ದಿನ ಭವಿಷ್ಯ: ಈ ರಾಶಿಯವರು ಕೆಲಸದಲ್ಲಿ ಯಶಸ್ಸು ಕಾಣುವರು; ಆರ್ಥಿಕ ಸ್ಥಿತಿ ಸುಧಾರಣೆ
Horoscope Today 09 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಶನಿವಾರದಂದು ಅಧಿಕಾರಕ್ಕಾಗಿ ಕೋಲಾಹಲ, ಅಸ್ಪಷ್ಟ ಮಾಹಿತಿಯಿಂದ ನಿರ್ಧಾರ, ದೂರಪ್ರಯಾಣ, ಬಂಧುಗಳ ಸಮಾಗಮ, ಆಪ್ತರಿಂದ ಸಲಹೆ ಇದು ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶುಕ್ಲ, ಕರಣ : ಬಾಲವ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:11 – 10:46, ಯಮಗಂಡ ಕಾಲ 13:56 – 15:31, ಗುಳಿಕ ಕಾಲ 06:00 – 07:35.
ಮೇಷ ರಾಶಿ: ಆಸ್ತಿ ವಿವಾದವು ನಿಮಗೆ ಅನುಕೂಲಕರವಾಗಿ ಬಗೆಹರಿಯುತ್ತದೆ. ಪಾಲುದಾರರ ಬಗ್ಗೆ ಕಿವಿಕಚ್ಚುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರವು ತುಂಬಾ ಅನುಕೂಲಕರವಾಗಿ ಮುಂದುವರಿಯುತ್ತದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ.
ವೃಷಭ ರಾಶಿ: ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನು ಮಾಡಲು ನೀವು ಒಂದು ಉತ್ತಮ ಮಾರ್ಗವನ್ನು ಕಂಡುಕೊಳ್ಳುವಿರಿ. ಅಂತಶ್ಶತ್ರುವಿನ ಬಗ್ಗೆ ಗಮನ ಕೊಡದೇ ನಿಮಗೆ ಸೋಲಾಗಬಹುದು. ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಕೆಲವು ವಿಶೇಷ ಕೆಲಸಗಳಿಗಾಗಿ ನೀವು ಮಾಡುತ್ತಿರುವ ಪ್ರಯತ್ನಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ನಿಮ್ಮ ಮಿತಿಯಲ್ಲಿ ಉಳಿತಾಯ ಮಾಡುವಿರಿ. ನಿಮ್ಮ ಅಸ್ತಿತ್ವವನ್ನು ಗುರುತಿಸಿಲ್ಲ ಎಂಬ ಬೇಸರ ಇರುವುದು.
ಮಿಥುನ ರಾಶಿ: ವ್ಯವಹಾರದಲ್ಲಿ ಇಂದು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸುತ್ತೀರಿ. ತಾರ್ಕಿಕ ಅಂತ್ಯವನ್ನು ಸಂಬಂಧದಲ್ಲಿ ಮಾಡಿಕೊಳ್ಳುವಿರಿ. ಭಾವನೆಗಳನ್ನು ಬಂಧದಿಂದ ಬಿಡುಗಡೆ. ನಿಮಗೆ ಬೇಕಾಗಿರುವ ಹಣವು ಸಿಗಲು ಪ್ರಾರಂಭವಾಗುತ್ತದೆ. ಪ್ರಮುಖ ಕೆಲಸಗಳು ಪರಿಶ್ರಮದಿಂದ ಪೂರ್ಣಗೊಳ್ಳುತ್ತವೆ. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ನಿಮ್ಮ ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು.
ಕರ್ಕಾಟಕ ರಾಶಿ: ವಾಹನದ ದುರಸ್ತಿಯನ್ನು ಮಾಡಬೇಕಾಗಿಬರಬಹುದು. ಪ್ರಮುಖ ವಿಷಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಕ್ಕೆ ಆಸಕ್ತಿ ಇರಲಿದ್ದು ತೊಡಕು ನಿವಾರಣೆ ಮಾಡದೇ ಸಾಧ್ಯವಾಗದು. ವಾಹನ ಖರೀದಯ ಪ್ರಯತ್ನ ಕೈಗೂಡಲಿವೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ.
ಸಿಂಹ ರಾಶಿ: ನಿಮಗೆ ಉನ್ನತ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ನಡೆಯುವುದು. ಕುಟುಂಬದಿಂದ ಅನರಿಕ್ಷಿತ ಸುದ್ದಿ, ಬೇಸರವಾಗಲಿದೆ. ವ್ಯವಹಾರದಲ್ಲಿನ ಚಟುವಟಿಕೆಗಳು ಬಹಳವಾಗಿ ಬೆಳೆಯುತ್ತವೆ. ಕುಟುಂಬ ಜೀವನವು ಶಾಂತಿಯುತವಾಗಿ ಮುಂದುವರಿಯುತ್ತದೆ. ಮಕ್ಕಳ ಜೊತೆ ಎಲ್ಲಿಗಾದರೂ ಸುತ್ತಾಡಲು ಹೋಗುವಿರಿ. ವ್ಯವಹಾರಗಳು ಲಾಭದಾಯಕವಾಗುತ್ತವೆ. ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು.
ಕನ್ಯಾ ರಾಶಿ: ಇಂದು ನಿಮ್ಮ ಆರ್ಥಿಕ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಸ್ಪರ್ಧಾತ್ಮಕವಾಗಿ ಸೋಲುವ ಸಂಭವವಿದೆ. ಉದ್ಯೋಗದಲ್ಲಿ ಇರುವವರಿಗೆ ಕೆಲವು ಆಯ್ಕೆಗಳನ್ನು ಯಾರಾದರೂ ಕೊಡಬಹುದು. ಕೆಲವು ಸಂಬಂಧಿಕರಿಂದಾಗಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಮಕ್ಕಳ ಖರ್ಚಿಗಾಗಿಯೇ ಒಂದಿಷ್ಟು ಹಣವನ್ನು ಪ್ರೀತಿಯಿಂದ ಕೊಡುವಿರಿ. ಮನೆಯ ಸ್ಥಳವನ್ನು ಬದಲಾಯಿಸಬೇಕಾಗಬಹುದು.
ತುಲಾ ರಾಶಿ: ಪರರ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡು ಕಳೆಯುವಿರಿ. ವ್ಯವಹಾರದಲ್ಲಿನ ಹಳೆಯ ನಷ್ಟಗಳಿಂದ ಚೇತರಿಸಿಕೊಳ್ಳುವ ಕೆಲಸ ಪ್ರಾರಂಭವಾಗಬಹುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ದೈವಭಕ್ತಿಯಿಂದ ಮನಸ್ಸಿನ ಗೊಂದಲವನ್ನು ಪರಿಹರಿಸಿಕೊಂಡು ಸ್ಥೈರ್ಯವನ್ನು ತಂದುಕೊಳ್ಳುಬಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ.
ವೃಶ್ಚಿಕ ರಾಶಿ: ವೃತ್ತಿಯಲ್ಲಿ ಕೆಲವು ಅನಿರೀಕ್ಷಿತ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗಿಬರಬಹುದು. ಸ್ವಂತವಾಗಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ ಇರುಬುದು. ಉದ್ಯಮದಲ್ಲಿ ಸ್ವಲ್ಪಮಟ್ಟಿನ ಒತ್ತಡ ಕಾಣಿಸುವುದು. ನಿರ್ಮಾಣದ ಬಗ್ಗೆ ಯೋಗ್ಯ ವ್ಯಕ್ತಿಗಳ ಜೊತೆ ಸಂವಹನ ನಡೆಸಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವ ಇಚ್ಛೆ ಇರಲಿದೆ.
ಧನು ರಾಶಿ: ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸುವಂತೆ ಮಾಡಿದರೂ ನೀವು ಅದನ್ನು ಬಿಡಲಾರಿರಿ. ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ನಿಮ್ಮ ಖರ್ಚುಗಳನ್ನು ಸಹ ನಿಯಂತ್ರಣದಲ್ಲಿಡಿ. ಮಹಿಳೆಯರ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಆದಾಯವು ಉತ್ತಮವಾಗಿ ಉಳಿಯುತ್ತದೆ. ಎಲ್ಲರಿಂದ ಪ್ರೀತಿ ಕಡಿಮೆಯಾದಂತೆ ತೋರುವುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಸ್ಥಿರಾಸ್ತಿಯನ್ನು ವ್ಯವಹಾರ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಯುಕ್ತಿಯಿಂದ ಕೆಲಸ ಮಾಡುವುದು ಒಳಿತು.
ಮಕರ ರಾಶಿ: ಯಾರಿಂದಲೂ ಪ್ರಶಂಸೆಯನ್ನು ನಿರೀಕ್ಷಿಸಲಾರಿರಿ. ಸ್ವಚ್ಛತೆ ಸರಿಯಾಗಿ ಆಗಿಲ್ಲ ಎಂದು ಅನ್ನಿಸಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ, ಶಾಂತ ಮನಸ್ಸಿನಿಂದ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸಿ. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ನಿಮ್ಮ ಸರಿಯಾದ ಕೆಲಸವನ್ನು ಮಾಡಿ. ಹಳೆಯ ಮನೆಯ ದುರಸ್ತಿ ಕಾರ್ಯವು ಜರುಗಲಿದೆ.
ಕುಂಭ ರಾಶಿ: ಸುತ್ತಲಿನ ಪರಿಸ್ಥಿತಿಯನ್ನು ಗಮನಿಸಿಕೊಂಡು ವ್ಯವಹರಿಸಿ. ಕೆಲವು ಸಮಯದಿಂದ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಸಂತೋಷ, ತೃಪ್ತಿ ವಾತಾವರಣ ಇರುತ್ತದೆ. ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸ್ಥಾನ ಅಥವಾ ಯಶಸ್ಸನ್ನು ಈಗ ಸಾಧಿಸಬಹುದು. ಬಡ್ತಿ ಅಥವಾ ಅಪೇಕ್ಷಿತ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ.
ಮೀನ ರಾಶಿ: ಪರರಿಂದ ತೊಂದರೆಯ ಆಗಿರುವ ಭೀತಿ ಕಾಡಲಿದೆ. ಸ್ವಂತ ಉದ್ಯಮಿಗಳು ಹೆಚ್ಚಿನ ಲಾಭವನ್ನೂ ಪಡೆಯುವರು. ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. ಗಳಿಕೆಯ ಮಾರ್ಗಗಳು ಹೆಚ್ಚಾಗುತ್ತವೆ. ಶಾಂತವಾಗಿ ಕೆಲಸ ಮಾಡುವುದರಿಂದ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಕಳೆದುಕೊಂಡ ವಸ್ತುವನ್ನು ಬೇರೆ ರೀತಿಯಲ್ಲಿ ಪಡೆದುಕೊಳ್ಳುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಇಷ್ಟವಾಗದು.
ಲೋಹಿತ ಹೆಬ್ಬಾರ್ – 8762924271 (what’s app only)




