Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 1ರ ದಿನ ಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ (1ರ) ಮೊದಲ ದಿನದ ನಿಮ್ಮ ದಿನ ಭವಿಷ್ಯ ಹೇಗಿದೆ? ಯಾವ ರಾಶಿಗೆ ಯಾವ ಫಲ? ಎನ್ನುವುದನ್ನು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 1ರ ದಿನ ಭವಿಷ್ಯ
Numerology Prediction
Follow us
TV9 Web
| Updated By: Digi Tech Desk

Updated on:Dec 01, 2022 | 2:30 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology  Daily horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 1ರ ಗುರುವಾರದ ದಿನ ಭವಿಷ್ಯ  (daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ನಿಮ್ಮ ಡಿಜಿಟಲ್ ಪೇಮೆಂಟ್ ವ್ಯಾಲೆಟ್ ಬಳಸುವಾಗ ಒಂದಕ್ಕೆ ಎರಡು ಬಾರಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಿ. ಭವಿಷ್ಯದ ಸಾಧಕ ಅಂಶವೊಂದು ನಿಮ್ಮ ಪಾಲಿಗೆ ಒದಗಿ ಬರಲಿದೆ. ಗಾರ್ಡನಿಂಗ್, ಸಂಗೀತದಂಥ ಹವ್ಯಾಸ ಇದ್ದಲ್ಲಿ ಸ್ವಲ್ಪ ಸಮಯ ತೊಡಗಿಸಿಕೊಳ್ಳಿ. ರಾತ್ರಿ ಬಹಳ ಹೊತ್ತು ಎಚ್ಚರ ಇರುವಂಥ ಕೆಲಸ ಮಾಡುವವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ.

ಜನ್ಮಸಂಖ್ಯೆ 2

ಕೃಷಿಕರಿಗೆ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವವರಿಗೆ, ಪಶು ಸಾಕಣೆ ಮಾಡುವಂಥವರಿಗೆ ಲಾಭದ ದಾರಿಗಳು ಗೋಚರ ಆಗಲಿವೆ. ಭಾಷಾ ವಿಜ್ಞಾನಿಗಳಿಗೆ ಹೊಸದಾಗಿ ಮೆಚ್ಚುಗೆ, ಅವಕಾಶಗಳು ಹುಡುಕಿಕೊಂಡು ಬರಲಿವೆ. ಭಾವನಾತ್ಮಕ ಸಂಗತಿಗಳಿಗೆ ಈ ದಿನ ಪ್ರಾಮುಖ್ಯತೆ ದೊರೆಯಲಿದೆ.

ಜನ್ಮಸಂಖ್ಯೆ 3

ರಾಜಕಾರಣದಲ್ಲಿ ಸ್ಥಾನಮಾನವನ್ನು ಎದುರು ನೋಡುತ್ತಿರುವವರಿಗೆ ಅದು ದೊರೆಯುವ ಎಲ್ಲ ಲಕ್ಷಣಗಳಿವೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೂರ ಇರುವುದು ಉತ್ತಮ. ನಿಮ್ಮ ಮನಸ್ಸಿನಲ್ಲಿ ಇರುವ ಗುರಿಯನ್ನು ಮುಟ್ಟಲು ಹಾದಿ ಸುಗಮ ಆಗಲಿದೆ.

ಜನ್ಮಸಂಖ್ಯೆ 4

ನಿಮ್ಮ ಮೇಲೆ ಸುಖಾಸುಮ್ಮನೆ ಇತರರು ಅನುಮಾನ ಪಡುವಂಥ ಸನ್ನಿವೇಶವನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ. ನೇರವಂತಿಕೆಯೊಂದೇ ಇದಕ್ಕೆ ಪರಿಹಾರ ಆಗಬಹುದು. ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಹಣಕಾಸು ವ್ಯವಹಾರವನ್ನು ನಿತ್ಯವೂ ಮಾಡುವಂಥವರು ಈ ದಿನ ಸಾಮಾನ್ಯಕ್ಕಿಂತ ಹೆಚ್ಚು ಜಾಗ್ರತೆ ವಹಿಸಿ.

ಜನ್ಮಸಂಖ್ಯೆ 5

ಮನೆಯ ಸ್ವಚ್ಛತೆ, ಶುದ್ಧತೆಗೆ ಆದ್ಯತೆ ನೀಡುತ್ತೀರಿ. ನವೀಕರಣಕ್ಕೆ ಕೂಡ ಹಣ- ಸಮಯವನ್ನು ಮೀಸಲಿಡಲಿದ್ದೀರಿ. ಇನ್ನು ಯುವ ಪ್ರೇಮಿಗಳಿಗೆ ಉಲ್ಲಾಸದ ದಿನ ಇದಾಗಿರುತ್ತದೆ. ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಸಹ ನೀಡುವ ಸಾಧ್ಯತೆ ಇದೆ. ಆದರೆ ಕೆಲವು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮೊದಲಿನಿಂದ ಶುರು ಮಾಡಬೇಕಾಗಬಹುದು.

ಜನ್ಮಸಂಖ್ಯೆ 6

ಯಾರಿಗೂ ನಿಮ್ಮ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಲು ಹೋಗದಿರಿ. ಅದು ಒಳ್ಳೆಯದು ಅಂತಿರಲಿ ಅಥವಾ ಕೆಟ್ಟದ್ದು; ಒಟ್ಟಿನಲ್ಲಿ, ನಾನು ಇನ್ನೊಬ್ಬರ ವಿಚಾರವನ್ನು ಮಾತನಾಡಲ್ಲ ಎಂಬುದರಲ್ಲಿ ಸ್ಪಷ್ಟತೆ ಇರಲಿ. ಪ್ರಾಣಿ ದಯಾ ಸಂಘಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ದಿನ ತಮ್ಮ ಉದ್ದೇಶಗಳನ್ನು ಪೂರೈಸುವ ಕಡೆಗೆ ಕೆಲಸ ಮಾಡುತ್ತಿರುವ ಬಗ್ಗೆ ತೃಪ್ತಿ ದೊರೆಯಲಿದೆ.

ಜನ್ಮಸಂಖ್ಯೆ 7

ದೇವಾಲಯಗಳ ಪಾರುಪತ್ಯೆದಾರರು, ಟ್ರಸ್ಟಿಗಳು, ನಿರ್ದೇಶಕರಿಗೆ ಹೆಚ್ಚು ಒತ್ತಡದ ದಿನವಾಗಿರುತ್ತದೆ. ಆರಂಭಿಸಿದ ಕೆಲಸ ಅಂದುಕೊಂಡ ವೇಗದಲ್ಲಿ ಸಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತದೆ. ಎಲ್ಲಿ ಯಾವ ವಿಚಾರವನ್ನು ಮಾತನಾಡಬಾರದೋ ಅಲ್ಲಿ ಅದೇ ವಿಚಾರವನ್ನು ಮಾತನಾಡಿ ಅಪಹಾಸ್ಯಕ್ಕೆ ಗುರಿ ಆಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8

ಸೋಷಿಯಲ್ ಮೀಡಿಯಾದಲ್ಲಿ ತುಂಬ ಆಕ್ಟಿವ್ ಆಗಿ ಇರುವವರಿಗೆ ತಮ್ಮ ಪೋಸ್ಟ್‌ನಿಂದ ರಾಜಕೀಯ ಬಣ್ಣ ಸಿಕ್ಕು, ಭಾರೀ ವಿರೋಧವನ್ನು ಎದುರಿಸುವಂತಾಗುತ್ತದೆ. ಧರ್ಮ, ರಾಜಕಾರಣ ಇತ್ಯಾದಿ ವಿಚಾರಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹಾಕುವಾಗ ಬಹಳ ಎಚ್ಚರಿಕೆ ವಹಿಸುವುದು ಮುಖ್ಯ.

ಜನ್ಮಸಂಖ್ಯೆ 9

ಕೋಲು ಕೊಟ್ಟು ಹೊಡೆಸಿಕೊಂಡರು ಎಂಬಂತಾಗುತ್ತದೆ ಇಂದಿನ ನಿಮ್ಮ ಸ್ಥಿತಿ. ನಿಮ್ಮ ಮೇಲಧಿಕಾರಿಗಳು ಏನಾದರೂ ಆಕ್ಷೇಪ ವ್ಯಕ್ತಪಡಿಸಿದಲ್ಲಿ ಸಣ್ಣ ಪ್ರಮಾಣದಲ್ಲೇ ವಿಚಾರವನ್ನು ಮುಗಿಸಿಕೊಂಡು ಬಿಡಿ. ಅಥವಾ ಅದಕ್ಕೆ ಹೆಚ್ಚಿಗೆ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿ. ಇನ್ನು ಕೂದಲು, ಚರ್ಮ, ಹಲ್ಲು ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿವೆ, ಗಮನ ಇರಲಿ.

ಲೇಖನ- ಎನ್‌.ಕೆ.ಸ್ವಾತಿ 

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:02 am, Thu, 1 December 22