Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 22ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 22ರ ಗುರುವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 22ರ ಗುರುವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ಈ ಹಿಂದೆ ನೀವು ಅಂದಾಜಿಸಿದ್ದ ಘಟನೆ, ಸನ್ನಿವೇಶ ನಿಜವಾಗಲಿದೆ. ಸಹೋದ್ಯೋಗಿಗಳು, ನಿಮ್ಮ ಜತೆ ಇರುವವರು ಬೆರಗಿನಿಂದ ನೋಡಲಿದ್ದಾರೆ. ನಿಮ್ಮಲ್ಲಿ ಕೆಲವರು ಯೋಗ, ಜಿಮ್ ಇಂಥದ್ದಕ್ಕೆ ಸೇರ್ಪಡೆ ಆಗುವುದಕ್ಕೆ ಮುಂದಾಗಲಿದ್ದೀರಿ. ನಿಮ್ಮ ಜತೆಗೆ ಈ ಹಿಂದೆ ಜಗಳ ಮಾಡಿಕೊಂಡವರು ಸಹಾಯ ಕೇಳಿಕೊಂಡು ಬರಲಿದ್ದಾರೆ.
ಜನ್ಮಸಂಖ್ಯೆ 2
ಎಲ್ಲರೂ ಒಪ್ಪುವಂಥ ನಿರ್ಧಾರವನ್ನೇ ತೆಗೆದುಕೊಳ್ಳಬೇಕು ಅಂದುಕೊಳ್ಳದಿರಿ. ಇದರಿಂದ ನೀವು ಮಾನಸಿಕವಾಗಿ ಒತ್ತಡಕ್ಕೆ ಗುರಿ ಆಗುತ್ತೀರಿ. ವಿದೇಶಗಳಿಗೆ ಪ್ರಯಾಣ ಮಾಡಬೇಕು ಎಂದಿರುವವರಿಗೆ ಕಾಗದ- ಪತ್ರ ವಿಚಾರಗಳು ಅಡೆತಡೆಯಾಗಿ ಪರಿಣಮಿಸಬಹುದು. ಹಿರಿಯ ಅಧಿಕಾರಿಗಳ ನೆರವು ತೆಗೆದುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಇದೆ.
ಜನ್ಮಸಂಖ್ಯೆ 3
ಸೋಷಿಯಲ್ ಮೀಡಿಯಾ ಹೆಚ್ಚಿಗೆ ಬಳಸುವವರಾಗಿದ್ದಲ್ಲಿ ಈ ದಿನ ಪೋಸ್ಟ್, ಕಾಮೆಂಟ್‌ಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಏಕಕಾಲಕ್ಕೆ ನಿಮ್ಮ ವಿರುದ್ಧ ಹಲವರು ವೈಯಕ್ತಿಕ ದಾಳಿಗೆ ಇಳಿಯಬಹುದು. ಎಲೆಕ್ಟ್ರಿಕಲ್ ಸ್ಕೂಟರ್, ಕಾರು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡುತ್ತೀರಿ.
ಜನ್ಮಸಂಖ್ಯೆ 4
ಯಾರದೋ ತಪ್ಪಿಗೆ ನೀವು ಪರಿತಪಿಸುವಂತೆ ಆಗುತ್ತದೆ. ಆದ್ದರಿಂದ ವಿಪರೀತ ಚಿಂತೆ ಮಾಡುವ ಅಗತ್ಯ ಇಲ್ಲ. ದಿನದ ಕೊನೆಯ ಹೊತ್ತಿಗೆ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ನಿಮಗೆ ದೊರೆಯುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಪರೀತ ಖರ್ಚಿದೆ. ಇನ್ನು ಮಕ್ಕಳ ಚಲನವಲನದ ಮೇಲೆ ಕಣ್ಣಿಟ್ಟಿರಿ.
ಜನ್ಮಸಂಖ್ಯೆ 5
ಬೆಳವಣಿಗೆಗಳು ನಿಧಾನ ಆಗಲಿವೆ. ಕೆಲವು ಕೆಲಸಗಳು ಈಗಾಗಲೇ ಅರ್ಧ ಮುಗಿದಾಗಿದ್ದರೂ ಮೊದಲಿಂದ ಆರಂಭಿಸಬೇಕಾಗಬಹುದು. ಆದರೆ ಬೇಸರ ಆಗಬೇಡಿ, ನಿಮ್ಮ ಕೆಲಸದಲ್ಲಿ ಯಶಸ್ಸು, ಕೀರ್ತಿ ಹಾಗೂ ಲಾಭ ಮೂರು ಸಿಗುವ ಸಾಧ್ಯತೆ ಇದೆ. ಕಮಿಷನ್ ಆಧಾರದ ವೃತ್ತಿಯಲ್ಲಿ ಇರುವವರಿಗೆ ಸವಾಲಿನ ದಿನವಾಗಿರುತ್ತದೆ.
ಜನ್ಮಸಂಖ್ಯೆ 6
ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು. ನೀವು ಅಂದುಕೊಂಡಂತೆ ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು ಇತ್ಯಾದಿ ಶುಭ ಫಲಗಳನ್ನು ಈ ದಿನ ಕಾಣಲಿದ್ದೀರಿ. ಜನ್ಮಸಂಖ್ಯೆ 7
ಈ ದಿನ ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಸಂಬಂಧ ವೃದ್ದಿ ಆಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸಬಲ್ಲ ಚಾಕಚಕ್ಯತೆ ಬರುತ್ತದೆ.
ಜನ್ಮಸಂಖ್ಯೆ 8
ಈ ದಿನ ಡೆಡ್‌ಲೈನ್‌ನೊಳಗಾಗಿ ಕೆಲಸ ಮಾಡುವ ಧಾವಂತಕ್ಕೆ ಬೀಳುತ್ತೀರಿ. ನಿಮ್ಮ ಸಾಮರ್ಥ್ಯಕ್ಕೆ ಸವಾಲು ಹಾಕುವಂತೆ ಕೆಲವರು ಮಾತನಾಡಿ, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಬಹುದು. ಸ್ಕಂದನ ಆರಾಧನೆ ಮಾಡಿ, ಇತರರು ನಿಮ್ಮ ಬಗ್ಗೆ ಮಾಡುವ ಟೀಕೆಯ ಪೈಕಿ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ.
ಜನ್ಮಸಂಖ್ಯೆ 9
ಹಣ ಬರುವುದಕ್ಕೆ ದಾರಿ ಕಂಡಂತೆಯೇ ಆಗುತ್ತದೆ, ಬರುತ್ತದೆ. ಅದನ್ನು ಸರಿಯಾಗಿ ವಿನಿಯೋಗ ಮಾಡುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಪ್ರತಿಷ್ಠೆಗಾಗಿ ಎಲ್ಲೆಂದರಲ್ಲಿ ಖರ್ಚು ಮಾಡುವ ಅವಕಾಶಗಳು ಇವೆ. ಆದ್ದರಿಂದ ಖರ್ಚಿನ ವಿಷಯದಲ್ಲಿ ಯಾರ ಜತೆಗೂ ಸ್ಪರ್ಧೆಗೆ ನಿಲ್ಲದಿರಿ. ಮನಸ್ಸು ನಿಯಂತ್ರಣದಲ್ಲಿ ಇರಲಿ.
ಲೇಖನ- ಎನ್.ಕೆ.ಸ್ವಾತಿ
Published On - 6:00 am, Thu, 22 December 22