AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 19ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 19ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 19ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Jan 19, 2026 | 12:15 AM

Share

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂಬಷ್ಟು ರೇಜಿಗೆ ಈ ದಿನ ನಿಮಗೆ ಆಗಲಿದೆ. ಒಬ್ಬೊಬ್ಬರು ಒಂದು ರೀತಿ ಹೇಳುತ್ತಾ, ಒಂದು ಕೆಲಸವನ್ನು ನಾಲ್ಕೈದು ಬಾರಿ, ನಾಲ್ಕೈದು ರೀತಿಯಲ್ಲಿ ಮಾಡುವಂತೆ ಆಗಲಿದೆ. ಎಲ್ಲರಿಗೂ ಒಳ್ಳೆಯವರಾಗಿರಬೇಕು ಎಂಬ ಆಲೋಚನೆಯನ್ನು ಬಿಟ್ಟು, ಹೊರಗೆ ಬನ್ನಿ. ನೀವು ಹೇಳಬೇಕು ಅಂದುಕೊಂಡ ವಿಚಾರವನ್ನು ನೇರವಾಗಿ ಹೇಳುವುದಕ್ಕೆ ಪ್ರಯತ್ನಿಸಿ. ಹಣಕಾಸು ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರ ಆಕ್ಷೇಪಕ್ಕೆ ಹಾಗೂ ನಿಂದನೆಗೆ ಗುರಿ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರು, ದೊಡ್ಡ ಗುಂಪನ್ನು ಮುನ್ನಡೆಸುವ ನಾಯಕತ್ವ ಸ್ಥಾನದಲ್ಲಿ ಇರುವವರು ನಿಮ್ಮ ಗಮನಕ್ಕೆ ಬಂದ ಸಂಗತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ತಲೆಕೂದಲು- ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಇವೆ ಎಂದಾದರೆ ಅವು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಇನ್ನು ರಾಜಕಾರಣದಲ್ಲಿ ಇರುವಂಥವರು ಯಾರ ಜೊತೆಗೆ ಗುರುತಿಸಿಕೊಂಡಿದ್ದೀರಿ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಹೇಳಿಕೆ ನೀಡಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬ ಸದಸ್ಯರ ಮಧ್ಯೆ ಇರುವ ವಿರಸ- ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಮನೆ, ಸೈಟು ಅಥವಾ ಜಮೀನಿನ ಕಾಗದ- ಪತ್ರ, ದಾಖಲೆಗಳ ಸಮಸ್ಯೆ ಬಗೆಹರಿಸುವುದಕ್ಕೆ ನಿಮ್ಮ ಸ್ನೇಹಿತರು ನೆರವು ನೀಡಲಿದ್ದಾರೆ. ಸೋದರ ಸಂಬಂಧಿಗಳ ಕಷ್ಟಕ್ಕೆ ನೀವು ಸಹಾಯ ಮಾಡಲಿದ್ದೀರಿ. ನಿಮ್ಮ ಮನೆಯಲ್ಲಿ ಇರುವಂಥ ಮಂಚ, ಸೋಫಾ, ದೀವಾನ ಇಂಥ ಹಳೆ ಪೀಠೋಪಕರಣಗಳ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಲಿದ್ದೀರಿ. ಲೇವಾದೇವಿ ವ್ಯವಹಾರ ಮಾಡುವವರು ಎಚ್ಚರಿಕೆಯಿಂದಿರಿ.

ಲೇಖನ- ಸ್ವಾತಿ ಎನ್.ಕೆ.