ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಏಪ್ರಿಲ್ 2) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಪರಿಘ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:32 ರಿಂದ 11:04ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:36 ರಿಂದ 02:08ರ ವರೆಗೆ.
ಧನು ರಾಶಿ : ನಿಮಗೆ ಇಂದು ಕೆಲವು ಪ್ರಮುಖ ವ್ಯಕ್ತಿಗಳ ಜೊತೆ ಸಂವಹನ ಮಾಡುವ ಅವಕಾಶಗಳು ಸಿಗುವುದು. ನಿಮ್ಮ ಗೌರವವನ್ನು ಮಾತಿನಿಂದ ಪಡೆದುಕೊಳ್ಳುವಿರಿ. ಪ್ರಮುಖ ಕೆಲಸ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮತ್ತೆ ಮತ್ತೆ ಚಿಂತಿಸಿ. ನಿಮ್ಮ ಸಣ್ಣ ತಪ್ಪು ಕೂಡ ವ್ಯವಸ್ಥೆಗೆ ತೊಂದರೆ ಉಂಟುಮಾಡಬಹುದು. ವ್ಯವಹಾರದಲ್ಲಿ ನೀವು ಮಾಡಿದ ನೀತಿಗಳನ್ನು ಸಾಧ್ಯವಾದಷ್ಟು ಬೇಗ ಬದಲಾಯಿಸಿ. ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ತಂತ್ರಜ್ಞಾನದ ಬಗ್ಗೆ ಮಾಹಿತಿ ಕಡಿಮೆ ಇರುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಗುಣಮುಖವಾಗುವ ಆರೋಗ್ಯದಿಂದ ಸಮಾಧಾನ ಸಿಗಲಿದೆ.
ಮಕರ ರಾಶಿ : ನೀವು ಇಂದು ಭಿನ್ನವಾಗಿಯೂ ಸುಂದರವಾಗಿಯೂ ಕಾಣಿಸಿಕೊಳ್ಳುವಿರಿ. ಯಾರದೋ ಕಾರಣಕ್ಕೆ ನಿಮ್ಮಲ್ಲಿ ಉತ್ಸಾಹ ಬರುವುದು. ನಿಮ್ಮ ಭಾವನಾತ್ಮಕತೆ ಮತ್ತು ಉದಾರತೆಯ ಲಾಭವನ್ನು ಪಡೆದುಕೊಳ್ಳುವರು. ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುವುದು ಅನಿವಾರ್ಯವಾಗಬಹುದು. ದಾಂಪತ್ಯದಲ್ಲಿ ಸೌಹಾರ್ದ ಮಾತುಕತೆಗಳು ಇರುವುದು. ನಿಮ್ಮ ಪ್ರಭಾವವೂ ಇಂದು ಇತರರ ಮೇಲೆ ಹೆಚ್ಚಾಗಿರಲಿದೆ. ಕುಟುಂಬದಲ್ಲಿಯೂ ನೀವು ಗೌರವವನ್ನು ಪಡೆಯುವಿರಿ. ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಯಸಿದರೆ ಸಾಮಾಜಿಕ ಸಂಸ್ಥೆಗೆ ಸೇರಬಹುದು. ಭೂಮಿಯ ಮೇಲೆ ಹೂಡಿಕೆ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ.
ಕುಂಭ ರಾಶಿ : ಇಂದು ನೀವು ರಾಜಕೀಯದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ತೋರಿಸುವಿರಿ. ಕೆಲವು ಉತ್ತಮ ಅವಕಾಶಗಳನ್ನು ಬಿಟ್ಟಕೊಳ್ಳುವುದು ಬೇಡ. ಪರಿಚಿತರಿಂದ ಪಡೆದ ಹಣವನ್ನು ಅವರಿಗೆ ಮರಳಿ ನೀಡುವಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ನಾನಾ ಕಾರ್ಯಗಳಿಂದ ಒತ್ತಡವಿದ್ದು ಇದರಿಂದ ಉದ್ವಿಗ್ನತೆ ಇರುತ್ತದೆ. ನೀವು ವಿರುದ್ಧ ಲಿಂಗಿಗಳ ಬೆಂಬಲವನ್ನು ಪಡೆಯುತ್ತೀರಿ. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಇನ್ನೊಬ್ಬರ ಮೇಲೆ ನಿಮಗರ ಪಶ್ಚಾತ್ತಾಪಭಾವ ಬರುವುದು. ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ. ಕೆಲವು ವಿಚಾರಕ್ಕೆ ತೀರ್ಮಾನವನ್ನು ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಬಲವಾದ ನೋವನ್ನು ಪಡೆಯಬೇಕಾದೀತು.
ಮೀನ ರಾಶಿ : ಇಂದು ನಿಮಲ್ಲಿ ಸಕಾರಾತ್ಮಕ ಮನೋಭಾವವು ಇರುವುದು. ನಿಮಗಾಗಿ ಸಿಕ್ಕ ಅಲ್ಪ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಿರಿ. ಬಂಧುಗಳ ಜೊತೆ ಸಂಬಂಧವು ಚೆನ್ನಾಗಿರುವುದು. ಸಹೋದರರಿಂದ ಸಹಾಯ ಪಡೆಯುವಿರಿ. ಮಕ್ಕಳು ನಿಮ್ಮ ವಿರುದ್ಧ ದಿಕ್ಕಿನ ಕಡೆ ಇರುವರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)