Horoscope: ದಿನ ಭವಿಷ್ಯ; ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ, ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು
ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 16 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಧೃತಿ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:26 ರಿಂದ 10:59 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ ಮಧ್ಯಾಹ್ನ 02:06ರ ವರೆಗೆ.
ಸಿಂಹ ರಾಶಿ: ನಿಮ್ಮ ಭೂಮಿಯ ಖರೀದಿಯಲ್ಲಿ ಲಾಭವಿರಲಿದೆ. ಉತ್ಸಾಹದ ದಿನವನ್ನಾಗಿ ನೀವು ಮಾಡಿಕೊಳ್ಳುವಿರಿ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದಪಡುವುದು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ವರ್ತನೆಗಳಲ್ಲಿ ಬದಲಾವಣೆಯನ್ನು ಆಪ್ತರು ಗಮನಿಸುವರು. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು.
ಕನ್ಯಾ ರಾಶಿ: ಇಂದು ನಿಮ್ಮ ಬಂಧುಗಳ ಅನಿರೀಕ್ಷಿತ ಭೇಟಿ ನಿಮ್ಮ ಯೋಜನೆಯನ್ನು ತಲೆಕೆಳಗೆ ಮಾಡಲಿದೆ. ಉತ್ತಮ ಆಹಾರವನ್ನು ಸೇವಿಸುವಿರಿ. ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನಕ್ಕೆ ಸಿಕ್ಕಿಹಾಕಿಕೊಳ್ಳುವಿರಿ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ನಿದ್ರಾಹಿನತೆಯಿಂದ ಆಲಸ್ಯವೂ ಬರಬಹುದು. ಉತ್ತಮ ಪುಸ್ತಕವನ್ನು ಇಂದಿನ ಸಖನನ್ನಾಗಿಸಿಕೊಳ್ಳಿ. ಇಂದು ನೀವು ಯಾರ ಮಾತಿಗೂ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಅಪರಿಚಿತರ ಜೊತೆ ಸೌಹಾರ್ದವಾಗಿ ಮಾತನಾಡಿ.
ತುಲಾ ರಾಶಿ: ಇಂದು ನಿಮ್ಮ ಬಳಿ ವಿವಾಹದ ಬಗ್ಗೆಯೂ ಮಾತನಾಡಬಹುದು. ಸ್ತ್ರೀಯರು ಇಂದು ತಾಳ್ಮೆಯನ್ನು ಕಳೆದುಕೊಂಡು ದುಃಖಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಎಲ್ಲದಕ್ಕೂ ಮಿತಿಯಿದೆ ಎಂದು ನಿಮಗೆ ನೀವೇ ಅಂದುಕೊಂಡು ಸಮಾಧಾನವನ್ನು ಪಡೆಯುವಿರಿ. ನೀವಂದುಕೊಂಡ ಯೋಚನೆಗೆ ಸರಿಯಾದ ಯೋಜನೆಯಾಗದೆ ತಲೆಕೆಡಿಕೊಳ್ಳಲಿದ್ದೀರಿ. ಅತಿಯಾದ ಮಾತು ನಿಮ್ಮ ಜೊತೆಗಿರುವವರಿಗೆ ಅಸಹ್ಯವಾದೀತು. ನಿಮ್ಮ ವಿರೋಧಿಗಳನ್ನು ಸ್ತಬ್ಧಗೊಳಿಸೀತು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಸಹವಾಸದ ಕಾರಣ ನಿಮ್ಮ ಮೇಲೆ ಸಲ್ಲದ ಆರೋಪಗಳು ಕೇಳಿಬರಬಹುದು.
ವೃಶ್ಚಿಕ ರಾಶಿ: ಇಂದು ಮಕ್ಕಳ ಜೊತೆ ಬಹಳ ಸಂತೋಷದಿಂದ ಕಳೆಯುವಿರಿ. ಧಾನ್ಯ ವ್ಯಾಪಾರದವರಿಗೆ ಹೆಚ್ಚಿನ ಲಾಭವಿದೆ. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ನಿಮ್ಮ ಪ್ರಭಾವವು ಅಷ್ಟಾಗಿ ನಡೆಯದು. ಸಹೋದರನ ಜೊತೆ ನಿಮ್ಮ ಕಲಹವಿರಲಿದೆ. ಮನೆಯ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಹೊಸ ವಸ್ತ್ರಗಳ ಖರೀದಿಯನ್ನು ಮಾಡಲಿದ್ದೀರಿ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.




