊಡಬಹುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಬೆನ್ನು ನೋವಿನ ಸಮಸ್ಯೆಗೆ ಸೂಕ್ತ ಪರಿಹಾರವು ಸಿಕ್ಕೀತು. ಪ್ರೇಮದ ಕಾರಣಕ್ಕೆ ವಿವಾಹವನ್ನು ಮಾಡಿಕೊಳ್ಳಲು ಒತ್ತಡ ಬರಬಹುದು. ನಿಮ್ಮ ಬಹ್ಗೆ ಬಂಧುಗಳಿಗೆ ಅಸಮಾಧಾನ ಇರುವುದು.

ಕಟಕ ರಾಶಿ: ನಿಮ್ಮ ವಿವಾಹದ ವಿಚಾರದಲ್ಲಿ ಯಾರಾದರೂ ಅಪಸ್ವರ ತರಬಹುದು. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ ಮಾಡದು. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ಮನೆಯಿಂದಲೇ ಕೆಲಸ ಮಾಡುವವರಿಗೆ ಒಂದಿಷ್ಟು ಕೆಲಸಗಳು ಬರಬಹುದು ಮತ್ತು ಮೀಟಿಂಗ್ ಗಳನ್ನು ಅಟೆಂಡ್ ಮಾಡಬೇಕಾಗಬಹುದು. ಹಾಗಾಗಿ ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಕಿರಿಕಿರಿ ಆಗುವುದು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು. ಕುಟುಂಬದ ಕಾರಣಕ್ಕೆ ನೀವು ಅನಾದರಕ್ಕೆ ಒಳಗಾಗುವಿರಿ. ಮಕ್ಕಳ ವಿಚಾರದಿಂದ ನಿಮಗೆ ಸಂತೋಷವು ಇರಲಿದೆ.

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ