Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನ.30ರ ನಿಮ್ಮ ದಿನಭವಿಷ್ಯ

Numerology Prediction: ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 30ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನ.30ರ ನಿಮ್ಮ ದಿನಭವಿಷ್ಯ
ರಾಶಿ ಭವಿಷ್ಯ
Follow us
TV9 Web
| Updated By: ಆಯೇಷಾ ಬಾನು

Updated on:Nov 30, 2022 | 11:17 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology  Daily horoscope)ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 30ರ ಬುಧವಾರದ ದಿನ ಭವಿಷ್ಯ (daily horoscope)  ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ನಿಮ್ಮ ಸ್ವಂತ ಬಲದಿಂದ ಎಂಥ ಸವಾಲನ್ನೂ ಈ ದಿನ ದಾಟಲಿದ್ದೀರಿ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಬೆಳವಣಿಗೆ ಕಾಣಲಿದೆ. ದೇವತಾರಾಧನೆ, ತೀರ್ಥಕ್ಷೇತ್ರ ದರ್ಶನವನ್ನು ಮಾಡಲಿದ್ದೀರಿ. ಮನೆಯಲ್ಲಿ ಗ್ಯಾಸ್ ಸಿಲಿಂಡರ್, ಎಲೆಕ್ಟ್ರಿಕಲ್- ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 2

ಇತರರ ಸಾಮರ್ಥ್ಯವನ್ನು ನಂಬಿಕೊಂಡು ಹೂಡಿಕೆ ಮಾಡದಿರಿ. ಸಂಬಂಧಿಕರು, ಬೇಕಾದವರು ಅಂದುಕೊಂಡು ಅಂತರಂಗದ ಸಂಗತಿಗಳನ್ನು ಹಂಚಿಕೊಳ್ಳದಿರಿ. ಹೊಸದಾಗಿ ಕಾರು ತೆಗೆದುಕೊಳ್ಳಬೇಕು ಅಂದುಕೊಳ್ಳುವವರು ಎಲ್ಲವನ್ನೂ ಅಂತಿಮಗೊಳಿಸುವ ಸಾಧ್ಯತೆ ಇದೆ. ಪುಸ್ತಕ ಪ್ರಕಾಶಕರಿಗೆ ಭವಿಷ್ಯದ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ವೇದಿಕೆ ಸಿದ್ಧವಾಗಲಿದೆ.

ಜನ್ಮಸಂಖ್ಯೆ 3

ಹಳೇ ಹೂಡಿಕೆಗಳು ಫಲ ನೀಡಲಿದೆ. ಶ್ರಮವನ್ನು ಇತರರು ಗುರುತಿಸಿ, ಮೆಚ್ಚುಗೆ ಸೂಚಿಸಲಿದ್ದಾರೆ. ವ್ಯಾಲೆಟ್‌, ಡಿಜಿಟಲ್ ಕರೆನ್ಸಿಗಳನ್ನು ಬಳಸುವವರು ಸೈಬರ್ ಸೆಕ್ಯೂರಿಟಿ ಬಗ್ಗೆ ಜಾಗ್ರತೆ ವಹಿಸಿ. ಡಯಟಿಷಿಯನ್ ವೃತ್ತಿಯಲ್ಲಿ ಇರುವವರಿಗೆ ಏಳ್ಗೆ ಇದೆ. ಟ್ರಾವೆಲ್‌ ಏಜೆಂಟ್‌ಗಳಿಗೆ ಹೊಸ ಜನರ ಸಂಪರ್ಕ ದೊರೆಯಲಿದೆ.

ಜನ್ಮಸಂಖ್ಯೆ 4

ಹೊಸ ಬಟ್ಟೆ, ಒಡವೆಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಂಥ ಯೋಗ ಇದೆ. ಈ ಹಿಂದೆ ನಿಮ್ಮ ಸಾಮರ್ಥ್ಯದ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ಭಾರೀ ಔತಣ ಕೂಟಕ್ಕೆ ನಿಮಗೆ ಆಹ್ವಾನ ಬರಲಿದೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಕೇಳಿಬರಲಿದೆ.

ಜನ್ಮಸಂಖ್ಯೆ 5

ಮನೆಯಲ್ಲಿನ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಿ. ಹೊಸಬರನ್ನು ಮನೆಯೊಳಗೆ ಸೇರಿಸಿಕೊಳ್ಳುವ ಮುನ್ನ, ಖಾಸಗಿ ಸ್ಥಳಗಳಿಗೆ ಕರೆದೊಯ್ಯುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ, ಸಂಗೀತಗಾರರಿಗೆ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು.

ಜನ್ಮಸಂಖ್ಯೆ 6

ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು, ಷೇರು ದಲ್ಲಾಳಿಗಳಿಗೆ ಆಕರ್ಷಕವಾದ ಪ್ರಾಜೆಕ್ಟ್‌ಗಳಲ್ಲಿ ಭಾಗೀ ಆಗುವ ಅವಕಾಶ ದೊರೆಯಲಿದೆ. ಸಣ್ಣ ಪುಟ್ಟ ಸಂಗತಿಗಳ ಮೇಲೆ ಹೆಚ್ಚು ಸಮಯ ಮೀಸಲಿಡಬೇಡಿ. ಕ್ರೀಡಾಪಟುಗಳಿಗೆ ಸ್ವಂತ ಹಣ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಆಗಲಿದೆ. ಆದ್ದರಿಂದ ಸರಿಯಾದ ಕಡೆ ಖರ್ಚು ಮಾಡಿ.

ಜನ್ಮಸಂಖ್ಯೆ 7

ನಿಶ್ಚಿತವಾದ ಆದಾಯ ಪಡೆಯುವುದಕ್ಕೆ ಬೇಕಾದ ಪ್ಲಾನಿಂಗ್‌ನಲ್ಲಿ ತೊಡಗಿಕೊಳ್ಳಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಇತ್ಯರ್ಥ ಆಗಲಿದೆ. ನಿಮ್ಮ ಬುದ್ಧಿವಂತಿಕೆ ಬಳಸಿ, ಹಲವರಿಗೆ ಆದಾಯವನ್ನು ತರಲಿದ್ದೀರಿ. ಆದರೆ ಇದು ನಿಮ್ಮಿಂದ ಸಹಾಯ ಪಡೆದವರಿಗೆ ಗೊತ್ತಾಗಲಿ. ಪ್ರಮೋಷನ್ ಇತ್ಯಾದಿಗೆ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 8

ಲೋನ್‌ಗಾಗಿ ಪ್ರಯತ್ನಿಸುತ್ತಿರುವವರಿಗೆ ಈ ದಿನ ಕಾರ್ಯಾನುಕೂಲ ಇದೆ. ನೀವು ಮಾಡಿಕೊಂಡ ಪ್ರಾಜೆಕ್ಟ್‌ನ ಇನ್ನಷ್ಟು ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳುವ ದಾರಿ ಗೋಚರಿಸಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ದಿಢೀರ್ ಆದ ಏಳ್ಗೆ ಕಾಣಿಸಿಕೊಳ್ಳಲಿದೆ. ಅನಿರೀಕ್ಷಿತವಾಗಿ ಪದೋನ್ನತಿ ಸಹ ಸಿಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9

ಕೃಷಿಕರಿಗೆ ಭೂಮಿ ಖರೀದಿ ಮಾಡುವ ಯೋಗ ಇದೆ. ಸಾಕು ಪ್ರಾಣಿಗಳ ಆರೋಗ್ಯದ ಕಡೆಗೆ ಗಮನ ನೀಡಿ. ಕೂಡಿಟ್ಟ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡುವತ್ತ ಲೆಕ್ಕಾಚಾರವನ್ನು ಹಾಕಿಟ್ಟುಕೊಳ್ಳಿ. ನಿಮ್ಮ ಶ್ರಮದ ಫಲವನ್ನು ಮತ್ತೊಬ್ಬರು ಪಡೆಯದಂತೆ ಗಮನ ವಹಿಸಿ. ವಿದೇಶಗಳಿಂದ ಶುಭ ಸುದ್ದಿ ಕೇಳುವ ಯೋಗ ಇದೆ.

ಲೇಖನ- ಎನ್‌.ಕೆ.ಸ್ವಾತಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:08 am, Wed, 30 November 22