Weekly Horoscope: ವಾರ ಭವಿಷ್ಯ: ನ.05 ರಿಂದ 11 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 05, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ನವೆಂಬರ್ 05 ರಿಂದ​ 11 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ನ.05 ರಿಂದ 11 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ನವೆಂಬರ್ 05 ರಿಂದ​ 11 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ನವೆಂಬರ್ ತಿಂಗಳ ಎರಡನೇ ವಾರವು ಶುಭಾಶುಭಗಳಿಂದ ಕೂಡಿರುವ ಮಿಶ್ರವಾದ ವಾರವು ಇದಾಗಲಿದೆ. ನಿಮ್ಮ ಮನೆಯಲ್ಲಿ ಗುರುವಿದ್ದು ನಿಮಗೆ ಮಾನಸಿಕ‌ ಧೈರ್ಯವನ್ನು ಕೊಡಿಸುವನು. ಸಂಗಾತಿಯ ಆರೋಗ್ಯವೂ ವೃದ್ಧಿಯಾಗುವ ಲಕ್ಷಣವು ನಿಮಗೆ ಗೊತ್ತಾಗಲಿದೆ. ನಿಮ್ಮ ಶತ್ರಗಳನ್ನು ಜಯಿಸುವುದು ಕಷ್ಟವಾದೀತು. ನಿಮಗೆ ಗೊತ್ತಿಲ್ಲೇ ಎಷ್ಟೋ ಕೆಟ್ಟ ವಿಚಾರಗಳು ನಿಮ್ಮ ಸುತ್ತ ನಡೆಯುತ್ತಿದ್ದರೂ ಸುಮ್ಮನಿರುವಿರಿ. ಸಂದರ್ಭಕ್ಕೆ ಸರಿಯಾಗಿ ಆಡಿದ ಮಾಯು ಅನಾಹುತವನ್ನು ತಪ್ಪಿಸುವುದು. ಸುಬ್ರಹ್ಮಣ್ಯನ ಆರಾಧನೆಯೇ ನಿಮ್ಮ ಎಲ್ಲ ದುರ್ಬಲವನ್ನೂ ಸಬಲವಾಗಿಸುವುದು.

ವೃಷಭ ರಾಶಿ : ಎರಡನೇ ವಾರವು ನಿಮಗೆ ಸಾಮಾನ್ಯ ವಾರವಾಗಿರಲಿದೆ. ಪಂಚಮದಲ್ಲಿ ಇರುವ ಶುಕ್ರನು ನಿಮ್ಮ ಅಭೀಷ್ಟವನ್ನು ಪೂರ್ಣ ಮಾಡನು. ಸಪ್ತಮದಲ್ಲಿ ಬುಧನ‌ ಸ್ಥಿತಿಯು ಇದ್ದು ಮಾನಸಿಕ ನೆಮ್ಮದಿಯನ್ನು ಪ್ರಯತ್ನ ಪೂರ್ವಕವಾಗಿ ತಂದುಕೊಳ್ಳುವಿರಿ. ಗುರುಬಲವು ಇಲ್ಲದೇ ಇರುವುದರಿಂದ ಜಾಗರೂಕತೆಯಿಂದ ಎಲ್ಲ ವ್ಯವಹಾರವನ್ನು ಮಾಡುವುದು ಉಚಿತ. ಆರೋಗ್ಯದ ಹೆಚ್ಚು ಕಡಿಮೆಯಿಂದ ಆದಾಯದ ನಷ್ಟವಾಗುವುದು. ಸ್ವಲ್ಪ ಶ್ರಮಪಟ್ಟರೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಹಿರಿಯರಿಂದ ಪ್ರಶಂಸೆ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯು ಇರಲಿದ್ದು, ಉತ್ತಮ‌ಗೊಳಿಸಲು ಏನಾದರೂ ಪ್ರಯತ್ನ ಮಾಡವಿರಿ..

ಮಿಥುನ ರಾಶಿ : ನವೆಂಬರ್ ಮಾಸದ ಎರಡನೇ ವಾರವು ನಿಮಗೆ ಮಿಶ್ರಫಲದ ವಾರವಾದರೂ ಗುರುವು ನಿಮ್ಮ ಕೆಡುಕನ್ನು ಕಳೆದು ಸುಖವನ್ನು ನೀಡುವನು. ಶುಕ್ರನು ನೀಚನಾಗಿ ಚತುರ್ಥದಲ್ಲಿ ಇದ್ದಾನೆ. ದ್ವಾದಶಾಧಿಪತಿಯೂ ಪಂಚಮಾಧಿಪತಿಯೂ ಆಗಿ ಚತುರ್ಥದಲ್ಲಿ ಇದ್ದು ನೀಚನಾಗಿ ನಿಮ್ಮ ಕುಟುಂಬದಲ್ಲಿ ಅಸಮಾಧಾನ ಬರುವಂತೆ ಮಾಡುವನು. ಪಂಚಮದಲ್ಲಿ ಸೂರ್ಯ ಹಾಗೂ ಕುಜನು ಇದ್ದು ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಪೂರ್ಣ ನೆಮ್ಮದಿ ಇರದು. ಬಂಧುಗಳಿಗೆ ನಿಮ್ಮ ಬಗ್ಗೆ ಪ್ರೀತಿ ಇರದು. ದಶಮದಲ್ಲಿ ರಾಹುವಿನ ಕಾರಣದಿಂದ ವೃತ್ತಿಯಲ್ಲಿ ನಿಮಗೆ ನೆಮ್ಮದಿ ಕೊರತೆ ಕಾಣಿಸುವುದು.‌ ಕೆಲಸವು ಸಾಕು ಎನಿಸಬಹುದು.

ಕಟಕ ರಾಶಿ : ಈ ತಿಂಗಳ ಎರಡನೇ ವಾರವು ಮಿಶ್ರಫಲವು ಇರಲಿದೆ. ತೃತೀಯದಲ್ಲಿ ಶುಕ್ರನಿದ್ದರೂ ನೀಚ ಸ್ಥಾನದಲ್ಲಿ ಇರುವುದರಿಂದ ಯಾವುದೇ ಪರಿಶ್ರಮವೂ ಪ್ರಯೋಜನಕ್ಕೆ ಬಾರದು. ಅದರ ಬದಲಿಗೆ ನೀವು ಒಂದಿಷ್ಟು ಮಾತುಗಳನ್ನು ಹೇಳಿಸಿಕೊಳ್ಳಬೇಕಾದೀತು. ಬಂಧುಗಳಿಂದ ಅಸಮಾಧಾನವಾಗಬಹುದು. ಸಹೋದರರ ನಡುವೆ ಬಾಂಧವ್ಯವು ಚೆನ್ನಾಗಿ ಇರಲಿದೆ. ನವಮದಲ್ಲಿ ರಾಹುವಿರುವುದರಿಂದ ನಿಮ್ಮ ಕೆಲಸದಲ್ಲಿ ತಪ್ಪಿನಿಂದ‌ ಇರುವುದು. ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಹೆಚ್ಚು ಗಮನಹರಿಸಿ. ಗೊತ್ತಿಲ್ಲದ ವಿಚಾರಗಳ ಬಗ್ಗೆ ತಿಳಿದವರ ಬಳಿ ಚರ್ಚಿಸವಿರಿ. ಇದರಿಂದ ಮುಂದೆ ಕೆಲಸಗಳಿಗೆ ಸಹಾಯವಾಗುವುದು.‌

ಸಿಂಹ ರಾಶಿ : ನವೆಂಬರ್ ನ ಎರಡನೇ ವಾರವು ಶುಭದ ವಾರವಾಗಲಿದೆ. ದ್ವಿತೀಯದಲ್ಲಿ ಇರುವ ಶುಕ್ರ ಹಾಗೂ ಕೇತುಗಳು ನಿಮಗೆ ಅನೀತಿ ಮಾರ್ಗದಲ್ಲಿ ಸಂಪಾದಿಸುವಂತೆ ಪ್ರೇರಣೆ ನೀಡಬಹುದು. ನಿಮ್ಮವರೇ ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ನಕಾರಾತ್ಮಕ ಅಂಶಗಳನ್ನು ಹೇಳಬಹುದು. ಅಷ್ಟಮದಲ್ಲಿರುವ ರಾಹುವಿನಿಂದ ಹದಗೆಟ್ಟ ಆರೋಗ್ಯವು ಸರಿಯಾಗುವುದು. ಗುರುವು ನವಮದಲ್ಲಿ ಇದ್ದು ಅಲ್ಪ ಪ್ರಯತ್ನಕ್ಕೆ ಹೆಚ್ಚು ಫಲವು ದೊರೆಯುವುದು. ಪ್ರಯಾಣದ ಸುಖವನ್ನು ಈ ವಾರ ಹೆಚ್ಚು ಅನುಭವಿಸುವಿರಿ. ಕಾನೂನಿಗೆ ವಿರುದ್ಧವಾದ ನಡತೆಯಿಂದ ಹಣವನ್ನು ಸಂಪಾದಿಸಬೇಕು ಎಂದು ಅನ್ನಿಸಬಹುದು. ತ್ರ್ಯಂಬಕನ ಆರಾಧನೆಯಿಂದ ನಿಮ್ಮ ಸಂಕಷ್ಟವು ದೂರಾಗುವುದು.

ಕನ್ಯಾ ರಾಶಿ : ಈ ರಾಶಿಯವರಿಗೆ ನವೆಂಬರ್ ತಿಂಗಳ ಈ ವಾರವು ಸಾಧಾರಣವಾಗಿ ಇರಲಿದೆ. ಕೇತು ಹಾಗೂ ಶುಕ್ರರು ನಿಮ್ಮ ಮನೆಯಲ್ಲಿಯೇ ಇದ್ದು ಶುಕ್ರನು ನೀಚನಾಗಿರುವನು. ನಿಮಗೆ ಒಂದಿಲ್ಲೊಂದು ಮಾನಸಿಕ ಅಸಮತೋಲನದಿಂದ ಬಳಲುವಿರಿ. ರಾಹುವು ಸಪ್ತಮದಲ್ಲಿರುವ ಕಾರಣ ವೈವಾಹಿಕ ಜೀವನವು ಸಾಧಾರಣವಾಗಿ ಇರುವುದು. ತಂದೆಯಿಂದ ಬರುವ ಸಂಪತ್ತೂ ಸಹೋದರಿಯ ಕಾರಣದಿಂದ ಬರದೇಹೋಗಬಹುದು. ಬುಧನು ತೃತೀಯದಲ್ಲಿ ಇದ್ದು ನಿಮ್ಮ ಬುದ್ಧಿಯ ಸಾಮರ್ಥ್ಯವನ್ನು ಪರಿಚಯಿಸುವನು. ಕೆಲಸದಲ್ಲಿನ ನಿಮ್ಮ ಆಸಕ್ತಿ ಶ್ರದ್ಧೆ ಇದ್ದರೂ ಯಾವುದೇ ಪ್ರಶಂಸೆ, ಉನ್ನತ ಸ್ಥಾನ ಯಾವುದೂ ಲಭ್ಯವಾಗದು. ಯಾವುದೇ ಸಾಹಸ ಕಾರ್ಯಕ್ಕೆ ಹೋಗದೇ ಇರುವುದನ್ನೇ ಸರಿಯಾಗಿ ನಿರ್ವಹಿಸಿಕೊಂಡು ಮುನ್ನಡೆಯಿರಿ. ಗುರುದರ್ಶನವನ್ನು ಪಡೆಯುವುದು ಉತ್ತಮ.

ತುಲಾ ರಾಶಿ : ಈ ತಿಂಗಳ ಎರಡನೇ ವಾರವು ಗ್ರಹಗತಿಗಳ ಬದಲಾವಣೆಯು ನಿಮಗೆ ಸಾಧಾರಣ ಫಲವನ್ನು ನೀಡಬಹುದು. ದ್ವಾದಶದಲ್ಲಿ ಶುಕ್ರ ಹಾಗೂ ಕೇತುಗಳು ಇರುವುದರಿಂದ ಅನವಶ್ಯಕ ಖರ್ಚು, ವಾಹನ ದುರಸ್ತಿಗೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ಹೀಗೆ‌ ನಾನಾ ರೀತಿಯಲ್ಲಿ ನಿಮಗೆ ತೊಂದರೆ ಬರಲಿದೆ. ಪಂಚಮದಲ್ಲಿ ಶುಕ್ರನಿದ್ದು ಉನ್ನತ ವಿದ್ಯಾಭ್ಯಾಸಕ್ಕೆ ಅಡೆತಡೆಗಳು ಬಂದು ಓದಿನ ಬಗ್ಗೆ ನಿರಾಸಕ್ತಿಯು ಬರಬಹುದು. ಬಿಡದೆರ ಮುಂದುವರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಕೆಲಸಗಳ ನಡುವೆ ಕುಟುಂಬದ ಕಡೆಗೆ ಗಮನ ಕೊಡುವುದು ಕಷ್ಟವಾಗುವುದು. ದ್ವಿತೀಯದಲ್ಲಿ ಬುಧನಿದ್ದು ಮಾತಿನಿಂದ ನಿಮಗೆ ಸಂಪತ್ತು ಸಿಗಬಹುದು. ಗುರುವಿನ ದೃಷ್ಟಿಯು ಇರುವುದರಿಂದ ನಿಮ್ಮ ಸಂಕಷ್ಟದ ಪ್ರಭಾವವು ಕಡಿಮೆ ಆಗುವುದು. ದುರ್ಗೆಯನ್ನು ಆರಾಧಿಸಿ ಸಂತೃಪ್ತಿಗೊಳಿಸಿ.

ವೃಶ್ಚಿಕ ರಾಶಿ : ಈ ತಿಂಗಳ ಎರಡನೇ ವಾರವು ನಿಮಗೆ ಅನುಕೂಲವಲ್ಲದ ವಾರವಾಗಿದೆ. ಷಷ್ಠದಲ್ಲಿ ಗುರುವಿದ್ದು ಗುರುಬಲವು ಬಲಹೀನನಾಗಿರುವುದರಿಂದ ಅಂದುಕೊಂಡಿದ್ದು ಆಗದು. ದುಃಖದ ಸಂದರ್ಭವು ಬರಬಹುದು. ಅನಾರೋಗ್ಯವು ಹೆಚ್ಚು ಬಾಧಿಸಲಿದೆ. ಚತುರ್ಥದಲ್ಲಿ ಶನಿಯು ಇರುವ ಕಾರಣ ತಾಯಿಯ ವಿಚಾರದಲ್ಲಿ ಅಸಮಾಧಾನ ಇರಬಹುದು.‌ ಏಕಾದಶದ ಶುಕ್ರ ಹಾಗು ಕೇತುಗಳು ನಿಮ್ಮ ಆದಾಯಕ್ಕೆ ಸ್ವಲ್ಪ ತೊಂದರೆ ಆದೀತು. ಶುಕ್ರನು ನೀಚನಾಗಿರುವುದರಿಂದ ಸ್ತ್ರೀಯರಿಗೆ ಆರೋಗ್ಯದ ಸಮಸ್ಯೆ ಕಾಡುವುದು. ನಿಮ್ಮ ಕೆಲಸವನ್ನು ಇತರರು ಮೆಚ್ಚುವರು. ಅನಿರೀಕ್ಷಿತ ಘಟನೆಗಳು ನಿಮ್ಮ‌ ಮನಸ್ಸಿಗೆ ಘಾಸಿ ಮಾಡಬಹುದು. ದಿನಚರಿಯನ್ನು ಸರಿಯಾಗಿ ಪಾಲಿಸಲಾಗದು. ಮಹಾಲಕ್ಷ್ಮಿಯ ಆರಾಧನೆಯನ್ನು ಮಾಡಬೇಕಾಗುವುದು.

ಧನು ರಾಶಿ : ಇದು ಈ ತಿಂಗಳ ಎರಡನೇ ವಾರವಾಗಿದೆ. ಗ್ರಹಗತಿಗಳ ಸಣ್ಣ ಬದಲಾವಣೆಯು ನಿಮ್ಮ ಮೇಲೆ ಕೆಲವು ಶುಭಾಶುಭ ಪರಿಣಾಮವನ್ನು ಉಂಟುಮಾಡಬಹುದು. ದ್ವಾದಶದಲ್ಲಿ ಬುಧನ ಆಗಮನವು ದುಷ್ಟ ಕರ್ಮಗಳಲ್ಲಿ ಆಸಕ್ತಿಯನ್ನು ಹೊಂದಬಹುದು. ಗುರುವು ಪಂಚಮದಲ್ಲಿ ಇರುವುದರಿಂದ ಗೌರವ ಸಮ್ಮಾನಗಳು
ನಿಮಗೆ ಸಿಗಬಹುದು. ರಾಹುವು ಚತುರ್ಥದಲ್ಲಿ ಇದ್ದು ನಿಮಗೆ ದುಃಖವಾನುಭವಿಸಬೇಕಾದೀತು. ಶುಕ್ರನು ನವಮದಲ್ಲಿ ಇದ್ದು ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು. ಸಹೋದರರಿಂದ ಆರ್ಥಿಕ ಸಹಕಾರವು ಸಿಗಲಿದೆ. ಅಂದುಕಂಡ ಕೆಲಸವನ್ನು ಸಾಧಿಸಲು ನೀವು ಗುರುಚರಿತ್ರೆಯನ್ನು ಶ್ರದ್ಧಾ- ಭಕ್ತಿಯಿಂದ ಪಠಿಸಿ.

ಮಕರ ರಾಶಿ : ನಂಬೆಂಬರ್ ತಿಂಗಳ ಎರಡನೆಯ ವಾರವಿದಾಗಿದ್ದು ಶುಭಫಲವನ್ನು ನೀವು ನಿರೀಕ್ಷಿಸಬಹುದು. ಚತುರ್ಥದಲ್ಲಿ ಗುರುವಿರುವ ಕಾರಣ ತಾಯಿಯ ಇಷ್ಟಗಳನ್ನು ನೀವು ಪೂರೈಸುವಿರಿ. ಶುಕ್ರನು ನವಮದಲ್ಲಿ ಇದ್ದು ಶುಭಕಾರ್ಯಗಳನ್ನು ಮಾಡಿದರೂ ಅದರ ಫಲವು ನಿಮಗೆ ವಿಳಂಬವಾಗಬಹುದು. ಪೂರ್ಣಮನಸ್ಸಿನಿಂದ ಮಾಡುವುದು ಕಷ್ಟವಾಗಬಹುದು. ಉದ್ಯಮವು ಯಶಸ್ಸಿನಿಂದ ಇರುವುದು. ತೃತೀಯದಲ್ಲಿ ರಾಹುವಿರುವ ಕಾರಣ ಸಹೋದರರ ನಡುವೆ ಮನಸ್ತಾಪ ಬರುವುದು. ಅಂದುಕೊಂಡ ಕೆಲಸದಿಂದ ಜಯಗಳಿಸುವಿರಿ. ನೆಮ್ಮದಿಯು ಇರುವುದು. ಲಕ್ಷ್ಮೀನಾರಾಯಣ ಸ್ತೋತ್ರವನ್ನು ಪಠಿಸಿ.

ಕುಂಭ ರಾಶಿ : ಈ ವಾರ ನಿಮಗೆ ಶುಭಾಶುಭಫಲಗಳು ಎರಡೂ ಇರಲಿದ್ದು ಅವುಗಳನ್ನು ಸರಿಯಾಗಿ ತೂಗಿಸಿಕೊಂಡು ಹೋಗಬೇಕಿದೆ. ಅಷ್ಟಮದಲ್ಲಿ ಶುಕ್ರ ಹಾಗೂ ಕೇತುಗಳು ಇರುವುದರಿಂದ ವಾಹನ ಸಂಚಾರದಲ್ಲಿ ಜಾಗರೂಕತೆ ಇರಲಿ. ದ್ವಿತೀಯದಲ್ಲಿ ರಾಹುವಿರುವ ಕಾರಣ ನಿಮಗೆ ಬರುವ ಅನಿರೀಕ್ಷಿತ ಸಂಪತ್ತು ಸರಿಯಾದ ಮಾರ್ಗದಲ್ಲಿ ಬರದೇಹೋಗಬಹುದು. ನೀವೊಂದು ಅಂದುಕೊಂಡರೆ ದೈವ ಇನ್ನೊಂದು ಮಾಡೀತು. ತಪ್ಪನ್ನು ಮಾಡಿ ಅನಂತರ ಪಶ್ಚಾತ್ತಾಪ ಪಡಬೇಕಾದೀತು. ನಂಬಿಕೆಯನ್ನು ಉಳಿಸಿಕೊಂಡು ಮುಂದುವರಿಯಬೇಕಾಗಿದೆ. ಮಿತ್ರರ ಬೇಕಾದ ಸಹಕಾರವನ್ನು ಪಡೆದುಕೊಳ್ಳುವಿರಿ. ಶಿವಕವಚವನ್ನು ಓದಿ.

ಮೀನ ರಾಶಿ : ನವೆಂಬರ್ ತಿಂಗಳ ಎರಡನೇ ನಿಮಗೆ ಮಿಶ್ರಫಲವು ಇರುವುದು. ನಿಮ್ಮ ಮನೆಯಲ್ಲಿ ರಾಹುವಿರುವ ಕಾರಣ ಮನಸ್ಸು ನಿಮ್ಮ ನಿಯಂತ್ರಣದಲ್ಲಿ ಇರುವುದು ಕಷ್ಟ. ಶುಕ್ರನು ಸಪ್ತಮದಲ್ಲಿ ಇರುವ ಕಾರಣ ಬಂಧುಗಳ ಕಡೆಯಿಂದ ವಿವಾಹ ನಿಶ್ಚಯವಾಗಬಹುದು. ನವಮಕ್ಕೆ ಬುಧನ ಪ್ರವೇಶವಾಗಲಿದ್ದು ಸಜ್ಜನರ, ಸಂತರ ಸಹವಾಸ ಪ್ರಾಪ್ತವಾಗುವುದು. ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚು ಬರಬಹುದು. ಕೆಲಸದಲ್ಲಿ ಆದಷ್ಟು ಜಾಗರೂಕರಾಗಿದ್ದರೆ ನಿಮಗೇ ಒಳ್ಳೆಯದು. ಮಕ್ಕಳ ವಿಚಾರದಲ್ಲಿ ಒಂದು ಲಕ್ಷ್ಯ ಬೇಕು. ವಾತಾವರಣದಲ್ಲಿನ ಬದಲಾವಣೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವು ಆಗಬಹುದು. ಆಂಜನೇಯನಿಗೆ ಪ್ರಿಯವಾದ ನೈವೇದ್ಯ ಮಾಡಿ.
.

-ಲೋಹಿತಶರ್ಮಾ-8762924271 (what’s app only)