AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 25ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆ ಆಧರಿಸಿ ನವೆಂಬರ್ 25ರ ಮಂಗಳವಾರದ ದಿನಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಜನ್ಮಸಂಖ್ಯೆಯನ್ನು ಹೇಗೆ ತಿಳಿದುಕೊಳ್ಳಬೇಕು ಎಂಬ ಮಾಹಿತಿಯನ್ನೂ ಒದಗಿಸಲಾಗಿದೆ. ಪ್ರತಿಯೊಂದು ಜನ್ಮಸಂಖ್ಯೆಗೆ (1 ರಿಂದ 9) ಅನುಗುಣವಾಗಿ ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಭವಿಷ್ಯಗಳನ್ನು ತಿಳಿಯಿರಿ. ಇಂದಿನ ನಿಮ್ಮ ದಿನ ಹೇಗಿರಲಿದೆ ಎಂಬುದನ್ನು ಈಗಲೇ ಕಂಡುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 25ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
ಸ್ವಾತಿ ಎನ್​ಕೆ
| Updated By: Digi Tech Desk|

Updated on:Nov 25, 2025 | 10:04 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 25ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಲವು ಶುಭ ಫಲಗಳು ಅನುಭವ ಬರಲಿವೆ. ದೈವಿಕವಾದ ಅನುಗ್ರಹ ನಿಮ್ಮ ಮೇಲಿದೆ ಎಂಬ ಭಾವನೆ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರು ಬಾಡಿಗೆ ಆದಾಯದಂಥದ್ದನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ನಿರೀಕ್ಷೆಯಂತೆ ಇರುವ ಆಸ್ತಿಗಳು ಖರೀದಿಗೆ ದೊರೆಯಲಿವೆ. ನಿಮ್ಮ ಕೆಲವು ಕೆಲಸ- ಕಾರ್ಯಗಳು ಆಗುವುದಕ್ಕೆ ಪ್ರಭಾವ ಬೀರಬೇಕು, ಶಿಫಾರಸು ಮಾಡಿಸಬೇಕು ಎಂದೇನಾದರೂ ಇದ್ದಲ್ಲಿ ಅಂಥವು ಸಹ ಸಾಧ್ಯವಾಗಲಿದೆ. ನಿಮ್ಮಲ್ಲಿ ಕೆಲವರು ಬೆಲೆ ಬಾಳುವ ಚಿನ್ನಾಭರಣ, ಅದರಲ್ಲೂ ವಜ್ರದ ಆಭರಣಗಳನ್ನು ಖರೀದಿ ಮಾಡುವಂಥ ಯೋಗ ಇದ್ದು, ನೀವು ಹಾಕಿಕೊಂಡಂಥ ಬಜೆಟ್ ಗಿಂತ ಹೆಚ್ಚಿನ ಮೊತ್ತವನ್ನು ಈ ಖರೀದಿಗಾಗಿ ಖರ್ಚು ಮಾಡಲಿದ್ದೀರಿ. ಇದರಿಂದ ನಿಮಗೆ ಸಂತೋಷ- ಸಮಾಧಾನ ಕೂಡ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಖರ್ಚಿನ ರೀತಿಯಲ್ಲಿ ಬಹಳ ದೊಡ್ಡ ಬದಲಾವಣೆ ಅಳವಡಿಸಿಕೊಳ್ಳಲು ಈ ದಿನ ತೀರ್ಮಾನ ಮಾಡಲಿದ್ದೀರಿ. ಸೈಟು ಖರೀದಿಯೋ ಅಥವಾ ಮನೆ ನಿರ್ಮಾಣವೋ ಅಥವಾ ಈಗಾಗಲೇ ಇರುವ ಮನೆ ರೆನೊವೇಷನ್ ಮಾಡಿಸಬೇಕೋ ಇಂಥ ವಿಚಾರದ ಬಗ್ಗೆ ತಂದೆಯ ಜೊತೆ ಅಥವಾ ಪಿತೃ ಸಮಾನರಾದವರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ನಿಮಗೆ ಬರಬೇಕಾದ ಹಣ ಎಷ್ಟು ಎಂಬ ಖಚಿತವಾದ ಮೇಲೆ ಕೆಲಸಕ್ಕೆ ವೇಗ ನೀಡಬೇಕು ಎಂದು ಆಲೋಚನೆ ಮಾಡುತ್ತಿದ್ದಲ್ಲಿ ಈ ದಿನ ಸ್ಪಷ್ಟತೆ ಸಿಗಲಿದೆ. ಗೊತ್ತಿದೆ ಎಂದುಕೊಂಡಿದ್ದ ಸಹೋದ್ಯೋಗಿ ಅಥವಾ ಸ್ನೇಹಿತರು/ಆಪ್ತರ ಹಲವು ವಿಚಾರಗಳ ಬಗ್ಗೆ ನಿಮಗೆ ಮಾಹಿತಿಯೇ ಇಲ್ಲ ಎಂಬುದು ಗೊತ್ತಾಗಿ, ಇದರಿಂದ ಬೇಸರ- ಗಾಬರಿ ಎರಡೂ ಏಕ ಕಾಲಕ್ಕೆ ಆಗಲಿದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೆಚ್ಚೆಚ್ಚು ಮಾತನಾಡುವುದಕ್ಕೆ ಹಾಗೂ ನೀವು ಹೆಚ್ಚೆಚ್ಚು ಕೇಳಿಸಿಕೊಳ್ಳುವುದಕ್ಕೆ ಸಮಯವನ್ನು ಮೀಸಲಿಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಒಳ್ಳೆಯದು ಬಂದರೆ ಒಂದೋ ಎರಡೋ ಆಗುತ್ತದೆ, ಅದೇ ಕೆಟ್ಟದ್ದು ಒಂದರ ಹಿಂದೆ ಒಂದು ಎಂಬಂತೆ ಆಗುತ್ತದೆ ಎಂಬ ರೀತಿಯಲ್ಲಿ ನಿಮಗೆ ಈ ದಿನ ಮೇಲಿಂದ ಮೇಲೆ ಕೆಟ್ಟ ಸುದ್ದಿ ಕಿವಿಗೆ ಬೀಳುತ್ತದೆ. ಉದ್ಯೋಗಸ್ಥರಾಗಿದ್ದಲ್ಲಿ ನೀವು ಉದ್ಯೋಗ ಮಾಡುತ್ತಿರುವ ಸಂಸ್ಥೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೆಲಸದಿಂದ ತೆಗೆಯಲಿದ್ದಾರೆ ಅಂತಲೋ ನೀವು ಹೂಡಿಕೆ ಮಾಡಿದ್ದ ರಿಯಲ್ ಎಸ್ಟೇಟ್ ಅಥವಾ ಷೇರು ಮಾರ್ಕೆಟ್ ಹಣ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಬಹುದು ಅಂತಲೋ ಹೀಗೆ- ಇಂಥವೇ ಮಾತುಗಳು ಕಿವಿ ಮೇಲೆ ಬೀಳುವುದರಿಂದ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ನೀವು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದ ವಿಲಾಸಿ ಕಾರನ್ನೋ ಅಥವಾ ಗೇಟೆಡ್ ಕಮ್ಯೂನಿಟಿಯಲ್ಲಿ ಇರುವಂಥ ವಿಲ್ಲಾ ಸೈಟು ಇಂಥದ್ದನ್ನೋ ಬೇರೆಯವರ ಬಲವಂತದ ಕಾರಣಕ್ಕೆ ಮಾರಾಟ ಮಾಡುವ ಆಲೋಚನೆ ಮಾಡಲಿದ್ದೀರಿ. ಒಟ್ಟಿನಲ್ಲಿ ನಿಮಗೆ ಈ ದಿನದ ಎಚ್ಚರಿಕೆ ಏನೆಂದರೆ, ಅತಿಯಾದ ಆಲೋಚನೆ- ಬುದ್ಧಿವಂತಿಕೆ ಮಾಡಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಗೊತ್ತಿರುವ ಕೌಶಲ, ವಿದ್ಯೆ ಹಾಗೂ ನಿಮಗೆ ಇರುವಂಥ ಈಗಿನ ಅನುಭವಕ್ಕೆ ಬೇಡಿಕೆ ಹೆಚ್ಚಲಿದೆ. ನಿಮ್ಮಲ್ಲಿ ಕೆಲವರಿಗೆ ಏಕಕಾಲಕ್ಕೆ ನಾಲ್ಕಾರು ಕಡೆಯಿಂದ ಉದ್ಯೋಗದ ಆಫರ್ ಗಳು ಬರಬಹುದು. ಸಂಬಳದ ಜೊತೆಗೆ ಲಾಭದಲ್ಲಿ ಸಹ ಇಂತಿಷ್ಟು ಪರ್ಸೆಂಟ್ ಎಂದು ಕೊಡುವುದಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ನಿಮಗೆ ಪ್ರಸ್ತಾವ ಬರುವಂಥ ಯೋಗ ಇದೆ. ನಿಮ್ಮ ಪಾಲಿಗೆ ಯಾವುದು ಉತ್ತಮ ಆಯ್ಕೆ ಆಗಲಿದೆ ಎಂಬುದನ್ನು ಸರಿಯಾಗಿ ಅಳೆದು- ತೂಗಿ ಮುಂದಕ್ಕೆ ಹೆಜ್ಜೆ ಇಡಿ. ಎಂಜಿನಿಯರ್, ಟೆಸ್ಟರ್- ಡೆವಲಪರ್ ಇಂಥ ಉದ್ಯೋಗದಲ್ಲಿ ಇರುವವರಿಗೆ ದೊಡ್ಡ ತಂಡವೊಂದನ್ನು ಮುನ್ನಡೆಸುವ ಅಥವಾ ಕೋ- ಆರ್ಡಿನೇಟರ್ ಆಗಿ ಮುಖ್ಯ ಜವಾಬ್ದಾರಿ ನಿರ್ವಹಿಸುವಂತೆ ಕೇಳಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ವಿಚಾರಗಳಿಗೆ ಹೆಚ್ಚಿನ ಗಮನ ನೀಡುವುದು ಸಾಧ್ಯ ಆಗದೇ ಹೋಗುತ್ತದೆ. ಇದೇ ಸಂಗತಿಯಿಂದ ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಬೇಡ ಅಂದುಕೊಂಡಿದ್ದನ್ನೇ ಮಾಡಬೇಕಾದ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಯಾವ ವ್ಯಕ್ತಿ ಜೊತೆಗೆ ಇನ್ನು ವ್ಯವಹಾರ ಮಾಡಬಾರದು, ಹಣಕಾಸಿನ ವಿಷಯ ಮಾತನಾಡಬಾರದು, ಸಾಲ ಕೇಳಬಾರದು, ಜೊತೆಯಾಗಿ ಕೆಲಸ ಮಾಡಬಾರದು ಹೀಗೆ ಅಂದುಕೊಂಡಿರುತ್ತೀರೋ ಅವುಗಳನ್ನು ಮಾಡಲೇಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ನಿಮಗೆ ಸಂಪೂರ್ಣವಾಗಿ ಮಾಹಿತಿ ಇರುವ ವಿಷಯಗಳನ್ನು ಮಾತ್ರ ಮಾತನಾಡಿ. ಅದರಲ್ಲೂ ಇತರರ ವೈಯಕ್ತಿಕ ಸಂಗತಿಗಳು, ಹಣಕಾಸಿನ ಪರಿಸ್ಥಿತಿ ಇಂಥವುಗಳ ಬಗ್ಗೆ ತಮಾಷೆ ಎಂಬಂತೆ ಸಹ ಮಾತನಾಡುವುದಕ್ಕೆ ಹೋಗಬೇಡಿ. ಸರ್ವೇ, ಪೋಡಿ, ಹದ್ದುಬಸ್ತ್ ಈ ರೀತಿ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡು ಮಾಡಿಸಬೇಕಾದ ಕೆಲಸ- ಕಾರ್ಯಗಳು ಒಂದಲ್ಲ ಒಂದು ಕಾರಣಕ್ಕೆ ವಿಳಂಬ ಆಗಲಿದೆ. ಯಾರೋ ಕೆಲಸ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಒಬ್ಬರನ್ನೇ ನೆಚ್ಚಿಕೊಂಡು, ಅವರಿಗಾಗಿ ಕಾಯುತ್ತಾ ಕೂರಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಇನ್ನು ಯಾರು ವೈದ್ಯರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡುತ್ತಾ ಇದ್ದೀರಿ ಅಂಥವರಿಗೆ ಆರೋಗ್ಯ ಸಮಸ್ಯೆಗಳು ಅಡೆತಡೆಯಾಗಿ ಇಲ್ಲಿಯವರೆಗೆ ಕಾಡುತ್ತಾ ಇದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಪರ್ ಫ್ಯೂಮ್, ದುಬಾರಿ ಬ್ರ್ಯಾಂಡ್ ಗಳ ಬಟ್ಟೆ, ಶೂ ಇಂಥವುಗಳ ಮಾರಾಟ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಆಗಲಿದೆ. ದೊಡ್ಡ ಮಟ್ಟದ ಆರ್ಡರ್ ವೊಂದನ್ನು ನಿಮ್ಮ ಸ್ನೇಹಿತರೇ ನೀಡುವ ಅಥವಾ ಸ್ನೇಹಿತರ ರೆಫರೆನ್ಸ್ ಮೂಲಕ ಬರುವ ಯೋಗ ಇದೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೇತನ- ಬಡ್ತಿ ದೊರೆಯುವ ಬಗ್ಗೆ ಮಾಹಿತಿ ದೊರೆಯಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಸೌಕರ್ಯ- ಸವಲತ್ತಿನ ರೂಪದಲ್ಲಿ ಕಾರು ಅಥವಾ ಕ್ವಾರ್ಟರ್ಸ್ ಇಂಥವುಗಳನ್ನು ನೀಡುವ ಸಾಧ್ಯತೆ ಇದ್ದು, ಈ ಬಗ್ಗೆ ಮೇಲಧಿಕಾರಿಗಳು ಸುಳಿವು ನೀಡಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಲ್ಲಿ ಕೆಲವರು ಹೊಸ ಭಾಷೆ ಕಲಿಯುವುದಕ್ಕೆ ಕೋರ್ಸ್ ಗೆ ಸೇರಿಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶ ಸಿಗಲಿದೆ. ಹಣಕಾಸು ವಿಚಾರದಲ್ಲಿ ನೀವು ಮಾಡಿಕೊಂಡಂಥ ಪ್ಲಾನಿಂಗ್ ಕೈ ಹಿಡಿಯಲಿದೆ. ಸಣ್ಣ ಮಟ್ಟದ ಹೂಡಿಕೆ ಮಾಡಿ ಆರಂಭಿಸಿದ್ದ ವ್ಯವಹಾರ- ವ್ಯಾಪಾರಗಳಲ್ಲಿ ನೀವು ನಿರೀಕ್ಷೆ ಕೂಡ ಮಾಡಿರದಂಥ ಯಶಸ್ಸು ದೊರೆಯಲಿದೆ. ಅಥವಾ ಅಂಥದ್ದೊಂದು ಬೆಳವಣಿಗೆ ಈ ದಿನ ಆಗಲಿದೆ. ಸ್ನೇಹಿತರ ತುರ್ತಿಗಾಗಿ ಹಣಕಾಸಿನ ಸಾಲ ನೀಡಿದ್ದಲ್ಲಿ ಅದನ್ನು ವಾಪಸ್ ಪಡೆಯುವ ಅವಕಾಶ ಇದೆ. ನಿಮಗಿಂತ ವಯಸ್ಸಿನಲ್ಲಿ ಕಿರಿಯರಾದವರು ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ವೃತ್ತಿಪರರಿಗೆ ಹೊಸ ಸಹಯೋಗಗಳು ಏರ್ಪಡಲಿದ್ದು, ಇದರಿಂದಾಗಿ ದೀರ್ಘಾವಧಿಯಲ್ಲಿ ಅನುಕೂಲಗಳು ಆಗಲಿವೆ.

ಇದನ್ನೂ ಓದಿ: ನವೆಂಬರ್ 23ರಿಂದ 29 ರವರೆಗೆ ರಾಶಿ ಭವಿಷ್ಯ: ಆನಂದದಿಂದ ಕರ್ತವ್ಯ ನಿರ್ವಹಿಸಿದರೆ ಲಾಭ ಖಚಿತ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಾ ಇದ್ದಲ್ಲಿ ಅವು ಒತ್ತಡವಾಗಿ ಪರಿಣಮಿಸಲಿವೆ. ನಿಮ್ಮಲ್ಲಿ ಕೆಲವರಿಗೆ ಆಸ್ತಿ ಕೈ ಬಿಟ್ಟುಹೋಗುವ ಸುಳಿವು ದೊರೆಯಲಿದೆ. ಇನ್ನು ಚಿನ್ನ- ಬೆಳ್ಳಿ ಇಂಥವುಗಳ ಅಡಮಾನ ಮಾಡಿ, ಸಾಲವನ್ನು ಪಡೆದುಕೊಂಡಿದ್ದಲ್ಲಿ ಅದು ಹರಾಜಿಗೆ ಬರುವ ಸಾಧ್ಯತೆ ಇದೆ. ನಿಗದಿತ ದಿನಾಂಕಕ್ಕೆ ಹಣ ಮರುಪಾವತಿ ಮಾಡುವ ಕಡೆಗೆ ನಿಮ್ಮ ಲಕ್ಷ್ಯ ಇರಲಿ. ಸ್ವಲ್ಪ ಮೈ ಮರೆತರೂ ಆ ನಂತರ ಪರಿತಪಿಸುವಂತೆ ಆಗಲಿದೆ. ನಿಮ್ಮ ಮನೆ ದೇವರಿಗೋ ಅಥವಾ ಬೇರೆ ಯಾವುದೇ ದೇವರಿಗೆ ಹರಕೆ ಹೊತ್ತಿಕೊಂಡಿದ್ದಲ್ಲಿ ಅವುಗಳನ್ನು ಪೂರೈಸುವುದಕ್ಕೆ ಆದ್ಯತೆ ನೀಡಿ. ಕೆಲಸಗಳಲ್ಲಿ ಭಾರೀ ಅಡೆತಡೆ ಆಗುತ್ತದೆ, ನಿಮಗೆ ಬರಬೇಕಾದ ಹಣಕಾಸಿಗೆ ಅಡೆತಡೆ ಆಗುತ್ತಿದೆ ಎಂದೇನಾದರೂ ಅನಿಸುತ್ತಾ ಇದ್ದಲ್ಲಿ ಈ ಹಿಂದೆ ನೀವು ಮಾಡಿಕೊಂಡಂಥ ದೇವರ ಹರಕೆಗಳನ್ನು ಪೂರೈಸದೆ ಇರುವುದು ಸಹ ಕಾರಣ ಆಗಿರಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಒಂದು ಬಗೆಯ ಸಮಾಧಾನ- ಸಂತೃಪ್ತಿ ಹಾಗೂ ಸಾರ್ಥಕ್ಯದ ಭಾವ ನಿಮ್ಮಲ್ಲಿ ಇರಲಿದೆ. ಕೊಟ್ಟ ಮಾತಿನಂತೆಯೇ ಹಾಗೂ ಅಂದುಕೊಂಡ ರೀತಿಯಲ್ಲಿ ಕೆಲಸ- ಕಾರ್ಯಗಳನ್ನು ಮಾಡಿಕೊಡಲಿದ್ದೀರಿ. ಹಣಕಾಸಿನ ಒತ್ತಡಗಳಿಂದ ಹೊರಬರುವುದಕ್ಕೆ ಮಾರ್ಗೋಪಾಯಗಳು ಗೋಚರಿಸಲಿವೆ. ಕೃಷಿ ಉತ್ಪನ್ನಗಳು ಅಥವಾ ಕೃಷಿಗೆ ಬೇಕಾದ ಸಲಕರಣೆ, ಯಂತ್ರ, ಗೊಬ್ಬರ, ಔಷಧ ಇಂಥವುಗಳ ಮಾರಾಟ ಮಾಡುತ್ತಿರುವವರು ತಮ್ಮ ವ್ಯವಹಾರದ ವಿಸ್ತರಣೆಗೆ ಪ್ರಯತ್ನ ಪಡಲಿದ್ದೀರಿ. ನಿಮ್ಮ ಉದ್ದೇಶಕ್ಕೆ ಕೈ ಜೋಡಿಸುವುದಾಗಿ, ತಾವು ಬಂಡವಾಳ ಹೂಡಿಕೆ ಮಾಡುವುದಾಗಿ ಕೆಲವರು ಮುಂದೆ ಬರಲಿದ್ದಾರೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಮರದ ಕೆಲಸಗಳನ್ನು ಮಾಡಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅಥವಾ ವ್ಯಕ್ತಿಯೊಬ್ಬರಿಂದ ನಿಮಗೆ ಬರಬೇಕಾದ ಹಣದ ಬಾಕಿ ಬದಲಿಗೆ ಇಂಥದ್ದೊಂದು ಕೆಲಸ ಮಾಡಿಕೊಟ್ಟುಬಿಡಿ ಎಂದು ಸಹ ಹೇಳುವ ಸಾಧ್ಯತೆ ಇದೆ.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:30 am, Tue, 25 November 25

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ